Login or Register ಅತ್ಯುತ್ತಮ CarDekho experience ಗೆ
Login

Tata Nexon ಈಗ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತದ ಏಕೈಕ ಕಾರ್

ಟಾಟಾ ನೆಕ್ಸಾನ್‌ ಗಾಗಿ dipan ಮೂಲಕ ಸೆಪ್ಟೆಂಬರ್ 27, 2024 12:46 pm ರಂದು ಪ್ರಕಟಿಸಲಾಗಿದೆ

ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಇವಿ ವರ್ಷನ್‌ಗಳನ್ನು ಹೊಂದಿದ್ದ ನೆಕ್ಸಾನ್ ಈಗ ಸಿಎನ್‌ಜಿ ಆಯ್ಕೆಯನ್ನು ಕೂಡ ನೀಡುವ ಮೂಲಕ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತ ಮೊದಲ ಕಾರಾಗಿದೆ

ಟಾಟಾ ನೆಕ್ಸಾನ್ ಎಸ್‌ಯುವಿಯು ಅದರ ಸಿಎನ್‌ಜಿ ವರ್ಷನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಮತ್ತು ಇದರ ಬೆಲೆಯು ರೂ 8.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋರೂಮ್, ಪ್ಯಾನ್-ಇಂಡಿಯಾ). ಈ ಅಪ್‌ಡೇಟ್‌ನೊಂದಿಗೆ; ಪೆಟ್ರೋಲ್, ಡೀಸೆಲ್, CNG, ಮತ್ತು ಆಲ್-ಎಲೆಕ್ಟ್ರಿಕ್ (ಇವಿ) ಈ ನಾಲ್ಕು ಇಂಧನ ಆಯ್ಕೆಗಳೊಂದಿಗೆ ಬರುತ್ತಿರುವ ಭಾರತದಲ್ಲಿನ ಏಕೈಕ ಕಾರು ಎಂದು ನೆಕ್ಸಾನ್ ಎನಿಸಿಕೊಂಡಿದೆ. ಬನ್ನಿ, ಇದರ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳ ವಿವರವಾದ ಸ್ಪೆಸಿಫಿಕೇಷನ್‌ಗಳನ್ನು ನೋಡೋಣ:

ಪವರ್‌ಟ್ರೇನ್ ಆಯ್ಕೆಗಳು

ನೆಕ್ಸಾನ್‌ನ ಇಂಟರ್ನಲ್ ಕಂಬಷ್ಚನ್ ಎಂಜಿನ್ (ICE) ವರ್ಷನ್‌ನೊಂದಿಗೆ ನೀಡಲಾದ ಎಂಜಿನ್ ಆಯ್ಕೆಗಳ ಸ್ಪೆಸಿಫಿಕೇಷನ್‌ಗಳನ್ನು ನೋಡೋಣ:

ಇಂಧನ ಆಯ್ಕೆ

ಡೀಸೆಲ್

ಟರ್ಬೊ-ಪೆಟ್ರೋಲ್

ಸಿಎನ್‌ಜಿ

ಇಂಜಿನ್

.5-ಲೀಟರ್ ಡೀಸೆಲ್

1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

1.2-ಲೀಟರ್ ಟರ್ಬೋಚಾರ್ಜ್ ಆಗಿರುವ ಎಂಜಿನ್

ಪವರ್

115 PS

120 PS

100 PS

ಟಾರ್ಕ್

260 Nm

170 Nm

170 Nm

ಟ್ರಾನ್ಸ್‌ಮಿಷನ್‌ ಆಯ್ಕೆಗಳು*

6-ಸ್ಪೀಡ್ MT, 6-ಸ್ಪೀಡ್ AMT

5-ಸ್ಪೀಡ್ MT, 6-ಸ್ಪೀಡ್ MT, 6-ಸ್ಪೀಡ್ AMT, 7-ಸ್ಪೀಡ್ DCT

6-ಸ್ಪೀಡ್ MT

*MT = ಮ್ಯಾನುಯಲ್ ಟ್ರಾನ್ಸ್‌ಮಿಷನ್, AMT = ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಬನ್ನಿ, ಈಗ ನೆಕ್ಸಾನ್ ಇವಿಯ ಪವರ್‌ಟ್ರೇನ್ ಆಯ್ಕೆಗಳನ್ನು ನೋಡೋಣ:

ಮೀಡಿಯಂ ರೇಂಜ್

ಲಾಂಗ್ ರೇಂಜ್

ಬ್ಯಾಟರಿ ಪ್ಯಾಕ್

30 kWh

40.5 kWh

45 kWh

ಎಲೆಕ್ಟ್ರಿಕ್ ಮೋಟರ್ ಸಂಖ್ಯೆ

1

1

1

ಪವರ್

129 ಪಿಎಸ್‌

143 ಪಿಎಸ್‌

143 ಪಿಎಸ್‌

ಟಾರ್ಕ್

215 ಎನ್‌ಎಮ್‌

215 ಎನ್‌ಎಮ್‌

215 ಎನ್‌ಎಮ್‌

MIDC-ಕ್ಲೇಮ್ ಮಾಡಿರುವ ರೇಂಜ್

325 ಕಿ.ಮೀ

465 ಕಿ.ಮೀ

485 ಕಿ.ಮೀ

C75 ರೇಂಜ್

210-230 ಕಿ.ಮೀ

290-310 ಕಿ.ಮೀ

330-375 ಕಿ.ಮೀ

ಟಾಟಾ ನೆಕ್ಸಾನ್ ಇವಿ ಎರಡು ಪ್ರಮುಖ ವಿಧಗಳು ಮತ್ತು ಮೂರು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್‌ನ C75 ರೇಂಜ್ ಆನ್ ರೋಡ್ ಪರಿಸ್ಥಿತಿಗಳಲ್ಲಿ 75 ಪ್ರತಿಶತ ಗ್ರಾಹಕರು ಎಷ್ಟು ದೂರ ಓಡಿಸಬಹುದು ಎಂದು ಅಂದಾಜು ಮಾಡುತ್ತದೆ. ಇದು 120 ಕಿಮೀ / ಗಂ ವೇಗವನ್ನು ಮತ್ತು 250 ಕೆಜಿವರೆಗಿನ ತೂಕವನ್ನು ಹ್ಯಾಂಡಲ್ ಮಾಡಬಲ್ಲದು. ಆನ್ ರೋಡ್ ಪರಿಸ್ಥಿತಿಗಳಿಗೆ ಹತ್ತಿರವಾಗುವ ಅನುಭವವನ್ನು ನೀಡಲು ರೇಂಜ್ ಅನ್ನು ವಿವಿಧ ತಾಪಮಾನಗಳಲ್ಲಿ ಟೆಸ್ಟ್ ಮಾಡಲಾಗಿದೆ.

ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಸಿಎನ್‌ಜಿ ವರ್ಸಸ್ ಮಾರುತಿ ಬ್ರೆಜ್ಜಾ ಸಿಎನ್‌ಜಿ: ಸ್ಪೆಸಿಫಿಕೇಷನ್‌ಗಳ ಹೋಲಿಕೆ ಇಲ್ಲಿದೆ

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ ICE ಬೆಲೆಯು ರೂ. 8 ಲಕ್ಷದಿಂದ ರೂ. 15.50 ಲಕ್ಷದವರೆಗೆ ಇದೆ. ಇದು ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತೊಂದೆಡೆ, ನೆಕ್ಸಾನ್ ಸಿಎನ್‌ಜಿ ಬೆಲೆಯು ರೂ. 8.99 ಲಕ್ಷದಿಂದ 14.59 ಲಕ್ಷದವರೆಗೆ ಇದೆ. ಇದು ಮಾರುತಿ ಬ್ರೆಝಾ ಸಿಎನ್‌ಜಿ ಮತ್ತು ಮಾರುತಿ ಫ್ರಾಂಕ್ಸ್ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ನೆಕ್ಸಾನ್ ಇವಿ ಬೆಲೆಯು ರೂ. 12.49 ಲಕ್ಷದಿಂದ ರೂ. 17.19 ಲಕ್ಷದವರೆಗೆ ಇದೆ ಮತ್ತು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇದರ ನೇರ ಪ್ರತಿಸ್ಪರ್ಧಿ ಮಹೀಂದ್ರಾ XUV400 ಇವಿ ಒಂದೇ ಆಗಿದೆ. ಆದರೆ, ಇದು ಟಾಟಾ ಕರ್ವ್ ಇವಿ ಮತ್ತು MG ZS ಇವಿಗಳಿಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ

ಈ ಎಲ್ಲಾ ಇಂಧನ ಆಯ್ಕೆಗಳನ್ನು ಇನ್ನೂ ಹೆಚ್ಚಿನ ಕಾರುಗಳಲ್ಲಿ ನೀಡಬೇಕೇ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT

Share via

Write your Comment on Tata ನೆಕ್ಸಾನ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ