ಫೋಕ್ಸ್‌ವಾಗನ್ ಟೈಗನ್ ಟ್ರಯಲ್ ಎಡಿಷನ್ ಟೀಸರ್ ಅನಾವರಣ, ಬಿಡುಗಡೆ ನಾಳೆ
ಈ ವಿಶೇಷ ಎಡಿಷನ್ ಸಂಪೂರ್ಣ ಕಾಸ್ಮೆಟಿಕ್ ಅಪ್‌ಗ್ರೇಡ್ ಅನ್ನು ಹೊಂದಿದ್ದು GT ವೇರಿಯೆಂಟ್‌ಗಳ ಆಧಾರಿತವಾಗಿದೆ
- ಇದು 150PS, 1.5-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ.
- ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳು ಬಾಡಿ ಗ್ರ್ಯಾಫಿಕ್ಸ್, ಬ್ಲಾಕ್ ಅಲಾಯ್ ವ್ಹೀಲ್‌ಗಳು ಮತ್ತು ರೂಫ್ ರ‍್ಯಾಲಿ ಅನ್ನು ಒಳಗೊಂಡಿರುತ್ತದೆ.
- ಅಲ್ಲದೇ ಕ್ಯಾಬಿನ್ ಒಳಗೆ ಇದು ವಿಶಿಷ್ಟವಾದ ಲೆದರೆಟ್ ಅಪ್‌ಹೋಲ್ಸ್‌ಟ್ರಿ ಅನ್ನೂ ಪಡೆದಿರುತ್ತದೆ.
- ಸಾಮಾನ್ಯ GT ವೇರಿಯೆಂಟ್‌ಗಳಿಗಿಂತ ದುಬಾರಿಯಾಗಿರುವ ನಿರೀಕ್ಷೆ ಇದೆ.
ಫೋಕ್ಸ್‌ವಾಗನ್ ಟೈಗನ್ ಟ್ರಯಲ್ ಎಡಿಷನ್ ಅನ್ನು ಪಡೆಯಲು ಸಿದ್ಧವಿದ್ದು ಬೆಲೆಗಳು ನಾಳೆ ಪ್ರಕಟವಾಗಲಿವೆ. ಈ ವರ್ಷದ ಪ್ರಾರಂಭದಲ್ಲಿ ಇದನ್ನು ಪರಿಕಲ್ಪನೆಯಾಗಿ ಪ್ರದರ್ಶಿಸಲಾಯಿತು ಮತ್ತು ಸ್ಟಾಂಡರ್ಡ್ ಟೈಗನ್‌ಗೆ ಹೋಲಿಸಿದರೆ ಹೊಸ ಟೀಸರ್ ಅನೇಕ ಕಾಸ್ಮೆಟಿಕ್ ಬದಲಾವಣೆಗಳನ್ನು ಅನಾವರಣಗೊಳಿಸುತ್ತದೆ. ಟೈಗನ್ ಟ್ರಯಲ್, ಕಾಂಪ್ಯಾಕ್ಟ್ SUVಯ “GT ಎಡ್ಜ್ ಕಲೆಕ್ಷನ್” ಭಾಗವಾಗಿದೆ. ಫೋಕ್ಸ್‌ವಾಗನ್ ಟೈಗನ್ ಟ್ರಯಲ್ ಎಡಿಷನ್‌ನ ಇಲ್ಲಿಯ ತನಕ ತಿಳಿದಿರುವ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಎಕ್ಸ್‌ಟೀರಿಯರ್ ಅಪ್‌ಗ್ರೇಡ್‌ಗಳು
ಮುಂಭಾಗದಿಂದ ಪ್ರಾರಂಭಿಸುತ್ತಾ, ಈ ಟೈಗನ್ ಎಡಿಷನ್, ಸಂಪೂರ್ಣ-ಬ್ಲಾಕ್ ಗ್ರಿಲ್ ಮತ್ತು ಮೇಲ್ಭಾಗ ಹಾಗು ಕೆಳಭಾಗದಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಪಡೆದಿದೆ. ಪ್ರೊಫೈಲ್‌ನಲ್ಲಿ ನೀವು 16-ಇಂಚಿನ ಸಂಪೂರ್ಣ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳನ್ನು, ORVM ಗಳ ಕೆಳಗೆ “ಟ್ರಯಲ್” ಬ್ಯಾಡ್ಜಿಂಗ್, ಹಿಂಭಾಗದ ಡೋರ್ ಮತ್ತು C-ಪಿಲ್ಲರ್ ಮೇಲೆ ಬಾಡಿ ಗ್ರಾಫಿಕ್ಸ್ ಅನ್ನು ಕಾಣಬಹುದು.
ಅಲ್ಲದೇ, ಇದು ಪಡಲ್ ಲ್ಯಾಂಪ್‌ಗಳು, ರೂಫ್ ರ‍್ಯಾಕ್ ಮತ್ತು ಹಿಂಬದಿಯಲ್ಲಿ ಒಂದು “ಟ್ರಯಲ್ ಎಡಿಷನ್” ಬ್ಯಾಡ್ಜಿಂಗ್ ಅನ್ನೂ ಪಡೆದಿದೆ.
ಒಳಗಡೆ ಹೊಸತೇನಿದೆ?
ಫೋಕ್ಸ್‌ವಾಗನ್ ಟೈಗನ್ ಟ್ರಯಲ್ ಎಡಿಷನ್ “GT ಎಡ್ಜ್ ಕಲೆಕ್ಷನ್”ನ ಕ್ಯಾಬಿನ್ ಇತರ ವಿಶೇಷ ಎಡಿಷನ್‌ಗಳ ಕ್ಯಾಬಿನ್ ಅನ್ನೇ ಹೋಲುತ್ತದೆ. ಒಳಗೆ ಇದು ವೇರಿಯೆಂಟ್ ವಿಶಿಷ್ಟ ಅಕ್ಷರಗಳೊಂದಿಗೆ ವಿಭಿನ್ನ ಬಣ್ಣದ ಸ್ಕೀಮ್ ಹೊಂದಿರಬಹುದು ಆದರೆ, ಫೀಚರ್‌ಗಳು ಮತ್ತು ಸೌಕರ್ಯಗಳು ಹಾಗೆಯೇ ಉಳಿದಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಈ 7 ಕಾರುಗಳು ಫ್ಯಾಕ್ಟರಿಯಿಂದಲೇ ಮ್ಯಾಟ್ ಕಲರ್ ಆಯ್ಕೆಗಳನ್ನು ಪಡೆದಿವೆ!
GT ವೇರಿಯೆಂಟ್‌ಗಳನ್ನು ಆಧರಿಸಿ ಇದು10.1-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, 8-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟಡ್ ಫ್ರಂಟ್ ಸೀಟುಗಳು, 6 ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಕ್ಯಾಮರಾವನ್ನು ಪಡೆದಿರುತ್ತದೆ.
ಇಂಜಿನ್ ವಿವರಗಳು
ಫೋಕ್ಸ್‌ವಾಗನ್ ಟೈಗನ್‌ನ GT ವೇರಿಯೆಂಟ್‌ಗಳು 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ಬರುತ್ತದೆ. ಈ ಯೂನಿಟ್ 150PS ಮತ್ತು 250Nm ಅನ್ನು ಉತ್ಪಾದಿಸುತ್ತದೆ ಹಾಗೂ ಇದನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್)ಗೆ ಜೋಡಿಸಲಾಗಿದೆ.
ಬೆಲೆ
ಫೋಕ್ಸ್‌ವಾಗನ್‌ನ GT ವೇರಿಯೆಂಟ್‌ಗಳ ಬೆಲೆಯನ್ನು ರೂ 16.30 ಲಕ್ಷದಿಂದ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದ್ದು ಟೈಗನ್‌ನ ಇತರ ವಿಶೇಷ ಎಡಿಷನ್‌ಗಳಿಗೆ ಹೋಲಿಸಿದರೆ, ಈ ಟ್ರಯಲ್ ಎಡಿಷನ್ ಅಂದಾಜು ರೂ 50,000ಕ್ಕಿಂತಲೂ ಹೆಚ್ಚು ದುಬಾರಿಯಾಗಿರಬುಹುದು.
ಇನ್ನಷ್ಟು ಓದಿ : ಟೈಗನ್ ಆಟೋಮ್ಯಾಟಿಕ್