ಟಾಟಾ ನಾಳೆ ಅನಾವರಣಗೊಳಿಸಲಿದೆ Punch EV, ಈ ತಿಂಗಳ ಕೊನೆಯಲ್ಲಿ ಬಿಡುಗಡೆ
ಪರೀಕ್ಷೆ ನಡೆಸುತ್ತಿರುವ ಪಂಚ್ ಇವಿ ಅನೇಕ ಬಾರಿ ಪತ್ತೆಯಾಗಿದ್ದು, ಇದು ಸುಮಾರು 500 km ಗೆ ಹತ್ತಿರದ ಕ್ಲೈಮ್ ಮಾಡಲಾದ ರೇಂಜ್ ನೀಡುವ ನಿರೀಕ್ಷೆ ಇದೆ
- ವಿಭಿನ್ನ ರೇಂಜ್ ಮತ್ತು ಬೆಲೆಯಲ್ಲಿ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುವ ನಿರೀಕ್ಷೆ ಇದೆ.
- ನವೀಕೃತ ನೆಕ್ಸಾನ್ ಇವಿಯಿಂದ ಪ್ರೇರಿತಗೊಂಡ ಎಕ್ಸ್‌ಟೀರಿಯರ್ ಡಿಸೈನ್ ಬದಲಾವಣೆಗಳನ್ನು ಹೊಂದಿರಲಿದೆ.
- ಕ್ಯಾಬಿನ್ ಕೂಡ ಇತರ ಹೊಸ ಟಾಟಾ ಮಾಡೆಲ್‌ಗಳಲ್ಲಿ ಇರುವಂತೆ ರಿವ್ಯಾಂಪ್ ಪಡೆಯುವ ನಿರೀಕ್ಷೆ ಇದೆ.
- ದೊಡ್ಡದಾದ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಮಲ್ಟಿ-ಲೆವಲ್ ರಿಜನರೇಟಿವ್ ಬ್ರೇಕಿಂಗ್ ಅನ್ನು ಪಡೆದಿರುವ ಸಾಧ್ಯತೆ ಇದೆ.
- ಬೆಲೆಗಳು ರೂ12 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಅತ್ಯಂತ ನಿರೀಕ್ಷಿತ ಆರಂಭಿಕ ಹಂತದ ಇಲೆಕ್ಟ್ರಿಕ್ ಮಾಡೆಲ್ ಆಗಿರುವ ಟಾಟಾ ಪಂಚ್ ಇವಿ ಯ ಪರೀಕ್ಷಾರ್ಥ ಸಂಚಾರ ಅನೇಕ ಬಾರಿ ಕಂಡುಬಂದಿದೆ. ಈ SUV ನಾಳೆ ಅನಾವರಣವಾಗಲಿದೆ ಎಂಬುದನ್ನು ಸೂಚಿಸುವ ವೀಡಿಯೋ ಒಂದನ್ನು ಟಾಟಾ ಬಿಡುಗಡೆ ಮಾಡಿದೆ. ಈ ತನಕ ಪಂಚ್ ಇವಿಯ ಯಾವುದೇ ಅಧಿಕೃತ ನೋಟ ಹೊರಬಂದಿಲ್ಲವಾದರೂ, ನವೀಕೃತ ನೆಕ್ಸಾನ್ ಇವಿ ಯಿಂದ ಪಡೆದುಕೊಂಡಂತಹ ಹೊಸ ಡಿಸೈನ್ ಅಂಶಗಳನ್ನು ಹೊಂದಿರಬಹುದು ಎಂಬುದನ್ನು ಈ ತನಕದ ಸ್ಪೈ ಶಾಟ್‌ಗಳನ್ನು ಆಧರಿಸಿ ಹೇಳಬಹುದಾಗಿದೆ. ಪಂಚ್ ಇವಿಯಲ್ಲಿ ಏನೇನು ಇದೆ ಎಂಬುದನ್ನು ನೋಡೋಣ
ನೆಕ್ಸಾನ್ ಇವಿಯಿಂದ ಪ್ರೇರಿತಗೊಂಡ ಡಿಸೈನ್
ಪಂಚ್ ಇವಿ ತನ್ನ ಐಸಿಇ (ಇಂಟರ್ನಲ್ ಕಂಬಶನ್ ಇಂಜಿನ್) ಪ್ರತಿರೂಪಿಯದ್ದೇ ರೀತಿಯ ಸಿಲ್ಹೋಟ್ ಅನ್ನು ಹೊಂದಿರಲಿದೆ, ಆದರೆ ಮುಂಭಾಗದಲ್ಲಿ ಭಿನ್ನ ವಿನ್ಯಾಸವನ್ನು ನಾವು ನೋಡಬಹುದು. ಇದರ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಸ್ಲೀಕ್ ಎಲ್‌ಇಡಿ ಹೆಡ್‌ಲೈಟ್‌ಗಳಂತಹ ಮುಂಭಾಗದ ಲೈಟಿಂಗ್ ಎಲಿಮೆಂಟ್ ನೆಕ್ಸಾನ್ ಇವಿಗೆ ಹೋಲುತ್ತದೆ. ಐಸಿಐ ಪಂಚ್‌ಗೆ ಹೋಲಿಸಿದರೆ ಇದು ಭಿನ್ನ ಗ್ರಿಲ್ ಅನ್ನು ಹಾಗೂ ಅಲಾಯ್ ವ್ಹೀಲ್‌ಗಳಿಗೆ ಭಿನ್ನ ವಿನ್ಯಾಸವನ್ನು ಕೂಡಾ ಹೊಂದಿದೆ.
ಪಂಚ್ ಇವಿಯ ಕ್ಯಾಬಿನ್ ವಿಸ್ತೃತವಾಗಿ ಕಾಣಸಿಕ್ಕಿಲ್ಲ, ಆದರೆ ಟಾಟಾದ ಇತರೆ ಹೊಸ ಮಾಡೆಲ್‌ಗಳ ರೀತಿಯಲ್ಲೇ ದೊಡ್ಡ ಸೆಂಟ್ರಲ್ ಸ್ಕ್ರೀನ್‌ನೊಂದಿಗೆ ಸೌಲಭ್ಯ ಪಡೆಯಲಿದೆ. ಈ ಕಾರು ತಯಾರಕರು ಐಸಿಇ ಪಂಚ್‌ನ ಕಪ್ಪು ಬಿಳುಪಿನ ಕ್ಯಾಬಿನ್ ಥೀಮ್ ಅನ್ನು ಮುಂದುವರಿಸುವ ಸಾಧ್ಯತೆಯಿದೆ, ಆದರೆ ಡ್ಯಾಶ್‌ಬೋರ್ಡ್ ಲೇಔಟ್ ಇವಿ-ನಿರ್ದಿಷ್ಟ ಸಂಗತಿಗಳೊಂದಿಗೆ ಭಿನ್ನವಾಗಿರಬಹುದು.
500 ಕಿಮೀ ರೇಂಜ್‌ಗಿಂತ ಹೆಚ್ಚು?
ಪಂಚ್ ಇವಿಯೊಂದಿಗೆ ಟಾಟಾ ಬಹು ಬ್ಯಾಟರಿ ಪ್ಯಾಕ್‌ಗಳನ್ನು ನೀಡಬಹುದು. ಪ್ರವೇಶ ಹಂತದ ಎಲೆಕ್ಟ್ರಿಕ್ ಎಸ್‌ಯುವಿ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದುವ ನಿರೀಕ್ಷೆಯಿಡಬಹುದು. ಈ ಹೊಸ ಪೀಳಿಗೆಯ ಎಲೆಕ್ಟ್ರಿಕ್ ಪವರ್‌ಟ್ರೇನ್ ಸೆಟಪ್ ಸರಿಸುಮಾರು 500 ಕಿಮೀ ನ ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡಬಹುದು. ಜತೆಗೆ, ಮಲ್ಟಿ ಲೆವೆಲ್ ರಿಜನರೇಟಿವ್ ಬ್ರೇಕಿಂಗ್ ಅನ್ನೂ ಪೆಡಲ್ ಶಿಫ್ಟರ್‌ಗಳೊಂದಿಗೆ ಪಡೆಯಲಿದೆ.
ಹೊಸ ಫೀಚರ್‌ಗಳು
ತನ್ನ ಐಸಿಇ ಮಾಡೆಲ್‌ಗಿಂತ ವಿನ್ಯಾಸದಲ್ಲಿನ ಬದಲಾವಣೆಗಳ ಹೊರತಾಗಿ, ಇದರ ಫೀಚರ್‌ಗಳ ಪಟ್ಟಿಯು ಕೆಲವು ಅಪ್‌ಗ್ರೇಡ್‌ಗಳನ್ನು ಕೂಡಾ ಹೊಂದಿರಬಹುದು. ಪಂಚ್ ಇವಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿರಲಿದೆ.
ಇದನ್ನೂ ಓದಿ: ಟಾಟಾ ಬಿಡುಗಡೆಗೊಳಿಸಿದೆ 3,00,000ನೇ ಟಾಟಾ ಪಂಚ್ ಯುನಿಟ್
ಸುರಕ್ಷತೆಯ ದೃಷ್ಟಿಯಿಂದ, 6 ರ ತನಕದ ಏರ್‌ಬ್ಯಾಗ್‌ಗಳು, ABS ನೊಂದಿಗೆ EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಹೊಂದಲಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ ಇವಿಯ ಬೆಲೆ ರೂ 12 ಲಕ್ಷದಿಂದ (ಎಕ್ಸ್-ಶೋರೂಂ) ಆರಂಭವಾಗಬಹುದು ಮತ್ತು ಸಿಟ್ರಾನ್ eC3 ಯ ಪ್ರತಿಸ್ಪರ್ಧಿಯಾಗಬಹುದು. ಟಾಟಾ ಟಿಯಾಗೋ ಇವಿ ಮತ್ತು MG ಕಾಮೆಟ್ ಇವಿ ಗೆ ಪ್ರೀಮಿಯಂ ಪರ್ಯಾಯವೂ ಆಗಬಹುದು. ಟಾಟಾ ನೆಕ್ಸಾನ್ ಇವಿ ಗೆ ಹೋಲಿಸಿದರೆ ಸಣ್ಣ ಮತ್ತು ಹೆಚ್ಚು ಕೈಗೆಟಕಬಹುದಾದ ಪರ್ಯಾಯವಾಗುತ್ತದೆ.
ಇಲ್ಲಿ ಇನ್ನಷ್ಟು ಓದಿ : ಪಂಚ್ AMT