Login or Register ಅತ್ಯುತ್ತಮ CarDekho experience ಗೆ
Login

ಸಿಟ್ರೋನ್ C3 ಏರ್‌ಕ್ರಾಸ್ ಆಟೋಮ್ಯಾಟಿಕ್ ಅನ್ನು ನೀವು ಈಗ ಕೆಲವು ಡೀಲರ್‌ಶಿಪ್‌ಗಳಲ್ಲಿ ಕಾಯ್ದಿರಿಸಬಹುದು

ಸಿಟ್ರೊನ್ aircross ಗಾಗಿ shreyash ಮೂಲಕ ಜನವರಿ 16, 2024 06:50 pm ರಂದು ಪ್ರಕಟಿಸಲಾಗಿದೆ

ಸಿಟ್ರೋನ್ C3 ಏರ್‌ಕ್ರಾಸ್‌ನ ಆಟೋಮ್ಯಾಟಿಕ್ ವೇರಿಯಂಟ್ ಜನವರಿ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

  • ಸಿಟ್ರೋನ್ C3 ಏರ್‌ಕ್ರಾಸ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ.

  • ಸಿಟ್ರೋನ್ ನ ಕಾಂಪ್ಯಾಕ್ಟ್ SUV, 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ (110 PS / 190 Nm) ಮಾತ್ರ ಬರುತ್ತದೆ.

  • ಸದ್ಯಕ್ಕೆ, ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತದೆ.

  • C3 ಏರ್‌ಕ್ರಾಸ್‌ನ ಆಟೋಮ್ಯಾಟಿಕ್ ವೇರಿಯಂಟ್ ಗಳು ಅದರ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ವೇರಿಯಂಟ್ ಗಳಿಗಿಂತ ರೂ 1.3 ಲಕ್ಷದವರೆಗಿನ ಪ್ರೀಮಿಯಂ ಅನ್ನು ಪಡೆಯುವ ನಿರೀಕ್ಷೆಯಿದೆ.

ಸಿಟ್ರೋನ್ C3 ಏರ್‌ಕ್ರಾಸ್ ಅನ್ನು ಭಾರತದಲ್ಲಿ ಸೆಪ್ಟೆಂಬರ್ 2023 ರಲ್ಲಿ ಸಿಂಗಲ್ ಪವರ್‌ಟ್ರೇನ್‌ನೊಂದಿಗೆ ಮಾರುಕಟ್ಟೆಗೆ ತರಲಾಯಿತು ಮತ್ತು ಇದರ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈಗ 2024 ರಲ್ಲಿ, ಈ ಫ್ರೆಂಚ್ ವಾಹನ ತಯಾರಕರು C3 ಏರ್‌ಕ್ರಾಸ್‌ಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪರಿಚಯಿಸುತ್ತಿದ್ದಾರೆ. ನೀವು ಈ ಥ್ರೀ-ರೋ ಕಾಂಪ್ಯಾಕ್ಟ್ SUV ಅನ್ನು ಖರೀದಿಸಲು ಆಸಕ್ತರಾಗಿದ್ದರೆ, ಕೆಲವು ಸಿಟ್ರೋನ್ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡುವ ಮೂಲಕ ಆಫ್‌ಲೈನ್‌ನಲ್ಲಿ ಕಾಯ್ದಿರಿಸಬಹುದು.

ಆಟೋಮ್ಯಾಟಿಕ್ ನ ಪ್ರಕಾರ

ಸಿಟ್ರೋನ್ ತನ್ನ C3 ಏರ್‌ಕ್ರಾಸ್‌ಗೆ ನೀಡಲಿರುವ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪ್ರಕಾರವನ್ನು ಇನ್ನೂ ದೃಢೀಕರಿಸಿಲ್ಲ, ಮತ್ತು ಇದು ವಿವಿಧ ಜಾಗತಿಕ ಮಾರುಕಟ್ಟೆಗಳಲ್ಲಿ ವಿಭಿನ್ನ ಆಯ್ಕೆಗಳನ್ನು ಪಡೆಯುತ್ತದೆ. ಊಹಾಪೋಹಗಳ ಆಧಾರದ ಮೇಲೆ ಹೇಳುವುದಾದರೆ, C3 ಏರ್‌ಕ್ರಾಸ್ ಅದರ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 190 Nm) ಜೊತೆಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಪಡೆಯಲಿದೆ. ಪ್ರಸ್ತುತ, ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತಿದೆ.

ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ

ಫೀಚರ್ ಗಳು ಮತ್ತು ಸುರಕ್ಷತೆ

ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನ ಸಿಟ್ರೋನ್ C3 ಏರ್‌ಕ್ರಾಸ್‌ನ ಫೀಚರ್ ಗಳಲ್ಲಿ ನಾವು ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸುತ್ತಿಲ್ಲ. ಪ್ರಸ್ತುತ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. SUVಯು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಮೂರನೇ ಸಾಲಿನ ಸೀಟ್ ಗೆ ಕೂಡ ನೀಡಲಾಗಿರುವ ವೆಂಟ್ ನೊಂದಿಗೆ ಮ್ಯಾನುಯಲ್ ಎಸಿಯನ್ನು ಕೂಡ ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಗಳನ್ನು ನೀಡಲಾಗಿದೆ.

ಇದನ್ನು ಕೂಡ ಓದಿ: ಎಕ್ಸ್‌ಕ್ಲೂಸಿವ್: ಟಾಟಾ ಪಂಚ್ EV ಬ್ಯಾಟರಿ ಮತ್ತು ಕಾರ್ಯಕ್ಷಮತೆಯ ವಿವರಗಳು ಅದರ ಬಿಡುಗಡೆಗೆ ಮುಂಚೆ ಲೀಕ್ ಆಗಿದೆ

  • ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ

  • ಉಪಯೋಗಿಸಿದ ಕಾರಿನ ಮೌಲ್ಯಮಾಪನ.

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸಿಟ್ರೋನ್ C3 ಏರ್‌ಕ್ರಾಸ್‌ನ ಆಟೋಮ್ಯಾಟಿಕ್ ವೇರಿಯಂಟ್ ಗಳು ಅದರ ಮ್ಯಾನುವಲ್ ವೇರಿಯಂಟ್ ಗಳಿಗಿಂತ ರೂ 1.3 ಲಕ್ಷದವರೆಗಿನ ಹೆಚ್ಚು ಪ್ರೀಮಿಯಂ ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ, C3 ಏರ್‌ಕ್ರಾಸ್‌ನ ಬೆಲೆಗಳು ರೂ 9.99 ಲಕ್ಷದಿಂದ ಶುರುವಾಗಿ ರೂ 12.75 ಲಕ್ಷದವರೆಗೆ (ಎಕ್ಸ್-ಶೋರೂಮ್ ಭಾರತದಾದ್ಯಂತ) ಇದೆ. ಇದು ಹೋಂಡಾ ಎಲಿವೇಟ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು MG ಆಸ್ಟರ್ ಮುಂತಾದ ಕಾರುಗಳ ಜೊತೆಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಸಿಟ್ರೋನ್ C3 ಏರ್‌ಕ್ರಾಸ್‌ನ ಆನ್ ರೋಡ್ ಬೆಲೆ

Share via

Write your Comment on Citroen aircross

R
rk chauhan
Jan 22, 2024, 2:56:37 PM

How much price of automatic c3 Air cross

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ