ಡಿಸೇಲ್ ಇಂಜಿನ್‌ನ ಏಕೈಕ ಆಯ್ಕೆಯೊಂದಿಗೆ ಮರಳಿ ಬಂದಿದೆ ಟೊಯೋಟಾ ಇನೋವಾ ಕ್ರಿಸ್ಟಾ, ಬುಕಿಂಗ್ ತೆರೆದಿದೆ
ಇದು ಪೆಟ್ರೋಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಕಳೆದುಕೊಂಡು, ಹೊಸ ಮುಂಭಾಗವನ್ನು ಪಡೆದುಕೊಂಡಿದೆ
-
ಇನೋವಾ ಹೈಕ್ರಾಸ್‌ನ ಪಾದಾರ್ಪಣೆಗೂ ಮುನ್ನ ಇನೋವಾ ಕ್ರಿಸ್ಟಾ ಬುಕಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು.
-
ಫೈವ್-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾಗಿ ಕೇವಲ 2.4-ಲೀಟರ್ ಡಿಸೇಲ್ ಇಂಜಿನ್‌ನೊಂದಿಗೆ ಇದು ಮರಳಿ ಬಂದಿದೆ.
-
ಅವೇ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗಿದ್ದು, ರೂ. 50,000 ಗೆ ಬುಕಿಂಗ್ ಆರಂಭವಾಗಿದೆ.
-
ಪ್ರಮುಖವಾದ ವೈಶಿಷ್ಟ್ಯಗಳೆಂದರೆ ಪವರ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್, ಆಟೋ ಎಸಿ ಮತ್ತು ಏಳು ಏರ್‌ಬ್ಯಾಗ್‌ಗಳು.
-
ಬೆಲೆಯು ರೂ. 20 ಲಕ್ಷದಿಂದ ಪ್ರಾರಂಭವಾಗಿದ್ದು (ಎಕ್ಸ್-ಶೋರೂಮ್), ಶೀಘ್ರದಲ್ಲಿಯೇ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ,
ಇನೋವಾ ಹೈಕ್ರಾಸ್‌ನ ಹಾದಿಯನ್ನು ಸುಗಮಗೊಳಿಸಲು ಮಾರುಕಟ್ಟೆಯಿಂದ ಒಂದು ಸಣ್ಣ ವಿರಾಮವನ್ನು ತೆಗೆದುಕೊಂಡು ಈ ಟೊಯೋಟಾ ಇನೋವಾ ಕ್ರಿಸ್ಟಾ ಪುನಃ ಬಂದಿದೆ.
ಇದನ್ನು ಈಗ ಡಿಸೇಲ್-ಮ್ಯಾನ್ಯುವಲ್ ಪವರ್-ಟ್ರೇನ್‌ನೊಂದಿಗೆ ಮಾತ್ರ ನೀಡಲಾಗುತ್ತಿದ್ದು G, Gx, Vx, ಮತ್ತು Zx – ಅದೇ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈಗ ರೂ. 50,000 ಡೆಪಾಸಿಟ್‌ನೊಂದಿಗೆ ನವೀಕರಣಗೊಂಡ ಕ್ರಿಸ್ಟಾದ ಬುಕಿಂಗ್ ತೆರೆದಿದೆ.
ಹೈಕ್ರಾಸ್‌ಗೆ ಹೋಲಿಸಿದರೆ ಕ್ರಿಸ್ಟಾವನ್ನು (ತುಲನಾತ್ಮಕವಾಗಿ) ಕೈಗೆಟಕುವ ಪರ್ಯಾಯವಾಗಿ ಇರಿಸಲಾಗಿದೆ. ಫೈವ್-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾಗಿ ಇದು 2.4-ಲೀಟರ್ ಡಿಸೇಲ್ ಯೂನಿಟ್ ಅನ್ನು ಉಳಿಸಿಕೊಂಡಿದ್ದು, ಸಿಕ್ಸ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ತೆಗೆದುಹಾಕಲಾಗಿದೆ. ಇಲ್ಲಿಯವರೆಗೆ, ಎಂಜಿನ್ ಅನ್ನು 150PS and 343Nm ನಲ್ಲಿ ರೇಟ್ ಮಾಡಲಾಗಿತ್ತು, ಆದರೆ ನವೀಕರಣಗೊಂಡ ಮಾಡೆಲ್‌ಗೆ ಕಾರ್ಯಕ್ಷಮತೆಯ ಅಂಕಿಅಂಶಗಳು ಸ್ವಲ್ಪ ಭಿನ್ನವಾಗಿರಬಹುದು.
ಇನೋವಾ ಕ್ರಿಸ್ಟಾ ಹೈಕ್ರಾಸ್‌ನಂತೆಯೇ, ಅದ್ಭುತ ನೋಟಕ್ಕಾಗಿ ಉತ್ತಮವಾದ ಮುಂಭಾಗದೊಂದಿಗೆ ಮರಳಿ ಬಂದಿದೆ. ಇದರ ವೈಶಿಷ್ಟ್ಯಗಳ ಪಟ್ಟಿಯು, ಎಂಟು-ವೇ-ಪವರ್-ಅಡ್ಜಸ್ಟೇಬಲ್ ಡ್ರೈವರ್ ಸೀಟ್, ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಓಸಿ ಮತ್ತು ರಿಯರ್ ವೆಂಟ್‌ಗಳೊಂದಿಗೆ ಆ್ಯಂಬಿಯಂಟ್ ಲೈಟಿಂಗ್ ಅನ್ನು ಒಳಗೊಂಡಿದೆ. ಈ ಎಂಪಿವಿಯು ಏಳು ಏರ್-ಬ್ಯಾಗ್‌ಗಳು, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಅಸಿಸ್ಟ್ ಅನ್ನು ಸುರಕ್ಷತಾ ಉಪಕರಣಗಳಾಗಿ ಹೊಂದಿದೆ,
ಇನೋವಾ ಕ್ರಿಸ್ಟಾ ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್‌ವೈಟ್, ಸಿಲ್ವರ್, ಆ್ಯಟಿಟ್ಯೂಡ್ ಬ್ಲ್ಯಾಕ್ ಮತ್ತು ಅವಂತ್ ಗಾರ್ಡ್ ಬ್ರಾನ್ಸ್ ಬಣ್ಣಗಳಲ್ಲಿ ಲಭ್ಯವಿದ್ದು ಬುಕಿಂಗ್ ಪ್ರಾರಂಭವಾಗಿದೆ. ಇದು ಪ್ರಮಾಣಿತವಾಗಿ ಏಳು-ಸೀಟಿನ ಲೇಔಟ್‌ಗಳನ್ನು ಹೊಂದಿದ್ದು, G, Gx ಮತ್ತು Vx ಟ್ರಿಮ್‌ಗಳು ಎಂಟು-ಸೀಟುಗಳ ಲೇಔಟ್ ಆಯ್ಕೆಯನ್ನು ಸಹ ಹೊಂದಿವೆ.
ಇದನ್ನೂ ಓದಿ: ಟೊಯೋಟಾ ಇನೋವಾ ಹೈಕ್ರಾಸ್ ವರ್ಸಸ್ ಎಂಪಿವಿ ಪ್ರತಿಸ್ಪರ್ಧಿಗಳು – ಬೆಲೆ ಪರಿಶೀಲಿಸಿ
ಈ ಡಿಸೇಲ್ ಮಾತ್ರದ ಟೊಯೋಟಾ ಇನೋವಾ ಕ್ರಿಸ್ಟಾದ ಬೆಲೆ ಸುಮಾರು ರೂ. 20 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇದು ಬೇಸ್-ಸ್ಪೆಕ್ ಪೆಟ್ರೋಲ್ ಇನೋವಾ ಹೈಕ್ರಾಸ್‌ಗಿಂತ ಹೆಚ್ಚಿನ ಬೆಲೆಯಾಗಿರುತ್ತದೆ. ಆದಾಗ್ಯೂ, ಹೈಕ್ರಾಸ್‌ನ ಫೀಚರ್-ಪ್ಯಾಕ್ಡ್ ಹೈಬ್ರಿಡ್ ವೇರಿಯೆಂಟ್‌ಗಿಂತ ಈ ಕ್ರಿಸ್ಟಾ ಇನ್ನಷ್ಟು ಕೈಗೆಟಕುವ ಬೆಲೆಯನ್ನು ಹೊಂದಿದೆ. ಎರಡೂ ಎಂಪಿವಿಗಳು ಕಿಯಾ ಕಾರೆನ್ಸ್‌ಗಿಂತ ಮೇಲಿನ ಮತ್ತು ಕಿಯಾ ಕಾರ್ನಿವಲ್ ಗಿಂತ ಕೆಳಗಿನ ಸ್ಥಾನದಲ್ಲಿ ಮುಂದುವರಿದಿವೆ.
ಇನ್ನೂ ಹೆಚ್ಚು ಇಲ್ಲಿ ತಿಳಿಯಿರಿ: ಟೊಯೋಟಾ ಇನೋವಾ ಹೈಕ್ರಾಸ್ ಆಯೋಮ್ಯಾಟಿಕ್