ಟಾಟಾ ಹ್ಯರಿಯರ್‌ ಮತ್ತು ಸಫಾರ್‌ ಫೇಸ್‌ ಲಿಫ್ಟ್‌ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ

published on ಅಕ್ಟೋಬರ್ 11, 2023 10:06 am by rohit for ಟಾಟಾ ಹ್ಯಾರಿಯರ್

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಸಂಸ್ಥೆಯು ಇನ್ನೂ ಸಹ ಎಂದಿನಂತೆಯೇ ಎರಡು SUV ಗಳನ್ನು ಅದೇ 2 ಲೀಟರ್‌ ಎಂಜಿನ್‌ ನೊಂದಿಗೆ ನೀಡುತ್ತಿದ್ದರೂ, ಅವುಗಳ ಇಂಧನ ದಕ್ಷತೆ ಅಂಕಿಅಂಶಗಳು ಸಣ್ಣ ಮಟ್ಟದ ಹೆಚ್ಚಳವನ್ನು ತೋರಿಸುತ್ತಿವೆ

Tata Harrier and Safari facelifts

  • ಹ್ಯರಿಯರ್‌ ಫೇಸ್‌ ಲಿಫ್ಟ್‌ ಮಾದರಿಯು MT ಮತ್ತು AT ಗಳಿಗೆ ಕ್ರಮವಾಗಿ 16.80kmpl ಮತ್ತು 14.60kmpl ಮೈಲೇಜ್‌ ನೀಡುತ್ತಿದೆ ಎನ್ನಲಾಗಿದೆ.
  • ಟಾಟಾ ಸಂಸ್ಥೆಯು ಹೇಳುವಂತೆ ಹೊಸ ಸಫಾರಿಯು 16.30kmpl (MT) ಮತ್ತು 14.50kmpl (AT) ನಷ್ಟು ಇಂಧನ ದಕ್ಷತೆಯನ್ನು ಹೊಂದಿದೆ.
  • ಅವುಗಳ ಮೈಲೇಜ್‌ ಅಂಕಿಅಂಶಗಳು 0.45kmpl ನಷ್ಟು ಹೆಚ್ಚಳವನ್ನು ಕಂಡರೆ; ಹ್ಯರಿಯರ್ AT‌ ಯ ಮೈಲೇಜ್‌ ನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
  • ಈ ಎರಡೂ SUV ಗಳು 12.3 ಇಂಚಿನ ಟಚ್‌ ಸ್ಕ್ರೀನ್, 7‌ ಏರ್‌ ಬ್ಯಾಗ್‌ ಗಳು ಮತ್ತು ADAS ಮುಂತಾದ ವಿಶೇಷತೆಗಳನ್ನು ಹೊಂದಿವೆ.
  • ಎರಡೂ ಮಾದರಿಗಳು ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಬರಲಿವೆ.

ಟಾಟಾ ಹ್ಯರಿಯರ್‌ ಫೇಸ್‌ ಲಿಫ್ಟ್ ಮತ್ತು ಟಾಟಾ ಸಫಾರಿ ಫೇಸ್‌ ಲಿಫ್ಟ್ ಇವೆರಡೂ ಮಾದರಿಗಳನ್ನು ಟಾಟಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ರೂ. 25,000 ಕ್ಕೆ ಈ SUV ಗಳ ಬುಕಿಂಗ್‌ ಪ್ರಾರಂಭವಾಗಿದೆ. ಅವುಗಳ ಒಳಾಂಗಣ ಮತ್ತು ಒಳಾಂಗಣಗಳ ಚಿತ್ರಗಳು ಈಗಾಗಲೇ ಈ ಹೊಸ SUVಗಳ ಹೊಸ ನೋಟವನ್ನು ಬಹಿರಂಗಗೊಳಿಸಿದ್ದು, ಅವು ಅದೇ ಪವರ್‌ ಟ್ರೇನ್‌ ವ್ಯವಸ್ಥೆಯನ್ನು ಮುಂದುವರಿಸಿವೆ. ಟಾಟಾ ಸಂಸ್ಥೆಯು ಈ ಪರಿಷ್ಕೃತ SUV ಗಳ ಮೈಲೇಜ್‌ ಅನ್ನು ಬಹಿರಂಗಪಡಿಸಿದ್ದು, ಅವುಗಳತ್ತ ಗಮನ ಹರಿಸೋಣ:

ಹ್ಯರಿಯರ್

Tata Harrier facelift

2-ಲೀಟರ್ ಡೀಸೆಲ್‌ ಎಂಜಿನ್

ಎಂಜಿನ್-‌ಗೇರ್‌ ಬಾಕ್ಸ್‌ ಆಯ್ಕೆ

ಪರಿಷ್ಕರಣೆಗೆ ಮೊದಲಿನ ಹ್ಯರಿಯರ್

ಹ್ಯರಿಯರ್‌ ಫೇಸ್‌ ಲಿಫ್ಟ್

ವ್ಯತ್ಯಾಸ

ಡೀಸೆಲ್ MT

16.35kmpl

16.80kmpl

+0.45kmpl

ಡೀಸೆಲ್ AT

14.60kmpl

14.60kmpl

ಯಾವುದೇ ವ್ಯತ್ಯಾಸವಿಲ್ಲ

 

ಸಫಾರಿ

Tata Safari facelift

2-ಲೀಟರ್ ಡೀಸೆಲ್‌ ಎಂಜಿನ್

ಎಂಜಿನ್-‌ಗೇರ್‌ ಬಾಕ್ಸ್‌ ಆಯ್ಕೆ

ಪರಿಷ್ಕರಣೆಗೆ ಮೊದಲಿನ ಹ್ಯರಿಯರ್

ಸಫಾರಿ ಫೇಸ್‌ ಲಿಫ್ಟ್

ವ್ಯತ್ಯಾಸ

ಡೀಸೆಲ್ MT

16.14kmpl

16.30kmpl

+0.16kmpl

ಡೀಸೆಲ್ AT

14.08kmpl

14.50kmpl

+0.42kmpl

ಎರಡೂ SUV ಗಳು ಈ ಹಿಂದಿನಂತೆಯೇ 2 ಲೀಟರಿನ ಅದೇ ಡೀಸೆಲ್‌ ಎಂಜಿನ್ (170PS/350Nm)‌ ಅನ್ನು ಒದಗಿಸುತ್ತವೆ. ಅವುಗಳ ಟ್ರಾನ್ಸ್‌ ಮಿಶನ್‌ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ: 6-ಸ್ಪೀಡ್‌ ಮ್ಯಾನುವಲ್‌ ಮತ್ತು 6-ಸ್ಪೀಡ್‌ ಅಟೋಮ್ಯಾಟಿಕ್. ಆದರೂ ಈ ಪರಿಷ್ಕರಣೆಯೊಂದಿಗೆ ಹ್ಯರಿಯರ್‌ ಮತ್ತು ಸಫಾರಿ ಕಾರುಗಳ ಇಂಧನ ದಕ್ಷತೆಯು 0.45kmpl ನಷ್ಟು ಹೆಚ್ಚಿದೆ ಎಂದು ಟಾಟಾ ಸಂಸ್ಥೆಯು ಹೇಳಿದೆ. ಆದರೆ ಹ್ಯರಿಯರ್ AT‌ ಯ ಮೈಲೇಜ್‌ ನಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ.

 

ಎರಡೂ SUV ಗಳಲ್ಲಿರುವ ಹೊಸ ವೈಶಿಷ್ಟ್ಯಗಳು

Tata Harrier and Safari facelift 12.3-inch touchscreen
Tata Harrier and Safari facelift digital driver's display

 ಟಾಟಾ ಸಂಸ್ಥೆಯು ಎರಡೂ SUV ಗಳಲ್ಲಿನ ವೈಶಿಷ್ಟ್ಯಗಳನ್ನು ವಿಸ್ತರಿಸಿದೆ. 2023ರ ಹ್ಯರಿಯರ್‌ ಮತ್ತು ಸಫಾರಿಗಳು ಈಗ 12.3 ಇಂಚಿನ ಟಚ್‌ ಸ್ಕ್ರೀನ್‌, ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಚಾಲಕನ 10.25 ಇಂಚಿನ ಡಿಜಿಟಲ್‌ ಡಿಸ್ಪ್ಲೇ, ಮತ್ತು ಗೆಸ್ಚರ್‌ ಕಂಟ್ರೋಲ್ಡ್‌ ಪವರ್ಡ್‌ ಟೇಲ್‌ ಗೇಟ್‌ ಅನ್ನು ಹೊಂದಿವೆ.

Tata Harrier facelift 7 airbags

 ಅವುಗಳ ಸುರಕ್ಷತಾ ಪಟ್ಟಿಯಲ್ಲಿ ಏಳು ಏರ್‌ ಬ್ಯಾಗ್‌ ಗಳು, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು ಮತ್ತು 360 ಡಿಗ್ರಿ ಕ್ಯಾಮರಾ ಸೇರಿದಂತೆ  ಇನ್ನಷ್ಟು ಪರಿಷ್ಕರಣೆಗೆ ಒಳಪಟ್ಟಿರುವ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಇತ್ಯಾದಿಗಳು ಇವೆ.

ಸಂಬಂಧಿತ: 2023 ಟಾಟಾ ಸಫಾರಿ ಫೇಸ್‌ ಲಿಫ್ಟ್‌ ಕಾರಿನ ವೇರಿಯಂಟ್‌ ಗಳ ವೈಶಿಷ್ಟ್ಯ ಬಹಿರಂಗ

ಬೆಲೆ ಮತ್ತು ಸ್ಪರ್ಧಿಗಳು

Tata Harrier facelift rear
Tata Safari facelift rear

ಟಾಟಾ ಸಂಸ್ಥೆಯು ಪರಿಷ್ಕೃತ ಹ್ಯರಿಯರ್‌ ಮತ್ತು ಸಫಾರಿ ಕಾರುಗಳನ್ನು ಸದ್ಯವೇ ರಸ್ತೆಗಿಳಿಸಲಿದೆ. ಹ್ಯರಿಯರ್‌ ಫೇಸ್‌ ಲಿಫ್ಟ್‌ ಕಾರಿನ ಬೆಲೆಯು ರೂ. 15 ಲಕ್ಷದಿಂದ ಪ್ರಾರಂಭಗೊಂಡರೆ, ಹೊಸ ಸಫಾರಿಯ ಬೆಲೆಯು ರೂ. 16 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್‌-ಶೋರೂಂ) ಐದು ಸೀಟುಗಳ SUV ಯು MG ಹೆಕ್ಟರ್, ಮಹೀಂದ್ರಾ XUV700, ಮತ್ತು  ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್‌ ಕಾರುಗಳ ಹೈಯರ್‌ ಸ್ಪೆಕ್‌ ವೇರಿಯಂಟ್‌ ಗಳ ಜೊತೆಗೆ ಸ್ಪರ್ಧಿಸಲಿದೆ. ಇನ್ನೊಂದೆಡೆ ಪರಿಷ್ಕೃತ ಟಾಟಾ ಸಫಾರಿಯು ಹ್ಯುಂಡೈ ಅಲ್ಕಜಾರ್, ಮಹೀಂದ್ರಾ XUV700, ಮತ್ತು MG ಹೆಕ್ಟರ್‌ ಪ್ಲಸ್‌ ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಹ್ಯರಿಯರ್‌ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience