Login or Register ಅತ್ಯುತ್ತಮ CarDekho experience ಗೆ
Login

Tata Curvv EV ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳ ವಿವರ

ಟಾಟಾ ಕರ್ವ್‌ ಇವಿ ಗಾಗಿ shreyash ಮೂಲಕ ಆಗಸ್ಟ್‌ 09, 2024 06:59 pm ರಂದು ಪ್ರಕಟಿಸಲಾಗಿದೆ

ಟಾಟಾ ಕರ್ವ್‌ ಇವಿಯನ್ನು 45 ಕಿ.ವ್ಯಾಟ್‌ ಮತ್ತು 55 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ - MIDC ಕ್ಲೈಮ್ ಮಾಡಲಾದ 585 ಕಿಮೀ ರೇಂಜ್‌ ಅನ್ನು ನೀಡುತ್ತದೆ

ಟಾಟಾ ಕರ್ವ್‌ ಇವಿಯನ್ನು ಭಾರತದಲ್ಲಿ ಮೊದಲ ಬೃಹತ್ ಮಾರುಕಟ್ಟೆಯ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್ ಆಗಿ ಬಿಡುಗಡೆ ಮಾಡಲಾಗಿದೆ. ಎಲ್ಲಾ ಇತರ ಟಾಟಾ ಇವಿಗಳಂತೆಯೇ, ಕರ್ವ್‌ ಇವಿಯು 45 ಕಿ.ವ್ಯಾಟ್‌ (ಮಿಡ್‌ ರೇಂಜ್‌) ಮತ್ತು 55 ಕಿ.ವ್ಯಾಟ್‌ (ಲಾಂಗ್‌ ರೇಂಜ್‌) ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಇದನ್ನು ಕ್ರೀಯೆಟಿವ್‌, ಆಕಂಪ್ಲಿಶ್ಡ್‌ ಮತ್ತು ಎಂಪವರ್ಡ್‌ ಪ್ಲಸ್‌ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಕರ್ವ್‌ ಇವಿಯ ಆವೃತ್ತಿ-ವಾರು ಪವರ್‌ಟ್ರೇನ್ ವಿವರಗಳನ್ನು ತಿಳಿಯೋಣ.

ವೇರಿಯೆಂಟ್‌-ವಾರು ಪವರ್‌ಟ್ರೈನ್‌ ಆಯ್ಕೆಗಳು

ವೇರಿಯೆಂಟ್‌

ಕರ್ವ್‌.ಇವಿ 45 (ಮೀಡಿಯಂ ರೇಂಜ್‌)

ಕರ್ವ್‌.ಇವಿ 55 (ಲಾಂಗ್ ರೇಂಜ್ )

ಕ್ರಿಯೇಟಿವ್

ಆಕಂಪ್ಲಿಶ್ಡ್‌

ಆಕಂಪ್ಲಿಶ್ಡ್‌+ ಎಸ್‌

ಎಂಪವರ್ಡ್‌+

ಎಂಪವರ್ಡ್‌+ ಎ

ಇಲ್ಲಿ ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಆವೃತ್ತಿಗಳು ಮಾತ್ರ ಎರಡೂ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಪಡೆಯುತ್ತವೆ.

ಟಾಟಾ ಕರ್ವ್‌ ಇವಿ ಎಲೆಕ್ಟ್ರಿಕ್‌ ಪವರ್‌ಟ್ರೈನ್‌ಗಳ ವಿವರಗಳು

ವೇರಿಯೆಂಟ್‌

ಕರ್ವ್‌.ಇವಿ 45 (ಮೀಡಿಯಂ ರೇಂಜ್‌)

ಕರ್ವ್‌.ಇವಿ 55 (ಲಾಂಗ್ ರೇಂಜ್ )

ಬ್ಯಾಟರಿ ಪ್ಯಾಕ್‌

45 ಕಿ.ವ್ಯಾಟ್‌

55 ಕಿ.ವ್ಯಾಟ್‌

ಎಲೆಕ್ಟ್ರಿಕ್‌ ಮೋಟಾರ್‌ಗಳ ಸಂಖ್ಯೆ

1

1

ಪವರ್‌

150 ಪಿಎಸ್‌

167 ಪಿಎಸ್‌

ಟಾರ್ಕ್‌

215 ಎನ್‌ಎಮ್‌

215 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌ (MIDC)

502 ಕಿ.ಮೀ.ವರೆಗೆ

585 ಕಿ.ಮೀ.ವರೆಗೆ

MIDC- ಮೊಡೈಫೈಡ್‌ ಇಂಡಿಯನ್ ಡ್ರೈವ್ ಸೈಕಲ್

ಇದನ್ನೂ ಸಹ ಓದಿ: Tata Curvv EV ವೇರಿಯಂಟ್-ವಾರು ಫೀಚರ್‌ಗಳ ಅನಾವರಣ

ಚಾರ್ಜಿಂಗ್ ವಿವರಗಳು

ಕರ್ವ್‌ ಇವಿ ಬಹು ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ. ವಿವರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

ಚಾರ್ಜರ್‌

ಕರ್ವ್‌.ಇವಿ 45 (ಮೀಡಿಯಂ ರೇಂಜ್‌)

ಕರ್ವ್‌.ಇವಿ 55 (ಲಾಂಗ್ ರೇಂಜ್ )

ಡಿಸಿ ಫಾಸ್ಟ್ ಚಾರ್ಜರ್ (10-80%)

40 ನಿಮಿಷಗಳು (60+ ಕಿ.ವ್ಯಾ ಚಾರ್ಜರ್)

40 ನಿಮಿಷಗಳು (70+ ಕಿ.ವ್ಯಾ ಚಾರ್ಜರ್)

7.2 ಕಿ.ವ್ಯಾ ಎಸಿ ಚಾರ್ಜರ್ (10-100%)

6.5 ಗಂಟೆಗಳು

7.9 ಗಂಟೆಗಳು

15A ಪ್ಲಗ್ ಪಾಯಿಂಟ್ (10-100%)

17.5 ಗಂಟೆಗಳು

21 ಗಂಟೆಗಳು

ಇದು V2L (ವಾಹನದಿಂದ ಲೋಡ್) ಮತ್ತು V2V (ವಾಹನದಿಂದ ವಾಹನಕ್ಕೆ) ಫಂಕ್ಷನ್‌ ಅನ್ನು ಸಹ ಪಡೆಯುತ್ತದೆ, ಇದನ್ನು ನೆಕ್ಸಾನ್‌ ಇವಿಯೊಂದಿಗೆ ನೀಡಲಾಗುತ್ತದೆ. ನೀವು V2L ಮೂಲಕ ನಿಮ್ಮ ಇತರ ಸಾಧನಗಳನ್ನು ಚಾರ್ಜ್‌ ಮಾಡಬಹುದು, ಆದರೆ V2V ನಿಮ್ಮ ಸ್ವಂತವನ್ನು ಬಳಸಿಕೊಂಡು ಮತ್ತೊಂದು ಇವಿಯನ್ನು ಚಾರ್ಜ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಎಲ್ಲಾ ಶಕ್ತಿಯ ಅಗತ್ಯಗಳನ್ನು ಕಾರಿನ ಬ್ಯಾಟರಿ ಪ್ಯಾಕ್‌ನಲ್ಲಿ ಸಂಗ್ರಹವಾಗಿರುವ ಪವರ್‌ನಿಂದ ಪೂರೈಸಲಾಗುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಕರ್ವ್‌ ಇವಿಯಲ್ಲಿನ ಫೀಚರ್‌ಗಳು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, 9-ಸ್ಪೀಕರ್ JBL-ಟ್ಯೂನ್ಡ್ ಸೌಂಡ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್‌ ಎಸಿಯನ್ನು ಒಳಗೊಂಡಿದೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು (ಟಾಟಾ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯ) ಸಹ ಪಡೆಯುತ್ತದೆ.

ಸುರಕ್ಷತೆಯ ಭಾಗವನ್ನು ಗಮನಿಸುವಾಗ, ಕರ್ವ್‌ ಇವಿಯು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು ( ADAS) ಪಡೆಯುತ್ತದೆ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಟಾಟಾ ಕರ್ವ್‌ ಇವಿಯ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆಗಳು 17.49 ಲಕ್ಷ ರೂ.ನಿಂದ ಪ್ರಾರಂಭವಾಗಿ ರೂ 21.99 ಲಕ್ಷ ರೂ.ವರೆಗೆ ಇರುತ್ತದೆ. ಟಾಟಾ ಕರ್ವ್‌ ಇವಿಯು ನೇರವಾಗಿ ಎಮ್‌ಜಿ ಜೆಡ್‌ಎಸ್‌ ಇವಿಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ನೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.

ಕಾರು ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಕರ್ವ್‌ ಇವಿ ಆಟೋಮ್ಯಾಟಿಕ್‌

Share via

Write your Comment on Tata ಕರ್ವ್‌ EV

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ