ಡೀಲರ್‌ಶಿಪ್‌ಗಳ ಸ್ಟಾಕ್‌ಯಾರ್ಡ್‌ಗೆ ಬಂದಿಳಿದ Tata Curvv ಡಾರ್ಕ್ ಎಡಿಷನ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಪೂರ್ಣ-ಎಲ್‌ಇಡಿ ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಇರುವುದರಿಂದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಮೊಡೆಲ್ ಸಂಪೂರ್ಣವಾಗಿ ಲೋಡ್ ಮಾಡಲಾದ ಅಕಂಪ್ಲಿಶ್ಡ್ ಟ್ರಿಮ್ ಎಂದು ತೋರುತ್ತದೆ
#Dark ಎಡಿಷನ್‌ಅನ್ನು ಪಡೆಯುವ ಹಲವಾರು ಮೊಡೆಲ್‌ಗಳಲ್ಲಿ, ಡಾರ್ಕ್ ಎಡಿಷನ್‌ಅನ್ನು ಪಡೆಯದ ಟಾಟಾ ಕಂಪೆನಿಯ ಕೆಲವೇ ಮೊಡೆಲ್‌ಗಳಲ್ಲಿ ಇತ್ತೀಚೆಗೆ ಬಿಡುಗಡೆಗೊಂಡು ಜನಪ್ರೀಯಗೊಳ್ಳುತ್ತಿರುವ ಟಾಟಾ ಕರ್ವ್ ಕೂಡ ಒಂದಾಗಿದೆ. ಕರ್ವ್ ಡಾರ್ಕ್ ಎಡಿಷನ್ ಶೀಘ್ರದಲ್ಲೇ ಬಿಡುಗಡೆಯಾಗುವ ಮುನ್ನ ಭಾರತದಾದ್ಯಂತ ಕೆಲವು ಡೀಲರ್‌ಶಿಪ್‌ಗಳನ್ನು ತಲುಪಿರುವ ಕೆಲವು ಚಿತ್ರಗಳು ನಮ್ಮ ಕೈಗೆ ಸಿಕ್ಕಿರುವುದರಿಂದ ಅದು ನಿಜವಾಗುವ ಹಂತಕ್ಕೆ ಹತ್ತಿರದಲ್ಲಿದೆ.
ಚಿತ್ರಗಳಲ್ಲಿ ಗಮನಿಸಲಾದ ವಿವರಗಳು
ಪೂರ್ಣ-ಎಲ್‌ಇಡಿ ಲೈಟಿಂಗ್ ಮತ್ತು 18-ಇಂಚಿನ ಅಲಾಯ್ ವೀಲ್‌ಗಳಂತಹ ಎಕ್ಸ್‌ಟೀರಿಯರ್ ಫೀಚರ್‌ಗಳ ಆಧಾರದ ಮೇಲೆ, ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಮೊಡೆಲ್ ಎಸ್‌ಯುವಿ ಕೂಪ್‌ನ ಸಂಪೂರ್ಣವಾಗಿ ಲೋಡ್ ಮಾಡಲಾದ ಅಕಂಪ್ಲಿಶ್ಡ್ ಟ್ರಿಮ್ ಎಂದು ನಾವು ನಂಬುತ್ತೇವೆ. ಟಾಟಾದ ಇತರ ಡಾರ್ಕ್ ಎಡಿಷನ್‌ಗಳಲ್ಲಿ ಕಂಡುಬರುವಂತೆ ಇದು ಸಂಪೂರ್ಣ ಕಪ್ಪು ಬಣ್ಣದ ಬಾಡಿ ಕಲರ್‌ಅನ್ನು ಹೊಂದಿದೆ ಎಂದು ನಾವು ನೋಡಬಹುದು.
ಗಮನಿಸಲಾದ ಇತರ ಅಂಶಗಳಲ್ಲಿ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು, ಕಪ್ಪು ಬಣ್ಣದ ಅಲಾಯ್ ವೀಲ್‌ಗಳು ಮತ್ತು ಮುಂಭಾಗದ ಸ್ಕಿಡ್ ಪ್ಲೇಟ್, ಮತ್ತು ಮುಂಭಾಗದ ಬಾಗಿಲುಗಳ ಕೆಳಗಿನ ಭಾಗದಲ್ಲಿ 'ಕರ್ವ್ವ್' ಮಾನಿಕರ್ ಸೇರಿವೆ. ಇದು ಹ್ಯಾರಿಯರ್ ಮತ್ತು ಸಫಾರಿಯ ಡಾರ್ಕ್ ಎಡಿಷನ್‌ಗಳಲ್ಲಿ ಕಂಡುಬರುವಂತೆ ಮುಂಭಾಗದ ಫೆಂಡರ್‌ಗಳ ಮೇಲೆ #ಡಾರ್ಕ್ ಬ್ಯಾಡ್ಜ್‌ಗಳನ್ನು ಹೊಂದಿದೆ.
ಈ ಚಿತ್ರಗಳಲ್ಲಿ ಇದರ ಹಿಂಭಾಗ ಕಾಣಿಸದಿದ್ದರೂ, ಅದರ ಟೈಲ್‌ಗೇಟ್‌ನಲ್ಲಿ ಅದರ ರೆಗ್ಯುಲರ್ ಆವೃತ್ತಿಯಂತೆಯೇ 'ಕರ್ವ್' ಎಂಬ ಹೆಸರಿನೊಂದಿಗೆ ಕಪ್ಪು ಬಣ್ಣದ ಸ್ಕಿಡ್ ಪ್ಲೇಟ್ ಇರುವ ಸಾಧ್ಯತೆಯಿದೆ. ಅದರ ವಿಶೇಷ ಸ್ವರೂಪವನ್ನು ಮತ್ತಷ್ಟು ಹೆಚ್ಚಿಸಲು ಸುತ್ತುವರಿದ ಕನೆಕ್ಟೆಡ್ ಟೈಲ್ ಲೈಟ್‌ಗಳಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ.
ಕ್ಯಾಬಿನ್ ಬಗ್ಗೆ ಹೇಳುವುದಾದರೆ..
ಟಾಟಾ ಕಾರುಗಳ ಎಲ್ಲಾ #ಡಾರ್ಕ್ ಎಡಿಷನ್‌ಗಳಲ್ಲಿ ರೂಢಿಯಲ್ಲಿರುವಂತೆ ಇದರ ಒಳಾಂಗಣವು ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಹೊಂದಿರುತ್ತದೆ. ಎಸ್‌ಯುವಿ-ಕೂಫ್ ಸ್ಪೆಷಲ್ ಎಡಿಷನ್‌ನ ಡ್ಯಾಶ್‌ಬೋರ್ಡ್, ಸೀಟ್ ಕವರ್ (ಹೆಡ್‌ರೆಸ್ಟ್‌ಗಳ ಮೇಲೆ #ಡಾರ್ಕ್ ಎಂಬಾಸಿಂಗ್‌ನೊಂದಿಗೆ), ಮತ್ತು ಸೆಂಟರ್ ಕನ್ಸೋಲ್‌ಗೆ ಅದೇ ಕಪ್ಪು ಬಣ್ಣವನ್ನು ನೀಡಲಾಗಿದೆ, ಸುತ್ತಲೂ ಪಿಯಾನೋ ಕಪ್ಪು ಆಕ್ಸೆಂಟ್‌ಗಳಿವೆ. ಇದು ತನ್ನ ಸ್ಟ್ಯಾಂಡರ್ಡ್ ವೇರಿಯೆಂಟ್‌ಗಳಂತೆಯೇ ಅದೇ 4-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಅದೇ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳೊಂದಿಗೆ ಮುಂದುವರಿಯುತ್ತದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಟಾಟಾ ಕರ್ವ್‌ನ ಕ್ಯಾಬಿನ್ ಚಿತ್ರವನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಕರ್ವ್‌ನ ಡಾರ್ಕ್ ಎಡಿಷನ್‌ನಲ್ಲಿ ಯಾವುದೇ ಫೀಚರ್‌ನಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಇದು 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ರೆಗ್ಯುಲರ್ ಮೊಡೆಲ್‌ನಂತೆಯೇ ಅದೇ ರೀತಿಯ ಸೌಕರ್ಯಗಳನ್ನು ಪಡೆಯುತ್ತದೆ.
ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ನೋಡಿಕೊಳ್ಳುತ್ತವೆ.
ಇದನ್ನೂ ಓದಿ: 2025ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಪಟ್ಟಿ ಇಲ್ಲಿದೆ..
ಆಫರ್‌ನಲ್ಲಿ ಪವರ್‌ಟ್ರೇನ್‌ಗಳು
ಟಾಟಾ ಕರ್ವ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ. ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ವಿಶೇಷಣಗಳು |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ ಟರ್ಬೊ-ಪೆಟ್ರೋಲ್ (TGDi) |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
125 ಪಿಎಸ್ |
118 ಪಿಎಸ್ |
ಟಾರ್ಕ್ |
170 ಎನ್‌ಎಮ್ |
225 ಎನ್‌ಎಮ್ |
260 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್, 7-ಸ್ಪೀಡ್ ಡಿಸಿಟಿ* |
*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಕರ್ವ್ ಡಾರ್ಕ್ ಎಡಿಷನ್‌ಅನ್ನು ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ ಮಾತ್ರ ನೀಡುವ ನಿರೀಕ್ಷೆಯಿರುವುದರಿಂದ, ಇದು 125 ಪಿಎಸ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಬರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
ಟಾಟಾ ಕರ್ವ್ವ್‌ನ ಡಾರ್ಕ್ ವೇರಿಯೆಂಟ್‌ಗಳು ಅವುಗಳ ಅನುಗುಣವಾದ ವೇರಿಯೆಂಟ್‌ಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ. ಮಾಹಿತಿಗಾಗಿ, ಸ್ಟ್ಯಾಂಡರ್ಡ್ ಕರ್ವ್‌ನ ಬೆಲೆ 10 ಲಕ್ಷ ರೂ.ನಿಂದ 19.20 ಲಕ್ಷ ರೂ.ವರೆಗೆ ಇದೆ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ). ಇದು ಮುಂಬರುವ ಸಿಟ್ರೊಯೆನ್ ಬಸಾಲ್ಟ್‌ನ ಡಾರ್ಕ್ ಎಡಿಷನ್‌ಗೆ ನೇರ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸಲಿದೆ, ಜೊತೆಗೆ ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್ ಮತ್ತು ಹುಂಡೈ ಕ್ರೆಟಾ ಸೇರಿದಂತೆ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸ್ಪೆಷಲ್ ಎಡಿಷನ್‌ನ ಪರ್ಯಾಯವಾಗಿದೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ