• English
  • Login / Register

ಹೊಸ ಹ್ಯಾಚ್‌ಬ್ಯಾಕ್ 2024ರ Maruti Swift ನಲ್ಲಿ ನಿಖರವಾಗಿ ಎಷ್ಟು ಲಗೇಜ್ ಅನ್ನು ಸಾಗಿಸಬಹುದು ಎಂಬುವುದರ ವಿಡಿಯೋ ಇಲ್ಲಿದೆ

ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 22, 2024 04:26 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಸ್ವಿಫ್ಟ್‌ನ 265 ಲೀಟರ್ ಬೂಟ್ ಸ್ಪೇಸ್ (ಬ್ರೋಷರ್‌ನಲ್ಲಿ ತಿಳಿಸಿದಂತೆ) ಹೆಚ್ಚು ಅನಿಸದೇ ಇರಬಹುದು ಆದರೆ ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಬ್ಯಾಗ್‌ಗಳನ್ನು ಇದು ಒಯ್ಯಬಲ್ಲದು

2024 Maruti Swift: how much luggage can it carry in the real world?

ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಮೊಡೆಲ್‌ಗಳಲ್ಲಿ ಒಂದಾದ ಮಾರುತಿ ಸ್ವಿಫ್ಟ್ ಅನ್ನು ಇತ್ತೀಚೆಗೆ ಅದರ ನಾಲ್ಕನೇ ತಲೆಮಾರಿನ ಅವತಾರದಲ್ಲಿ ಬಿಡುಗಡೆ ಮಾಡಲಾಯಿತು. ಇತ್ತೀಚಿಗೆ ನಾವು ಅದರ ಕುರಿತು ವಿವರವಾಗಿ ತಿಳಿಯಲು ಅವಕಾಶವನ್ನು ಪಡೆದಿದ್ದೇವು ಮತ್ತು ಹೊಸ ಹ್ಯಾಚ್‌ಬ್ಯಾಕ್‌ನ ನಮ್ಮ ಮೊದಲ ಮೌಲ್ಯಮಾಪನದ ಸಮಯದಲ್ಲಿ, ವಾಸ್ತವದಲ್ಲಿ ಅದರ ಬೂಟ್ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೆಳಗಿನ ನಮ್ಮ ಇತ್ತೀಚಿನ Instagram ರೀಲ್‌ಗಳಲ್ಲಿ ನೀವು ಇದನ್ನು ತಿಳಿದುಕೊಳ್ಳಬಹುದು:

A post shared by CarDekho India (@cardekhoindia)

ಹೊಸ ಸ್ವಿಫ್ಟ್ ಆಫರ್‌ನಲ್ಲಿ 265 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಈ ರೀಲ್‌ನಲ್ಲಿ ತೋರಿಸಿರುವಂತೆ, ಕುಟುಂಬದ ವೀಕೆಂಡ್‌ನ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗೆ ಇದು ವಿಶಾಲವಾಗಿದೆ. ಮೂರು ಸಣ್ಣ ಗಾತ್ರದ ಟ್ರಾಲಿ ಸೂಟ್‌ಕೇಸ್‌ಗಳು, ಒಂದೆರಡು ಸಣ್ಣ ಬ್ಯಾಗ್‌ಗಳು ಮತ್ತು ಲ್ಯಾಪ್‌ಟಾಪ್ ಬ್ಯಾಗ್ ಅನ್ನು ಇಡಲು ಇದು ಸಾಕಾಗುತ್ತದೆ, ಆದರೆ ನೀವು ಟ್ರಾಲಿ ಸೂಟ್‌ಕೇಸ್‌ಗಳನ್ನು ಲಂಬವಾಗಿ ಜೋಡಿಸಬೇಕಾಗುತ್ತದೆ. ನೀವು ಹ್ಯಾಚ್‌ಬ್ಯಾಕ್‌ನ Zxi ಮತ್ತು Zxi ಪ್ಲಸ್ ಟ್ರಿಮ್‌ಗಳಲ್ಲಿ ಯಾವುದಾದರೂ ಒಂದನ್ನು ಆರಿಸಿದರೆ, ಲಗೇಜ್‌ಗೆ ಹೆಚ್ಚಿನ ಸ್ಥಳಾವಕಾಶವನ್ನು ಪಡೆಯಲು 60:40 ಅನುಪಾತದಲ್ಲಿ ಹಿಂದಿನ ಸೀಟ್‌ಗಳನ್ನು ಮಡಚುವ ಆಯ್ಕೆಯೂ ಇದೆ.

ಇದನ್ನು ಸಹ ಓದಿ: ಈ 8 ಚಿತ್ರಗಳಲ್ಲಿ ಹೊಸ Maruti Swift Vxi (ಒಪ್ಶನಲ್‌) ಆವೃತ್ತಿಯ ವಿವರಗಳು

2024ರ ಮಾರುತಿ ಸ್ವಿಫ್ಟ್‌ನ ಕುರಿತು 

2024 Maruti Swift

ಸ್ವಿಫ್ಟ್ ಪೀಳಿಗೆಯ ಬದಲಾವಣೆಗೆ ಒಳಗಾಗಿದ್ದರೂ, ಅದರ ವಿನ್ಯಾಸವು ಮೂರನೇ-ಜನ್ ಮೊಡೆಲ್‌ನ ವಿನ್ಯಾಸದ ವಿಕಸನದಂತಿದೆ, ಇದು ತೀಕ್ಷ್ಣವಾದ ಮತ್ತು ಹೆಚ್ಚು ಆಧುನಿಕ ನೋಟವನ್ನು ನೀಡುತ್ತದೆ. ಇದು LXi, VXi, VXi (O), ZXi, ಮತ್ತು ZXi Plus ಎಂಬ ಐದು ಆವೃತ್ತಿಗಳಲ್ಲಿ ಲಭ್ಯವಿದೆ.

2024 Maruti Swift 9-inch touchscreen

2024 ಸ್ವಿಫ್ಟ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್ ಯುನಿಟ್‌, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಹಿಂಬದಿಯ ವೆಂಟ್ಸ್‌ನೊಂದಿಗೆ ಆಟೋ ಎಸಿ. ಹಾಗೆಯೇ ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ರಿವರ್ಸಿಂಗ್ ಕ್ಯಾಮೆರಾದಿಂದ ನೋಡಿಕೊಳ್ಳಲಾಗುತ್ತದೆ.

ಮಾರುತಿ ಹೊಸ ಸ್ವಿಫ್ಟ್ ಅನ್ನು ತಾಜಾ 1.2-ಲೀಟರ್, 3-ಸಿಲಿಂಡರ್ Z ಸರಣಿಯ ಪೆಟ್ರೋಲ್ ಎಂಜಿನ್ (82 PS/112 Nm) ನೊಂದಿಗೆ ನೀಡುತ್ತಿದೆ. ಇದು 5-ಸ್ಪೀಡ್‌ನ ಮ್ಯಾನುಯಲ್‌ ಮತ್ತು AMT ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಬರುತ್ತದೆ. ಸದ್ಯಕ್ಕೆ ಯಾವುದೇ ಸಿಎನ್‌ಜಿ ಆಯ್ಕೆ ಇಲ್ಲದಿದ್ದರೂ, ನಂತರದ ದಿನಗಳಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

 ದೆಹಲಿಯಲ್ಲಿ ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್‌ನ ಪರಿಚಯಾತ್ಮಕ ಬೆಲೆ 6.49 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರಲಿದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ರೆನಾಲ್ಟ್ ಟ್ರೈಬರ್ ಕ್ರಾಸ್‌ಒವರ್ ಎಮ್‌ಪಿವಿ ಮತ್ತು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಮೈಕ್ರೋ ಎಸ್‌ಯುವಿಗಳಿಗೆ ಪರ್ಯಾಯವಾಗಿದೆ.

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸ್ವಿಫ್ಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience