ಲ್ಯಾಟಿನ್ NCAP ಟೆಸ್ಟ್‌ಗಳಲ್ಲಿ 5 ಸ್ಟಾರ್‌ಗಳೊಂದಿಗೆ ಸಂಭ್ರಮಿಸಿದ ಫೋಕ್ಸ್‌ವಾಗನ್ ಟೈಗನ್
ವೋಕ್ಸ್ವ್ಯಾಗನ್ ಟೈಗುನ್ ಗಾಗಿ ansh ಮೂಲಕ ಜುಲೈ 07, 2023 11:54 pm ರಂದು ಪ್ರಕಟಿಸಲಾಗಿದೆ
- 124 Views
- ಕಾಮೆಂಟ್ ಅನ್ನು ಬರೆಯಿರಿ
ಕಳೆದ ವರ್ಷ ಜಾಗತಿಕ NCAPನಲ್ಲಿ ತನ್ನ 5-ಸ್ಟಾರ್ ಪ್ರದರ್ಶನದ ನಂತರ, ಈ ಕಾಂಪ್ಯಾಕ್ಟ್ SUV ಕಟ್ಟುನಿಟ್ಟಾದ ಲ್ಯಾಟಿನ್ NCAPನಲ್ಲೂ ಇದನ್ನೇ ಮಾಡಿದೆ
ಈ ಫೋಕ್ಸ್‌ವಾಗನ್ ಟೈಗನ್ 5-ಸ್ಟಾರ್ ಜಾಗತಿಕ NCAP ಸುರಕ್ಷತಾ ರೇಟಿಂಗ್‌ನೊಂದಿಗೆ ಸದ್ಯ ಭಾರತದ ಅತ್ಯಂತ ಸುರಕ್ಷಿತ ಕಾಂಪ್ಯಾಕ್ಟ್ SUV ಆಗಿದೆ. ತನ್ನ ಆಕರ್ಷಕ ಪ್ರದರ್ಶನದ ನಂತರ ಇದು ಇನ್ನಷ್ಟು ಕಟ್ಟುನಿಟ್ಟಾದ ಲ್ಯಾಟಿನ್ NCAPಯಲ್ಲಿ ಕ್ರ್ಯಾಶ್ ಟೆಸ್ಟ್ ನೀಡಿದ್ದು, ಇಲ್ಲೂ ಕೂಡಾ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಇದು ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ನಾವೀಗ ನೋಡೋಣ:
ಸುರಕ್ಷತಾ ಸಾಧನ
ಕ್ರ್ಯಾಶ್ ಟೆಸ್ಟ್ ಮಾಡಲಾದ ಟೈಗನ್ ಆರು ಏರ್‌ಬ್ಯಾಗ್‌ಗಳೊಂದಿಗೆ ಸಜ್ಜುಗೊಂಡು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಸ್ಟಾಂಡರ್ಡ್ ಆಗಿ ಪಡೆದಿತ್ತು. ಅಲ್ಲದೇ ಈ ಕ್ರ್ಯಾಶ್ ಟೆಸ್ಟ್ ಮಾಡಲಾದ ಯೂನಿಟ್ ಐಚ್ಛಿಕ ಆಟೋನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಪಡೆದಿದ್ದು ಇಂಡಿಯಾ-ಸ್ಪೆಕ್ ಮಾಡೆಲ್‌ನಲ್ಲಿ ಇದನ್ನು ನೀಡಲಾಗಿಲ್ಲ. ಈ ಮೇಡ್-ಇನ್-ಇಂಡಿಯಾ ಟೈಗನ್, ಸುರಕ್ಷತಾ ಫೀಚರ್‌ಗಳಾದ ISOFIX ಚೈಲ್ಡ್ ಸೀಟ್ ಆ್ಯಂಕರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದಲ್ಲಿ ಕ್ಯಾಮರವನ್ನು ಹೊಂದಿದೆ.
ಇದನ್ನೂ ಓದಿ: ಫೋಕ್ಸ್‌ವಾಗನ್ ವರ್ಟಸ್ GT ಲೈನ್ ಹೊಸ ಪ್ರವೇಶ ಹಂತದ DCTಯೊಂದಿಗೆ ಇನ್ನಷ್ಟು ಅಗ್ಗ
ವಯಸ್ಕ ಪ್ರಯಾಣಿಕರ ರಕ್ಷಣೆ
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ, ಈ SUV 92 ಪ್ರತಿಶತ (39.99 ಪಾಯಿಂಟ್‌ಗಳು) ಪಡೆದಿದ್ದು, ಇದು ಫ್ರಂಟಲ್ ಮತ್ತು ಸೈಡ್-ಇಂಪ್ಯಾಕ್ಟ್ ಟೆಸ್ಟ್‌ಗಳ ಒಟ್ಟಾರೆ ಸ್ಕೋರ್‌ಗಳನ್ನು ಒಳಗೊಂಡಿದೆ. ಈ ಟೆಸ್ಟ್ 5-ಸ್ಟಾರ್ ವಯಸ್ಕ ಪ್ರಯಾಣಿಕರ ರಕ್ಷಣೆಯ ರೇಟಿಂಗ್‌ನೊಂದಿಗೆ ಬಂದಿದೆ.
ಫ್ರಂಟಲ್ ಇಂಪ್ಯಾಕ್ಟ್
ಫ್ರಂಟಲ್ ಇಂಪ್ಯಾಕ್ಟ್‌ನಲ್ಲಿ, ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆ ‘ಉತ್ತಮ’ ರಕ್ಷಣೆಯನ್ನು ಪಡೆದಿದೆ. ಎದೆಯ ರಕ್ಷಣೆಯು ಪ್ರಯಾಣಿಕನಿಗೆ ‘ಉತ್ತಮ’ವಾಗಿದ್ದು ಚಾಲಕನಿಗೆ ‘ಕನಿಷ್ಠ ಮಟ್ಟದ’ಲ್ಲಿತ್ತು. ಮೊಣಕಾಲು ಮತ್ತು ಮಂಡಿ ರಕ್ಷಣೆ ಇಬ್ಬರಿಗೂ ‘ಉತ್ತಮ’ವಾಗಿತ್ತು ಮತ್ತು ಚಾಲಕನ ಎರಡೂ ಪಾದಗಳು ‘ಉತ್ತಮ’ ರಕ್ಷಣೆ ಪಡೆದಿದೆ.
ಸೈಡ್ ಇಂಪ್ಯಾಕ್ಟ್
ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, ಚಾಲಕನ ತಲೆ, ಎದೆ, ಸೊಂಟ ಮತ್ತು ಅಸ್ಥಿ ಕುಹರಕ್ಕೆ ‘ಉತ್ತಮ’ ರಕ್ಷಣೆ ದೊರೆತಿದೆ.
ಸೈಡ್ ಪೋಲ್ ಇಂಪ್ಯಾಕ್ಟ್
ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, ಚಾಲಕನ ತಲೆ, ಸೊಂಟ ಮತ್ತು ಅಸ್ಥಿ ಕುಹರಕ್ಕೆ ‘ಉತ್ತಮ’ ರಕ್ಷಣೆ ದೊರೆತಿದೆ ಆದರೆ ಎದೆಯ ರಕ್ಷಣೆ ‘ಕನಿಷ್ಠ ಮಟ್ಟ’ದಲ್ಲಿತ್ತು.
ಪ್ರಯಾಣಿಕ ಮಗುವಿನ ರಕ್ಷಣೆ
ಪ್ರಯಾಣಿಕ ಮಗುವಿನ ಸುರಕ್ಷತೆಯಲ್ಲಿ, ಟೈಗನ್ 92 ಪ್ರತಿಶತ (45 ಪಾಯಿಂಟ್‌ಗಳು) ಪಡೆದಿದೆ. ಅದರ ಪ್ರದರ್ಶನ ಹೀಗಿದೆ:
ಫ್ರಂಟಲ್ ಇಂಪ್ಯಾಕ್ಟ್
ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, 3-ವರ್ಷದ ಮತ್ತು 18-ತಿಂಗಳು ವಯಸ್ಸಿನ ಮಕ್ಕಳಿಗಾಗಿ, ಮಗುವಿನ ಸೀಟುಗಳನ್ನು ಹಿಂಭಾಗಕ್ಕೆ ಎದುರಾಗಿ ಅಳವಡಿಸಲಾಗಿತ್ತು. ಎರಡೂ ಸಂದರ್ಭಗಳಲ್ಲಿ, ತಲೆಯು ಅಪಘಾತಕ್ಕೆ ತುತ್ತಾಗುವುದನ್ನು ತಡೆಯಲು ಸಾಧ್ಯವಾಗಿತ್ತು ಮತ್ತು ‘ಉತ್ತಮ’ ರಕ್ಷಣೆಯನ್ನು ನೀಡಿದೆ. ಸಣ್ಣ ಮಗುವಿಗೆ, ಸೀಟು ಸಂಪೂರ್ಣ ರಕ್ಷಣೆಯನ್ನು ನೀಡಿದೆ.
ಸೈಡ್ ಇಂಪ್ಯಾಕ್ಟ್
ಈ ಟೆಸ್ಟ್‌ನಲ್ಲಿ, ಎರಡು ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಮ್‌ಗಳಿಗೂ (CRS) ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಈ ಟೈಗನ್ ISOFIX ಆ್ಯಂಕೋರೇಕಜ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು ಎಲ್ಲಾ ಅಗತ್ಯ ಗುರುತುಗಳನ್ನು ಪಡೆದಿದೆ. ಎಲ್ಲಾ ಸೀಟುಗಳೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿವೆ.
ಇದನ್ನು ಓದಿ: ಫೋಕ್ಸ್‌ವಾಗನ್ ಟೈಗನ್ ಪಡೆಯುತ್ತಿದೆ ಹೊಸ ಬಣ್ಣಗಳೊಂದಿಗೆ, ಹೊಸ GT ವೇರಿಯೆಂಟ್‌ಗಳು ಮತ್ತು ಸೀಮಿತ ಆವೃತ್ತಿಗಳು
ಪಾದಾಚಾರಿ ರಕ್ಷಣೆ
ಈ ಅಂಶಕ್ಕೆ ಫೋಕ್ಸ್‌ವಾಗನ್ SUV 55 ಪ್ರತಿಶತ ಸ್ಕೋರ್(26.47 ಪಾಯಿಂಟ್)ಗಳನ್ನು ಗಳಿಸಿದೆ. ಇಲ್ಲಿ, ಹೆಚ್ಚಿನ ನಿಯತಾಂಕಗಳಲ್ಲಿ, ಟೈಗನ್ ‘ಉತ್ತಮ’ ‘ಕನಿಷ್ಠ ಮಟ್ಟದ’ ಮತ್ತು ‘ಸಾಕಷ್ಟು’ ರಕ್ಷಣೆಯನ್ನು ಪಡೆಯುತ್ತದೆ. ಕಾಲಿನ ಕೆಳಭಾಗದ ರಕ್ಷಣೆಯು ‘ಉತ್ತಮ’ವಾಗಿದ್ದರೆ, ಕಾಲಿನ ಮೇಲ್ಭಾಗದ ರಕ್ಷಣೆಯು ‘ದುರ್ಬಲ’ವಾಗಿತ್ತು, ಹಾಗಾಗಿ ಕಡಿಮೆ ಸ್ಕೋರ್ ಗಳಿಸಲು ಈ ಅಂಶ ಕಾರಣವಾಗಿರಬಹುದು.
ಸುರಕ್ಷತಾ ಸಹಾಯ
ಲ್ಯಾಟಿನ್ NCAP ಕಾರಿನ ಸುರಕ್ಷತಾ ಸಹಾಯದ ಫೀಚರ್‌ಗಳನ್ನು ಪರಿಶೀಲಿಸುತ್ತದೆ ಮತ್ತು ಟೈಗನ್ ಇದರಲ್ಲಿ 83 ಪ್ರತಿಶತ (35.81 ಪಾಯಿಂಟ್‌ಗಳು) ಗಳಿಸಿದೆ. ಈ SUV ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳು ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಆದಾಗ್ಯೂ ಟೈಗನ್ ADASನ ಸಂಪೂರ್ಣ ಫೀಚರ್‌ಗಳನ್ನು ಪಡೆದಿಲ್ಲವಾದರೂ, ಈ ಕ್ರ್ಯಾಶ್ ಟೆಸ್ಟ್ ಮಾಡಲಾದ ಮಾಡೆಲ್ ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಐಚ್ಛಿಕವಾಗಿ ಪಡೆದಿದ್ದು, ಲ್ಯಾಟಿನ್ NCAP ಅವಶ್ಯಕತೆಗಳನ್ನು ಪೂರೈಸಿದೆ.
ಭಾರತದಲ್ಲಿ ಟೈಗನ್
ಇಂಡಿಯಾ-ಸ್ಪೆಕ್ ಫೋಕ್ಸ್‌ವಾಗನ್ ಟೈಗನ್ ಎರಡು ಮುಂಭಾಗದ ಏರ್‌ಬ್ಯಾಗ್‌ಗಳು, ABS ಮತ್ತು EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಮುಂಬರುವ ನಿಬಂಧನೆಗಳನ್ನು ಅನುಸರಿಸಿ, ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡುವಂತೆಯೂ ಇದನ್ನು ಅಪ್‌ಡೇಟ್ ಮಾಡಬಹುದು. ಪ್ರಸ್ತುತ ಇದರ ಬೆಲೆಯನ್ನು ರೂ 11.62 ಲಕ್ಷ ಮತ್ತು ರೂ 19.46 ಲಕ್ಷದ ನಡುವೆ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.
ಇನ್ನಷ್ಟು ಓದಿ : ಫೋಕ್ಸ್‌ವಾಗನ್ ಟೈಗನ್ ಆಟೋಮ್ಯಾಟಿಕ್