ಬೆಲೆ ಹೆಚ್ಚಳದ ಹೊರತಾಗಿಯೂ ಫೋಕ್ಸ್‌ವಾಗನ್ ಮಾಡೆಲ್‌ಗಳು ಪಡೆದಿವೆ ಫೀಚರ್‌ಗಳ ಮರುಸಂಯೋಜನೆ
ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ ansh ಮೂಲಕ ಮಾರ್ಚ್ 24, 2023 07:54 pm ರಂದು ಮಾರ್ಪಡಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ವರ್ಟಸ್ ಹೊಸ ಫೀಚರ್‌ಗಳನ್ನು ಪಡೆದರೆ, ಟೈಗನ್‌ನ ಮಿಡ್ ಸ್ಪೆಕ್‌ಗಳಿಗೆ ಟಾಪ್ ಸ್ಪೆಕ್ ವೇರಿಯೆಂಟ್‌ಗಳಿಂದ ಫೀಚರ್‌ಗಳನ್ನು ಸೇರಿಸಲಾಗಿದೆ.
- ಫೋಕ್ಸ್‌ವಾಗನ್ ವರ್ಟಸ್‌ನ ಎಲ್ಲಾ ವೇರಿಯೆಂಟ್‌ಗಳು ರಿಯರ್ ಫಾಗ್ ಲ್ಯಾಂಪ್‌ಗಳನ್ನು ಪಡೆದಿದೆ.
- ಟೈಗನ್‌ನ ಮಿಡ್ ಸ್ಪೆಕ್ ವೇರಿಯೆಂಟ್‌ಗಳಲ್ಲಿ ಬರುತ್ತಿರುವ/ಹೋಗುತ್ತಿರುವ ಹೋಮ್ ಲೈಟ್ ಕಾರ್ಯಗಳನ್ನು ಹೊಂದಿರುವ LED ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ.
- ಈ ಕಾರುತಯಾರಕರ ಎಲ್ಲಾ ಮೂರು ಮಾಡೆಲ್‌ಗಳು ಏಪ್ರಿಲ್‌ನಿಂದ ತುಟ್ಟಿಯಾಗಲಿವೆ.
- ವರ್ಟಸ್ ಮತ್ತು ಟೈಗನ್ ಬೆಲೆಗಳು ಕ್ರಮವಾಗಿ ರೂ 11.32 ಲಕ್ಷ (ಎಕ್ಸ್-ಶೋರೂಂ) ಮತ್ತು ರೂ 11.56 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.
ಫೋಕ್ಸ್‌ವಾಗನ್‌ನ, ಎರಡು ಭಾರತ ಕೇಂದ್ರಿತ ಮಾಡೆಲ್‌ಗಳಾದ ವರ್ಟಸ್ ಮತ್ತು ಟೈಗನ್ ತಮ್ಮ ಫೀಚರ್ ಪಟ್ಟಿಯಲ್ಲಿ ಸ್ವಲ್ಪ ಮಟ್ಟಿನ ನವೀಕರಣಗಳನ್ನು ಪಡೆದಿವೆ. ಈ ಬೇಸ್-ಸ್ಪೆಕ್ ವೇರಿಯೆಂಟ್‌ಗಳಿಗೆ ಕೆಲವು ಹೈಯರ್-ಸ್ಪೆಕ್ ಸಾಧನಗಳು ಸೇರ್ಪಡೆಗೊಳ್ಳುವುದರಿಂದ ಎರಡೂ ಮಾಡೆಲ್‌ಗಳು ಹೆಚ್ಚಿನ ಫೀಚರ್‌ಗಳನ್ನು ಹೊಂದಿವೆ. ಇದಲ್ಲದೇ, ಈ ಕಾರು ತಯಾರಕರು ತಮ್ಮ ಲೈನ್ಅಪ್‌ನಲ್ಲಿ ಮುಂದಿನ ತಿಂಗಳು ಅಂದರೆ ಏಪ್ರಿಲ್ 2023 ರಲ್ಲಿ ಬೆಲೆ ಏರಿಸುವ ಸಂಭವ ಇದೆ.
ಫೀಚರ್ ಬದಲಾವಣೆಗಳು
ಬದಲಾವಣೆಗಳು ಸಣ್ಣ ಪುಟ್ಟದಾದರೂ ತುಂಬಾ ಸಹಾಯಕವಾಗಿವೆ. ವರ್ಟಸ್ ಸೆಡಾನ್‌ನಲ್ಲಿ ಫೋಕ್ಸ್‌ವಾಗನ್ ಎಲ್ಲಾ ವೇರಿಯೆಂಟ್‌ಗಳಿಗೆ ಫೀಚರ್‌ಗಳ ಸ್ಟಾಂಡರ್ಡ್ ಪಟ್ಟಿಯಲ್ಲಿ ರಿಯರ್ ಫಾಗ್ ಲ್ಯಾಂಪ್‌ಗಳನ್ನು ಸೇರ್ಪಡೆಗೊಳಿಸಿದೆ.
ಇದನ್ನೂ ಓದಿ: ಹೊಚ್ಚ ಹೊಸ ಹ್ಯುಂಡೈ ವರ್ನಾದ ವೇರಿಯೆಂಟ್‌ವಾರು ಫೀಚರ್‌ಗಳನ್ನು ಅನ್ವೇಷಿಸಿ
ಏತನ್ಮಧ್ಯೆ, ಟೈಗನ್‌ನಲ್ಲಿ ಯಾವುದೇ ಫೀಚರ್‌ಗಳನ್ನು ಸೇರ್ಪಡೆಗೊಳಿಸದಿದ್ದರೂ, ವೇರಿಯೆಂಟ್‌ವಾರು ವಿತರಣೆಯನ್ನು ಮರುಸಂಯೋಜನೆಗೊಳಿಸಲಾಗಿದೆ. ಈ ಪ್ರೀಮಿಯಂ ಕಾಂಪ್ಯಾಕ್ಟ್ SUV ಈಗ 1.0-ಲೀಟರ್ ಹೈಲೈನ್ ಮತ್ತು 1.5-ಲೀಟರ್ GT ವೇರಿಯೆಂಟ್‌ಗಳಲ್ಲಿ ಸ್ವಯಂ ಆಗಮನ/ನಿರ್ಗಮನ ಹೋಂ ಲೈಟ್‌ಗಳೊಂದಿಗಿನ LED ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ. ಈ ಫೀಚರ್ ಮೊದಲಿಗೆ ಟಾಪ್ ಸ್ಪೆಕ್‌ನ 1.0-ಲೀಟರ್ ಟಾಪ್‌ಲೈನ್ ಮತ್ತು 1.5-ಲೀಟರ್ GT ಪ್ಲಸ್ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿತ್ತು.
ಒಂದೇ ರೀತಿಯ ಪವರ್‌ಟ್ರೇನ್
ಈ ಎರಡೂ ಮಾಡೆಲ್‌ಗಳು ಒಂದೇ ರೀತಿಯ ಇಂಜಿನ್ ಆಯ್ಕೆಗಳನ್ನು ಪಡೆದಿವೆ: 1.0-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (115PS ಮತ್ತು 178Nm) ಹಾಗೂ 1.5-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ (150PS ಮತ್ತು 250Nm). 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಟೈಗನ್‌ನ ಎರಡೂ ಇಂಜಿನ್‌ಗಳಿಗೆ ಸ್ಟಾಂಡರ್ಡ್ ಆಗಿದೆ, ಆದರೆ ವರ್ಟಸ್ ಇದನ್ನು ಸಣ್ಣ ಇಂಜಿನ್‌ನಲ್ಲಿ ಪಡೆದಿದೆ. ಆಟೋಮ್ಯಾಟಿಕ್ ಆಯ್ಕೆಗಳಲ್ಲಿ, ಸಣ್ಣ ಯೂನಿಟ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಹೊಂದಿದೆ, ದೊಡ್ಡ ಯೂನಿಟ್ ಎರಡೂ ಮಾಡೆಲ್‌ಗಳಲ್ಲಿ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್) ಅನ್ನು ಪಡೆದಿದೆ. ಇತರ ಅನೇಕ ಕಾರುತಯಾರಕರಂತೆ ಫೋಕ್ಸ್‌ವಾಗೆನ್ ಶೀಘ್ರದಲ್ಲೇ ಈ ಇಂಜಿನ್‌ಗಳನ್ನು BS6 ಹಂತ 2 ಮಾನದಂಡಗಳಿಗೆ ಅನುಗುಣವಾಗಿ ಮಾಡುತ್ತದೆ ಮತ್ತು E20 ಇಂಧನಗಳನ್ನು ಸಿದ್ಧಪಡಿಸುತ್ತದೆ.
ಇನ್ನೊಂದು ಬೆಲೆ ಹೆಚ್ಚಳ
ಪ್ರಸ್ತುತ ಈ ವರ್ಟಸ್ ಮತ್ತು ಟೈಗನ್‌ನ ಬೆಲೆಯನ್ನು ಕ್ರಮವಾಗಿ 11.32 ಲಕ್ಷದಿಂದ ರೂ 18.42 ಲಕ್ಷದ ತನಕ (ಎಕ್ಸ್-ಶೋರೂಂ ಮತ್ತು ರೂ 11.56 ಲಕ್ಷದಿಂದ 18.96 ಲಕ್ಷದ ತನಕ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ. ನಮ್ಮ ಮೂಲಗಳ ಪ್ರಕಾರ, ಫೋಕ್ಸ್‌ವಾಗನ್ ಬೆಲೆ ಹೆಚ್ಚಳವನ್ನು (2 ರಿಂದ 3 ಪ್ರತಿಶತ) ಏಪ್ರಿಲ್ ಆರಂಭದಲ್ಲಿ ಜಾರಿಗೊಳಿಸಬಹುದು. ಈ ಕಾರುತಯಾರಕರ ಫ್ಲ್ಯಾಗ್‌ಶಿಪ್ ಮಾಡೆಲ್, ರೂ 33.50 ಲಕ್ಷ (ಎಕ್ಸ್-ಶೋರೂಂ) ಬೆಲೆ ಹೊಂದಿರುವ ಟೈಗನ್, ಕೂಡಾ ತುಟ್ಟಿಯಾಗಬಹುದು.
ಪ್ರತಿಸ್ಪರ್ಧಿಗಳು
ವರ್ಟಸ್ ಹೊಸ-ಪೀಳಿಗೆ ಹ್ಯುಂಡೈ ವರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ಸ್ಲಾವಿಯಾದ ಪ್ರತಿಸ್ಪರ್ಧಿಯಾಗಿದೆ. ಟೈಗನ್ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಕ್, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಿದೆ.
ಇದನ್ನೂ ಓದಿ: ಮಾರುತಿ ಬ್ರೆಝಾ ವರ್ಸಸ್ ಗ್ರ್ಯಾಂಡ್ ವಿಟಾರಾ: ಯಾವ CNG SUV ಹೆಚ್ಚು ಇಂಧನ ದಕ್ಷತೆ ಹೊಂದಿದೆ?
ಇನ್ನಷ್ಟು ಓದಿ : ವರ್ಟಸ್‌ನ ಆನ್ ರೋಡ್ ಬೆಲೆ