Login or Register ಅತ್ಯುತ್ತಮ CarDekho experience ಗೆ
Login

Toyota Innova Hycross ನಿಂದ ಒಂದು ವರ್ಷದಲ್ಲಿ 50,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲಿನ ಸಾಧನೆ

published on ಫೆಬ್ರವಾರಿ 26, 2024 10:40 am by rohit for ಟೊಯೋಟಾ ಇನ್ನೋವಾ ಹೈಕ್ರಾಸ್

ಇನ್ನೋವಾ ಹೈಕ್ರಾಸ್ ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಕನಿಷ್ಠ ಆರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ

2022 ರ ಅಂತ್ಯದ ವೇಳೆಗೆ, ಟೊಯೋಟಾ ಇನ್ನೋವಾ ಹೈಕ್ರಾಸ್ ಟೊಯೋಟಾದ ಜನಪ್ರಿಯ MPV ಯ ಮೂರನೇ ಜನರೇಷನ್ ವರ್ಷನ್ ಆಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಈಗ, ಕೇವಲ ಒಂದು ವರ್ಷದ ಅವಧಿಯಲ್ಲಿ, ಟೊಯೊಟಾ ಇನ್ನೋವಾ ಹೈಕ್ರಾಸ್ ಭಾರತೀಯ ಮಾರುಕಟ್ಟೆಯಲ್ಲಿ 50,000-ಯೂನಿಟ್ ಮಾರಾಟದ ಮೈಲಿಗಳನ್ನು ದಾಟಿದೆ.

ಈ ಮೈಲಿಗಲ್ಲು ಯಾಕೆ ಮುಖ್ಯವಾಗಿದೆ

ಟೊಯೊಟಾ ಇನ್ನೋವಾ ಹೈಕ್ರಾಸ್‌ ಸಾಧಿಸಿರುವ ಇತ್ತೀಚಿನ ಮೈಲಿಗಲ್ಲು ಒಂದು ದೊಡ್ಡ ಸಾಧನೆಯಾಗಿದೆ ಏಕೆಂದರೆ 2005 ರಲ್ಲಿ ಇದನ್ನು ಭಾರತದಲ್ಲಿ ಪರಿಚಯಿಸಿದಾಗಿನಿಂದ ನಡೆದಿರುವ ಮಾರಾಟದ ಸಂಖ್ಯೆಗೆ ಈ ಟ್ರೆಂಡ್ ವಿರುದ್ಧವಾಗಿದೆ. ಥರ್ಡ್-ಜೆನ್ ಮಾಡೆಲ್ ಗಾಗಿ, ಟೊಯೋಟಾ ತನ್ನ MPV ಯ DNAಯನ್ನು ಬಾಡಿ-ಆನ್-ಫ್ರೇಮ್ ನಿಂದ ಮೊನೊಕಾಕ್ ಚಾಸಿಸ್‌ಗೆ ಬದಲಾಯಿಸಿತು, ರಿಯರ್-ವೀಲ್-ಡ್ರೈವ್ (RWD) ಬದಲು ಫ್ರಂಟ್-ವೀಲ್-ಡ್ರೈವ್ (FWD) ಅನ್ನು ಆಯ್ಕೆಮಾಡಲಾಗಿದೆ ಮತ್ತು ಅದನ್ನು ಡೀಸೆಲ್-ಚಾಲಿತ ಮಾಡೆಲ್ ನಿಂದ ಪೆಟ್ರೋಲ್-ಮಾತ್ರ ಮಾಡೆಲ್ ಗೆ ಪರಿವರ್ತಿಸಲಾಗಿದೆ (ಇದನ್ನು ಮೊದಲ ಬಾರಿಗೆ ಶಕ್ತಿಶಾಲಿ-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ನೀಡಲಾಗಿದೆ).

ಈ ಎಲ್ಲಾ ಪ್ರಮುಖ ಬದಲಾವಣೆಗಳ ಹೊರತಾಗಿಯೂ, MPV ಯನ್ನು ಭಾರತೀಯ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಇದು ಪ್ರಸ್ತುತ ಟಾಪ್ ನಗರಗಳಲ್ಲಿ ಕನಿಷ್ಠ ಆರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಅದರ ಹೆಚ್ಚುತ್ತಿರುವ ಜನಪ್ರಿಯತೆಗೆ ಕೆಲವು ಪ್ರಮುಖ ಕಾರಣಗಳೆಂದರೆ ಟೊಯೊಟಾದ ಕಡಿಮೆ ಸರ್ವಿಸ್ ವೆಚ್ಚ, ಐದು ವರ್ಷಗಳ ಉಚಿತ ರೋಡ್ ಸೈಡ್ ನೆರವು ಮತ್ತು ಸ್ಟ್ರಾಂಗ್-ಹೈಬ್ರಿಡ್ ಸೆಟಪ್‌ನ ಬ್ಯಾಟರಿ ಪ್ಯಾಕ್‌ನಲ್ಲಿ 8-ವರ್ಷ/1.6 ಲಕ್ಷ ಕಿಮೀ ವಾರಂಟಿಯಂತಹ ಅದರ ಪ್ರಯೋಜನಗಳು.

ಭಾರತದಲ್ಲಿ ಇದರ ಇಲ್ಲಿಯವರೆಗಿನ ಪ್ರಯಾಣ

ಟೊಯೋಟಾ ಭಾರತದಲ್ಲಿ 2022 ರ ಕೊನೆಯಲ್ಲಿ ಇನ್ನೋವಾ ಹೈಕ್ರಾಸ್ ಅನ್ನು ಬಿಡುಗಡೆ ಮಾಡಿತು, ಇದರ ಬೆಲೆ 7- ಮತ್ತು 8-ಸೀಟರ್ ಡಿಸೈನ್ ನಲ್ಲಿ ರೂ. 18.30 ಲಕ್ಷದಿಂದ ಶುರುವಾಗುತ್ತದೆ. ಇದು ಮೊದಲ ಎರಡು ತಿಂಗಳುಗಳಲ್ಲಿಯೇ ಟಾಪ್ ನಗರಗಳಲ್ಲಿ ಮೂರರಿಂದ ನಾಲ್ಕು ತಿಂಗಳ ಸರಾಸರಿ ಕಾಯುವ ಅವಧಿಯನ್ನು ಹೊಂದಿತ್ತು.

ಇದು ಮಾರ್ಚ್ 2023 ರಲ್ಲಿ ತನ್ನ ಮೊದಲ ಬೆಲೆ ಏರಿಕೆಯನ್ನು ಮಾಡಿತು, ಇದರಿಂದ ಇದು ರೂ 75,000 ವರೆಗೆ ದುಬಾರಿಯಾಯಿತು ಮತ್ತು ಮುಂದಿನ ತಿಂಗಳಲ್ಲೇ, ಟೊಯೋಟಾ ತನ್ನ ಟಾಪ್-ಸ್ಪೆಕ್ ZX ಮತ್ತು ZX(O) ವೇರಿಯಂಟ್ ಗಳಿಗೆ ಆರ್ಡರ್ ತೆಗೆದುಕೊಳ್ಳುವುದನ್ನು ನಿಲ್ಲಿಸಿತು. ಈಗ ಫೆಬ್ರವರಿ 2024 ರಲ್ಲಿ ಈ ಎರಡು ವೇರಿಯಂಟ್ ಗಳ ಬುಕಿಂಗ್ ಅನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿದೆ.

ಇದು ಜುಲೈ 2023 ರಲ್ಲಿ ಮಾರುತಿ ಇನ್ವಿಕ್ಟೊ ಎಂಬ ಹೆಸರಿನ ಅದರ ಮರುಬ್ಯಾಡ್ಜ್ ಮಾಡಲಾದ ವರ್ಷನ್ ಅನ್ನು ಪಡೆದುಕೊಂಡಿತು. ಇದನ್ನು ಟ್ವೀಕ್ ಮಾಡಿದ ಡಿಸೈನ್, ಸ್ವಲ್ಪ ವಿಭಿನ್ನವಾದ ಇಕ್ವಿಪಿಮೆಂಟ್ ಗಳ ಸೆಟ್ ಮತ್ತು ಕೇವಲ ಒಂದು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಂತೆ ಕೆಲವು ವ್ಯತ್ಯಾಸಗಳೊಂದಿಗೆ ಮಾರುಕಟ್ಟೆಗೆ ತರಲಾಯಿತು.

ಇದನ್ನು ಕೂಡ ಓದಿ: ಟೊಯೋಟಾ ಹೈರೈಡರ್ ಪವರ್‌ಟ್ರೇನ್-ವಾರು ಕಾಯುವ ಅವಧಿ ಫೆಬ್ರವರಿ 2024: ಶೀಘ್ರದಲ್ಲೇ ಲಭ್ಯವಿರುವ ಹೈಬ್ರಿಡ್ ವೇರಿಯಂಟ್ ಗಳು

ಇದರ ಫೀಚರ್ ಗಳನ್ನು ನೋಡೋಣ

ಹಿಂದಿನ ಇನ್ನೋವಾಗಳಿಗೆ ಹೋಲಿಸಿದರೆ, ಇನ್ನೋವಾ ಹೈಕ್ರಾಸ್ ಕೆಲವು ಮೂಲಭೂತ ಬದಲಾವಣೆಗಳೊಂದಿಗೆ ಪ್ರೀಮಿಯಂ ಫೀಚರ್ ಗಳನ್ನು ಕೂಡ ಪಡೆದಿದೆ. ಇದು 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆದಿದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಕೆಲವು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿದೆ.

ಟೆಕ್ನಿಕಲ್ ಸ್ಪೆಸಿಫಿಕೇಷನ್ಸ್

ಇದು ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ:

  • ಎಲೆಕ್ಟ್ರಿಕ್ ಮೋಟಾರ್ (186 PS ಸಿಸ್ಟಮ್ ಔಟ್‌ಪುಟ್) ಜೊತೆಗೆ 2-ಲೀಟರ್ ಪೆಟ್ರೋಲ್ ಎಂಜಿನ್, ಇದನ್ನು e-CVT ಜೊತೆ ಜೋಡಿಸಲಾಗಿದೆ.

  • ಯಾವುದೇ ಎಲೆಕ್ಟ್ರಿಫಿಕೇಷನ್ ಇಲ್ಲದೆ ಅದೇ 2-ಲೀಟರ್ ಪೆಟ್ರೋಲ್ ಎಂಜಿನ್ (174 PS ಮತ್ತು 205 Nm), ಇದನ್ನು CVT ಯೊಂದಿಗೆ ಜೋಡಿಸಲಾಗಿದೆ.

ಇದನ್ನು ಕೂಡ ಓದಿ: ಟಾಟಾ ಪಂಚ್ EV ಟಾಟಾ WPL 2024 ರ ಅಧಿಕೃತ ಕಾರು ಆಗಿ ಆಯ್ಕೆಯಾಗಿದೆ

ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆಯು ರೂ 19.77 ಲಕ್ಷದಿಂದ ಶುರುವಾಗಿ ರೂ 30.68 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ಇದು ಮಾರುತಿ ಇನ್ವಿಕ್ಟೊಗೆ ನೇರ ಸ್ಪರ್ಧಿಯಾಗಿದೆ, ಮತ್ತು ಡೀಸೆಲ್-ಮಾತ್ರ ಇರುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಸಣ್ಣ ಮಟ್ಟದ ಮಲ್ಟಿ-ಪವರ್‌ಟ್ರೇನ್ ಕೊಡುಗೆಯಾದ ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಆದ ಪರ್ಯಾಯ ಆಯ್ಕೆಯಾಗಿದೆ.

ಇನ್ನಷ್ಟು ಓದಿ: ಟೊಯೊಟಾ ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟೊಯೋಟಾ ಇನೋವಾ Hycross

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ