ಟಾಟಾದ ಫೇಸ್‌ಲಿಫ್ಟೆಡ್ ಎಸ್‌ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು!
ಟಾಟಾ ನೆಕ್ಸಾನ್ ಗಾಗಿ rohit ಮೂಲಕ ನವೆಂಬರ್ 10, 2023 04:33 pm ರಂದು ಪ್ರಕಟಿಸಲಾಗಿದೆ
- 78 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಸಂಸ್ಥೆಯ ಫೇಸ್‌ಲಿಫ್ಟೆಡ್ ಎಸ್‌ಯುವಿಗೆ ಕನಿಷ್ಟ 2 ತಿಂಗಳುಗಳ ಕಾಲ ಕಾಯಬೇಕು
ಟಾಟಾ ಮೋಟರ್ಸ್ ಸಂಸ್ಥೆಯು 2023ರ ಹಬ್ಬದ ಋತುವಿನ ಮೊದಲು ವಾಹನ ಬಿಡುಗಡೆ ಮಾಡುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು ನಾಲ್ಕು ಪರಿಷ್ಕೃತ ಮಾದರಿಗಳನ್ನು ಪರಿಚಯಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಾವು ಹೊಸ ಟಾಟಾ ನೆಕ್ಸನ್ ಮತ್ತು ಟಾಟಾ ನೆಕ್ಸನ್ EV ಯನ್ನು ಪಡೆದರೆ ನಂತರದ ತಿಂಗಳಿನಲ್ಲಿ ಪರಿಷ್ಕೃತ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಕಾರುಗಳು ಹೊರಬಂದವು. ಒಂದು ವೇಳೆ ನೀವು ಇವುಗಳಲ್ಲಿ ಯಾವುದಾದರೂ ಒಂದು ವಾಹನವನ್ನು ಈ ದೀಪಾವಳಿಯ ಸಂದರ್ಭದಲ್ಲಿ ಖರೀದಿಸಲು ಇಚ್ಛಿಸಿದಲ್ಲಿ 20 ನಗರಗಳಲ್ಲಿ ನೀವು ಎಷ್ಟು ಸಮಯದ ವರೆಗೆ ಕಾಯಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ:
|
||||||
ನಗರ |
ಕಾಯುವಿಕೆ ಅವಧಿ |
|||||
ಟಾಟಾ ನೆಕ್ಸನ್ |
ಟಾಟಾ ನೆಕ್ಸನ್ EV |
ಟಾಟಾ ಹ್ಯಾರಿಯರ್ |
ಟಾಟಾ ಸಫಾರಿ |
|||
ನವದೆಹಲಿ |
2 ತಿಂಗಳುಗಳು |
2 ತಿಂಗಳುಗಳು |
1 - 2 ತಿಂಗಳುಗಳು |
2 ತಿಂಗಳುಗಳು |
||
ಬೆಂಗಳೂರು |
2 ತಿಂಗಳುಗಳು |
3 ತಿಂಗಳುಗಳು |
1 - 2 ತಿಂಗಳುಗಳು |
1 ತಿಂಗಳು |
||
ಮುಂಬಯಿ |
1 - 1.5 ತಿಂಗಳುಗಳು |
3 ತಿಂಗಳುಗಳು |
1 - 2 ತಿಂಗಳುಗಳು |
2 ತಿಂಗಳುಗಳು |
||
ಹೈದರಾಬಾದ್ |
1 - 2 ತಿಂಗಳುಗಳು |
3 ತಿಂಗಳುಗಳು |
1 - 2 ತಿಂಗಳುಗಳು |
2 ತಿಂಗಳುಗಳು |
||
ಪುಣೆ |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
3 ತಿಂಗಳುಗಳು |
||
ಚೆನ್ನೈ |
2 ತಿಂಗಳುಗಳು |
2 ತಿಂಗಳುಗಳು |
1 ತಿಂಗಳು |
2 ತಿಂಗಳುಗಳು |
||
ಜೈಪುರ |
1.5 - 2 ತಿಂಗಳುಗಳು |
1.5 ತಿಂಗಳುಗಳು |
2 ತಿಂಗಳುಗಳು |
1 - 1.5 ತಿಂಗಳುಗಳು |
||
ಅಹ್ಮದಾಬಾದ್ |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
3 ತಿಂಗಳುಗಳು |
||
ಗುರುಗ್ರಾಮ |
1 - 1.5 ತಿಂಗಳುಗಳು |
2 ತಿಂಗಳುಗಳು |
1 ತಿಂಗಳು |
1 - 2 ತಿಂಗಳುಗಳು |
||
ಲಕ್ನೋ |
1.5 ತಿಂಗಳುಗಳು |
1.5 ತಿಂಗಳುಗಳು |
2 - 2.5 ತಿಂಗಳುಗಳು |
0.5 ತಿಂಗಳುಗಳು |
||
ಕೋಲ್ಕೊತಾ |
1.5 ತಿಂಗಳುಗಳು |
1.5 - 2 ತಿಂಗಳುಗಳು |
1.5 ತಿಂಗಳುಗಳು |
1.5 ತಿಂಗಳುಗಳು |
||
ಥಾಣೆ |
1.5 - 2 ತಿಂಗಳುಗಳು |
1.5 ತಿಂಗಳುಗಳು |
2 ತಿಂಗಳುಗಳು |
1 - 1.5 ತಿಂಗಳುಗಳು |
||
ಸೂರತ್ |
2 ತಿಂಗಳುಗಳು |
3 ತಿಂಗಳುಗಳು |
1 - 2 ತಿಂಗಳುಗಳು |
1 ತಿಂಗಳು |
||
ಘಾಜಿಯಾಬಾದ್ |
2 - 3 ತಿಂಗಳುಗಳು |
2 - 3 ತಿಂಗಳುಗಳು |
1 ತಿಂಗಳು |
1 ತಿಂಗಳು |
||
ಚಂಡೀಗಢ |
2 ತಿಂಗಳುಗಳು |
3 ತಿಂಗಳುಗಳು |
1 - 2 ತಿಂಗಳುಗಳು |
1 ತಿಂಗಳು |
||
ಕೊಯಮತ್ತೂರು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
||
ಪಾಟ್ನಾ |
2 ತಿಂಗಳುಗಳು |
3 - 4 ತಿಂಗಳುಗಳು |
1 - 2 ತಿಂಗಳುಗಳು |
2 ತಿಂಗಳುಗಳು |
||
ಫರೀದಾಬಾದ್ |
1.5 - 2 ತಿಂಗಳುಗಳು |
3 ತಿಂಗಳುಗಳು |
1.5 - 2 ತಿಂಗಳುಗಳು |
2 ತಿಂಗಳುಗಳು |
||
ಇಂದೋರ್ |
2 ತಿಂಗಳುಗಳು |
2 - 3 ತಿಂಗಳುಗಳು |
1 - 2 ತಿಂಗಳುಗಳು |
1.5 - 2 ತಿಂಗಳುಗಳು |
||
ನೋಯ್ಡಾ |
1.5 ತಿಂಗಳುಗಳು |
1.5 - 2 ತಿಂಗಳುಗಳು |
1.5 ತಿಂಗಳುಗಳು |
1.5 ತಿಂಗಳುಗಳು |
ಮುಖ್ಯಾಂಶಗಳು
-
ಹೊಸ ನೆಕ್ಸನ್ ಕಾರಿಗಾಗಿ ಮೇಲಿನ ಪಟ್ಟಿಯಲ್ಲಿರುವ ಹೆಚ್ಚಿನ ನಗರಗಳಲ್ಲಿ ಎರಡು ತಿಂಗಳುಗಳ ಕಾಲ ಕಾಯಬೇಕು. ಆದರೆ ಮುಂಬಯಿ, ಹೈದರಾಬಾದ್ ಮತ್ತು ಗುರುಗ್ರಾಮದ ಗ್ರಾಹಕರು ಸುಮಾರು ಒಂದು ತಿಂಗಳಿನೊಳಗೆ ಈ ವಾಹನವನ್ನು ಪಡೆಯಬಹುದಾಗಿದ್ದು ಘಾಜಿಯಾಬಾದ್ ನಲ್ಲಿರುವವರು ಸುಮಾರು ಮೂರು ತಿಂಗಳುಗಳ ಕಾಲ ಕಾಯಬೇಕು.
-
ಪಾಟ್ನಾದಲ್ಲಿ ಸುಮಾರು ನಾಲ್ಕು ತಿಂಗಳುಗಳ ಕಾಯುವಿಕೆ ಅವಧಿಯೊಂದಿಗೆ ಟಾಟಾ ನೆಕ್ಸನ್ EV ಕಾರು ಮನೆಯನ್ನು ತಲುಪಲು ಗರಿಷ್ಠ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ SUV ಯನ್ನು ಜೈಪುರ ಮತ್ತು ನೋಯ್ಡಾದಲ್ಲಿ 45 ದಿನಗಳಷ್ಟು ಕನಿಷ್ಠ ಅವಧಿಯಲ್ಲಿ ಪಡೆಯಬಹುದು.
-
ಎಲ್ಲಾ SUV ಗಳ ಪೈಕಿ ಟಾಟಾ ಹ್ಯಾರಿಯರ್ ಕಾರು ಸುಲಭವಾಗಿ ದೊರೆಯಲಿದ್ದು, ಲಕ್ನೋ ನಗರದಲ್ಲಿ ಇದು ಎರಡರಿಂದ ಎರಡೂವರೆ ತಿಂಗಳಿನಷ್ಟು ಗರಿಷ್ಠ ಕಾಯುವಿಕೆ ಅವಧಿಯನ್ನು ಹೊಂದಿದೆ.
-
ಲಕ್ನೋ ನಗರದಲ್ಲಿ 15 ದಿನಗಳ ಕಾಯುವಿಕೆ ಅವಧಿಯನ್ನು ಹೊಂದಿರುವ ಟಾಟಾ ಸಫಾರಿ ಕಾರು ಈ ಪಟ್ಟಿಯಲ್ಲಿರುವ SUV ಗಳ ಪೈಕಿ ಸುಲಭವಾಗಿ ದೊರೆಯುವ ವಾಹನವಾಗಿದೆ. ಇತರ ನಗರಗಳಲ್ಲಿಯೂ ಇದು ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದ್ದು ಇದು 1ರಿಂದ 2 ತಿಂಗಳುಗಳ ನಡುವೆ ಇದೆ.
ಇದನ್ನು ಸಹ ಓದಿರಿ: ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಪರೀಕ್ಷಾರ್ಥ ಟಾಟಾ ಪಂಚ್ EV
ಗಮನಿಸಿ: ನಿಮ್ಮ ನಗರ (ಈ ಪಟ್ಟಿಯಲ್ಲಿಲ್ಲದಿದ್ದರೆ) ಮತ್ತು ವೇರಿಯಂಟ್ ಹಾಗೂ ಬಣ್ಣದ ಆಯ್ಕೆಯನ್ನು ಆಧರಿಸಿ ಕಾಯುವಿಕೆ ಅವಧಿಯು ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಟಾಟಾ ಡೀಲರ್ ಶಿಪ್ ಅನ್ನು ದಯವಿಟ್ಟು ಸಂಪರ್ಕಿಸಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ನೆಕ್ಸನ್ AMT
0 out of 0 found this helpful