Citroen Basaltನಲ್ಲಿ ಇಲ್ಲದ ಈ 5 ಫೀಚರ್‌ಗಳನ್ನು ಪಡೆಯಲಿರುವ Tata Curvv
ಟಾಟಾ ಕರ್ವ್ ಗಾಗಿ samarth ಮೂಲಕ ಜುಲೈ 29, 2024 03:50 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಎಸ್‌ಯುವಿ-ಕೂಪ್‌ಗಳು 2024ರ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಟಾಟಾ ಕರ್ವ್‌ನಲ್ಲಿ ಐಸಿಇ ಮತ್ತು ಇವಿ ಆವೃತ್ತಿಗಳು ಲಭ್ಯವಿರುತ್ತದೆ
ಎರಡು ಹೊಸ ಮಾಸ್-ಮಾರ್ಕೆಟ್ ಎಸ್‌ಯುವಿ-ಕೂಪ್‌ಗಳು ಭಾರತೀಯ ರಸ್ತೆಗೆ ಇಳಿಯಲು ಸಿದ್ಧವಾಗುತ್ತಿದೆ. ಇದರಲ್ಲಿ ಒಂದು ಟಾಟಾ ಕರ್ವ್, ಇದು ಆಗಸ್ಟ್ 7ರಂದು ತನ್ನ ಎಲೆಕ್ಟ್ರಿಕ್ ಅವತಾರದಲ್ಲಿ ಪಾದಾರ್ಪಣೆ ಮಾಡುತ್ತಿದೆ ಮತ್ತು ಇನ್ನೊಂದು ಸಿಟ್ರೊಯೆನ್ ಬಸಾಲ್ಟ್, ಇದು ಭಾರತೀಯ ಮಾರುಕಟ್ಟೆಯಲ್ಲಿ ಸಿಟ್ರೊಯೆನ್‌ನ ಐದನೇ ಕೊಡುಗೆಯಾಗಿದೆ. ಎರಡೂ ವಾಹನ ತಯಾರಕರು ತಮ್ಮ ಇತ್ತೀಚಿನ ಕಾರುಗಳ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸದಿದ್ದರೂ, ಇತ್ತೀಚಿನ ಟೀಸರ್‌ಗಳಿಂದ ನಾವು ಅವುಗಳ ಬಗ್ಗೆ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದೇವೆ ಮತ್ತು ಬಸಾಲ್ಟ್‌ನಲ್ಲಿ ಇಲ್ಲದ ಈ ಕೆಳಗಿನ 5 ಫೀಚರ್‌ಗಳನ್ನು ಟಾಟಾ ಕರ್ವ್‌ನಲ್ಲಿ ನೀಡಬಹುದೆಂದು ನಾವು ನಿರೀಕ್ಷಿಸುತ್ತಿದ್ದೇವೆ.
ದೊಡ್ಡ ಸ್ಕ್ರೀನ್‌ಗಳು
ಟಾಟಾ ಇತ್ತೀಚೆಗೆ ಕರ್ವ್‌ನ ಇಂಟಿರೀಯರ್ ಕುರಿತು ಟೀಸರ್ ಬಿಡುಗಡೆ ಮಾಡಿದೆ, ಅದರಲ್ಲಿ ಇದು ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯುತ್ತದೆ ಎಂದು ದೃಢಪಡಿಸಲಾಗಿದೆ, ಇವೆರಡನ್ನೂ ನೆಕ್ಸಾನ್ EV ನಿಂದ ಎರವಲು ಪಡೆಯಲಾಗಿದೆ. ಆದರೆ, ಸಿಟ್ರೊಯೆನ್ ಬಸಾಲ್ಟ್ ಅನ್ನು 10.2-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ನೀಡಲಾಗುತ್ತಿದೆ. ಆದ್ದರಿಂದ, ನೀವು ದೊಡ್ಡ ಸ್ಕ್ರೀನ್‌ಗಳನ್ನು ಬಯಸಿದರೆ, ಟಾಟಾ ಕರ್ವ್ ನಿಮ್ಮ ಅಗತ್ಯಗಳಿಗೆ ಉತ್ತಮವಾಗಿ ಸರಿಹೊಂದುತ್ತದೆ.
ಪನೋರಮಿಕ್ ಸನ್‌ರೂಫ್
ಟಾಟಾ ಕರ್ವ್‌ನ ಅನಾವರಣದ ಸಮಯದಲ್ಲಿ, ಇದು ಪ್ಯಾನರೋಮಿಕ್ ಸನ್‌ರೂಫ್ ಅನ್ನು ಹೊಂದಿದೆ ಎಂದು ತೋರಿಸಲಾಯಿತು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಬಸಾಲ್ಟ್‌ನ ಟೀಸರ್‌ಗಳಿಂದ ಸನ್‌ರೂಫ್ ಕುರಿತು (ಸಿಂಗಲ್ ಪೇನ್ ಯೂನಿಟ್ ಕೂಡ ಅಲ್ಲ) ಯಾವುದೇ ಸೂಚನೆಯಿಲ್ಲ.
ಪ್ರೀಮಿಯಂ ಸ್ಪೀಕರ್‌ಗಳು
ಟಾಟಾ ಕರ್ವ್ 9-ಸ್ಪೀಕರ್ ಸಿಸ್ಟಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ, ಇದರ ಸಬ್ ವೂಫರ್ JBLನದ್ದಾಗಿರಬಹುದು, ಏಕೆಂದರೆ ಇದು ಈಗಾಗಲೇ ಹ್ಯಾರಿಯರ್ ಮತ್ತು ಸಫಾರಿಯಂತಹ ಇತರ ಟಾಟಾ ಮೊಡೆಲ್‌ಗಳಲ್ಲಿ ಲಭ್ಯವಿದೆ. ಆದಾರೆ, ಸಿಟ್ರೊಯೆನ್ ಬಸಾಲ್ಟ್ ಬ್ರ್ಯಾಂಡೆಡ್ ಅಲ್ಲದ ಆಡಿಯೊ ಸಿಸ್ಟಮ್‌ನೊಂದಿಗೆ ಬರಬಹುದು.
ಇದನ್ನು ಸಹ ಓದಿ: Tata Curvv ವರ್ಸಸ್ ಟಾಟಾ Curvv EV: ಬಾಹ್ಯ ವಿನ್ಯಾಸದ ಹೋಲಿಕೆ
ವೆಂಟಿಲೇಟೆಡ್ ಸೀಟ್‌ಗಳು
ಸಿಟ್ರೊಯೆನ್ ಬಸಾಲ್ಟ್‌ನಲ್ಲಿ ಮಿಸ್ ಆಗುವ ಸಾಧ್ಯತೆಯಿರುವ ಮತ್ತು ಕರ್ವ್‌ನಲ್ಲಿ ಲಭ್ಯವಿರಬಹುದೆಂದು ನಿರೀಕ್ಷೆ ಇರುವ ಮತ್ತೊಂದು ಫೀಚರ್ ಎಂದರೆ ವೆಂಟಿಲೇಟೆಡ್ ಫ್ರಂಟ್ ಸೀಟುಗಳು. ಈ ಫೀಚರ್ ನಮ್ಮ ದೇಶದ ಕೆಲವು ಭಾಗಗಳಲ್ಲಿ ಗರಿಷ್ಠ ಬೇಸಿಗೆ ಕಾಲದಲ್ಲಿ ವಿಶೇಷವಾಗಿ ಉಪಯುಕ್ತವಾಗಿರುತ್ತದೆ. ಟಾಟಾ ಈಗಾಗಲೇ ಪಂಚ್ ಇವಿ, ನೆಕ್ಸಾನ್, ಸಫಾರಿ ಮತ್ತು ಹ್ಯಾರಿಯರ್ ಸೇರಿದಂತೆ ಅದರ ಹೆಚ್ಚಿನ ಎಸ್‌ಯುವಿಗಳಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ನೀಡುತ್ತದೆ, ಆದ್ದರಿಂದ ಇದು ಕರ್ವ್ ಜೋಡಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ADAS
ವಿವಿಧ ಸ್ಪೈ ಶಾಟ್‌ಗಳಿಂದ ದೃಢಪಡಿಸಿದಂತೆ ಟಾಟಾ ಕರ್ವ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಘರ್ಷಣೆ ಎಚ್ಚರಿಕೆ ಮತ್ತು ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್ ಸೇರಿದಂತೆ ಕೆಲವು ADAS ಫೀಚರ್‌ಗಳನ್ನು ಕರ್ವ್ ಪಡೆಯುವ ನಿರೀಕ್ಷೆಯಿದೆ. ಆದರೆ ವಿಶೇಷ ಎಂಬತೆ, ಸಿಟ್ರೊಯೆನ್ ಬಸಾಲ್ಟ್ ಯಾವುದೇ ADAS ತಂತ್ರಜ್ಞಾನವನ್ನು ಪಡೆಯುವುದಿಲ್ಲ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ICE (ಇಂಟರ್ನಲ್ ಕಂಬಸ್ಟನ್ ಎಂಜಿನ್) ಆವೃತ್ತಿಯು 10.50 ಲಕ್ಷ ರೂ.ನಿಂದ ಆರಂಭಿಕ ಬೆಲೆಯನ್ನು ಹೊಂದಿರುಬಹುದೆಂದು ನಿರೀಕ್ಷಿಸಲಾಗಿದೆ. ಕರ್ವ್ ಇವಿಯ ಬೆಲೆಯು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಮತ್ತೊಂದೆಡೆ, ಸಿಟ್ರೊಯೆನ್ ಬಸಾಲ್ಟ್‌ನ ಬೆಲೆಗಳು 10 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಹ್ಯುಂಡೈ ಕ್ರೆಟಾ, ಮಾರುತಿ ಗ್ರಾಂಡ್ ವಿಟಾರಾ, ಹೋಂಡಾ ಎಲಿವೇಟ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಎರಡೂ ಎಸ್‌ಯುವಿ-ಕೂಪ್‌ಗಳು ಸೊಗಸಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ