Tata Motorsನಿಂದ 2026ರ ವೇಳೆಗೆ ನಾಲ್ಕು ಹೊಸ EVಗಳ ಬಿಡುಗಡೆ
ಮುಂಬರುವ ಈ ಟಾಟಾ ಇವಿಗಳು Acti.EV ಮತ್ತು EMA ಪ್ಲಾಟ್‌ಫಾರ್ಮ್‌ಗಳನ್ನು ಆಧರಿಸಿರಲಿದೆ
ಇತ್ತೀಚಿನ ಹೂಡಿಕೆದಾರರ ಸಭೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಮುಂಬರುವ ನಾಲ್ಕು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ಟೈಮ್‌ಲೈನ್‌ಗಳನ್ನು ಘೋಷಿಸಿತು. ಅವುಗಳೆಂದರೆ, ಕರ್ವ್ ಇವಿ, ಹ್ಯಾರಿಯರ್ ಇವಿ, ಸಿಯೆರಾ ಇವಿ, ಮತ್ತು ಅವಿನ್ಯಾ ಇವಿ. ಈ ಇವಿಗಳು ಏಪ್ರಿಲ್ 2026ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿವೆ.
ಅಧಿಕೃತವಾಗಿ ಹೇಳಿದ್ದು ಏನು ?
ಸಭೆಯಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯ ಪ್ರಕಾರ, ಕರ್ವ್ ಇವಿ ಮತ್ತು ಹ್ಯಾರಿಯರ್ ಇವಿಯು 2025 ರ ಹಣಕಾಸು ವರ್ಷದಲ್ಲಿ (2025ರ ಮಾರ್ಚ್ ವರೆಗೆ ಚಾಲ್ತಿಯಲ್ಲಿದೆ) ಬಿಡುಗಡೆಯಾಗಲಿದೆ, ಆದರೆ ಸಿಯೆರಾ ಇವಿ ಮತ್ತು ಅವಿನ್ಯಾ ಇವಿಯ ಸಿರೀಸ್‌ಗಳು 2026 ರ ಆರ್ಥಿಕ ವರ್ಷದಲ್ಲಿ (2025ರ ಏಪ್ರಿಲ್ ನಿಂದ 2026ರ ಮಾರ್ಚ್‌ನ ಒಳಗೆ) ಬಿಡುಗಡೆ ಮಾಡಲಿದೆ. ಈ ಇವಿಗಳ ಬಗ್ಗೆ ನಮಗೆ ತಿಳಿದಿರುವ ಎಲ್ಲವೂ ಇಲ್ಲಿದೆ:
ಟಾಟಾ ಕರ್ವ್ ಇವಿ
ಟಾಟಾ ಕರ್ವ್ ಮತ್ತು ಕರ್ವ್ ಇವಿಗಳು ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಪರೀಕ್ಷೆ ಮಾಡುತ್ತಿರುವುದು ಕಂಡುಬಂದಿದೆ. ಎಸ್‌ಯುವಿ-ಕೂಪ್‌ನ ಇವಿ ಆವೃತ್ತಿಯು 2025ರ ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ ಎಂದು ಈಗ ದೃಢಪಡಿಸಲಾಗಿದೆ. ಕೂಪ್ ಎಸ್‌ಯುವಿಯ ನಿಖರವಾದ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ವಿಶೇಷಣಗಳು ತಿಳಿದಿಲ್ಲವಾದರೂ, ಇದು 500 ಕಿಮೀ ವರೆಗೆ ಕ್ಲೈಮ್ ಮಾಡಬಹುದಾದ ರೇಂಜ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಕರ್ವ್‌ನಲ್ಲಿ ನಿರೀಕ್ಷಿತ ಫೀಚರ್‌ಗಳು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಸನ್‌ರೂಫ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇಗಳು ಸೇರಿವೆ. ಈ ಇವಿಯು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹಾಗೆಯೇ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.
ಟಾಟಾ ಹ್ಯಾರಿಯರ್ ಇವಿ
2025 ರ ಆರ್ಥಿಕ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಹ್ಯಾರಿಯರ್ EV, ಇತ್ತೀಚೆಗೆ ಬಹಿರಂಗಪಡಿಸಿದ Tata Acti.EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು 500 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ಅನ್ನು ನೀಡಬಹುದು ಮತ್ತು ಡ್ಯುಯಲ್-ಮೋಟಾರ್ ಆಲ್-ವೀಲ್ ಡ್ರೈವ್ ಸೆಟಪ್‌ನ ಆಯ್ಕೆಯನ್ನು ಪಡೆಯಬಹುದು. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಮತ್ತು ಪವರ್‌ಡ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್(ಮೂಡ್ ಲೈಟಿಂಗ್‌ನೊಂದಿಗೆ) ಮತ್ತು ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್ ಸೇರಿದಂತೆ ಹೊಸ ಹ್ಯಾರಿಯರ್‌ನ ಹೆಚ್ಚಿನ ಪ್ರಮುಖ ಫೀಚರ್‌ಗಳು ಲಭ್ಯವಾಗುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಏಳು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಹ್ಯಾರಿಯರ್ ಇವಿಯು ಹ್ಯಾರಿಯರ್‌ನ ಐಸಿಇ ಆವೃತ್ತಿಯೊಂದಿಗೆ ಕಂಡುಬರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಹ ಪಡೆಯಬಹುದು.
ಟಾಟಾ ಸಿಯೆರಾ ಇವಿ
ಸಿಯೆರಾ ಇವಿಯನ್ನು 2026ರ ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ಟಾಟಾ ದೃಢಪಡಿಸಿದೆ. ಇದು ಪಂಚ್ ಇವಿ ಮತ್ತು ಮುಂಬರುವ ಕರ್ವ್ ಮತ್ತು ಹ್ಯಾರಿಯರ್ ಇವಿಗಳಂತೆಯೇ ಬ್ರ್ಯಾಂಡ್‌ನ Acti.EV ಆರ್ಕಿಟೆಕ್ಚರ್ ಅನ್ನು ಬಳಸುವ ನಿರೀಕ್ಷೆಯಿದೆ. ಇದು ಮೂಲ ಸಿಯೆರಾದ ಕೆಲವು ಸಾಂಪ್ರದಾಯಿಕ ಸ್ಟೈಲಿಂಗ್ ಅಂಶಗಳನ್ನು ಉಳಿಸಿಕೊಂಡಿದೆ ಮತ್ತು ಕೆಲವು ಆಧುನಿಕ ವಿನ್ಯಾಸ ಸ್ಪರ್ಶಗಳನ್ನು ಹೊಂದಿದೆ. ಇದು ಐದು ಆಸನಗಳ ಸೆಟಪ್ ಮತ್ತು ನಾಲ್ಕು ಆಸನಗಳ ಲೌಂಜ್ ಆಯ್ಕೆಯೊಂದಿಗೆ ನೀಡಲಾಗುವುದು. ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಎಡಿಎಎಸ್, ಮತ್ತು ಆರು ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಟಾಟಾದಿಂದ ಹೊಸ ಇವಿ ಮತ್ತು ICE ಉತ್ಪನ್ನಗಳಿಂದ ಹೆಚ್ಚಿನ ಸೌಕರ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನವನ್ನು ಎರವಲು ಪಡೆಯುವ ಮೂಲಕ ಇದು ಸುಸಜ್ಜಿತ ಕೊಡುಗೆಯಾಗಿದೆ ಎಂದು ನಿರೀಕ್ಷಿಸಬಹುದು.
ಟಾಟಾ ಅವಿನ್ಯಾ
ಅವಿನ್ಯಾ ಪ್ಲಾಟ್‌ಫಾರ್ಮ್ ಆಧಾರಿತ ಇವಿಗಳನ್ನು 2026ರ ಏಪ್ರಿಲ್ ಮೊದಲು ಪರಿಚಯಿಸಲಾಗುವುದು ಎಂದು ಟಾಟಾ ದೃಢಪಡಿಸಿದೆ. JLR ನ ಮಾಡ್ಯುಲರ್ EMA ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಅವಿನ್ಯಾ ಲೈನ್‌ನ ವಾಹನಗಳನ್ನು ವೆಚ್ಚವನ್ನು ಕಡಿಮೆ ಮಾಡಲು ಭಾರತದಲ್ಲೇ ನಿರ್ಮಿಸಲಿದೆ. ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್‌ನ ಬ್ಯಾಟರಿ ಪ್ಯಾಕ್ ಅನ್ನು ಹೊಂದುವ ನಿರೀಕ್ಷೆಯಿದೆ. ಈ ಇವಿಯು ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ, ಇದರ ಸಹಾಯದಿಂದ 500 ಕಿಮೀ ರೇಂಜ್ ಅನ್ನು ತಲುಪಲು ಬೇಕಾಗುವ ಬ್ಯಾಟರಿಯನ್ನು 30 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದೆಂದು ಟಾಟಾ ಹೇಳಿಕೊಂಡಿದೆ. ಹಾಗೆಯೇ, ಮೊದಲ ಅವಿನ್ಯಾ ಮೊಡೆಲ್‌ನ ಬಾಡಿ ಶೈಲಿ ಅಥವಾ ವಿಶೇಷಣಗಳ ಬಗ್ಗೆ ಸ್ವಲ್ಪ ತಿಳಿದಿದೆ.
ಟಾಟಾದ ಪ್ರಸ್ತುತ EV ಲೈನ್ಅಪ್
ಸಮೂಹ-ಮಾರುಕಟ್ಟೆ ಬ್ರಾಂಡ್‌ಗಳಿಗೆ ಬಂದಾಗ ಟಾಟಾ ಪ್ರಸ್ತುತ ದೇಶದಲ್ಲಿ ಹೆಚ್ಚಿನ ಇವಿಗಳನ್ನು ಆಫರ್‌ನಲ್ಲಿ ಹೊಂದಿದೆ. ಇದರ ಪ್ರಸ್ತುತ ಇವಿಗಳ ಪಟ್ಟಿಯು ಟಾಟಾ ಟಿಯಾಗೊ ಇವಿ (ಪ್ರವೇಶ ಮಟ್ಟದ ಮೊಡೆಲ್), ಟಾಟಾ ಟಿಗೊರ್ ಇವಿ, ಟಾಟಾ ಪಂಚ್ ಇವಿ, ಮತ್ತು ಟಾಟಾ ನೆಕ್ಸಾನ್ ಇವಿ (ಪ್ರಸ್ತುತ ಪ್ರಮುಖ EV) ಗಳನ್ನು ಒಳಗೊಂಡಿದೆ. 2026ರ ಆರ್ಥಿಕ ವರ್ಷದ ವೇಳೆಗೆ ಟಾಟಾ ಮೋಟಾರ್ಸ್ ತನ್ನ ಕಾರುಗಳ ಪಟ್ಟಿಯಲ್ಲಿ 10 EV ಕಾರುಗಳನ್ನು ಹೊಂದಿರುತ್ತದೆ ಎಂದು ಹೇಳಿದೆ.
ಮುಂಬರುವ ಯಾವ ಟಾಟಾ ಇವಿ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.