• English
  • Login / Register

Honda Elevateಗಿಂತ ಹೆಚ್ಚುವರಿಯಾಗಿ ಈ 7 ಸೌಕರ್ಯಗಳನ್ನು ಪಡೆಯಲಿರುವ Tata Curvv

published on ಜುಲೈ 31, 2024 06:55 pm by shreyash for ಟಾಟಾ ಕರ್ವ್‌

  • 41 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಧುನಿಕ ವಿನ್ಯಾಸದ ಅಂಶಗಳ ಹೊರತಾಗಿ, ಟಾಟಾ ಕರ್ವ್‌ ಹೋಂಡಾ ಎಲಿವೇಟ್‌ಗಿಂತ ಹೆಚ್ಚುವರಿಯಾಗಿ ದೊಡ್ಡ ಸ್ಕ್ರೀನ್‌ಗಳು ಮತ್ತು ಹೆಚ್ಚುವರಿ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳನ್ನು ಸಹ ನೀಡುತ್ತದೆ

Tata Curvv and Honda Elevate

ಭಾರತದಲ್ಲಿನ ಮೊದಲ ಮಾಸ್‌-ಮಾರ್ಕೆಟ್‌ ಎಸ್‌ಯುವಿ ಕೂಪ್‌ಗಳಲ್ಲಿ ಒಂದಾಗಿರುವ ಟಾಟಾ ಕರ್ವ್‌ ಅನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕರ್ವ್‌ ಕಿಕ್ಕಿರಿದ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಸುತ್ತದೆ, ಅಲ್ಲಿ ಹೋಂಡಾ ಎಲಿವೇಟ್ ಅದರ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾಗಿದೆ. ಹೋಂಡಾ ಎಸ್‌ಯುವಿಗಿಂತ ಕರ್ವ್‌ ಹೊಂದಿರುವ ಅನುಕೂಲಗಳನ್ನು ಅನ್ವೇಷಿಸೋಣ.

ಆಧುನಿಕ ಎಲ್ಇಡಿ ಲೈಟಿಂಗ್ ಅಂಶಗಳು

Tata Curvv Connected LED Lights

ಎಸ್‌ಯುವಿ ಕೂಪ್‌ ಅಗಿರುವ ಟಾಟಾ ಕರ್ವ್‌, ಪ್ರಸ್ತುತ ಮಾರಾಟದಲ್ಲಿರುವ ಹೆಚ್ಚಿನ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಈಗಾಗಲೇ ಹೆಚ್ಚು ಸೊಗಸಾದವಾಗಿ ಕಾಣುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್‌ ಲೈಟಿಂಗ್‌ ಅಂಶಗಳಿಂದ ಇದರ ವಿನ್ಯಾಸವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಮುಂಭಾಗದಲ್ಲಿರುವ ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಟೈಲ್ ಲೈಟ್‌ಗಳು ಟರ್ನ್ ಇಂಡಿಕೇಟರ್‌ಗಳಿಗೆ ಅನುಕ್ರಮ ಎಫೆಕ್ಟ್‌ಗಳ ಜೊತೆಗೆ ವೆಲ್‌ಕಮ್‌ ಮತ್ತು ಗುಡ್‌ಬೈ ಅನಿಮೇಶನ್‌ಗಳನ್ನು ಹೊಂದಿವೆ. ನೆಕ್ಸಾನ್, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿಯಂತಹ ಇತ್ತೀಚೆಗೆ ಫೇಸ್‌ಲಿಫ್ಟೆಡ್ ಟಾಟಾ ಮೊಡೆಲ್‌ಗಳಲ್ಲಿ ಇದೇ ರೀತಿಯ ಫೀಚರ್‌ಗಳನ್ನು ನಾವು ನೋಡಿದ್ದೇವೆ.

ಮತ್ತೊಂದೆಡೆ ಹೋಂಡಾ ಎಲಿವೇಟ್ ಹೆಚ್ಚು ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದೆ ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸರಳವಾದ ಸುತ್ತುವ ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.

ದೊಡ್ಡದಾದ ಸ್ಕ್ರೀನ್‌ಗಳು

Tata Nexon EV 12.3-inch Touchscreen
Tata Safari 10.25-inch Digital Driver's Display

ಟಾಟಾವು ಕರ್ವ್‌ ಅನ್ನು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ನೀಡುತ್ತದೆ. ಆಂಡ್ರಾಯ್ಡ್ ಆಟೋ ಅಥವಾ ಆಪಲ್‌ ಕಾರ್‌ಪ್ಲೇ ಮೂಲಕ ಕ್ಲಸ್ಟರ್‌ನಲ್ಲಿ ಮ್ಯಾಪ್‌ಗಳನ್ನು ಪ್ರದರ್ಶಿಸಲು ಇಲ್ಲಿ ಡ್ರೈವರ್‌ನ ಡಿಸ್‌ಪ್ಲೇಯನ್ನು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸಿಂಕ್ ಮಾಡಬಹುದು.

ಹೋಂಡಾ ಎಲಿವೇಟ್ ಅನ್ನು ಚಿಕ್ಕದಾದ 10.25-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸಜ್ಜುಗೊಳಿಸಿದೆ ಮತ್ತು ಇದು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯುತ್ತದೆ.

ಬ್ರ್ಯಾಂಡೆಡ್ ಆಡಿಯೋ ಸಿಸ್ಟಮ್

ಇತರ ಟಾಟಾ ಕಾರುಗಳಲ್ಲಿ ಕಂಡುಬರುವಂತೆ, ಕರ್ವ್‌ ಒಟ್ಟು 9 ಸ್ಪೀಕರ್‌ಗಳೊಂದಿಗೆ ಬ್ರಾಂಡೆಡ್‌ ಆಡಿಯೊ ಸಿಸ್ಟಮ್ ಅನ್ನು (ಜೆಬಿಎಲ್ ಆಗಿರುವ ಸಾಧ್ಯತೆ) ಪಡೆಯುತ್ತದೆ. ಆದರೆ, ಹೋಂಡಾ ಎಲಿವೇಟ್ ಕೇವಲ 4-ಸ್ಪೀಕರ್‌ಗಳು ಮತ್ತು 4-ಟ್ವೀಟರ್‌ಗಳನ್ನು ಪಡೆಯುತ್ತದೆ.

ಇದನ್ನು ಓದಿ: Citroen Basaltನಲ್ಲಿ ಇಲ್ಲದ ಈ 5 ಫೀಚರ್‌ಗಳನ್ನು ಪಡೆಯಲಿರುವ Tata Curvv

ಪನೋರಮಿಕ್ ಸನ್‌ರೂಫ್

Tata Curvv Panoramic Sunroof

ಹೋಂಡಾವು ಎಲಿವೇಟ್‌ ಅನ್ನು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ನೀಡಿದ್ದರೂ, ಟಾಟಾ ಕರ್ವ್‌ ಒಂದು ಹಂತ ಮೇಲಿದೆ, ಏಕೆಂದರೆ ಇದು ದೊಡ್ಡ ಪನೋರಮಿಕ್‌ ಸನ್‌ರೂಫ್ ಅನ್ನು ಪಡೆಯುತ್ತದೆ. ಕರ್ವ್‌ನಲ್ಲಿನ ಸನ್‌ರೂಫ್ ಸಹ ವಾಯ್ಸ್‌ ಕಂಟ್ರೋಲ್‌ ಫೀಚರ್‌ ಅನ್ನು ಪಡೆಯುವ ನಿರೀಕ್ಷೆಯಿದೆ.

ವೆಂಟಿಲೇಟಡ್‌ & ಪವರ್‌ಡ್‌ ಸೀಟ್‌ಗಳು

Tata Curvv production-ready cabin spied

ಹೋಂಡಾ ಎಲಿವೇಟ್‌ನಲ್ಲಿ ಲಭ್ಯವಿಲ್ಲದ ಪ್ರಮುಖ ಫೀಚರ್‌ಗಳಲ್ಲಿ ಮುಂಭಾಗದ ವೆಂಟಿಲೇಟೆಡ್ ಸೀಟ್‌ಗಳ ಸಹ ಒಂದು, ಆದರೆ ಇದು ಟಾಟಾ ಕರ್ವ್‌ನಲ್ಲಿ ಖಂಡಿತವಾಗಿಯೂ ಲಭ್ಯವಿರಬಹುದು. ವೆಂಟಿಲೇಟೆಡ್‌ ಸೀಟ್‌ಗಳು ಭಾರತೀಯ ಬೇಸಿಗೆಯ ಪರಿಸ್ಥಿತಿಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿವೆ, ಏಕೆಂದರೆ ಅವು ಆಸನಗಳನ್ನು ತ್ವರಿತವಾಗಿ ತಂಪಾಗಿಸಲು ಸಹಾಯ ಮಾಡುತ್ತವೆ. ಕರ್ವ್‌ ಹೆಚ್ಚುವರಿಯಾಗಿ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ಬರುತ್ತದೆ, ಆದರೆ ಎಲಿವೇಟ್ ಮ್ಯಾನುಯಲ್‌ ಆಗಿ ಹೊಂದಾಣಿಕೆಯನ್ನು ಮಾತ್ರ ಪಡೆಯುತ್ತದೆ.

ಚಾಲಿತ ಟೈಲ್‌ಗೇಟ್‌ಗಳು

Tata Curvv Powered tailgate

ಹೋಂಡಾ ಎಲಿವೇಟ್‌ಗಿಂತ ಟಾಟಾ ಕರ್ವ್‌ ಹೊಂದಿರುವ ಮತ್ತೊಂದು ಫೀಚರ್‌ನ ಪ್ರಯೋಜನವೆಂದರೆ ಗೆಸ್ಚರ್ ಕಂಟ್ರೋಲ್ ಫೀಚರ್‌ ಹೊಂದಿರುವ ಚಾಲಿತ ಟೈಲ್‌ಗೇಟ್. ಫೇಸ್‌ಲಿಫ್ಟೆಡ್ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯಲ್ಲಿ ಈ ಸೌಕರ್ಯವನ್ನು ನಾವು ಈಗಾಗಲೇ ನೋಡಿದ್ದೇವೆ. ಮತ್ತೊಂದೆಡೆ ಎಲಿವೇಟ್, ಮಾರುಕಟ್ಟೆಯಲ್ಲಿನ ಇತರ ಮಾಸ್‌ ಮಾರ್ಕೆಟ್‌ ಕಾರುಗಳಂತೆ ಸರಳವಾದ ಎಲೆಕ್ಟ್ರಿಕ್ ಟೈಲ್‌ಗೇಟ್ ಬಿಡುಗಡೆಯೊಂದಿಗೆ ಬರುತ್ತದೆ.

ಉತ್ತಮ ಸುರಕ್ಷತಾ ತಂತ್ರಜ್ಞಾನ

Tata Curvv Front

ಹೋಂಡಾ ಎಲಿವೇಟ್ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಲೇನ್-ವಾಚ್ ಕ್ಯಾಮೆರಾ (ಎಡಭಾಗದ ORVM ಅಡಿಯಲ್ಲಿ ಇದೆ) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಎಲಿವೇಟ್‌ನಲ್ಲಿನ ADAS ತಂತ್ರಜ್ಞಾನವು ಕ್ಯಾಮೆರಾ ಆಧಾರಿತವಾಗಿದ್ದು, ಟಾಟಾ Curvv ರಾಡಾರ್-ಆಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು ಹೊಂದಿರುತ್ತದೆ. ಕ್ಯಾಮರಾ-ಆಧಾರಿತ ADAS ಕಡಿಮೆ-ಗೋಚರತೆಯ ಪರಿಸ್ಥಿತಿಗಳಲ್ಲಿ ಅಷ್ಟೇನು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಏಕೆಂದರೆ ಅದು ರಸ್ತೆಯಲ್ಲಿ ಮುಂದೆ ಇರುವ ವಸ್ತುಗಳು, ವಾಹನಗಳು ಅಥವಾ ಜನರನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗದಿರಬಹುದು. ಹೆಚ್ಚುವರಿಯಾಗಿ, ಕರ್ವ್‌ ಹೋಂಡಾ ಎಲಿವೇಟ್‌ಗಿಂತ 360-ಡಿಗ್ರಿ ಕ್ಯಾಮೆರಾ ಸೆಟಪ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ನೀಡುತ್ತದೆ.

ಆದ್ದರಿಂದ, ಟಾಟಾ ಕರ್ವ್‌ ಹೋಂಡಾ ಎಲಿವೇಟ್‌ನಲ್ಲಿದ ಈ ಸೌಕರ್ಯಗಳನ್ನು ನೀಡುತ್ತದೆ. ನೀವು ಹೋಂಡಾ ಎಲಿವೇಟ್ ಅನ್ನು ಆರಿಸುತ್ತೀರಾ ಅಥವಾ ಹೆಚ್ಚು ಫೀಚರ್‌-ಭರಿತ ಟಾಟಾ ಕರ್ವ್‌ಗಾಗಿ ಕಾಯುತ್ತೀರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

 ಇತ್ತೀಚಿನ ಎಲ್ಲಾ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಹೋಂಡಾ ಎಲಿವೇಟ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌

1 ಕಾಮೆಂಟ್
1
D
ddev v
Aug 1, 2024, 12:22:51 AM

Someone who has decided to buy a Honda will not buy a Tata or Mahindra for now. A car is more about Engine, reliability and Performance and less about Gimmicky features. Curvv looks more like Tigor++

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience