Login or Register ಅತ್ಯುತ್ತಮ CarDekho experience ಗೆ
Login

ಟೊಯೊಟಾ ಇನ್ನೋವಾ ಹೈಕ್ರಾಸ್‌ನಿಂದ ಪಡೆದ ಮಾರುತಿ ಎಂಪಿವಿ ಅನಾವರಣಗೊಳ್ಳುವ ದಿನಾಂಕ ಬಹಿರಂಗ!

published on ಜೂನ್ 09, 2023 02:00 pm by rohit for ಮಾರುತಿ ಇನ್ವಿಕ್ಟೋ

ಮಾರುತಿಯ ಈವರೆಗಿನ ಅತ್ಯಂತ ಪ್ರೀಮಿಯಂ ಕಾರು ಎನಿಸಿಕೊಳ್ಳಲಿರುವ ಹೊಸ ಮಾರುತಿ ಎಂಪಿವಿ ಜುಲೈ 5 ರಂದು ಅನಾವರಣಗೊಳ್ಳಲಿದೆ

  • ಇದು ಮಾರುತಿಯ ಟಾಪ್ ಲೈನ್ ಕಾರಾಗಿರಲಿದ್ದು, ಗ್ರಾಂಡ್ ವಿಟಾರಾಕ್ಕಿಂತಲೂ ಮೇಲಿನದ್ದಾಗಿರಲಿದೆ.
  • ರೂ.20 ಲಕ್ಷಕ್ಕೂ ಮೇಲಿನ (ಎಕ್ಸ್-ಶೋರೂಂ) ಎಂಪಿವಿಯು ಮಾರುತಿಯ ಪ್ರಥಮ ಪ್ರಯತ್ನವಾಗಲಿದೆ.
  • ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಅದೇ ಸ್ಟಾಂಡರ್ಡ್ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಇದು ಪಡೆಯಲಿದೆ.
  • ಇದರ ಫೀಚರ್‌ಗಳಲ್ಲಿ 10-ಇಂಚು ಟಚ್‌ಸ್ಕ್ರೀನ್, ವಿಹಂಗಮ ಸನ್‌ರೂಫ್ ಮತ್ತು ಎಡಿಎಎಸ್ ಒಳಗೊಂಡಿದೆ.
  • ಇದರ ಬಿಡುಗಡೆಯು 2023ರ ಆಗಸ್ಟ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ 2022ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿತ್ತು. ಬಿಡುಗಡೆಗೂ ಕೆಲದಿನಗಳ ಮುನ್ನ ಟೊಯೊಟಾ ಎಂಪಿವಿ ಪ್ರತಿರೂಪವನ್ನು ಮಾರುತಿಯೂ ಉತ್ಪಾದಿಸಲಿದೆ, ಟ್ರೇಡ್‌ಮಾರ್ಕ್‌ಗಳ ಪ್ರಕಾರ “ಎಂಗೇಜ್” ಎಂಬುದಾಗಿ ಕರೆಯುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಲಾಗಿತ್ತು. ಎಂಪಿವಿಯ ಕುರಿತು ಮಾರುತಿಯಿಂದ ಇದೀಗ ನಾವು ಮೊದಲ ದೃಢೀಕರಣವನ್ನು ಪಡೆದಿದ್ದು, ಜುಲೈ 5 ರಂದು ಅನಾವರಣಗೊಳಿಸಲಾಗುತ್ತದೆ ಎಂಬ ಮಾಹಿತಿ ತಿಳಿಸಿದೆ.

ಈ ತನಕ ನಮಗೆ ತಿಳಿದು ಬಂದ ಸಂಗತಿ

ಟೊಯೊಟಾ ಮತ್ತು ಮಾರುತಿಯ ನಡುವಿನ ಇತ್ತೀಚಿನ ಬೇರೆ ಹಂಚಿಕೊಂಡ ಮಾಡೆಲ್‌ಗಳಂತೆ, ಇನ್ನೋವಾ ಹೈಕ್ರಾಸ್ ಆಧಾರಿತ ಈ ಕಾರು ಅನನ್ಯತೆಯನ್ನು ಕಾಪಾಡುವ ಸಲುವಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕೆಲವು ಗೋಚರ ವ್ಯತ್ಯಾಸಗಳನ್ನು ಹೊಂದಿರುವ ಸಾಧ್ಯತೆಯಿದೆ. ಮಾರುತಿಯ ಶ್ರೇಣಿಯಲ್ಲಿನ ಹೊಸ ಪ್ರಮುಖ ಕೊಡುಗೆಯಾಗಿ ಗ್ರಾಂಡ್ ವಿಟಾರಾ ಕ್ಕಿಂತ ಮೇಲಿನ ಸ್ಥಾನವನ್ನು ಪಡೆದುಕೊಳ್ಳಲಿದೆ ಮತ್ತು ಮಾರಾಟಕ್ಕಿರುವ ಮಾರುತಿಯ ಅತ್ಯಂತ ದುಬಾರಿ ಕಾರು ಎನಿಸಿಕೊಳ್ಳಲಿದೆ. ಇದು ಈ ಕಾರು ತಯಾರಕರ ಶ್ರೇಣಿಯಲ್ಲಿರುವ ಎರ್ಟಿಗಾ ಮತ್ತು XL6 ಬಳಿಕದ ಮೂರನೇ ಎಂಪಿವಿಯಾಗಿದೆ.

ಮಾರುತಿಯು ಇದೇ ಮೊದಲ ಬಾರಿಗೆ ರೂ.20 ಲಕ್ಷ (ಎಕ್ಸ್‌-ಶೋರೂಂ) ಕ್ಕಿಂತ ಮೇಲಿನ ಕೊಡುಗೆಯ ಪ್ರಯೋಗ ನಡೆಸುತ್ತಿದೆ. ಮಾರುತಿಯ ಬ್ರ್ಯಾಂಡ್ ಮೇಲೆ ಪ್ರೀತಿ ಹೊಂದಿರುವ, ಪ್ರೀಮಿಯಂ ಎಂಪಿವಿಯನ್ನು ಹುಡುಕುತ್ತಿರುವ ಖರೀದಿದಾರರು ಇನ್ನು ಬೇರೆಡೆ ನೋಡಬೇಕಿಲ್ಲ.

ಸಂಬಂಧಿತ ಲೇಖನ: CD ಅಭಿಮತ: ಮಾರುತಿ ಎಂಪಿವಿಗಾಗಿ ರೂ. 30 ಲಕ್ಷಕ್ಕೂ ಹೆಚ್ಚು ಪಾವತಿಸಲು ಸಿದ್ಧರಾಗಿ

ಪರೀಕ್ಷಿಸಲಾದ ಪವರ್‌ಟ್ರೇನ್‌ಗಳ ಸೆಟ್

ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಮಾರುತಿಯ ಆವೃತ್ತಿಯು ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದೆ. ಸ್ಟಾಂಡರ್ಡ್ ಆಗಿ, ಈ ಎಂಪಿವಿಯು 2-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟ್ ಆದ ಪೆಟ್ರೋಲ್ ಎಂಜಿನ್ (174PS/205Nm) ನೊಂದಿಗೆ ಬರಲಿದೆ, CVT ಅನ್ನು ಹೊಂದಿರಲಿದೆ. 186PS (ಸಂಯೋಜಿತ) 2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಬಳಸಿಕೊಂಡು ಬಲಿಷ್ಠ ಹೈಬ್ರಿಡ್ ಪವರ್‌ಟ್ರೇನ್‌ ಅನ್ನು ಕೂಡಾ ಟೊಯೊಟಾ ಎಂಪಿವಿ ಒದಗಿಸಿದೆ. ಇದು e-CVT ನೊಂದಿಗೆ ಸಂಯೋಜಿತಗೊಂಡಿದ್ದು, 21kmpl ಗೂ ಅಧಿಕ ಕ್ಲೈಮ್ ಮಾಡಲಾದ ಮೈಲೇಜ್ ಹೊಂದಿದೆ.

ಭರಪೂರ ಫೀಚರ್‌ಗಳು

ಟೊಯೊಟಾದಂತೆ, ಮಾರುತಿ ಎಂಪಿವಿಯು 10-ಇಂಚಿನ ಟಚ್‌ಸ್ಕ್ರೀನ್ ಯುನಿಟ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ವಿಹಂಗಮ ಸನ್‌ರೂಫ್, ವೆಂಟಿಲೇಟ್‌ಯುಕ್ತ ಫ್ರಂಟ್ ಸೀಟ್‌ಗಳು ಮತ್ತು ಪವರ್ಡ್ ಫ್ರಂಟ್ ಮತ್ತು ಎರಡನೇ ಸಾಲಿನ ಸೀಟುಗಳು, ಜತೆಗೆ ಒಟ್ಟೊಮನ್ ಫಂಕ್ಷನಾಲಿಟಿಯನ್ನೂ ಅನ್ವಯಿಸಲಾದ ಎರಡನೇ ಸಾಲಿನ ಸೀಟುಗಳಂತಹ ಫೀಚರ್‌ಗಳನ್ನು ಹೊಂದಿದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಹಿಲ್-ಸ್ಟಾರ್ಟ್ ಮತ್ತು ಡೀಸೆಂಟ್ ಅಸಿಸ್ಟ್ ಹಾಗೂ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹೊಂದಿರಲಿದೆ.

ಇದನ್ನೂ ಓದಿ: ಕಾರ್‌ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್‌ಗೆ ಆ್ಯಪಲ್ iOS 17 ಸೇರಿಸಲಿದೆ ಹೊಸ ಫೀಚರ್‌ಗಳು

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಮಾರುತಿಯು ತನ್ನ ಹೊಸ ಮುಂಚೂಣಿ ಎಂಪಿವಿ ಅನ್ನು 2023ರ ಆಗಸ್ಟ್ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರ ಬೆಲೆ ರೂ.19 ಲಕ್ಷ (ಎಕ್ಸ್-ಶೂರೂಂ) ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಮಾರುತಿ ಎಂಪಿವಿಯ ನೇರ ಪ್ರತಿಸ್ಪರ್ಧಿಯಾಗಿ ತನ್ನ ದಾನಿ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನೇ ಹೊಂದಿದೆ, ಇದರ ಹೊರತಾಗಿ ಇನ್ನಷ್ಟು ಪ್ರೀಮಿಯಂ ಪರ್ಯಾಯವೆಂದರೆ ಕಿಯಾ ಕಾರೆನ್ಸ್. ಇದು ಕಿಯಾ ಕಾರ್ನಿವಲ್‌ಗಿಂತ ಕೈಗೆಟುವ ಕಾರಾಗಿದೆ.

r
ಅವರಿಂದ ಪ್ರಕಟಿಸಲಾಗಿದೆ

rohit

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಇನ್ವಿಕ್ಟೊ

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ