Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross

ಟೊಯೋಟಾ ಇನ್ನೋವಾ ಹೈಕ್ರಾಸ್ ಗಾಗಿ dipan ಮೂಲಕ ನವೆಂಬರ್ 22, 2024 07:12 pm ರಂದು ಪ್ರಕಟಿಸಲಾಗಿದೆ

ಈ ಮಾರಾಟದ ಮೈಲಿಗಲ್ಲನ್ನು ತಲುಪಲು ಇನ್ನೋವಾ ಹೈಕ್ರಾಸ್ ಬಿಡುಗಡೆಯಾದಾಗಿನಿಂದ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ

  • Innova Hycross 2024ರ ಫೆಬ್ರವರಿಯಲ್ಲಿ ಮೊದಲ 50,000 ಮಾರಾಟವನ್ನು ದಾಟಿತ್ತು.

  • ಭಾರತದಲ್ಲಿ ಈ ಪ್ರೀಮಿಯಂ ಎಮ್‌ಪಿವಿಯು ನಂತರದ 50,000 ಮಾರಾಟವನ್ನು ತಲುಪಲು ಸುಮಾರು 9 ತಿಂಗಳುಗಳನ್ನು ತೆಗೆದುಕೊಂಡಿವೆ.

  • ಇದು 10.1-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್‌ಗಳನ್ನು ಹೊಂದಿದೆ.

  • ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು (ADAS) ಒಳಗೊಂಡಿದೆ.

  • 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಮತ್ತು ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ.

  • ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಭಾರತದಾದ್ಯಂತ ಇದರ ಎಕ್ಸ್‌ಶೋರೂಮ್‌ ಬೆಲೆಗಳು 19.77 ಲಕ್ಷ ರೂ.ನಿಂದ 30.98 ಲಕ್ಷ ರೂ.ವರೆಗೆ ಇರಲಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಭಾರತದಲ್ಲಿ ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಪ್ರೀಮಿಯಂ ಎಮ್‌ಪಿವಿಯ(ಮಲ್ಟಿ-ಪರ್ಪಸ್‌ ವೆಹಿಕಲ್‌) ಒಟ್ಟು ಮಾರಾಟವು ಭಾರತದಲ್ಲಿ 1 ಲಕ್ಷ ಕಾರುಗಳ ಮೈಲಿಗಲ್ಲನ್ನು ದಾಟಿರುವುದರಿಂದ ವಾರ್ಷಿಕೋತ್ಸವದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಇದು 2024ರ ಫೆಬ್ರವರಿಯಲ್ಲಿ 50,000-ಯೂನಿಟ್ ಮಾರಾಟದ ಗಡಿಯನ್ನು ದಾಟಿತ್ತು ಮತ್ತು 1 ಲಕ್ಷ ಮಾರಾಟವನ್ನು ತಲುಪಲು ನಂತರದ ಸುಮಾರು 9 ತಿಂಗಳುಗಳನ್ನು ತೆಗೆದುಕೊಂಡಿದೆ. ನಮ್ಮ ಮಾರುಕಟ್ಟೆಯಲ್ಲಿ ಇನ್ನೋವಾ ಹೈಕ್ರಾಸ್ ಜನಪ್ರಿಯವಾಗಲು ಕಾರಣವೇನು ಎಂಬುದನ್ನು ನಾವು ಸಂಕ್ಷಿಪ್ತವಾಗಿ ನೋಡೋಣ:

ಟೊಯೋಟಾ ಇನ್ನೋವಾ ಹೈಕ್ರಾಸ್: ಒಂದು ಅವಲೋಕನ

ಜನಪ್ರಿಯ 'ಇನ್ನೋವಾ' ನೇಮ್‌ಪ್ಲೇಟ್‌ನ ಮೂರನೇ-ಜನ್ ಮೊಡೆಲ್‌ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ಮತ್ತು ಫ್ರಂಟ್-ವೀಲ್-ಡ್ರೈವ್ (ಎಫ್‌ಡಬ್ಲ್ಯೂಡಿ) ಮಾತ್ರ ಆಯ್ಕೆಯನ್ನು ಒಳಗೊಂಡಂತೆ ಅನೇಕ ಪ್ರಥಮಗಳನ್ನು ಪಡೆಯುತ್ತದೆ, ಹಾಗೆಯೇ ಮೊನೊಕಾಕ್ ಪ್ಲಾಟ್‌ಫಾರ್ಮ್‌ಅನ್ನು ಆಧರಿಸಿದೆ.

ಟೊಯೋಟಾದ ಪ್ರೀಮಿಯಂ ಎಮ್‌ಪಿವಿ 10.1-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಇದು ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಹೊಸ Toyota Camry ಬಿಡುಗಡೆಗೆ ದಿನಾಂಕ ನಿಗದಿ

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಒಳಗೊಂಡಿದೆ. ಇನ್ನೋವಾ ಹೈಕ್ರಾಸ್ ಲೇನ್-ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನೊಂದಿಗೆ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನದೊಂದಿಗೆ ಬರುತ್ತದೆ.

ಇನ್ನೋವಾ ಹೈಕ್ರಾಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಅದರ ವಿವರಗಳು ಈ ಕೆಳಗಿನಂತಿವೆ:

ಎಂಜಿನ್‌

2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಎಂಜಿನ್

2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್

ಪವರ್‌

186 ಪಿಎಸ್‌

175 ಪಿಎಸ್‌

ಟಾರ್ಕ್‌

188 ಎನ್‌ಎಮ್‌ (ಎಂಜಿನ್) / 206 ಎನ್‌ಎಮ್‌(ಎಲೆಕ್ಟ್ರಿಕ್ ಮೋಟಾರ್)

209 ಎನ್ಎಂ

ಗೇರ್‌ಬಾಕ್ಸ್‌

e-CVT

CVT

ಮೈಲೇಜ್‌

ಪ್ರತಿ ಲೀ.ಗೆ 23.24 ಕಿ.ಮೀ.

ಪ್ರತಿ ಲೀ.ಗೆ 16.13 ಕಿ.ಮೀ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಎಕ್ಸ್-ಶೋರೂಂ ಬೆಲೆಗಳು 19.77 ಲಕ್ಷ ರೂ.ನಿಂದ 30.98 ಲಕ್ಷ ರೂ.ವರೆಗೆ ಇದೆ. ಇದು ತನ್ನ ಒಡಹುಟ್ಟಿದ ಮಾರುತಿ ಇನ್ವಿಕ್ಟೊ (ಹೈಕ್ರಾಸ್ ಆಧಾರಿತ) ಮತ್ತು ಡೀಸೆಲ್ ಎಂಜಿನ್‌ ಅನ್ನು ಮಾತ್ರ ಹೊಂದಿರುವ ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಹಾಗೆಯೇ, ಕಿಯಾ ಕ್ಯಾರೆನ್ಸ್ ಮತ್ತು ಮಾರುತಿ ಎರ್ಟಿಗಾ/ಟೊಯೋಟಾ ರುಮಿಯಾನ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ.

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇದರ ಬಗ್ಗೆ ಇನ್ನಷ್ಟು ಓದಲು : ಟೊಯೋಟಾ ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್

Share via

Write your Comment on Toyota ಇನೋವಾ Hycross

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ