ಟಾಟಾ ಪಂಚ್ ಇವಿ Vs ಸಿಟ್ರೋನ್ eC3 Vs ಟಾಟಾ ಟಿಯಾಗೊ ಇವಿ Vs ಎಮ್‌ಜಿ ಕಾಮೆಟ್ ಇವಿ: ಬೆಲೆ ಹೋಲಿಕೆ
ಟಾಟಾ ಪಂಚ್ ಇವಿ ಗಾಗಿ rohit ಮೂಲಕ ಜನವರಿ 19, 2024 06:19 pm ರಂದು ಪ್ರಕಟಿಸಲಾಗಿದೆ
- 244 Views
- ಕಾಮೆಂಟ್ ಅನ್ನು ಬರೆಯಿರಿ
ಈ ಪಟ್ಟಿಯಲ್ಲಿ ಪಂಚ್ EV ಅತ್ಯಂತ ಹೆಚ್ಚು ಫೀಚರ್ ಗಳನ್ನು ಇರುವ ಕಾರ್ ಆಗಿದೆ ಮತ್ತು 400 ಕಿ.ಮೀ.ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾಗಿರುವ ರೇಂಜ್ ಅನ್ನು ಹೊಂದಿದೆ.
ಭಾರತದಲ್ಲಿನ ಎಲೆಕ್ಟ್ರಿಕ್ ಕಾರ್ ಮಾಸ್ ಮಾರುಕಟ್ಟೆಯು ಟಾಟಾ ಪಂಚ್ EV ಯ ರೂಪದಲ್ಲಿ ಮೊದಲ ಎಲೆಕ್ಟ್ರಿಕ್ ಮೈಕ್ರೋ-SUV ಸದಸ್ಯನನ್ನು ಪಡೆದುಕೊಂಡಿದೆ. ಆದ್ದರಿಂದ ನೀವು 15 ಲಕ್ಷಕ್ಕಿಂತ ಕಡಿಮೆ ಬೆಲೆಯ EVಯನ್ನು ಖರೀದಿಸಲು ಬಯಸಿದರೆ (ಎಕ್ಸ್-ಶೋರೂಮ್), ಆಲ್-ಎಲೆಕ್ಟ್ರಿಕ್ ಸಬ್-4m ಸೆಡಾನ್ ಸೇರಿದಂತೆ ಐದು ಆಯ್ಕೆಗಳಿವೆ. ಪಂಚ್ EV ಯ ಬೆಲೆಗಳು ಅದರ ಹತ್ತಿರದ ಪ್ರತಿಸ್ಪರ್ಧಿಗಳ ಸಮೀಪದಲ್ಲಿದೆ, ಹಾಗಾಗಿ ಅದರ ಪ್ರತಿಸ್ಪರ್ಧಿಗಳ ವಿರುದ್ಧ ಅದರ ಬೆಲೆಯು ಹೇಗಿದೆ ಎಂಬುದನ್ನು ನೋಡೋಣ:
ಬೆಲೆ ಪಟ್ಟಿ
ಟಾಟಾ ಪಂಚ್ EV (ಪರಿಚಯಾತ್ಮಕ) |
ಸಿಟ್ರೋನ್ eC3 |
ಟಾಟಾ ಟಿಯಾಗೊ EV |
MG ಕಾಮೆಟ್ EV |
ಟಾಟಾ ಟಿಗೋರ್ EV |
XT MR - ರೂ. 9.29 ಲಕ್ಷ |
ಪ್ಲೇ - ರೂ 9.28 ಲಕ್ಷ |
|||
XT LR - ರೂ. 10.24 ಲಕ್ಷ |
ಪ್ಲಶ್ - ರೂ. 9.98 ಲಕ್ಷ |
|||
ಸ್ಮಾರ್ಟ್ - 10.99 ಲಕ್ಷ ರೂ |
XZ+ LR - ರೂ. 11.04 ಲಕ್ಷ |
|||
ಸ್ಮಾರ್ಟ್+ - ರೂ 11.49 ಲಕ್ಷ |
ಲೈವ್ - ರೂ 11.61 ಲಕ್ಷ |
XZ+ ಟೆಕ್ ಲಕ್ಸ್ LR - ರೂ 11.54 ಲಕ್ಷ |
||
XZ+ LR (7.2 kW ಚಾರ್ಜರ್‌ನೊಂದಿಗೆ) - ರೂ. 11.54 ಲಕ್ಷ |
||||
ಅಡ್ವೆಂಚರ್ - ರೂ. 11.99 ಲಕ್ಷ |
XZ+ ಟೆಕ್ ಲಕ್ಸ್ LR (7.2 kW ಚಾರ್ಜರ್‌ನೊಂದಿಗೆ) - ರೂ. 12.04 ಲಕ್ಷ |
XE - ರೂ. 12.49 ಲಕ್ಷ |
||
ಎಂಪವರ್ಡ್ - ರೂ. 12.79 ಲಕ್ಷ |
ಫೀಲ್ - ರೂ. 12.70 ಲಕ್ಷ |
XT - Rs 12.99 lakh XT - ರೂ. 12.99 ಲಕ್ಷ |
||
ಫೀಲ್ ವೈಬ್ ಪ್ಯಾಕ್ - ರೂ. 12.85 ಲಕ್ಷ |
||||
ಅಡ್ವೆಂಚರ್ LR - ರೂ. 12.99 ಲಕ್ಷ |
ಫೀಲ್ ಡ್ಯೂಯಲ್ ಟೋನ್ ವೈಬ್ ಪ್ಯಾಕ್ - ರೂ. 13 ಲಕ್ಷ |
|||
ಎಂಪವರ್ಡ್+ - ರೂ. 13.29 ಲಕ್ಷ |
XZ+ - ರೂ. 13.49 ಲಕ್ಷ |
|||
ಎಂಪವರ್ಡ್ LR - ರೂ. 13.99 ಲಕ್ಷ |
XZ+ ಲಕ್ಸ್ - ರೂ 13.75 ಲಕ್ಷ |
|||
ಎಂಪವರ್ಡ್+ LR - ರೂ. 14.49 ಲಕ್ಷ |
ಸೂಚನೆ: 1) ಪಂಚ್ EV ಯ ಎಲ್ಲಾ ಲಾಂಗ್ ರೇಂಜ್ (LR) ವೇರಿಯಂಟ್ ಗಳನ್ನು ರೂ 50,000 ಪ್ರೀಮಿಯಂ ಪಾವತಿಯೊಂದಿಗೆ 7.2 kW AC ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಪಡೆಯಬಹುದು.
2) ನೀವು ಪಂಚ್ EV ಯ ಸನ್‌ರೂಫ್-ಇರುವ ವೇರಿಯಂಟ್ ಅನ್ನು ಪಡೆಯಲು ಬಯಸಿದರೆ, ಇದು ಮಿಡ್-ಸ್ಪೆಕ್ ಅಡ್ವೆಂಚರ್ ಟ್ರಿಮ್‌ನಿಂದ ಶುರುವಾಗುತ್ತದೆ ಮತ್ತು ರೂ 50,000 ಪ್ರೀಮಿಯಂ ಪಾವತಿಯ ಮೂಲಕ ಲಭ್ಯವಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ವರ್ಸಸ್ ಟಾಟಾ ಟಿಯಾಗೊ EV ವರ್ಸಸ್ ಟಾಟಾ ಟಿಗೊರ್ EV ವರ್ಸಸ್ ಟಾಟಾ ನೆಕ್ಸಾನ್ EV: ಸ್ಪೆಸಿಫಿಕೇಷನ್ ಹೋಲಿಕೆ
ಟೇಕ್ಅವೇಗಳು
-
ರೂ 7.98 ಲಕ್ಷದಲ್ಲಿ ಲಭ್ಯವಿರುವ MG ಕಾಮೆಟ್ EV, ಈ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಆರಂಭಿಕ ಬೆಲೆಯನ್ನು ಹೊಂದಿದೆ ಏಕೆಂದರೆ ಇದು ಅಲ್ಟ್ರಾ ಕಾಂಪ್ಯಾಕ್ಟ್ 2-ಡೋರ್ 4-ಸೀಟ್ ಗಳೊಂದಿಗೆ ಬರುತ್ತದೆ ಮತ್ತು ಸಣ್ಣ (17.3 kWh) ಬ್ಯಾಟರಿ ಪ್ಯಾಕ್ ಮತ್ತು ಕಡಿಮೆ (230 ಕಿಮೀ ವರೆಗೆ) ರೇಂಜ್ ಅನ್ನು ಹೊಂದಿದೆ.
-
ಹಾಗೆಯೇ, ಟಾಟಾ ಟಿಯಾಗೊ EV ಅತ್ಯಂತ ಕೈಗೆಟುಕುವ ಪ್ರಾಯೋಗಿಕ EV ಆಗಿದ್ದು, ಇದರ ಬೆಲೆಯು ರೂ 8.69 ಲಕ್ಷದಿಂದ ಪ್ರಾರಂಭವಾಗುತ್ತದೆ.
-
ರೂ 10.99 ಲಕ್ಷ ಬೆಲೆಯಲ್ಲಿ, ಪಂಚ್ EVಯ ಎಂಟ್ರಿ ಲೆವೆಲ್ ವೇರಿಯಂಟ್ ಅದರ ನೇರ ಪ್ರತಿಸ್ಪರ್ಧಿಯಾದ ಸಿಟ್ರೋನ್ eC3 ಗಿಂತ ರೂ. 50,000 ಅಗ್ಗವಾಗಿದೆ.
-
ಸಿಟ್ರೋನ್ ನ ಆಲ್-ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 320 ಕಿಮೀ ರೇಂಜ್ ಅನ್ನು ಹೊಂದಿದ್ದು, ಪಂಚ್ EVಯ ಕೈಗೆಟುಕುವ ಬೆಲೆಯ ವೇರಿಯಂಟ್ ಗಳು 315 ಕಿಮೀ ರೇಂಜ್ ಅನ್ನು ಹೊಂದಿವೆ.
-
ಪಂಚ್ EV ಮತ್ತು ಟಾಟಾ ಟಿಯಾಗೊ EV ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆ - ಕ್ರಮವಾಗಿ 25 kWh/ 35 kWh ಮತ್ತು 19.2 kWh/ 24 kWh ಪಡೆಯುವ ಏಕೈಕ ಎಲೆಕ್ಟ್ರಿಕ್ ಕಾರುಗಳಾಗಿವೆ.
-
ಚಿಕ್ಕ ಬ್ಯಾಟರಿ ಪ್ಯಾಕ್ ಹೊಂದಿರುವ ಟಾಪ್-ಸ್ಪೆಕ್ ಪಂಚ್ EVಯು ಟಾಪ್-ಸ್ಪೆಕ್ eC3 ಗಿಂತ ಕೇವಲ 29,000 ರೂಪಾಯಿಯಷ್ಟು ಹೆಚ್ಚು ದುಬಾರಿಯಾಗಿದೆ. ಇದಲ್ಲದೆ, 421 ಕಿಮೀ ವರೆಗೆ ಕ್ಲೇಮ್ ಮಾಡಿರುವ ಎಂಟ್ರಿ ಲೆವೆಲ್ ಲಾಂಗ್ ರೇಂಜ್ ವೇರಿಯಂಟ್ ನ ಬೆಲೆ ಕೂಡ ತುಂಬಾ ಹತ್ತಿರದಲ್ಲಿದೆ.
-
MG ಕಾಮೆಟ್ EV ಹೊರತುಪಡಿಸಿ ಇಲ್ಲಿರುವ ಎಲ್ಲಾ EV ಗಳನ್ನು 50 kW DC ಚಾರ್ಜರ್ ಅನ್ನು ಬಳಸಿಕೊಂಡು ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ, ಇದು ಒಂದು ಗಂಟೆಯೊಳಗೆ 10 ರಿಂದ 80 ಪ್ರತಿಶತದವರೆಗೆ ಬ್ಯಾಟರಿ ಚಾರ್ಜ್ ಆಗುತ್ತದೆ.
-
ಟಿಯಾಗೊ EV ಮತ್ತು ಟಾಟಾ ಟಿಗೋರ್ EV ಕೂಡ ಪಂಚ್ EVಯ ಮಧ್ಯಮ ರೇಂಜ್ ನ ವೇರಿಯಂಟ್ ಗಳಂತೆ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್, ಅಂದರೆ 315 ಕಿಮೀ ಅನ್ನು ನೀಡುತ್ತವೆ.
-
ಪಂಚ್ EV ಯ ಎಂಪವರ್ಡ್+ LR ಈ ಪಟ್ಟಿಯಲ್ಲಿ ಅತ್ಯಂತ ದುಬಾರಿ ಟಾಪ್-ಸ್ಪೆಕ್ ವೇರಿಯಂಟ್ ಆಗಿದೆ. ಇದು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು, 360-ಡಿಗ್ರಿ ಕ್ಯಾಮೆರಾ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳಂತಹ ಸೌಕರ್ಯಗಳೊಂದಿಗೆ ಅತ್ಯುತ್ತಮವಾಗಿ ಸುಸಜ್ಜಿತವಾಗಿದೆ.
-
ಇಲ್ಲಿ ಎಲ್ಲಾ ಟಾಟಾ EVಗಳು ಐಚ್ಛಿಕ 7.2 kW AC ಫಾಸ್ಟ್ ಚಾರ್ಜರ್‌ನೊಂದಿಗೆ ಬರುತ್ತವೆ, ಆದರೆ ಸುಮಾರು ರೂ.50,000 ಪ್ರೀಮಿಯಂ ಪಾವತಿಯೊಂದಿಗೆ.
ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಪಂಚ್ EV ಬೆಲೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್‌ಗಳಲ್ಲಿ ಬರೆಯಿರಿ.
ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ
ಇದನ್ನು ಕೂಡ ಓದಿ: 2025 ರ ಅಂತ್ಯದ ವೇಳೆಗೆ ಲಾಂಚ್ ಆಗಲಿರುವ ಎಲ್ಲಾ ಟಾಟಾ EV ಗಳು ಇಲ್ಲಿವೆ
ಇನ್ನಷ್ಟು ಓದಿ: ಟಾಟಾ ಪಂಚ್ EV ಆಟೋಮ್ಯಾಟಿಕ್