ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿರುವ ಎರಡು ಸನ್‌ರೂಫ್ ಆಯ್ಕೆ ಈಗ ಟಾಟಾ ನೆಕ್ಸಾನ್‌ನಲ್ಲಿ ಕೂಡ ಲಭ್ಯ
ಪನೋರಮಿಕ್ ಸನ್‌ರೂಫ್ ಅನ್ನು ಮೊದಲು ಎಸ್‌ಯುವಿಯ ಸಿಎನ್‌ಜಿ ಮಾಡೆಲ್‌ಗೆ ಪರಿಚಯಿಸಲಾಯಿತು ಮತ್ತು ಈಗ ಟಾಪ್ ಎಂಡ್ ರೆಗ್ಯುಲರ್ ನೆಕ್ಸಾನ್ ವರ್ಷನ್ ನಲ್ಲಿ ಕೂಡ ಇದು ಲಭ್ಯವಿದೆ
-
ನೆಕ್ಸಾನ್ ಈಗ ಸಿಂಗಲ್ ಪೇನ್ ಮತ್ತು ಪನೋರಮಿಕ್ ಸನ್‌ರೂಫ್ ಈ ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ.
-
ಟಾಟಾ ಈ ಪನೋರಮಿಕ್ ಯೂನಿಟ್ ಅನ್ನು ಎಸ್‌ಯುವಿಯ ಟಾಪ್-ಸ್ಪೆಕ್ ಫಿಯರ್‌ಲೆಸ್ ಪ್ಲಸ್ PS ಟ್ರಿಮ್‌ನಲ್ಲಿ ಮಾತ್ರ ನೀಡುತ್ತಿದೆ.
-
ಬೇರೆ ಸನ್‌ರೂಫ್ ಇರುವ ವೇರಿಯಂಟ್‌ಗಳು ಸಿಂಗಲ್-ಪೇನ್ ಯೂನಿಟ್‌ನೊಂದಿಗೆ ಮಾತ್ರ ಬರುತ್ತವೆ.
-
ಅದರ ಫೀಚರ್‌ಗಳಿಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
-
ಇದು ಈಗ ನಾಲ್ಕು ವರ್ಷನ್‌ಗಳಲ್ಲಿ ಲಭ್ಯವಿದೆ: ಪೆಟ್ರೋಲ್, ಡೀಸೆಲ್, ಇವಿ ಮತ್ತು ಸಿಎನ್‌ಜಿ.
-
ನೆಕ್ಸಾನ್ ಬೆಲೆಯು ರೂ 8 ಲಕ್ಷದಿಂದ ಶುರುವಾಗಿ ರೂ 15.50 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಥಾರ್ ರೋಕ್ಸ್ ಎಸ್‌ಯುವಿಯಲ್ಲಿ ಮಹೀಂದ್ರಾ ಎರಡು ಸನ್‌ರೂಫ್‌ಗಳ ಆಯ್ಕೆಯನ್ನು ಪರಿಚಯಿಸುವುದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಈಗ ಟಾಟಾ ನೆಕ್ಸಾನ್ ಕೂಡ ನೀವು ಆಯ್ಕೆ ಮಾಡುವ ವೇರಿಯಂಟ್ ಆಧಾರದ ಮೇಲೆ ಅದೇ ಆಯ್ಕೆಗಳನ್ನು ನೀಡುತ್ತಿದೆ.
ಪನೋರಮಿಕ್ ಸನ್‌ರೂಫ್‌ನ ಪರಿಚಯ
ನೆಕ್ಸಾನ್ ಸಿಎನ್‌ಜಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿದೆ, ಮತ್ತು ಇದರಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಪರಿಚಯಿಸಲಾಗಿದೆ. ಆದರೆ ಅದು ನೆಕ್ಸಾನ್‌ನ ಟಾಪ್ ಎಂಡ್ ಮಾಡೆಲ್ ಆಗಿರುವ ಫಿಯರ್‌ಲೆಸ್ ಪ್ಲಸ್ PS ಸಿಎನ್‌ಜಿಯಲ್ಲಿ ಮಾತ್ರ ಲಭ್ಯವಿದೆ. ಈಗ, ಟಾಟಾ ತನ್ನ ರೆಗ್ಯುಲರ್ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ಗಳಿಗೆ ಕೂಡ ಪನೋರಮಿಕ್ ಸನ್‌ರೂಫ್ ಅನ್ನು ನೀಡುತ್ತಿದೆ. ಇದು ಸ್ಟ್ಯಾಂಡರ್ಡ್ ನೆಕ್ಸಾನ್‌ನ ಟಾಪ್ ಮಾಡೆಲ್ ಆಗಿರುವ, ಫಿಯರ್‌ಲೆಸ್ ಪ್ಲಸ್ PS ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ. ಸಿಎನ್‌ಜಿ ಮತ್ತು ಪೆಟ್ರೋಲ್-ಡೀಸೆಲ್ ಲೈನ್ ಅಪ್‌ನಲ್ಲಿನ ಇತರ ಸನ್‌ರೂಫ್ ಇರುವ ವೇರಿಯಂಟ್‌ಗಳು ಸಿಂಗಲ್-ಪೇನ್ ಯೂನಿಟ್ ಅನ್ನು ಮಾತ್ರ ಪಡೆಯುತ್ತವೆ.
ಫೀಚರ್‌ಗಳಲ್ಲಿ ಬೇರೆ ಯಾವುದೇ ಬದಲಾವಣೆ ಇಲ್ಲ
ಪನೋರಮಿಕ್ ಸನ್‌ರೂಫ್ ಬಿಟ್ಟು ಟಾಟಾ ತನ್ನ ನೆಕ್ಸಾನ್‌ನಲ್ಲಿ ಇತರ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದು ಡ್ಯುಯಲ್ 10.25-ಇಂಚಿನ ಸ್ಕ್ರೀನ್ (ಒಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ), ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕನೆಕ್ಟೆಡ್ ಕಾರ್ ಟೆಕ್‌ನೊಂದಿಗೆ ಬರುತ್ತದೆ.
ಸುರಕ್ಷತಾ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ರಿವ್ಯೂ: ಅತ್ಯುತ್ತಮವಾಗುವ ಎಲ್ಲಾ ಸಾಧ್ಯತೆ ಇಲ್ಲಿದೆ
ಎಂಜಿನ್ ಆಯ್ಕೆಗಳು?
ಟಾಟಾ ತನ್ನ ನೆಕ್ಸಾನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪವರ್‌ಟ್ರೇನ್‌ಗಳೊಂದಿಗೆ ನೀಡುತ್ತದೆ, ಮತ್ತು ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ:
ಸ್ಪೆಸಿಫಿಕೇಷನ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ ಟರ್ಬೊ-ಪೆಟ್ರೋಲ್+ ಸಿಎನ್‌ಜಿ |
1.5-ಲೀಟರ್ ಡೀಸೆಲ್ |
ಪವರ್ |
120 PS |
100 PS |
115 PS |
ಟಾರ್ಕ್ |
170 Nm |
170 Nm |
260 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 6-ಸ್ಪೀಡ್ MT, 6-ಸ್ಪೀಡ್ AMT, 7-ಸ್ಪೀಡ್ DCT* |
6-ಸ್ಪೀಡ್ MT |
6-ಸ್ಪೀಡ್ MT, 6-ಸ್ಪೀಡ್ AMT |
*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಸಂಬಂಧಿತ ಲೇಖನ: ಟಾಟಾ ನೆಕ್ಸಾನ್ ಸಿಎನ್‌ಜಿ ವರ್ಸಸ್ ಮಾರುತಿ ಬ್ರೆಜ್ಜಾ ಸಿಎನ್‌ಜಿ: ಸ್ಪೆಸಿಫಿಕೇಷನ್‌ಗಳ ಹೋಲಿಕೆ ಇಲ್ಲಿದೆ
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ ಬೆಲೆಯು ರೂ 8 ಲಕ್ಷದಿಂದ ರೂ 15.50 ಲಕ್ಷದವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್, ಮಹೀಂದ್ರಾ XUV 3XO ಮತ್ತು ರೆನಾಲ್ಟ್ ಕಿಗರ್‌ಗಳೊಂದಿಗೆ ಸ್ಪರ್ಧಿಸುತ್ತದೆ. ನೆಕ್ಸಾನ್ ಟೊಯೋಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೆ ಹೋಲಿಸಿದರೆ ಪರ್ಯಾಯ ಆಯ್ಕೆಯಾಗಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ : ನೆಕ್ಸಾನ್ AMT
Write your Comment on Tata ನೆಕ್ಸಾನ್
is the panoramic sunroof for petrol official?, cant find any details on the tata website