Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಕರ್ವ್ ಇವಿ ಬುಕಿಂಗ್ ಮತ್ತು ಡೆಲಿವರಿಗಳ ದಿನಾಂಕ ಪ್ರಕಟಣೆ

ಟಾಟಾ ಕರ್ವ್‌ ಇವಿ ಗಾಗಿ shreyash ಮೂಲಕ ಆಗಸ್ಟ್‌ 08, 2024 06:13 pm ರಂದು ಪ್ರಕಟಿಸಲಾಗಿದೆ

ಟಾಟಾ ಆಗಸ್ಟ್ 12 ರಂದು ಕರ್ವ್ EV ಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಿದೆ ಮತ್ತು ಆಗಸ್ಟ್ 23, 2024 ರಂದು ಡೆಲಿವರಿಗಳು ಶುರುವಾಗುತ್ತವೆ

  • ಕರ್ವ್ EV ಭಾರತದಲ್ಲಿ ಬರಲಿರುವ ಮೊದಲ ಮಾಸ್-ಮಾರುಕಟ್ಟೆ ಎಲೆಕ್ಟ್ರಿಕ್ SUV-ಕೂಪ್ ಆಗಿದೆ.
  • ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ: 45 kWh (ಮೀಡಿಯಂ ರೇಂಜ್) ಮತ್ತು 55 kWh (ಲಾಂಗ್ ರೇಂಜ್).
  • MIDC ಅಂದಾಜಿನ ಪ್ರಕಾರ ನೀವು ಆಯ್ಕೆ ಮಾಡುವ ಬ್ಯಾಟರಿ ಪ್ಯಾಕ್ ಅನ್ನು ಅವಲಂಬಿಸಿ, ಇದು 585 ಕಿಮೀವರೆಗಿನ ರೇಂಜ್ ಅನ್ನು ನೀಡುತ್ತದೆ
  • ಪ್ರಮುಖ ಫೀಚರ್ ಗಳಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್, ಪನರೋಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಸೇರಿವೆ.
  • ಸುರಕ್ಷತಾ ಫೀಚರ್ ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), 360-ಡಿಗ್ರಿ ಕ್ಯಾಮರಾ ಮತ್ತು ಲೆವೆಲ್ 2 ADAS ಸೇರಿವೆ.
  • ಬೆಲೆಯು ರೂ. 17.49 ಲಕ್ಷದಿಂದ ರೂ. 21.99 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.

ಟಾಟಾ ಕರ್ವ್ EV ಅನ್ನು ಭಾರತದ ಮೊದಲ ಮಾಸ್-ಮಾರುಕಟ್ಟೆ ಎಲೆಕ್ಟ್ರಿಕ್ SUV-ಕೂಪ್ ಆಗಿ ಲಾಂಚ್ ಮಾಡಲಾಗಿದೆ. ಕರ್ವ್ EV ಅನ್ನು Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಮತ್ತು 2024 ರ ಆರಂಭದಲ್ಲಿ ಬಿಡುಗಡೆಯಾದ ಟಾಟಾ ಪಂಚ್ EV ಅನ್ನು ಕೂಡ ಇದನ್ನೇ ಆಧರಿಸಿ ನಿರ್ಮಿಸಲಾಗಿದೆ. ಟಾಟಾ ಈ ಎಲೆಕ್ಟ್ರಿಕ್ SUV ಕೂಪ್ ಅನ್ನು ಎರಡು ವರ್ಷನ್ ಗಳಲ್ಲಿ ನೀಡುತ್ತಿದೆ: Curvv.ev 45 (ಮೀಡಿಯಂ ರೇಂಜ್) ಮತ್ತು Curvv.ev 55 (ಲಾಂಗ್ ರೇಂಜ್). ಟಾಟಾ ಆಗಸ್ಟ್ 12 ರಂದು ಕರ್ವ್ EV ಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಿದೆ ಮತ್ತು ಮೊದಲ ಹಂತದ ಡೆಲಿವರಿಗಳು ಆಗಸ್ಟ್ 23 ರಿಂದ ಶುರುವಾಗಲಿದೆ. ಕರ್ವ್ EV ಯಲ್ಲಿ ಏನೇನಿದೆ, ಬನ್ನಿ ನೋಡೋಣ.

SUV-ಕೂಪ್ ಡಿಸೈನ್

ಕರ್ವ್ EV ಭಾರತದ ಮೊದಲ ಮಾಸ್ ಮಾರುಕಟ್ಟೆ ಎಲೆಕ್ಟ್ರಿಕ್ SUV-ಕೂಪ್ ಆಗಿದೆ. ಕರ್ವ್ EV ಡಿಸೈನ್ ಟಾಟಾ ನೆಕ್ಸಾನ್ EVಯಂತೆಯೇ ಕಾಣುತ್ತದೆ, ವಿಶೇಷವಾಗಿ ಅದರ ಕನೆಕ್ಟೆಡ್ LED ಲೈಟ್ ಗಳು ಮತ್ತು ಮುಂಭಾಗದ ಬಂಪರ್‌ನಲ್ಲಿರುವ ವರ್ಟಿಕಲ್ ಸ್ಲಾಟ್ ಗಳು ನೆಕ್ಸಾನ್ EV ಯಲ್ಲಿ ಇರುವಂತೆಯೇ ಇದೆ. ಸೈಡ್ ಗಳಲ್ಲಿ, ಕರ್ವ್ EV ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು 18-ಇಂಚಿನ ಏರೋ ಡೈನಾಮಿಕ್ ಶೈಲಿಯ ಅಲೊಯ್ ವೀಲ್ ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ, ಇದು ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ಕೂಡ ಹೊಂದಿದೆ.

ನೀಡಲಾಗುತ್ತಿರುವ ಫೀಚರ್ ಗಳು

ಟಾಟಾ ತನ್ನ ಕರ್ವ್ EV ಅನ್ನು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ JBL-ಟ್ಯೂನ್ಡ್ ಸೌಂಡ್ ಸಿಸ್ಟಮ್ ಮುಂತಾದ ಫೀಚರ್ ಗಳೊಂದಿಗೆ ನೀಡುತ್ತಿದೆ. ಇದು 6-ವೇ ಪವರ್ಡ್ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಕೂಡ ಪಡೆಯುತ್ತದೆ. ಕರ್ವ್ EV ಯ ಟಾಪ್-ಸ್ಪೆಕ್ ವೇರಿಯಂಟ್ ನಲ್ಲಿರುವ ಇನ್ಫೋಟೈನ್‌ಮೆಂಟ್ ಸಿಸ್ಟಮ್ Arcade.ev ಅಪ್ಲಿಕೇಶನ್ ಸೂಟ್ ಅನ್ನು ಕೂಡ ಪಡೆಯುತ್ತದೆ, ಇದು ಬಳಕೆದಾರರಿಗೆ ಗೇಮ್ಸ್ ಗಳನ್ನು ಆಡಲು ಮತ್ತು OTT ಸ್ಟ್ರೀಮಿಂಗ್ ಆಪ್ ಗಳ ಮೂಲಕ ಶೋಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ.

ಸುರಕ್ಷತೆಯ ದೃಷ್ಟಿಯಿಂದ, ಕರ್ವ್ EV ಯಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟಂಸ್ ಸಿಸ್ಟಮ್ (ADAS) ಯನ್ನು ನೀಡಲಾಗಿದೆ.

ಇದನ್ನು ಕೂಡ ಓದಿ: ಟಾಟಾ ಕರ್ವ್ EV ವಿವರಗಳು ಕೇವಲ 15 ಚಿತ್ರಗಳಲ್ಲಿ

ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಟಾಟಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಕರ್ವ್ EV ಅನ್ನು ನೀಡುತ್ತದೆ ಮತ್ತು ಅವುಗಳ

ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:

ವೇರಿಯಂಟ್

Curvv.ev 45 (ಮೀಡಿಯಂ ರೇಂಜ್)

Curvv.ev 45 (ಲಾಂಗ್ ರೇಂಜ್)

ಬ್ಯಾಟರಿ ಪ್ಯಾಕ್

45 kWh

55 kWh

ಎಲೆಕ್ಟ್ರಿಕ್ ಮೋಟರ್ ಸಂಖ್ಯೆ

1

1

ಪವರ್

150 PS

167 PS

ಟಾರ್ಕ್

215 Nm

215 Nm

ಕ್ಲೇಮ್ ಮಾಡಿರುವ ರೇಂಜ್ (MIDC)

502 ಕಿ.ಮೀ ವರೆಗೆ

585 ಕಿ.ಮೀ ವರೆಗೆ

MIDC - ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್

ಕರ್ವ್ EV V2L (ವೆಹಿಕಲ್ ಟು ಲೋಡ್) ಮತ್ತು V2V (ವೆಹಿಕಲ್ ಟು ವೆಹಿಕಲ್) ಫಂಕ್ಷನಾಲಿಟಿಯನ್ನು ಕೂಡ ಹೊಂದಿದೆ. V2L ಇತರ ಸಾಧನಗಳಿಗೆ ಶಕ್ತಿ ನೀಡಲು ನಿಮ್ಮ ಕಾರಿನ ಬ್ಯಾಟರಿಯನ್ನು ಬಳಸಲು ನಿಮಗೆ ಅನುಮತಿಸುತ್ತದೆ ಮತ್ತು V2V ಯೊಂದಿಗೆ ನಿಮ್ಮ ಕಾರನ್ನು ಬಳಸಿಕೊಂಡು ಮತ್ತೊಂದು EV ಅನ್ನು ಚಾರ್ಜ್ ಮಾಡಬಹುದು. ಇದೆಲ್ಲವೂ ನಿಮ್ಮ ಕಾರಿನ ಬ್ಯಾಟರಿಯಲ್ಲಿ ಸಂಗ್ರಹವಾಗಿರುವ ಶಕ್ತಿಯಿಂದ ಬರುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಕರ್ವ್ EV ಬೆಲೆಯು ರೂ 17.49 ಲಕ್ಷದಿಂದ ರೂ 21.99 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಇದನ್ನು MG ZS EV ಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು ಮತ್ತು ಇದು ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಮಾರುತಿ eVX ಗೆ ಪ್ರತಿಸ್ಪರ್ಧಿಯಾಗಲಿದೆ.

ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಟಾಟಾ ಕರ್ವ್ EV ಆಟೋಮ್ಯಾಟಿಕ್

Share via

Write your Comment on Tata ಕರ್ವ್‌ EV

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ