Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿನ ಮಾರುತಿ ಸ್ವಿಫ್ಟ್‌ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್

published on ನವೆಂಬರ್ 16, 2023 01:26 pm by ansh for ಮಾರುತಿ ಸ್ವಿಫ್ಟ್

4ನೇ ತಲೆಮಾರಿನ ಸ್ವಿಫ್ಟ್‌ ಕಾರು ಮುಂದಿನ ವರ್ಷದ ಸುಮಾರಿಗೆ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ

  • ಇದರ ಉದ್ದವು ಪ್ರಸ್ತುತ ಆವೃತ್ತಿಗಿಂತ ಹೆಚ್ಚಿದ್ದರೂ ಅಗಲ ಮತ್ತು ಎತ್ತರದ ವಿಷಯದಲ್ಲಿ ಇದು ಹಿನ್ನಡೆಯನ್ನು ಹೊಂದಿದೆ.
  • ಭಾರತೀಯ ಆವೃತ್ತಿಯು ಹೊಸ 3 ಸಿಲಿಂಡರ್‌ 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ನೊಂದಿಗೆ ಬರಲಿದೆ.
  • ಇದು 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ ಮತ್ತು ಬ್ಲೈಂಡ್‌ ಸ್ಪಾಟ್‌ ಮಾನಿಟರಿಂಗ್‌ ಜೊತೆಗೆ ಬರಲಿದೆ.
  • ಇದರ ಬೆಲೆಯು ಸುಮಾರು ರೂ. 6 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.

ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ ವಾಹನವನ್ನು ಇತ್ತೀಚೆಗೆ ಜಪಾನ್‌ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಎಂಜಿನ್‌ ಆಯ್ಕೆಗಳು, ಡ್ರೈವ್‌ ಟ್ರೇನ್‌ ಮತ್ತು ವೈಶಿಷ್ಟ್ಯಗಳನ್ನು ಅನಾವರಣಗೊಳಿಸಲಾಗಿದೆ. ಇತ್ತೀಚೆಗೆ ಸುಜುಕಿ ಸಂಸ್ಥೆಯು ಈ ಪರಿಷ್ಕೃತ ಹ್ಯಾಚ್‌ ಬ್ಯಾಕ್‌ ನ ಅಳತೆಯನ್ನು ಬಹಿರಂಗಗೊಳಿಸಿದ್ದು, ಇದು ಗಾತ್ರದಲ್ಲಿ ಭಾರತದ ರಸ್ತೆಗಳಲ್ಲಿ ಓಡಾಡುತ್ತಿರುವ ಮಾರುತಿ ಸ್ವಿಫ್ಟ್‌ ಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಅಳತೆಗಳು

ಮಾನದಂಡಗಳು

2024 ಸುಜುಕಿ ಸ್ವಿಫ್ಟ್

ಭಾರತಕ್ಕೆ ಸೀಮಿತವಾಗಿರುವ ಮಾರುತಿ ಸ್ವಿಫ್ಟ್

ವ್ಯತ್ಯಾಸ

ಉದ್ದ

3860 mm

3845 mm

+ 15 mm

ಅಗಲ

1695 mm

1735 mm

- 40 mm

ಎತ್ತರ

1500 mm

1530 mm

- 30 mm

ವೀಲ್‌ ಬೇಸ್

2450 mm

2450 mm

ಯಾವುದೇ ಬದಲಾವಣೆ ಇಲ್ಲ

ಭಾರತಕ್ಕೆ ಸೀಮಿತವಾಗಿರುವ ಆವೃತ್ತಿಗೆ ಹೋಲಿಸಿದರೆ, 2024 ಸುಜುಕಿ ಸ್ವಿಫ್ಟ್‌ ಕಾರು ಸ್ವಲ್ಪ ಹೆಚ್ಚಿನ ಉದ್ದವನ್ನು ಹೊಂದಿದ್ದು ಅದೇ ವೀಲ್‌ ಬೇಸ್‌ ಅನ್ನು ಹೊಂದಿದೆ. ಆದರೆ ಇದು ಮಾರುತಿ ಸ್ವಿಫ್ಟ್‌ ಗಿಂದ ಸ್ವಲ್ಪ ಅಗಲ ಕಿರಿದಾದ ಮತ್ತು ಗಿಡ್ಡನೆಯ ವೀಲ್‌ ಬೇಸ್‌ ಅನ್ನು ಹೊಂದಿದ್ದು, ಕ್ಯಾಬಿನ್‌ ನಲ್ಲಿ ಪ್ರಯಾಣಿಕರಿಗೆ ಕಡಿಮೆ ಸ್ಥಳಾವಕಾಶ ದೊರೆಯಲಿದೆ. ಜತೆಗೆ ಮಾರುತಿ ಸಂಸ್ಥೆಯು ಸಸ್ಪೆನ್ಶನ್‌ ನಲ್ಲಿ ತುಸು ಬದಲಾವಣೆಯನ್ನು ತಂದಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಪರಿಷ್ಕೃತ ಸ್ವಿಫ್ಟ್‌ ವಾಹನವು ಇಲ್ಲಿ ಬಿಡುಗಡೆಯಾದಾಗ ರೈಡ್‌ ಎತ್ತರವು ತುಸು ಹೆಚ್ಚೇ ಇರಲಿದೆ.

ಪವರ್‌ ಟ್ರೇನ್

ಮಾರುತಿ ಸಂಸ್ಥೆಯು ಭಾರತದಲ್ಲಿ ಸ್ವಿಫ್ಟ್‌ ಕಾರಿನ ಹೊಸ ಆವೃತ್ತಿಯನ್ನು, ಜಪಾನ್‌ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಿದಂತೆ, ಸಂಪೂರ್ಣ ಹೊಸ 3 ಸಿಲಿಂಡರ್‌ 1.2 ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೊಲ್ ಎಂಜಿನ್‌‌ ಜೊತೆಗೆ ಹೊರತರಲಿದೆ. ಈ ಎಂಜಿನ್‌, ಪ್ರಸ್ತುತ ಮಾರುತಿ ಸ್ವಿಫ್ಟ್‌ ಕಾರಿನ 4-ಸಿಲಿಂಡರ್ 1.2-ಲೀಟರ್‌ ಪೆಟ್ರೋಲ್‌ ಎಂಜಿನ್ (90 PS/ 113 Nm)‌ ಗಿಂತ ಹೆಚ್ಚಿನ ಟಾರ್ಕ್‌ ಅನ್ನು ಉಂಟು ಮಾಡಲಿದೆ.

ಇದನ್ನು ಸಹ ಓದಿರಿ: ಹೊಸ ಸುಜುಕಿ ಸ್ವಿಫ್ಟ್‌ ಕಾರಿನ ಬಣ್ಣಗಳ ವಿವರ ಬಹಿರಂಗ! ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಸ್ವಿಫ್ಟ್‌ ಕಾರನ್ನು ನೀವು ಯಾವ ಬಣ್ಣದಲ್ಲಿ ನೋಡಲು ಇಷ್ಟಪಡುತ್ತೀರಿ?

ಹೊಸ ತಲೆಮಾರಿನ ಸ್ವಿಫ್ಟ್‌ ಕಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ CVT ಅಟೋಮ್ಯಾಟಿಕ್‌ ಅನ್ನು ನೀಡಿದರೆ, ಭಾರತೀಯ ಆವೃತ್ತಿಯು 5 ಸ್ಪೀಡ್‌ ಮ್ಯಾನುವಲ್‌ ಮತ್ತು 5 ಸ್ಪೀಡ್‌ AMT ಆಯ್ಕೆಗಳನ್ನು ಮುಂದುವರಿಸಲಿದೆ. ಜಾಗತಿಕವಾಗಿ ಇದು ಆಲ್‌ ವೀಲ್‌ ಡ್ರೈವ್‌ ಆಯ್ಕೆಯೊಂದಿಗೆ ಬರುತ್ತದೆ. ಅದರೆ ಭಾರತದಲ್ಲಿ ಇದು ಫ್ರಂಟ್‌ ವೀಲ್‌ ಡ್ರೈವ್‌ ಗೆ ಸೀಮಿತವಾಗಿದೆ.

ಗುಣಲಕ್ಷಣಗಳು ಮತ್ತು ಸುರಕ್ಷತೆ

ವಿನ್ಯಾಸ ಮತ್ತು ಪವರ್‌ ಟ್ರೇನ್‌ ಮಾತ್ರವಲ್ಲದೆ ಇದರ ವೈಶಿಷ್ಟ್ಯಗಳನ್ನು ಸಹ ಪರಿಷ್ಕರಿಸಲಾಗಿದೆ. ಹೊಸ ತಲೆಮಾರಿನ ಸ್ವಿಫ್ಟ್‌ ಕಾರು 9 ಇಂಚಿನಷ್ಟು ದೊಡ್ಡದಾದ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, ಚಾಲಕನ ಸೆಮಿ ಡಿಜಿಟಲ್‌ ಡಿಸ್ಪ್ಲೇ, ಕ್ರೂಸ್‌ ಕಂಟ್ರೋಲ್‌, ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಅನೇಕ ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ಮತ್ತು‌ ಬ್ಲೈಂಡ್‌ ಸ್ಪಾಟ್‌ ಡಿಟೆಕ್ಷನ್‌ ಸೇರಿದಂತೆ ADAS ಗಳನ್ನು ಹೊಂದಿರುವ ಹೊಸ ಕ್ಯಾಬಿನ್‌ ವಿನ್ಯಾಸದೊಂದಿಗೆ ಬರಲಿದೆ.

ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್‌ ಕಾರನ ಮುಂದಿನ ವರ್ಷದ ಆರಂಭದಲ್ಲೇ ರೂ. 6 ಲಕ್ಷದಷ್ಟು ಆರಂಭಿಕ ಬೆಲೆಗೆ (ಎಕ್ಸ್-ಶೋರೂಂ) ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್ ಜೊತೆಗೆ ಸ್ಪರ್ಧಿಸಲಿದ್ದು, ಸರಿಸುಮಾರು ತನ್ನದೇ ಬೆಲೆಯನ್ನು ಹೊಂದಿರುವ ರೆನೋ ಟ್ರೈಬರ್, ಮಾರುತಿ ವ್ಯಾಗನ್‌ R ಮತ್ತು ಮಾರುತಿ ಇಗ್ನಿಸ್‌ ಗೆ ಬದಲಿ ಆಯ್ಕೆ ಎನಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT

a
ಅವರಿಂದ ಪ್ರಕಟಿಸಲಾಗಿದೆ

ansh

  • 99 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಸ್ವಿಫ್ಟ್

J
jitendra jain
Apr 24, 2024, 11:07:34 AM

Adad , veltilated seat and atutomtic parking hai india mai lounch ho rahi hai

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ