• English
  • Login / Register

Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು

ಟಾಟಾ ಕರ್ವ್‌ ಇವಿ ಗಾಗಿ yashika ಮೂಲಕ ಫೆಬ್ರವಾರಿ 17, 2025 08:23 pm ರಂದು ಪ್ರಕಟಿಸಲಾಗಿದೆ

  • 47 Views
  • ಕಾಮೆಂಟ್‌ ಅನ್ನು ಬರೆಯಿರಿ

ಇಂದಿನಿಂದ 2025ರ ಮಾರ್ಚ್ 15ರವರೆಗೆ, ಕರ್ವ್‌ ಇವಿ ಅನ್ನು 2025ರ WPL ನ ಅಧಿಕೃತ ಕಾರಾಗಿ ಪ್ರದರ್ಶಿಸಲಾಗುವುದು

Official Car of the Women's Premier League 2025

  • ಕಳೆದ ವರ್ಷದ ಪಂಚ್ ಇವಿ ನಂತರ, ಟಾಟಾ ಕರ್ವ್ ಇವಿ 2025 ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಗಾಗಿ ಅಧಿಕೃತ ಕಾರು ಎಂದು ಘೋಷಿಸಲಾಗಿದೆ.

  • ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್, ಕನೆಕ್ಟೆಡ್‌ ಕಾರ್‌ ಟೆಕ್ನಾಲಾಜಿ, ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಮತ್ತು ವೈರ್‌ಲೆಸ್ ಚಾರ್ಜರ್‌ನಂತಹ ಫೀಚರ್‌ಗಳನ್ನು ಹೊಂದಿದೆ.

  • ಸುರಕ್ಷತಾ ಪ್ಯಾಕೇಜ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌, ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಲೆವೆಲ್-2 ADAS ಅನ್ನು ಒಳಗೊಂಡಿದೆ.

  • ಕರ್ವ್‌ ಇವಿಯು 45 ಕಿ.ವ್ಯಾಟ್‌ ಮತ್ತು 55 ಕಿವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ.

  • ಇದರ ಬೆಲೆ 17.49 ಲಕ್ಷ ರೂ.ಗಳಿಂದ 21.99 ಲಕ್ಷ ರೂ.ಗಳವರೆಗೆ ಇದೆ.

ಟಾಟಾ ಕರ್ವ್ ಇವಿ ಅನ್ನು 2025ರ ಮಹಿಳಾ ಪ್ರೀಮಿಯರ್ ಲೀಗ್ (WPL) ಗಾಗಿ ಅಧಿಕೃತ ಕಾರು ಎಂದು ಘೋಷಿಸಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಸಹ, ಟಾಟಾ ಕಂಪನಿಯು ಇಂದಿನಿಂದ ಮಾರ್ಚ್ 15, 2025 ರವರೆಗೆ ನಡೆಯಲಿರುವ WPL ನ ಟೈಟಲ್‌ ಸ್ಪಾನ್ಸರ್‌ಅನ್ನು ಮುಂದುವರೆಸಿದೆ. ಇದರ ಜೊತೆಗೆ, ಟಾಟಾ ಕಂಪನಿಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದು ಕರೆಯಲ್ಪಡುವ ಪುರುಷರ ಆವೃತ್ತಿಯ ಲೀಗ್ ಅನ್ನು ಸಹ ಬೆಂಬಲಿಸುತ್ತದೆ.

ಕ್ರಿಕೆಟ್ ಲೀಗ್‌ಗಳಲ್ಲಿ ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಅಧಿಕೃತ ಪ್ರಾಯೋಜಕರಾಗಿ ಪ್ರದರ್ಶಿಸುವ ಮೂಲಕ ತನ್ನ ಕ್ರಿಕೆಟ್ ಲೀಗ್ ಪಾಲುದಾರಿಕೆ ಸ್ಥಾನಮಾನವನ್ನು ಉಳಿಸಿಕೊಂಡಿದೆ. ಟಾಟಾ 2018 ರಲ್ಲಿ ನೆಕ್ಸಾನ್‌ನೊಂದಿಗೆ ಸಹಯೋಗವನ್ನು ಪ್ರಾರಂಭಿಸಿತು, ನಂತರ ಹ್ಯಾರಿಯರ್ ಮತ್ತು ಆಲ್ಟ್ರೋಜ್, ಸಫಾರಿ ಮತ್ತು ಪಂಚ್‌ಗಳನ್ನು ಹಿಂದಿನ ಐಪಿಎಲ್ ಸೀಸನ್‌ಗಳಲ್ಲಿ ಪ್ರದರ್ಶಿಸಲಾಗಿತ್ತು. ಆದರೆ, 2023 ರಲ್ಲಿ ಟಾಟಾ ತನ್ನ EV ಕಾರುಗಳ ಮೊಡೆಲ್‌ಗಳನ್ನು ಇನ್ನಷ್ಟು ಜನಪ್ರೀಯಗೊಳಿಸಲು ನಿರ್ಧರಿಸಿದಾಗ ಅದರ ವಿಧಾನದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಆ ವರ್ಷ ಐಪಿಎಲ್‌ನ ಅಧಿಕೃತ ಕಾರಾಗಿ ಟಾಟಾ ಟಿಯಾಗೊ ಇವಿಯು ಪ್ರಮುಖ ಆಕರ್ಷಣೆಯನ್ನು  ಪಡೆದುಕೊಂಡಿತು, ಹಾಗೆಯೇ ಸಫಾರಿಯ ರೆಡ್ ಡಾರ್ಕ್ ಎಡಿಷನ್‌ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಪ್ರತಿನಿಧಿಸಿತು. ಕಳೆದ ವರ್ಷ, ಪಂಚ್ ಇವಿ ಈ ಸಂಪ್ರದಾಯವನ್ನು ಮುಂದುವರೆಸಿತು, ಮತ್ತು ಈಗ ಟಾಟಾ ಕರ್ವ್ ಇವಿ ಈ ಪರಂಪರೆಯನ್ನು ಮುಂದುವರಿಸಿದ ಮೂರನೇ ಇವಿ ಆಗಿದೆ.

ಟಾಟಾ ಕರ್ವ್ ಇವಿ ಬಗ್ಗೆ ಇನ್ನಷ್ಟು

Tata Curvv EV

ಕರ್ವ್ ಇವಿ ತನ್ನ ಎಸ್‌ಯುವಿ-ಕೂಪ್ ವಿನ್ಯಾಸದೊಂದಿಗೆ ಎದ್ದು ಕಾಣುತ್ತದೆ, ಹಾಗೆಯೇ, ಕ್ಲೋಸ್ಡ್-ಆಫ್ ಗ್ರಿಲ್, ಪೂರ್ಣ-ಅಗಲದ ಎಲ್‌ಇಡಿ ಡಿಆರ್‌ಎಲ್, ಇಳಿಜಾರಾದ ರೂಫ್‌ಲೈನ್, 18-ಇಂಚಿನ ಏರೋಡೈನಾಮಿಕ್ ಆಲಾಯ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ. ಇದರ ಹಿಂಭಾಗವು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಸ್ಪೋರ್ಟಿ ಲುಕ್‌ಗಾಗಿ ರೂಫ್-ಮೌಂಟೆಡ್ ಡ್ಯುಯಲ್ ಸ್ಪಾಯ್ಲರ್ ಅನ್ನು ಹೊಂದಿದೆ. 

ಟಾಟಾ ಕರ್ವ್ ಇವಿ ಏನನ್ನು ನೀಡುತ್ತದೆ?

Tata Curvv EV dashboard

ಕರ್ವ್ವ್ ಇವಿಯು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್‌ ಕಾರ್ ಟೆಕ್‌, ಪನೋರಮಿಕ್ ಸನ್‌ರೂಫ್, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು, ವೈರ್‌ಲೆಸ್ ಚಾರ್ಜರ್ ಮತ್ತು ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್‌ನಂತಹ ಆಧುನಿಕ ಫೀಚರ್‌ಗಳಿಂದ ತುಂಬಿದೆ.

ಸುರಕ್ಷತಾ ಹೈಲೈಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಲೇನ್ ಚೇಂಜ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ADAS ಸೇರಿವೆ.

ಟಾಟಾ ಕರ್ವ್ ಇವಿ: ಪವರ್‌ಟ್ರೇನ್ ಆಯ್ಕೆಗಳು

Tata Curvv EV

ಟಾಟಾ ಕರ್ವ್ ಇವಿಯನ್ನು ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ನೀಡುತ್ತದೆ. ವಿಶೇಷಣಗಳು ಇಲ್ಲಿವೆ:

ಬ್ಯಾಟರಿ ಪ್ಯಾಕ್‌

45 ಕಿ.ವ್ಯಾಟ್‌

55 ಕಿ.ವ್ಯಾಟ್‌

ಪವರ್‌

150 ಪಿಎಸ್‌

167 ಪಿಎಸ್‌

ಟಾರ್ಕ್‌

215 ಎನ್‌ಎಮ್‌

215 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌

502 ಕಿ.ಮೀ.

585 ಕಿ.ಮೀ.

ಚಾರ್ಜಿಂಗ್‌ ಸಮಯ (DC 70ಕಿ.ವ್ಯಾಟ್‌)

40 ನಿಮಿಷಗಳು (10% ರಿಂದ 80%)

40 ನಿಮಿಷಗಳು (10% ರಿಂದ 80%)

ಚಾರ್ಜಿಂಗ್ ಸಮಯ (AC 7.2 ಕಿ.ವ್ಯಾ)

6.5 ಗಂಟೆಗಳು (10% ರಿಂದ 100%)

8 ಗಂಟೆಗಳು (10% ರಿಂದ 100%)

ಟಾಟಾ ಕರ್ವ್ ಇವಿ: ಪ್ರತಿಸ್ಪರ್ಧಿಗಳು

ಕರ್ವ್‌ ಇವಿಯು ಎಂಜಿ ಝಡ್ಎಸ್ ಇವಿ ಜೊತೆ ನೇರ ಪೈಪೋಟಿ ನಡೆಸಲಿದ್ದು, ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಸುಜುಕಿ ಇವಿಎಕ್ಸ್‌ನಂತಹ ಮುಂಬರುವ ಮೊಡೆಲ್‌ಗಳಿಗೆ ಸವಾಲು ಹಾಕಲಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Tata ಕರ್ವ್‌ EV

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience