ನೀವು 2024ರ Hyundai Cretaವನ್ನು ಈ 7 ಕಲರ್ ಗಳಲ್ಲಿ ಖರೀದಿಸಬಹುದು..!
ಹುಂಡೈ ಕ್ರೆಟಾ ಗಾಗಿ ansh ಮೂಲಕ ಜನವರಿ 18, 2024 10:42 am ರಂದು ಪ್ರಕಟಿಸಲಾಗಿದೆ
- 134 Views
- ಕಾಮೆಂಟ್ ಅನ್ನು ಬರೆಯಿರಿ
ಇದು 6 ಮೊನೊಟೋನ್ ಮತ್ತು 1 ಡ್ಯುಯಲ್-ಟೋನ್ ಶೇಡ್ ನಲ್ಲಿ ಲಭ್ಯವಿದೆ, ಫಾಯರಿ ರೆಡ್ ಶೇಡ್ ವಾಪಾಸ್ ಬಂದಿದೆ
2024ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಮತ್ತು ಇದು ಹೊಚ್ಚ ಹೊಸ ಡಿಸೈನ್, ಹೊಸ ಕ್ಯಾಬಿನ್ ಮತ್ತು ಹೊಸ ಫೀಚರ್ ಗಳೊಂದಿಗೆ ಬಂದಿದೆ. ಈ ಕಾಂಪ್ಯಾಕ್ಟ್ SUV ಗಾಗಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ ಮತ್ತು ಈಗ ಪರಿಚಯಾತ್ಮಕ ಬೆಲೆಗಳು ಕೂಡ ಅನ್ವಯವಾಗುತ್ತವೆ. ಇದರ ಬೆಲೆಯು ರೂ 11 ಲಕ್ಷದಿಂದ ಪ್ರಾರಂಭವಾಗುತ್ತದೆ (ಭಾರತದಾದ್ಯಂತ ಎಕ್ಸ್ ಶೋರೂಂ). ಹ್ಯುಂಡೈ ಕಾಂಪ್ಯಾಕ್ಟ್ SUVಯ ಕಲರ್ ಆಯ್ಕೆಗಳನ್ನು ಕೂಡ ಬದಲಾಯಿಸಲಾಗಿದೆ ಮತ್ತು ನೀವು ಹೊಸ ಕ್ರೆಟಾವನ್ನು ಖರೀದಿಸಲು ನೋಡುತ್ತಿದ್ದರೆ, ಯಾವ ಕಲರ್ ಅನ್ನು ಆಯ್ಕೆ ಮಾಡಬೇಕು ಎಂದು ಪರಿಶೀಲಿಸಿ.
ಅಟ್ಲಾಸ್ ವೈಟ್
ಅಬಿಸ್ ಬ್ಲಾಕ್ ಪರ್ಲ್
ಫಾಯರಿ ರೆಡ್
ರೇಂಜರ್ ಖಾಕಿ
ರೋಬಸ್ಟ್ ಎಮರಾಲ್ಡ್ ಪರ್ಲ್ (ಹೊಸ)
ಟೈಟಾನ್ ಗ್ರೇ
ಅಟ್ಲಾಸ್ ವೈಟ್ + ಅಬಿಸ್ ಬ್ಲ್ಯಾಕ್
ಮೇಲೆ ತಿಳಿಸಿದಂತೆ ಹೊಸ ಕ್ರೆಟಾವು 7 ಕಲರ್ ಗಳಲ್ಲಿ ಸಿಗುತ್ತದೆ - 6 ಮೊನೊಟೋನ್ ಮತ್ತು 1 ಡ್ಯುಯಲ್-ಟೋನ್. ಪ್ರೀ ಫೇಸ್‌ಲಿಫ್ಟ್ ವರ್ಷನ್ ನೊಂದಿಗೆ ನೀಡಲಾಗುತ್ತಿದ್ದ ಡೆನಿಮ್ ಬ್ಲೂ, ನೈಟ್ ಬ್ಲ್ಯಾಕ್ ಮತ್ತು ಟೈಫೂನ್ ಸಿಲ್ವರ್‌ನಂತಹ ಕಲರ್ ಗಳು ಈಗ ಲಭ್ಯವಿಲ್ಲ. ಹೊಸ ಹುಂಡೈ ಕ್ರೆಟಾ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ.
ಪವರ್‌ಟ್ರೇನ್
ಹ್ಯುಂಡೈ ತನ್ನ ಸ್ಥಗಿತಗೊಂಡಿರುವ ಹಳೆ ವರ್ಷನ್ ನ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಉಳಿಸಿಕೊಂಡಿದೆ. ಪೆಟ್ರೋಲ್ ಯೂನಿಟ್ 115 PS ಮತ್ತು 144 Nm ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು CVT ಆಟೋಮ್ಯಾಟಿಕ್ ಜೊತೆಗೆ ಬರುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ 116 PS ಮತ್ತು 250 Nm ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಇದನ್ನು ಕೂಡ ಓದಿ: ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ವರ್ಸಸ್ ಇಂಟರ್ನ್ಯಾಷನಲ್ ಕ್ರೆಟಾ ಫೇಸ್‌ಲಿಫ್ಟ್: ಏನೇನು ವ್ಯತ್ಯಾಸಗಳಿವೆ?
ಅದರ ಹಿಂದಿನ ವರ್ಷನ್ ನಲ್ಲಿ, ಹ್ಯುಂಡೈ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ನೀಡಿತ್ತು, ಆದರೆ ಅದು ಸ್ವಲ್ಪ ಸಮಯದ ಹಿಂದೆ ಸ್ಥಗಿತಗೊಂಡಿದೆ. ಈಗ, ಹ್ಯುಂಡೈ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಫೇಸ್‌ಲಿಫ್ಟ್ ಆಗಿರುವ ಕ್ರೆಟಾವನ್ನು ನೀಡುತ್ತಿದೆ, ಇದನ್ನು 7-ಸ್ಪೀಡ್ DCTಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಯೂನಿಟ್ 160 PS ಮತ್ತು 253 Nm ಅನ್ನು ಉತ್ಪಾದಿಸುತ್ತದೆ ಮತ್ತು ಈ ಸೆಗ್ಮೆಂಟ್ ನಲ್ಲಿ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಪಡೆಯುವ ಮೂಲಕ ಕಿಯಾ ಸೆಲ್ಟೋಸ್‌ಗೆ ಸಮಾನವಾಗಿದೆ.
ಫೀಚರ್ ಗಳು ಮತ್ತು ಸುರಕ್ಷತೆ
ಹೊಸ ಹ್ಯುಂಡೈ ಕ್ರೆಟಾ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ (ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಮತ್ತು ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ), ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಮತ್ತು ಪನೋರಮಿಕ್ ಸನ್‌ರೂಫ್ ನೊಂದಿಗೆ ಬರುತ್ತದೆ.
ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲ್ಲಾ ವೀಲ್ ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ADAS (ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ಫೀಚರ್ ಗಳನ್ನು ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ಹ್ಯುಂಡೈ ಕ್ರೆಟಾದ ಬೆಲೆಯು ರೂ 11 ಲಕ್ಷದಿಂದ ಶುರುವಾಗಿ ರೂ 20 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ) ಇದೆ, ಮತ್ತು ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಹೋಂಡಾ ಎಲಿವೇಟ್, ಸಿಟ್ರೊಯೆನ್ C3 ಏರ್ ಕ್ರಾಸ್ ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ 2024 ಆನ್ ರೋಡ್ ಬೆಲೆ