ಡೆಲಿವರಿ ಪ್ರಾರಂಭಗೊಳ್ಳುತ್ತಿದ್ದಂತೆ ಡೀಲರ್‌ಶಿಪ್‌ಗೆ ಆಗಮಿಸಿದ ಸ್ಕೋಡಾ-ಫೋಕ್ಸ್‌ವ್ಯಾಗನ್ ಲಾವಾ ಬ್ಲ್ಯೂ ಸೆಡಾನ್‌ಗಳು
ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಮೇ 19, 2023 05:04 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ "ಲಾವಾ ಬ್ಲ್ಯೂ" ಬಣ್ಣವನ್ನು ಸ್ಲಾವಿಯಾದ ವಿಶೇಷ ಆವೃತ್ತಿಯಾಗಿ ಬಿಡುಗಡೆಗೊಳಿಸಿದರೆ, ಫೋಕ್ಸ್‌ವ್ಯಾಗನ್ ಇದನ್ನು ವರ್ಟಸ್‌ನಲ್ಲಿ ಸಾಮಾನ್ಯ ಬಣ್ಣದ ಆಯ್ಕೆಯಾಗಿ ನೀಡುತ್ತಿದೆ.
- ಸ್ಕೋಡಾ 1.5-ಲೀಟರ್ ಟರ್ಬೋ ಪೆಟ್ರೋಲ್ ವೇರಿಯೆಂಟ್‌ಗಳೊಂದಿಗೆ ಸ್ಲಾವಿಯಾದ “ಲಾವಾ ಬ್ಲ್ಯೂ” ಆವೃತ್ತಿಯನ್ನು ನೀಡುತ್ತಿದೆ.
- ಫೋಕ್ಸ್‌ವ್ಯಾಗನ್ ಈ ಹೊಸ ನೀಲಿ ಬಣ್ಣದ ಆಯ್ಕೆಯನ್ನು ವರ್ಟಸ್‌ನ 1.0-ಲೀಟರ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಮಾಡೆಲ್‌ನಲ್ಲಿ ನೀಡುತ್ತಿದೆ.
- ಈ ಪ್ರೀಮಿಯಂ ನೋಟವನ್ನು ಹೊಂದಿರುವ ಪೇಂಟ್ ಸ್ಕೀಮ್ ಆಕ್ಟೇವಿಯಾ ಮತ್ತು ಕೊಡಿಯಾಕ್‌ನಂತಹ ಹೈ-ಎಂಡ್ ಸ್ಕೋಡಾ ಕಾರುಗಳಿಂದ ಬಂದಿದೆ.
- ಫೋಕ್ಸ್‌ವ್ಯಾಗನ್‌ಗಿಂತ ಭಿನ್ನವಾಗಿ ಸ್ಲಾವಿಯಾದ “ಲಾವಾ ಬ್ಲ್ಯೂ” ಆವೃತ್ತಿಗೆ ರೂ. 28000 ಪ್ರೀಮಿಯಂ ಅನ್ನು ವಿಧಿಸುತ್ತಿದೆ.
ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ಎರಡೂ ಈಗ ಹೊಸ “ಲಾವಾ ಬ್ಲ್ಯೂ” ಎಕ್ಸ್‌ಟೀರಿಯರ್ ಬಣ್ಣಗಳೊಂದಿಗೆ ಲಭ್ಯವಿದ್ದು ಅವುಗಳ ಯೂನಿಟ್‌ಗಳು ಈಗಾಗಲೇ ಡೀಲರ್‌ಶಿಪ್ ಸೇರಿವೆ. “ಲಾವಾ ಬ್ಲ್ಯೂ” ಪೇಂಟ್ ಆವೃತ್ತಿಯನ್ನು ಮೊದಲು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಮಾದರಿಗಳಲ್ಲಿ ಬಿಡುಗಡೆ ಮಾಡಿತು. ಈ ಪ್ರೀಮಿಯಂ ನೋಟವನ್ನು ಹೊಂದಿರುವ ನೀಲಿ ಬಣ್ಣವು ಈ ಬ್ರ್ಯಾಂಡ್‌ನ ಪ್ರೀಮಿಯಂ ಉತ್ಪನ್ನಗಳಾದ ಸೂಪರ್ಬ್, ಆಕ್ಟೇವಿಯಾ ಮತ್ತು ಕೊಡಿಯಾಕ್‌ನಿಂದ ಬಂದಿದೆ. ಕೆಲವೇ ದಿನಗಳ ನಂತರ, ಫೋಕ್ಸ್‌ವ್ಯಾಗನ್ ನವೀಕೃತ ರೇಂಜ್ ಜೊತೆಗೆ ವರ್ಟಸ್ ಮತ್ತು ಟೈಗನ್‌ನೊಂದಿಗೆ ಈ ಬಣ್ಣದ ಆಯ್ಕೆಯನ್ನು ಆರಂಭಿಸಿತು.
ಹೊಸದೇನಿದೆ?
ಎಕ್ಸ್‌ಟೀರಿಯರ್‌ನಲ್ಲಿನ ನೀಲಿ ಬಣ್ಣವನ್ನು ಹೊರತುಪಡಿಸಿ, ಸ್ಲಾವಿಯಾದ ಲಾವಾ ಬ್ಲ್ಯೂ ಆವೃತ್ತಿಯು ಷಡ್ಭುಜ ಆಕೃತಿಯ ಗ್ರಿಲ್‌ಗಳಲ್ಲಿ ಕ್ರೋಮ್ ರಿಬ್‌ಗಳನ್ನು ಹೊಂದಿದೆ. ಇದರ ಪಾರ್ಶ್ವ ಮತ್ತು ಹಿಂಭಾಗದ ಪ್ರೊಫೈಲ್ ಯಾವುದೇ ಗಣನೀಯ ಬದಲಾವಣೆಯನ್ನು ಪಡೆದಿಲ್ಲ.
ಇದನ್ನೂ ಓದಿ: 2023ರ ಸ್ಕೋಡಾ ಕೊಡಿಯಾಕ್ ಇನ್ನೂ ಲಭ್ಯವಿದೆ ಆದರೆ ಸೀಮಿತ ಸಂಖ್ಯೆಗಳಲ್ಲಿ ಮಾತ್ರ
ವರ್ಟಸ್ ಬಗ್ಗೆ ಹೇಳುವುದಾದರೆ, ಈ “ಲಾವಾ ಬ್ಲ್ಯೂ” ಬಣ್ಣವನ್ನು ಒಂದು ಆವೃತ್ತಿಯ ರೂಪದಲ್ಲಿ ಅಲ್ಲ ಆದರೆ ಒಂದು ಸಾಮಾನ್ಯ ಬಣ್ಣದ ಆಯ್ಕೆಯಾಗಿ ನೀಡಲಾಗುತ್ತಿದೆ. ಸ್ಲಾವಿಯಾದಂತೆ ಫೋಕ್ಸ್‌ವ್ಯಾಗನ್ ಸೆಡಾನ್ ಯಾವುದೇ ಗಮನಾರ್ಹ ಬದಲಾವಣೆಯನ್ನು ಅಥವಾ ಕ್ರೋಮ್ ಆ್ಯಡ್-ಆನ್‌ಗಳನ್ನು ಹೊಂದಿಲ್ಲ.
ಈ ಲಾವಾ ಬ್ಲ್ಯೂ ಬಣ್ಣವು ಪ್ರಕಾಶಮಾನವಾದ ರೈಸಿಂಗ್ ಬ್ಲ್ಯೂ (ವರ್ಟಸ್) ಮತ್ತು ಕ್ರಿಸ್ಟಲ್ ಬ್ಲ್ಯೂ (ಸ್ಲಾವಿಯಾ) ಗೆ ಹೆಚ್ಚು ಉತ್ತಮ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಈ ಸೆಡಾನ್‌ಗಳಲ್ಲಿ ಬಿಡುಗಡೆಯಾಯಿತು. ಆದಾಗ್ಯೂ, ಈ ಬಣ್ಣಗಳನ್ನು ಸಹ ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ನೀಡಲಾಗುತ್ತಿದ್ದು ಅಲ್ಲಿ ನೀವು ಕಪ್ಪು ಬಣ್ಣದ ರೂಫ್ ಕಾಣಬಹುದು.
ಇದನ್ನೂ ಓದಿ: 4- ಸಂಪೂರ್ಣ ಹೊಸ ಇವಿಗಳ ಜೊತೆ ಹೊಸ-ತಲೆಮಾರಿನ ಸ್ಕೋಡಾ ಸೂಪರ್ಬ್ ಮತ್ತು ಕಾಡಿಯಾಕ್‌ನ ಟೀಸರ್ ಬಿಡುಗಡೆ
ಪವರ್‌ಟ್ರೇನ್ ಆಯ್ಕೆಗಳು
ಸ್ಕೋಡಾ ತನ್ನ 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಸ್ಲಾವಿಯಾದ ಈ ವಿಶೇಷ ಆವೃತ್ತಿಯನ್ನು ಸೀಮಿತಗೊಳಿಸಿದ್ದು ಇದು, 6-ಸ್ಪೀಡ್ ಮ್ಯಾನ್ಯುವಲ್ ಮತ್ತು 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ವರ್ಟಸ್‌ನೊಂದಿಗೆ, ಈ “ಲಾವಾ ಬ್ಲ್ಯೂ” ಬಣ್ಣವನ್ನು 1-ಲೀಟರ್ ಮತ್ತು 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ಗಳು ಮತ್ತು ಅವುಗಳು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡಂತೆ ಅದರ ಸಂಪೂರ್ಣ ಶ್ರೇಣಿಯಲ್ಲಿ ಹೊಂದಬಹುದು.
ಬೆಲೆಗಳು
ಸ್ಲಾವಿಯಾದ “ಲಾವಾ ಬ್ಲ್ಯೂ'' ಆವೃತ್ತಿಗೆ ಸ್ಕೋಡಾ ರೂ. 28000 ಹೆಚ್ಚುವರಿ ಪ್ರೀಮಿಯಂ ಅನ್ನು ವಿಧಿಸುತ್ತದೆ. ಇದರ ಬೆಲೆಯು ರೂ. 17.28 ಲಕ್ಷದಿಂದ ರೂ. 18.68 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಮೊದಲೇ ಉಲ್ಲೇಖಿಸಿದಂತೆ, ಈ ವರ್ಟಸ್‌ನ “ಲಾವಾ ಬ್ಲ್ಯೂ” ಎಕ್ಸ್‌ಟೀರಿಯರ್ ಬಣ್ಣವು ಕೇವಲ ಸಾಮಾನ್ಯ ಬಣ್ಣದ ಆಯ್ಕೆಯಾಗಿದೆ ಮತ್ತು ಎಲ್ಲಾ ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತಿದ್ದು ಎರಡೂ ಎಂಜಿನ್ ಆಯ್ಕೆಗಳನ್ನು ಸಹ ಒದಗಿಸಲಾಗುತ್ತಿದೆ. ಫೋಕ್ಸ್‌ವ್ಯಾಗನ್ ಸೆಡಾನ್‌ನ ಬೆಲೆಗಳನ್ನು ರೂ. 11.48 ಲಕ್ಷದಿಂದ ರೂ. 18.57 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಸ್ಲಾವಿಯಾ ಮತ್ತು ವರ್ಟಸ್ ಎರಡೂ ಸಹ ಹೋಂಡಾ ಸಿಟಿ, ಹ್ಯುಂಡಾ ವರ್ನಾ ಮತ್ತು ಮಾರುತಿ ಸುಝುಕಿ ಸಿಯಾಝ್‌ಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿವೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ದೆಹಲಿ
ಇನ್ನಷ್ಟು ಇಲ್ಲಿ ಓದಿ : ಸ್ಲಾವಿಯಾ ಆನ್ ರೋಡ್ ಬೆಲೆ