ಸೆಪ್ಟೆಂಬರ್ 15ರಿಂದ Citroen C3 Aircross ನ ಬುಕಿಂಗ್ ಆರಂಭ
ಈ ಫ್ರೆಂಚ್ ಸಂಸ್ಥೆಯು ಕಾಂಪ್ಯಾಕ್ಟ್ SUV ವಾಹನವನ್ನು ಅಕ್ಟೋಬರ್ ತಿಂಗಳಿನಿಂದ ಬಿಡುಗಡೆ ಮಾಡಲಿದೆ
- ಇದು 5 ಮತ್ತು 7 ಸೀಟರ್ ವಾಹನವಾಗಿ ಲಭ್ಯ.
- 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ನೊಂದಿಗೆ 110PS, 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆಯಲಿದೆ.
- 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್, 7 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ ಮತ್ತು ಮ್ಯಾನುವಲ್ AC ಮುಂತಾದ ವಿಶೇಷತೆಗಳನ್ನು ಹೊಂದಿರಲಿದೆ.
- ಇದು ಸುಮಾರು ರೂ. 9 ಲಕ್ಷಕ್ಕೆ (ಎಕ್ಸ್ - ಶೋರೂಂ) ದೊರೆಯುವ ಸಾಧ್ಯತೆ ಇದೆ.
ಸಿಟ್ರನ್ C3 ಏರ್ ಕ್ರಾಸ್ ಕಾರನ್ನು 2023ರ ಏಪ್ರಿಲ್ ತಿಂಗಳಿನಲ್ಲಿ ಅನಾವರಣಗೊಳಿಸಲಾಗಿದ್ದು, ಫ್ರೆಂಚ್ ತಯಾರಕ ಸಂಸ್ಥೆಯ ತೀರಾ ಇತ್ತೀಚಿನ ಸ್ಥಳೀಯ ಕಾರು ಇದಾಗಿದೆ. C3 ಏರ್ ಕ್ರಾಸ್ ವಾಹನದ ಬೆಲೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಘೋಷಿಸಲಾಗುವುದು. ನೀವು ಈ ಕಾಂಪಾಕ್ಟ್ SUV ವಾಹನದಲ್ಲಿ ಆಸಕ್ತರಾಗಿದ್ದರೆ ಸೆಪ್ಟೆಂಬರ್ 15ರಿಂದ ಇದನ್ನು ಬುಕ್ ಮಾಡಬಹುದು. C3 ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.
ವಿನ್ಯಾಸ
C3 ಏರ್ ಕ್ರಾಸ್ ವಾಹನವು C3 ಹ್ಯಾಚ್ ಬ್ಯಾಕ್ ಕಾರಿನ ವಿಸ್ತರಿತ ಮಾದರಿಯಂತೆ ಕಾಣಿಸಿಕೊಳ್ಳುತ್ತದೆ. ಇದು ಹೆಡ್ ಲೈಟ್ ಗಳನ್ನು ಹೊಂದಿರುವ ಹೊಳೆಯುವ LED DRL ಗಳೊಂದಿಗೆ ಅದೇ ವಾಹನವನ್ನು ಹೋಲುವ ಆಕರ್ಷಕ ಶೈಲಿಯ ಅಪ್ ಫ್ರಂಟ್ ಅನ್ನು ಹೊಂದಿದೆ. ಇದು ಸ್ಕಿಡ್ ಪ್ಲೇಟ್ ನೊಂದಿಗೆ ತೆಳುವಾದ ಬಂಪರ್ ಅನ್ನು ಹೊಂದಿದ್ದು, ಎರಡೂ ಬಾಗಿಲುಗಳನ್ನು ಆವರಿಸಿದೆ. ಅಲ್ಲದೆ C ಆಕಾರದ ಟೇಲ್ ಲೈಟ್ ಗಳು ಮತ್ತು ದೊಡ್ಡದಾದ ಬಂಪರ್ ಜೊತೆಗೆ ದೃಢವಾದ ಹಿಂಬದಿಯನ್ನು ಹೊಂದಿದೆ.
ಒಳಗಡೆಯ ಕ್ಯಾಬಿನ್ C3 ಯಂತೆಯೇ ಕಂಡರೂ ಇಲ್ಲಿಯೂ ಸಹ ಒಂದಷ್ಟು ಹೊಸತವನ್ನು ತರಲಾಗಿದೆ. ಈ ಕ್ಯಾಬಿನ್ ಅನ್ನು ಕಪ್ಪು ಮತ್ತು ನಸು ಹಳದಿಕಂದು ಬಣ್ಣದೊಂದಿಗೆ ಬರಲಿದ್ದು, ಎ.ಸಿ ಎಂಟ್ ಮತ್ತು ಡ್ಯಾಶ್ ಬೋರ್ಡ್ ಲೇಔಟ್ ನ ವಿನ್ಯಾಸವು ಹ್ಯಾಚ್ ಬ್ಯಾಕ್ ನಂತೆಯೇ ಇರಲಿದೆ.
ಗುಣಲಕ್ಷಣಗಳು ಮತ್ತು ಸುರಕ್ಷತೆ
C3 ಏರ್ ಕ್ರಾಸ್ ಕಾರು ವೈರ್ ಲೆಸ್ ಆಂಡ್ರಾಯ್ಸ್ ಅಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ರೂಫ್ ಮೌಂಟೆಡ್ ರಿಯರ್ AC ವೆಂಟ್ ಗಳೊಂದಿಗೆ ಮ್ಯಾನುವಲ್ ಕ್ಲೈಮೇಟ್ ಕಂಟ್ರೋಲ್, ಮತ್ತು ಐದು ವೇಗದ ಚಾರ್ಜಿಂಗ್ ಪಾಯಿಂಟುಗಳನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಸಿಟ್ರಾನ್ C5 ಏರ್ ಕ್ರಾಸ್ ಫೀಲ್ ಹೇಗೆ ಕಾಣಿಸುತ್ತದೆ ನೋಡಿ
ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೇಳುವುದಾದರೆ ಇದು ಡ್ಯುವಲ್ ಫ್ರಂಟ್ ಏರ್ ಬ್ಯಾಗ್ ಗಳು, EBD ಜೊತೆಗೆ ABS, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ರಿಯರ್ ಪಾರ್ಕಿಂಗ್ ಸಿಸ್ಟಂಗಳನ್ನು ಹೊಂದಿದೆ.
ಪವರ್ ಟ್ರೇನ್
ಇದು ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ: ಅದೆಂದರೆ 110PS ಮತ್ತು 190Nm ಉಂಟು ಮಾಡುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್. ಈ ಘಟಕವನ್ನು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ನೊಂದಿಗೆ ಹೊಂದಿಸಲಾಗಿದ್ದು, 18.5kmpl ನಷ್ಟು ಇಂಧನ ದಕ್ಷತೆ ಹೊಂದಿದೆ ಎಂದು ಈ ವಾಹನ ತಯಾರಕ ಸಂಸ್ಥೆಯು ಹೇಳಿಕೊಂಡಿದೆ.. C3 ಏರ್ ಕ್ರಾಸ್ ವಾಹನವು ಬಿಡುಗಡೆಯ ವೇಳೆಗೆ ಅಟೊಮ್ಯಾಟಿಕ್ ಟ್ರಾನ್ಸ್ ಮಿಶನ್ ಅನ್ನು ಒದಗಿಸುವುದಿಲ್ಲ. ಆದರೆ ನಂತರದ ದಿನಗಳಲ್ಲಿ ಈ ಆಯ್ಕೆಯು ಸಹ ಲಭಿಸಲಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸಿಟ್ರನ್ C3 ಏರ್ ಕ್ರಾಸ್ ವಾಹನವು ಅಕ್ಟೋಬರ್ ತಿಂಗಳಿನಲ್ಲಿ ರಸ್ತೆಗಿಳಿಯಲಿದ್ದು, ಆರಂಭಿಕ ಬೆಲೆಯು ರೂ. 9 ಲಕ್ಷ (ಎಕ್ಸ್-ಶೋರೂಂ) ಆಗಿರಲಿದೆ. ಈ ಕಾಂಪ್ಯಾಕ್ಟ್ SUV ವಾಹನವು ಹ್ಯುಂಡೈ ಕ್ರೆಟ, ಕಿಯಾ ಸೆಲ್ಟೊಸ್, ಮಾರುತಿ ಗ್ರಾಂಡ್ ವಿಟಾರ, ಟೊಯೊಟಾ ಹೈರೈಡರ್, ಮತ್ತು ಹೋಂಡಾ ಎಲೆವೇಟ್ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: C3 ಆನ್ ರೋಡ್ ಬೆಲೆ