ಟಾಟಾ ಟಿಯಾಗೋದ EV ಪ್ರತಿಸ್ಪರ್ಧಿ ಎಂಜಿ ಕಾಮೆಟ್ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆ
ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಮಾರ್ಚ್ 14, 2023 09:59 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಎಂಜಿಯ ಹೊಸ ಕೈಗೆಟುವ ಇಲೆಕ್ಟ್ರಿಕ್ ಕಾರ್ 300 ಕಿಲೋಮೀಟರ್ ತನಕದ ರೇಂಜ್ ನೀಡುತ್ತದೆ
- MG ತನ್ನ ಎರಡು-ಡೋರ್‌ನ ಕಾಮೆಟ್ EVಯ ಬೆಲೆಗಳನ್ನು ಏಪ್ರಿಲ್ ಕೊನೆಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.
- ಇದು ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಮತ್ತು 300 ಕಿಲೋಮೀಟರ್‌ಗಳಷ್ಟು ರೇಂಜ್ ಅನ್ನು ಹೊಂದಿರುವ ನಿರೀಕ್ಷೆ ಇದೆ.
- ಡ್ಯುಯೆಲ್ 10.25-ಇಂಚಿನ ಡಿಸ್‌ಪ್ಲೇಗಳು, ಆಟೋ AC ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಮುಂತಾದ ಫೀಚರ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
- ಬೆಲೆಗಳು ರೂ 9 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಅತ್ಯಂತ ಕೈಗೆಟುಕುವ ಇಲೆಕ್ಟ್ರಿಕ್ ಕಾರ್‌ಗಳಲ್ಲಿ ಒಂದನ್ನು ಎಂಜಿ ಭಾರತದಲ್ಲಿ ಏಪ್ರಿಲ್‌ನಲ್ಲಿ ಮಾರಾಟ ಪ್ರಾರಂಭಿಸುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೆ ಘೋಷಿಸಲಾದ ಕಾಮೆಟ್ EV ಸಿಟ್ರಾನ್ eC3 ಮತ್ತು ಟಾಟಾ ಟಿಯಾಗೋ EV ಪ್ರತಿಸ್ಪರ್ಧಿಯಾಗಲಿರುವ ಬೃಹತ್ ಮಾರುಕಟ್ಟೆಯ ಎರಡು-ಡೋರ್‌ನ ಇಲೆಕ್ಟ್ರಿಕ್ ಕಾರ್ ಆಗಿರಲಿದೆ.
ಈ ಎಂಜಿ ಕಾಮೆಟ್ EV ಅವಶ್ಯವಾಗಿ ಏರ್ EV ಆಗಿದ್ದು ಇದನ್ನು ಇಂಡೋನೇಷ್ಯಾದಲ್ಲಿ ಎಂಜಿಯ ಸಿಸ್ಟರ್ ಬ್ರ್ಯಾಂಡ್ ವುಲಿಂಗ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಉದ್ದದ ವಿಷಯಕ್ಕೆ ಬಂದರೆ, ಇದು ಟಾಟಾ ನ್ಯಾನೋಗಿಂತ ಗಿಡ್ಡವಾಗಿದ್ದು, ಮಾರುತಿ ಆಲ್ಟೋ K10ಗಿಂತ ಅಗಲ ಮತ್ತು ಎತ್ತರವಾಗಿದೆ. ಪ್ರವೇಶ ಹಂತದ ಎಂಜಿ EVಯಲ್ಲಿ ಕ್ಯಾಬಿನ್‌ನಲ್ಲಿ ನಾಲ್ಕು ಜನ ಕುಳಿತುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕಾಮೆಟ್ EV ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಸಂಗತಿಗಳು
ಈ ಮೈಕ್ರೋ EV ಫೀಚರ್‌ಭರಿತವಾಗಿದ್ದು, 10.25- ಇಂಚಿನ ಎರಡು ಟಚ್‌ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಹಾಗೂ ಇನ್ನೊಂದು ಡ್ರೈವರ್ ಇನ್ಸ್‌ಟ್ರುಮೆಂಟೇಷನ್‌ಗೆ), ಸಂಪರ್ಕಿತ ಕಾರ್ ಟೆಕ್ನಾಲಜಿ, ಆಟೋಮ್ಯಾಟಿಕ್ AC, ಸ್ಟೀರಿಂಗ್ ಮೌಂಟೆಡ್ ನಿಯಂತ್ರಣಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್ ವ್ಯೂ ಕ್ಯಾಮರಾ ಹೊಂದಿದೆ.
ಇಂಡೋನೇಷ್ಯಾದಲ್ಲಿ, ಈ ಏರ್ (ಕಾಮೆಟ್) EV 17.3kWh ಮತ್ತು 26.7kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದ್ದು, ಕ್ರಮವಾಗಿ 200km ಮತ್ತು 300km ರೇಂಜ್ ನೀಡುತ್ತದೆ. ಎರಡೂ ಬ್ಯಾಟರಿಗಳು 40PS ಇಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸುತ್ತವೆ ಮತ್ತು ರಿಯರ್ ವ್ಹೀಲ್ ಡ್ರೈವ್ ಕಾರ್‌ಗೆ ಶಕ್ತಿ ನೀಡುತ್ತದೆ. ಕಾಮೆಟ್ EV ಯೊಂದಿಗೆ ಎರಡು ಬ್ಯಾಕ್ ಪ್ಯಾಕ್ ಆಯ್ಕೆಯನ್ನು ನಾವು ನಿರೀಕ್ಷಿಸುತ್ತೇವೆ
ಇದನ್ನೂ ಓದಿ: ಭಾರತದಲ್ಲಿ ಮುಂಬರುವ ಇಲೆಕ್ಟ್ರಿಕ್ ಕಾರುಗಳು
ಈ ಎಂಜಿ ಕಾಮೆಟ್ EV ಬೆಲೆಯನ್ನು ಸುಮಾರು ರೂ 9 ಲಕ್ಷದಷ್ಟು (ಎಕ್ಸ್-ಶೋರೂಂ) ನಿರೀಕ್ಷಿಸಲಾಗಿದ್ದು ಮಾರುಕಟ್ಟೆಯಲ್ಲಿ ಮಾರಾಟವಾದ ನಂತರ ಫ್ಲೀಟ್ ಖರೀದಿದಾರರಿಗೂ ನೀಡಬಹುದಾಗಿದೆ.
ಇನ್ನಷ್ಟು ಓದಿ : ಟಾಟಾ ಟಿಯಾಗೋ AMT
0 out of 0 found this helpful