ಕವರ್ ಇಲ್ಲದೆ ಮೊದಲ ಬಾರಿಗೆ ರಸ್ತೆಯಲ್ಲಿ ಕಾಣಸಿಕ್ಕ Tata Curvv
ಟಾಟಾ ಕರ್ವ್ ಗಾಗಿ samarth ಮೂಲಕ ಜುಲೈ 24, 2024 07:06 am ರಂದು ಮಾರ್ಪಡಿಸಲಾಗಿದೆ
- 106 Views
- ಕಾಮೆಂಟ್ ಅನ್ನು ಬರೆಯಿರಿ
ಸೆರೆಹಿಡಿಯಲಾದ ಫೋಟೊಗಳು ಡೇಟೋನಾ ಗ್ರೇನಲ್ಲಿ ಫಿನಿಶ್ ಮಾಡಲಾದ Curvv ನ ಆಂತರಿಕ ದಹನಕಾರಿ ಎಂಜಿನ್ (ICE) ಆವೃತ್ತಿಯ ಮುಂಭಾಗ ಮತ್ತು ಹಿಂಭಾಗವನ್ನು ಬಹಿರಂಗಪಡಿಸುತ್ತವೆ
- ಕರ್ವ್‌ನ ಇಂಧನ ಚಾಲಿತ ಆವೃತ್ತಿಯು ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಲಂಬವಾಗಿ ಜೋಡಿಸಲಾದ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.
- ಹಿಂಭಾಗದಲ್ಲಿ, ಇದು ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್, ಎತ್ತರದ ಬೂಟ್ ಡೋರ್ ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಹೊಂದಿದೆ.
- ನಿರೀಕ್ಷಿತ ಫೀಚರ್‌ಗಳು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿರುತ್ತದೆ.
- ಕರ್ವ್‌ನ ಇಂಧನ ಚಾಲಿತ ಆವೃತ್ತಿಯು 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಿಂದ ಚಾಲಿತವಾಗುವ ನಿರೀಕ್ಷೆಯಿದೆ.
- ಕರ್ವ್ ಇವಿಯ ಬೆಲೆಗಳನ್ನು ಆಗಸ್ಟ್ 7 ರಂದು ಬಹಿರಂಗಪಡಿಸಲಾಗುವುದು, ಆದರೆ ಕರ್ವ್‌ನ ಇಂಧನ ಚಾಲಿತ ಆವೃತ್ತಿ(ICE) ಅನ್ನು ನಂತರ ಬಿಡುಗಡೆ ಮಾಡಲಾಗುತ್ತದೆ.
- ಕರ್ವ್‌ನ ಇಂಧನ ಚಾಲಿತ ಆವೃತ್ತಿಯ ಬೆಲೆಗಳು 10.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಟಾಟಾ ಕರ್ವ್ ಅನಾವರಣಗೊಂಡ ಕೆಲವೇ ದಿನಗಳಲ್ಲಿ, ಟಾಟಾದ ಈ ಎಸ್‌ಯುವಿ-ಕೂಪ್ ಯಾವುದೇ ರೀತಿಯ ಕವರ್ ಇಲ್ಲದೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ. ಕರ್ವ್‌ನ ICE-ಇಂಟರ್ನಲ್ ಕಂಬ್ಯೂಶನ್ ಎಂಜಿನ್(ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಯ ರಸ್ತೆಯ ಸಂಚಾರದ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ, ಇದು ನಮಗೆ ಈ ಎಸ್‌ಯುವಿ-ಕೂಪ್‌ನ ವಿನ್ಯಾಸದ ವಿವರವಾದ ಚಿತ್ರಣವನ್ನು ನೀಡುತ್ತದೆ. ಟಾಟಾವು ಆಗಸ್ಟ್ 7 ರಂದು ಕರ್ವ್‌ಇವಿಯ ಬೆಲೆಗಳನ್ನು ಘೋಷಿಸಲು ಸಿದ್ಧವಾಗಿದೆ, ಹಾಗೆಯೇ ಕರ್ವ್ ಐಸಿಇ ಆವೃತ್ತಿಯ ಬೆಲೆಯನ್ನು ನಂತರ ಬಹಿರಂಗಪಡಿಸಲಿದೆ.
ಏನನ್ನು ಗಮನಿಸಲಾಯಿತು?
ಇದು ಮೊದಲ ಬಾರಿಗೆ ಉತ್ಪಾದನೆಗೆ ಸಿದ್ಧವಾಗಿರುವ ಕರ್ವ್ ಅನ್ನು ಯಾವುದೇ ಕವರ್ ಇಲ್ಲದೆ ರಸ್ತೆಗೆ ಇಳಿಸಲಾಗಿದೆ, ಇದು ಇತರ ಟಾಟಾ ಕಾರುಗಳಲ್ಲಿ ಕಂಡುಬರುವಂತೆ ಡೇಟೋನಾ ಗ್ರೇ ಬಣ್ಣದ ಆಯ್ಕೆಯಂತೆ ಕಾಣುತ್ತದೆ. ಮುಂಭಾಗದಲ್ಲಿ, ಕರ್ವ್ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಹೊಂದಿದೆ, ಇದು ಈಗ ಟಾಟಾದ ಹೊಸ ಎಸ್‌ಯುವಿ ಮೊಡೆಲ್‌ಗಳಿಗೆ ಸಿಗ್ನೆಚರ್ ತರಹದ ವಿನ್ಯಾಸದ ಅಂಶವಾಗಿದೆ. ಅದರ ಕೆಳಗೆ, ಹೊಸ ಹ್ಯಾರಿಯರ್‌ನಲ್ಲಿ ಪ್ರಚಲಿತದಲ್ಲಿರುವಂತೆ ಕ್ರೋಮ್ ಸ್ಟಡ್‌ಗಳನ್ನು ಒಳಗೊಂಡಿರುವ ಗ್ರಿಲ್ ಅನ್ನು ಸಹ ನೀವು ಗಮನಿಸಬಹುದು.
ಹೆಡ್‌ಲೈಟ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಲಂಬವಾಗಿ ತ್ರಿಕೋನಾಕಾರದ ಹೌಸಿಂಗ್‌ನ ಒಳಗೆ ಜೋಡಿಸಲಾಗಿದೆ. ನಂತರ ಕೆಳಗೆ ಗಮನಿಸುವಾಗ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕ್ಯಾಮರಾವನ್ನು ನೀವು ಗಮನಿಸಬಹುದು, ಇದು ಬೋರ್ಡ್‌ನಲ್ಲಿ 360-ಡಿಗ್ರಿ ಸೆಟಪ್‌ನ ಭಾಗವಾಗಿದೆ. ಸೈಡ್ ಪ್ರೊಫೈಲ್‌ನಲ್ಲಿ, ಯಾವುದೇ ಟಾಟಾ ಕಾರುಗಳಲ್ಲಿ ನೀಡದ ಫ್ಲಶ್-ಮಾದರಿಯ ಡೋರ್ ಹ್ಯಾಂಡಲ್‌ಗಳು ಮತ್ತು ಹೊಸ ಹೂವಿನ-ದಳದಿಂದ ಪ್ರೇರಿತ ಅಲಾಯ್ ವೀಲ್ ವಿನ್ಯಾಸವನ್ನು ಮೊದಲ ಬಾರಿಗೆ ಇದರಲ್ಲಿ ನೀಡಲಾಗುತ್ತಿದೆ.
ಹಿಂಭಾಗದ ಪ್ರೊಫೈಲ್ ಕನೆಕ್ಟೆಡ್ ಟೈಲ್ ಲೈಟ್ ಸೆಟಪ್ ಅನ್ನು ಹೊಂದಿದೆ, ಮುಂಭಾಗದ ವಿನ್ಯಾಸದೊಂದಿಗೆ ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆ. ಇದು ಅದರ ಇಳಿಜಾರಿನ ರೂಫ್‌ನಲ್ಲಿ ಎದ್ದು ಕಾಣುತ್ತದೆ, ಹಿಂಭಾಗದ ಸ್ಪಾಯ್ಲರ್ ಮತ್ತು ರೂಫ್‌ನ ಮೇಲೆ ಇರುವ ಶಾರ್ಕ್-ಫಿನ್ ಆಂಟೆನಾವನ್ನು ಒಳಗೊಂಡಿದೆ. ಕರ್ವ್ ಬ್ರ್ಯಾಂಡಿಂಗ್ ಅನ್ನು ಬೂಟ್ ಗೇಟ್‌ನ ಮಧ್ಯಭಾಗದಲ್ಲಿ ಇರಿಸಲಾಗಿದೆ, ಇದನ್ನು ಕ್ರೋಮ್‌ನಲ್ಲಿ ಫಿನಿಶ್ ಮಾಡಲಾಗಿದೆ. ಹಿಂಭಾಗದ ಬಂಪರ್ ಸಹ ಫಾಕ್ಸ್-ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ ಮತ್ತು ಅದರ ಮೇಲೆ ಸಿಲ್ವರ್ ಫಿನಿಶಿಂಗ್ ಇದೆ.
ನಿರೀಕ್ಷಿತ ಕ್ಯಾಬಿನ್, ಫೀಚರ್‌ಗಳು ಮತ್ತು ಸುರಕ್ಷತೆ
ಕರ್ವ್‌ನ ಒಳಭಾಗವು ನಾವು ಇಂದು ಹೇಳುತ್ತಿರುವ ಮೊಡೆಲ್‌ನಲ್ಲಿ ಗಮನಿಸಲಾಗಲಿಲ್ಲ. ಆದರೆ ಹಿಂದಿನ ಸ್ಪೈ ಶಾಟ್‌ಗಳಿಂದ ನಾವು ವಿಭಿನ್ನ ಕ್ಯಾಬಿನ್ ಥೀಮ್‌ನೊಂದಿಗೆ ನೆಕ್ಸಾನ್ ತರಹದ ಡ್ಯಾಶ್‌ಬೋರ್ಡ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು. ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಸ್ಕ್ರೀನ್ ಸೆಟಪ್ (12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪ್ಯಾನರೊಮಿಕ್ ಸನ್‌ರೂಫ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಸುರಕ್ಷತಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ (ADAS) ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ಪವರ್‌ಟ್ರೇನ್
ಕರ್ವ್‌ನ ಇಂಧನ ಚಾಲಿತ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ವಿಶೇಷಣಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:
ಎಂಜಿನ್ |
1.2-ಲೀಟರ್ TGDi (ಟರ್ಬೊ-ಪೆಟ್ರೋಲ್) ಎಂಜಿನ್ |
1.5-ಲೀಟರ್ ಡೀಸೆಲ್ ಎಂಜಿನ್ |
ಪವರ್ |
125 ಪಿಎಸ್ |
115 ಪಿಎಸ್ |
ಟಾರ್ಕ್ |
225 ಎನ್‌ಎಮ್ |
260 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್, 7-ಸ್ಪೀಡ್ ಡಿಸಿಟಿ* (ನಿರೀಕ್ಷಿತ) |
6-ಸ್ಪೀಡ್ ಮ್ಯಾನುಯಲ್ |
*ಡಿಸಿಟಿ- ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್
ಕರ್ವ್‌ನ ಇವಿ ಆವೃತ್ತಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ, ಸುಮಾರು 500 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ಅನ್ನು ನಿರೀಕ್ಷಿಸಲಾಗಿದೆ. ಕರ್ವ್‌ನ ಇವಿಗಾಗಿ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್‌ನ ICE ಆವೃತ್ತಿಯು 10.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಬೆಲೆಯನ್ನು ನಿರೀಕ್ಷಿಸಲಾಗಿದೆ. ಇದು ಸಿಟ್ರೊಯೆನ್ ಬಸಾಲ್ಟ್‌ಗೆ ನೇರಪ್ರತಿಸ್ಪರ್ಧಿಯಾಗಿದ್ದು, ಹಾಗೆಯೇ, ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ ಸಿ3 ಐಕ್ರಾಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸೊಗಸಾದ ಪರ್ಯಾಯವಾಗಿ ಪರಿಗಣಿಸಬಹುದು.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಆನ್ನು ಫಾಲೋ ಮಾಡಿ