ಈ ನವೆಂಬರ್‌ನಲ್ಲಿ ನಾವು ನಿರೀಕ್ಷಿಸಬಹುದಾದ 5 ಕಾರುಗಳು
ಟಾಟಾ ಪಂಚ್ ಇವಿ ಗಾಗಿ ansh ಮೂಲಕ ಅಕ್ಟೋಬರ್ 31, 2023 12:20 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಈ ಪಟ್ಟಿಯು ಟಾಟಾ ಪಂಚ್ ಇವಿ ಮತ್ತು ಪರ್ಫಾರ್ಮೆನ್ಸ್ ಮಾಡೆಲ್‌ಗಳಾದ ಮರ್ಸಿಡಿಸ್-AMG C43ನಂತಹ ಎಲ್ಲಾ-ಹೊಸ ಪಾದಾರ್ಪಣೆಗಳನ್ನು ಒಳಗೊಂಡಿದೆ
2023 ಇಸವಿಯು ಫೇಸ್‌ಲಿಫ್ಟ್‌ಗಳ ಸಹಿತ, ದೇಶದಲ್ಲಿ ಅನೇಕ ಪ್ರಮುಖ ಹೊಸ ಕಾರುಗಳ ಬಿಡುಗಡೆಗಳಿಗೆ ಸಾಕ್ಷಿಯಾಗಿದೆ. ವರ್ಷಾಂತ್ಯಕ್ಕೆ ಬರುತ್ತಿದ್ದಂತೆ, ಹೊಸ ಕಾರುಗಳ ಆಗಮನವು ನಿಧಾನವಾಗಿ ಕಡಿಮೆಯಾಗುತ್ತಿದೆ, ಆದರೂ ಕೆಲವು ತಾಜಾ ಮಾಡೆಲ್‌ಗಳು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಪಾದಾರ್ಪಣೆಗೊಳ್ಳಲು ಸಿದ್ಧವಾಗಿರುವುದನ್ನು ನಾವು ನೋಡಬಹುದು. ಈ ನವೆಂಬರ್‌ನಲ್ಲಿ ಅನಾವರಣಗೊಳ್ಳಲ್ಲಿರುವ ಅಂತಹ 5 ಕಾರುಗಳ ವಿವರಗಳನ್ನು ನಾವೀಗ ನೋಡೋಣ.
ಮರ್ಸಿಡಿಸ್-ಬೆಂಝ್ GLE ಫೇಸ್‌ಲಿಫ್ಟ್
ನವೀಕೃತ ಮರ್ಸಿಡಿಸ್ -ಬೆಂಝ್ GLE ಅನ್ನು ಈ ವರ್ಷದ ಕೊನೆಯಲ್ಲಿ ಜಾಗತಿಕವಾಗಿ ಪರಿಚಯಿಸಲಾಗಿದ್ದು, ನವೆಂಬರ್ 2ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಅಪ್‌ಡೇಟ್ ಮಾಡಲಾದ SUV ಸಣ್ಣಪುಟ್ಟ ಕಾಸ್ಮೆಟಿಕ್ ಬದಲಾವಣೆಗಳು, ಫೀಚರ್ ಅಪ್‌ಗ್ರೇಡ್‌ಗಳು ಮತ್ತು ಸ್ವಚ್ಛ ಪವರ್‌ಟ್ರೇನ್ ಆಯ್ಕೆಗಳನ್ನು ಪಡೆದಿದೆ. ಭಾರತ ಸ್ಪೆಕ್ ಮಾಡೆಲ್, 3-ಲೀಟರ್ ಡೀಸೆಲ್ ಇಂಜಿನ್ ಆಯ್ಕೆಯನ್ನೇ ಹೊಂದಿರಲಿದ್ದು, ಪೆಟ್ರೋಲ್ ಆಯ್ಕೆಯೂ ಇರಲಿದೆ. ಇದರ ಬೆಲೆ ಅಂದಾಜು ರೂ 93 ಲಕ್ಷ (ಎಕ್ಸ್-ಶೋರೂಂ) ಇರಬಹುದು.
ಇದನ್ನೂ ಓದಿ: BMW i7 M70 xಡ್ರೈವ್ ವರ್ಸಸ್ vs ಪರ್ಫಾರ್ಮೆನ್ಸ್ EV ಸೆಡಾನ್ ಪ್ರತಿಸ್ಪರ್ಧಿಗಳು: ನಿರ್ದಿಷ್ಚತೆಗಳ ಹೋಲಿಕೆ
ಮರ್ಸಿಡಿಸ್- AMG C43
ಅಪ್‌ಡೇಟ್ ಮಾಡಲಾದ GLE ಜೊತೆಗೆ, ಮರ್ಸಿಡಿಸ್ ಹೊಚ್ಚ ಹೊಸ C43 AMG ಅನ್ನೂ ಬಿಡುಗಡೆ ಮಾಡಲಿದೆ. ಈ ಸ್ಪೋರ್ಟಿ ಕಾರ್ಯಕ್ಷಮತೆಯ ಸೆಡಾನ್ 2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಪೆಡೆದಿದ್ದು, ಇದು ಹಿಂದಿನ ಪೀಳಿಗೆಯ 3-ಲೀಟರ್ ಆರು ಸಿಲಿಂಡರ್ ಯೂನಿಟ್‌ಗಿಂತ ಶಕ್ತಿಯುತವಾಗಿದೆ. ಮರ್ಸಿಡಿಸ್ C43 AMG ಬೆಲೆಯು ರೂ 1 ಕೋಟಿಗಿಂತ ತುಸು ಕಡಿಮೆ ಇರಲಿದೆ (ಎಕ್ಸ್-ಶೋರೂಂ)
ಟಾಟಾ ಪಂಚ್ ಇವಿ
ಟಾಟಾ ಕಳೆದ ಕೆಲವು ತಿಂಗಳುಗಳಲ್ಲಿ ನೆಕ್ಸಾನ್ ಫೇಸ್‌ಲಿಫ್ಟ್, ಹ್ಯಾರಿಯರ್ ಫೇಸ್‌ಲಿಫ್ಟ್ ಮತ್ತು ಸಫಾರಿ ಫೇಸ್‌ಲಿಫ್ಟ್‌ನೊಂದಿಗೆ, ಅನೇಕ ಪೆಟ್ರೋಲ್ /ಡೀಸೆಲ್ ಕಾರುಗಳು ಹಾಗೂ ಇವಿಗಳನ್ನು ಬಿಡುಗಡೆ ಮಾಡಿದೆ. ಟಾಟಾ ಪಂಚ್ ಇವಿ ಇದರ ಇತ್ತೀಚಿನ ಪಾದಾರ್ಪಣೆಯಾಗಲಿದೆ. ಈ ಪುಟ್ಟ ಇವಿಯನ್ನು ಅನೇಕ ಬಾರಿ ಗುರುತಿಸಲಾಗಿದ್ದು, ಹೊಸ ಟಾಟಾ ನೆಕ್ಸಾನ್ ಇವಿ ಅನ್ನು ಹೋಲುವ ಅನೇಕ ಡಿಸೈನ್ ಅಂಶಗಳನ್ನು ಒಳಗೊಂಡಿರಬಹುದು. ಅಲ್ಲದೇ, ಈ ಪಂಚ್ ಇವಿ 500km ಕ್ಕೂ ಅಧಿಕ ಕ್ಲೈಮ್ ಮಾಡಲಾದ ರೇಂಜ್ ಹೊಂದಿದೆಎಂದು ಟಾಟಾ ಹೇಳುತ್ತದೆ. ಈ ಪಂಚ್‌ನ ಇಲೆಕ್ಟ್ರಿಕ್ ಆವೃತ್ತಿಯ ಆರಂಭಿಕ ಬೆಲೆ ರೂ 12 ಲಕ್ಷ (ಎಕ್ಸ್-ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.
ಹೊಸ-ಪೀಳಿಗೆ ರೆನಾಲ್ಟ್ ಡಸ್ಟರ್
ರೆನಾಲ್ಟ್ ನವೆಂಬರ್ 29ರಂದು ಮೂರನೇ-ಪೀಳಿಗೆ ಡಸ್ಟರ್ ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಹೊಸ ಡಸ್ಟರ್ ಅನ್ನು ಡೇಸಿಯಾ (ರೆನಾಲ್ಟ್‌ನ ಬಜೆಟ್ ಆಧಾರಿತ ಬ್ರ್ಯಾಂಡ್) ಮೊದಲ ಬಾರಿ ಪೋರ್ಚುಗಲ್‌ನಲ್ಲಿ ಅನಾವರಣಗೊಳಿಸಲಿದೆ ಹಾಗೂ ಇದು ಕಾರುತಯಾರಕರ ಹೊಸ ಡಿಸೈನ್ ಲ್ಯಾಂಗ್ವೇಜ್ ಅನ್ನು ಹೊಂದಿರಲಿದೆ. ಈ ಅಪ್‌ಡೇಟ್ ಮಾಡಲಾದ SUV ಅನೇಕ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದ್ದು, ಭಾರತದ ಮಾರುಕಟ್ಟೆಗೆ 2025ರ ವೇಳೆಗೆ ಲಗ್ಗೆ ಇಡಬಹುದು. ಈ ಹೊಸ ಡಸ್ಟರ್ ಬೆಲೆ ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ನೋಡಿ: 5-ಡೋಸ್ ಮಹೀಂದ್ರಾ ಥಾರ್ ಸ್ಪೈ ಶಾಟ್, ಮರೆಮಾಚಿದ ಸ್ಥಿತಿಯಲ್ಲಿ ಮತ್ತೊಮ್ಮೆ ಕಾಣಸಿಕ್ಕಿದೆ ಹಿಂಭಾಗದ ಪ್ರೊಫೈಲ್
ನಾಲ್ಕನೇ-ಪೀಳಿಗೆ ಸ್ಕೋಡಾ ಸೂಪರ್ಬ್
ಸ್ಕೋಡಾ ಸೂಪರ್ಬ್ ಸ್ವಲ್ಪ ಸಮಯದ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಿಂದ ಹೊರಬಂದಿತು, ಅಂದಿನಿಂದ ಅದರ ಮರಳಿ ಬರುವಿಕೆಗಾಗಿ ನಾವು ಕಾಯುತ್ತಿದ್ದೇವೆ. ಇತ್ತೀಚೆಗೆ, ಈ ಕಾರುತಯಾರಕ ಸಂಸ್ಥೆಯು 2024 ಸೂಪರ್ಬ್‌ನ ಎಕ್ಸ್‌ಟೀರಿಯರ್ ಡಿಸೈನ್ ಸ್ಕೆಚ್‌ಗಳನ್ನು ಅನಾವರಣಗೊಳಿಸಿದ್ದು, ಇದು ನವೆಂಬರ್ 2 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಇದು ಸ್ಕೋಡಾದ ಹೊಸ ಆಧುನಿಕ ಸಾಲಿಡ್ ಡಿಸೈನ್ ಲ್ಯಾಂಗ್ವೇಜ್ ಅನ್ನು ಹೊಂದಿರಲಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಪೆಡೆದಿರುತ್ತದೆ. ಈ ವರ್ಷ ಇದರ ಬಿಡುಗಡೆ ಇಲ್ಲದಿದ್ದರೂ, ಮುಂದಿನ ವರ್ಷದ ಯಾವುದಾದರೂ ಸಮಯದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಭಾರತ-ಸ್ಪೆಕ್ ಸ್ಕೋಡಾ ಸೂಪರ್ಬ್ ಬೆಲೆ ರೂ 40 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ಎಲ್ಲಾ ಕಾರುಗಳ ಬಿಡುಗಡೆ ಅಥವಾ ಅನಾವರಣ ನವೆಂಬರ್ 2023 ರಂದು ನಡೆಯಲಿವೆ. ಇವುಗಳಲ್ಲಿ ನೀವು ಯಾವುದಕ್ಕೆ ಕಾಯುತ್ತಿದ್ದೀರಾ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.