ಎಂಜಿ ಹೆಕ್ಟರ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1451 ಸಿಸಿ - 1956 ಸಿಸಿ |
ಪವರ್ | 141.04 - 167.67 ಬಿಹೆಚ್ ಪಿ |
ಟಾರ್ಕ್ | 250 Nm - 350 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 15.58 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- ambient lighting
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್ಗಳು
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್‌ರೂಫ್
- adas
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಹೆಕ್ಟರ್ ಇತ್ತೀಚಿನ ಅಪ್ಡೇಟ್
ಎಂಜಿ ಹೆಕ್ಟರ್‌ನ ಬೆಲೆ ಎಷ್ಟು?
ದೆಹಲಿಯಲ್ಲಿ ಎಂಜಿ ಹೆಕ್ಟರ್‌ನ ಎಕ್ಸ್ ಶೋರೂಂ ಬೆಲೆ 13.99 ಲಕ್ಷ ರೂ.ನಿಂದ 22.24 ಲಕ್ಷ ರೂ.ವರೆಗೆ ಇದೆ. ).
ಎಂಜಿ ಹೆಕ್ಟರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?
ಎಮ್‌ಜಿ ಹೆಕ್ಟರ್ ಸ್ಟೈಲ್, ಶೈನ್ ಪ್ರೊ, ಸೆಲೆಕ್ಟ್ ಪ್ರೊ, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ಆರು ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಎಮ್‌ಜಿಗೆ 100-ವರ್ಷ ಪೂರೈಸಿರುವ ವಿಶೇಷವಾಗಿ, ಹೆಕ್ಟರ್ ಶಾರ್ಪ್ ಪ್ರೊ ವೇರಿಯೆಂಟ್ ಆನ್ನು ಆಧರಿಸಿ 100-ಇಯರ್ ಸ್ಪೆಷಲ್ ಎಡಿಷನ್ ಅನ್ನು ಸಹ ಪರಿಚಯಿಸಲಾಗಿದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಯಾವುದು ?
ನೀವು ಸೀಮಿತ ಬಜೆಟ್‌ನಲ್ಲಿದ್ದರೆ ಬೇಸ್ ವೇರಿಯಂಟ್‌ನ ಮೇಲಿರುವ ಶೈನ್ ಪ್ರೊ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಎಲ್ಇಡಿ ಲೈಟಿಂಗ್ ಸೆಟಪ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 6-ಸ್ಪೀಕರ್‌ಗಳ ಸಿಸ್ಟಮ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಫೀಚರ್‌ಗಳ ಸಾಲಿಡ್ ಪಟ್ಟಿಯನ್ನು ಹೊಂದಿದೆ. ಮತ್ತೊಂದೆಡೆ, ಸೆಲೆಕ್ಟ್ ಪ್ರೊ ನಮ್ಮ ಪ್ರಕಾರ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ಆವೃತ್ತಿಯಾಗಿದೆ, ಏಕೆಂದರೆ ಇದು ಕನೆಕ್ಟೆಡ್ ಫೀಚರ್‌ಗಳು, 8-ಸ್ಪೀಕರ್ ಸೆಟಪ್ ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ನೀಡುತ್ತದೆ. ಆದರೆ ಇದು ADAS, ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ಸುರಕ್ಷತೆ ಮತ್ತು ಸೌಕರ್ಯದ ಫೀಚರ್‌ಗಳನ್ನು ನೀಡುವುದಿಲ್ಲ.
ಎಂಜಿ ಹೆಕ್ಟರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
MG ಹೆಕ್ಟರ್ ಆಟೋ-ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು ದೊಡ್ಡ ಪನರೋಮಿಕ್ ಸನ್‌ರೂಫ್‌ನಂತಹ ಪ್ರಭಾವಶಾಲಿ ರೇಂಜ್‌ನ ಫೀಚರ್‌ಗಳೊಂದಿಗೆ ಬರುತ್ತದೆ.
ಒಳಭಾಗದಲ್ಲಿ, ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ. ಚಾಲಕನು 6-ವೇ ಚಾಲಿತ ಸೀಟನ್ನು ಪಡೆಯುತ್ತಾನೆ ಮತ್ತು ಮುಂಭಾಗದ ಪ್ರಯಾಣಿಕರು 4-ವೇ ಚಾಲಿತ ಸೀಟ್ ಅನ್ನು ಪಡೆಯುತ್ತಾರೆ. ಇತರ ಫೀಚರ್‌ಗಳೆಂದರೆ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಚಾಲಿತ ಟೈಲ್‌ಗೇಟ್. ಆಡಿಯೋ ಸಿಸ್ಟಮ್, ಟ್ವೀಟರ್‌ಗಳು ಸೇರಿದಂತೆ 8 ಸ್ಪೀಕರ್‌ಗಳನ್ನು ಒಳಗೊಂಡಿದೆ ಮತ್ತು ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ಸಹ ಒಳಗೊಂಡಿದೆ.
ಇದು ಎಷ್ಟು ವಿಶಾಲವಾಗಿದೆ?
ಹೆಕ್ಟರ್ ಐದು ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ, ಉದಾರವಾದ ಹೆಡ್‌ರೂಮ್, ಲೆಗ್‌ರೂಮ್, ಮೊಣಕಾಲು ಇಡುವಲ್ಲಿ ಜಾಗ ಮತ್ತು ತೊಡೆಯ ಕೆಳಭಾಗದ ಬೆಂಬಲವನ್ನು ನೀಡುತ್ತದೆ. ಇದರ ವಿಶಾಲವಾದ ಕ್ಯಾಬಿನ್ ಅನ್ನು ಬಿಳಿ ಕ್ಯಾಬಿನ್ ಥೀಮ್ ಮತ್ತು ದೊಡ್ಡ ಕಿಟಕಿಗಳಿಂದ ವರ್ಧಿಸಲಾಗಿದೆ. ಎಮ್‌ಜಿಯು ಅಧಿಕೃತ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಹೆಕ್ಟರ್ ನಿಮ್ಮ ಎಲ್ಲಾ ಲಗೇಜ್‌ಗಳಿಗೆ ದೊಡ್ಡ ಬೂಟ್ ಲೋಡಿಂಗ್ ಸಾಮರ್ಥ್ಯವನ್ನು ನೀಡುತ್ತದೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ನೀವು 6- ಮತ್ತು 7-ಸೀಟರ್ ವೇರಿಯೆಂಟ್ ಅನ್ನು ಸಹ ಆಯ್ಕೆ ಮಾಡಬಹುದು, ಅಂದರೆ ಹೆಕ್ಟರ್ ಪ್ಲಸ್.
ಯಾವ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದೆ?
ಹೆಕ್ಟರ್‌ಗೆ ಎರಡು ಎಂಜಿನ್‌ಗಳ ಆಯ್ಕೆಯನ್ನು ಒದಗಿಸಲಾಗಿದೆ:
-
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143 ಪಿಎಸ್/250 ಎನ್‌ಎಮ್)
-
2-ಲೀಟರ್ ಡೀಸೆಲ್ ಎಂಜಿನ್ (170 ಪಿಎಸ್/350 ಎನ್‌ಎಮ್).
ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ, ಆದರೆ ಪೆಟ್ರೋಲ್ ಎಂಜ್‌ನ್ ಅನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಸಹ ನೀಡಲಾಗುತ್ತದೆ.
ಎಂಜಿ ಹೆಕ್ಟರ್‌ನ ಮೈಲೇಜ್ ಎಷ್ಟು?
ಎಮ್‌ಜಿ ಹೆಕ್ಟರ್‌ನ ಅಧಿಕೃತ ಮೈಲೇಜ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ ಮತ್ತು ಎಮ್‌ಜಿಯ ಈ ಎಸ್‌ಯುವಿಯ ರಿಯಲ್ ಟೈಮ್‌ನ ಇಂಧನ ದಕ್ಷತೆಯನ್ನು ಪರೀಕ್ಷಿಸಲು ನಮಗೆ ಅವಕಾಶ ಸಿಕ್ಕಿಲ್ಲ.
ಎಂಜಿ ಹೆಕ್ಟರ್ ಎಷ್ಟು ಸುರಕ್ಷಿತವಾಗಿದೆ?
ಹೆಕ್ಟರ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಟಾಪ್-ಎಂಡ್ ಆವೃತ್ತಿಗಳು ಲೇನ್ ನಿರ್ಗಮನ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳೊಂದಿಗೆ (ADAS) ಸಜ್ಜುಗೊಂಡಿವೆ. ಆದರೆ, ಹೆಕ್ಟರ್ ಅನ್ನು ಭಾರತ್ ಎನ್‌ಸಿಎಪಿ ಇನ್ನೂ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿಲ್ಲ, ಆದ್ದರಿಂದ ಸುರಕ್ಷತೆಯ ರೇಟಿಂಗ್‌ಗಾಗಿ ನಾವು ಕಾಯುತ್ತಿದ್ದೇವೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಎಮ್‌ಜಿ ಹೆಕ್ಟರ್ ಆರು ಮೊನೊಟೋನ್ ಬಣ್ಣಗಳಲ್ಲಿ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಹವಾನಾ ಗ್ರೇ, ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್, ಡ್ಯೂನ್ ಬ್ರೌನ್, ಮತ್ತು ಡ್ಯುಯಲ್-ಟೋನ್ ವೈಟ್ & ಬ್ಲ್ಯಾಕ್. ಹೆಕ್ಟರ್‌ನ ಸ್ಪೇಷಲ್ ಎಡಿಷನ್ ಎವರ್‌ಗ್ರೀನ್ ಬಾಡಿ ಕಲರ್‌ನಲ್ಲಿ ಬರುತ್ತದೆ.
ನಾವು ವಿಶೇಷವಾಗಿ ಇಷ್ಟಪಟ್ಟ ಬಣ್ಣ: ಹೆಕ್ಟರ್ ಅದರ ಗ್ಲೇಜ್ ರೆಡ್ ಬಣ್ಣದ ಆಯ್ಕೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ, ಏಕೆಂದರೆ ಅದರ ಒಟ್ಟಾರೆ ಪ್ರೊಫೈಲ್ ಈ ಬಣ್ಣದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ನೀವು 2024 MG ಹೆಕ್ಟರ್ ಅನ್ನು ಖರೀದಿಸಬೇಕೇ?
MG ಹೆಕ್ಟರ್ ಉತ್ತಮ ರೋಡ್ ಪ್ರೆಸೆನ್ಸ್, ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್, ಉತ್ತಮ ಫೀಚರ್‌ಗಳ ಸೆಟ್, ಸಾಕಷ್ಟು ಬೂಟ್ ಸ್ಪೇಸ್ ಮತ್ತು ಸಾಲಿಡ್ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಇದು ನಿಮಗಾಗಿ ಅಥವಾ ಹಿಂಬದಿಯಲ್ಲಿ ಆರಾಮವಾಗಿ ಕುಳಿತು ಪ್ರಯಾಣಿಸಲು ಬಯಸುವವರಿಗೆ ಇದು ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ ಆಗಬಹುದು.
ನನ್ನ ಪರ್ಯಾಯಗಳು ಯಾವುವು?
ಎಮ್‌ಜಿಯು 6 ಮತ್ತು 7 ಸೀಟರ್ ಆಯ್ಕೆಗಳೊಂದಿಗೆ ಹೆಕ್ಟರ್ ಅನ್ನು ಸಹ ನೀಡುತ್ತದೆ, ಇದಕ್ಕಾಗಿ ನೀವು ಹೆಕ್ಟರ್ ಪ್ಲಸ್ ಅನ್ನು ಪರಿಶೀಲಿಸಬಹುದು. ಹೆಕ್ಟರ್ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ700 ನ 5-ಸೀಟರ್ ಆವೃತ್ತಿಗಳು ಮತ್ತು ಹ್ಯುಂಡೈ ಕ್ರೆಟಾ ಹಾಗು ಕಿಯಾ ಸೆಲ್ಟೋಸ್‌ನ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
- ಎಲ್ಲಾ
- ಡೀಸಲ್
- ಪೆಟ್ರೋಲ್
ಹೆಕ್ಟರ್ ಸ್ಟೈಲ್(ಬೇಸ್ ಮಾಡೆಲ್)1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹14 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶೈನ್ ಪ್ರೊ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹16.74 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶೈನ್ ಪ್ರೊ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 8.5 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹17.72 ಲಕ್ಷ* | ನೋಡಿ ಏಪ್ರಿಲ್ offer | |
ಅಗ್ರ ಮಾರಾಟ ಹೆಕ್ಟರ್ ಸೆಲೆಕ್ಟ್ ಪ್ರೊ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹18.08 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶೈನ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್, ಡೀಸಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹18.58 ಲಕ್ಷ* | ನೋಡಿ ಏಪ್ರಿಲ್ offer |
ಹೆಕ್ಟರ್ ಸ್ಮಾರ್ಟ್ ಪ್ರೊ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹19.06 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಸೆಲೆಕ್ಟ್ ಪ್ರೊ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹19.34 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಸೆಲೆಕ್ಟ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹19.62 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶಾರ್ಪ್ ಪ್ರೊ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹20.61 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಸ್ಮಾರ್ಟ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹20.61 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶಾರ್ಪ್ ಪ್ರೊ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹21.82 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ 100 ಇಯರ್ ಲಿಮಿಟೆಡ್ ಎಡಿಷನ್ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.02 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶಾರ್ಪ್ ಪ್ರೊ ಸ್ನೋಸ್ಟಾರ್ಮ್ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.14 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಬ್ಲ್ಯಾಕ್ ಸ್ಟಾರ್ಮ್ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.14 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶಾರ್ಪ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.25 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ 100 ಇಯರ್ ಲಿಮಿಟೆಡ್ ಎಡಿಷನ್ ಡೀಸೆಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.45 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಶಾರ್ಪ್ ಪ್ರೊ ಸ್ನೋಸ್ಟಾರ್ಮ್ ಡೀಸೆಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.57 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಬ್ಲ್ಯಾಕ್ ಸ್ಟಾರ್ಮ್ ಡೀಸೆಲ್1956 ಸಿಸಿ, ಮ್ಯಾನುಯಲ್, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.57 ಲಕ್ಷ* | ನೋಡಿ ಏಪ್ರಿಲ್ offer | |
ಹೆಕ್ಟರ್ ಸ್ಯಾವಿ ಪ್ರೋ ಸಿವಿಟಿ(ಟಾಪ್ ಮೊಡೆಲ್)1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್ | ₹22.89 ಲಕ್ಷ* | ನೋಡಿ ಏಪ್ರಿಲ್ offer |
ಎಂಜಿ ಹೆಕ್ಟರ್ ವಿಮರ್ಶೆ
Overview
ಭಾರತದಲ್ಲಿ ಎಂಜಿ ಮೋಟಾರ್‌ನ ಚೊಚ್ಚಲ ಉತ್ಪನ್ನವಾಗಿರುವ ಹೆಕ್ಟರ್‌ಗೆ ಅದರ ಎರಡನೇ ಮಿಡ್‌ಲೈಫ್ ರಿಫ್ರೆಶ್ ನೀಡಲಾಗಿದೆ. ಈ ಬದಲಾವಣೆಯು ದೃಶ್ಯ ವ್ಯತ್ಯಾಸಗಳ ಗೊಂಚಲುಗಳು ಹೊಸ ರೂಪಾಂತರಗಳು ('ಪ್ರೊ' ಪ್ರತ್ಯಯದೊಂದಿಗೆ) ಮತ್ತು ವೈಶಿಷ್ಟ್ಯಗಳನ್ನು ಮತ್ತು ಸಹಜವಾಗಿ ಮಾರುಕಟ್ಟೆಯಾದ್ಯಂತ ಬೆಲೆ ಹೆಚ್ಚಳವನ್ನೂ ಒಳಗೊಂಡಿದೆ. ಆದರೆ ಇದು ಕೌಟುಂಬಿಕ ಎಸ್ ಯುವಿ ಆಗಿ ಇನ್ನೂ ಇದಕ್ಕಿಂತ ಉತ್ತಮವಾದುದನ್ನು ನೀಡಬಹುದು. ಅದನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಎಕ್ಸ್‌ಟೀರಿಯರ್
ಹೆಕ್ಟರ್ ಯಾವಾಗಲೂ ಬೋಲ್ಡ್ ಆಗಿ ಕಾಣುವ ಎಸ್‌ಯುವಿ ಆಗಿದೆ, ಅದರ ಮುಂಭಾಗದ ವಿನ್ಯಾಸಕ್ಕೆ ಇನ್ನಷ್ಟು ಮೆರುಗು ನೀಡಲು ಹೆಚ್ಚಾಗಿ ಕ್ರೋಮ್‌ಗಳನ್ನು ಬಳಸಲಾಗಿದೆ. ಬದಲಾವಣೆಗಳು, ಸೂಕ್ಷ್ಮವಾಗಿದ್ದರೂ, ನಿಸ್ಸಂಶಯವಾಗಿ ದೊಡ್ಡದಾದ ಗ್ರಿಲ್‌ನಿಂದ ಪ್ರಾರಂಭವಾಗುವ ಮುಂಭಾಗದ ಲುಕ್ ಸ್ವಲ್ಪ ಹೆಚ್ಚಾಗಿ ಕಾಣುತ್ತದೆ. ಇದು ಈಗ ಡೈಮಂಡ್-ಆಕಾರದ ಕ್ರೋಮ್ ಅಲಂಕಾರಗಳನ್ನು ಹೊಂದಿದೆ ಆದರೆ ಕ್ರೋಮ್ ಬದಲಿಗೆ ಗ್ರಿಲ್ ಈಗ ಕಪ್ಪು ಸರೌಂಡ್ ಅನ್ನು ಹೊಂದಿದೆ, ಇದು ತುಂಬಾ ಬೋಲ್ಡ್ ಆಗಿ ಕಾಣುತ್ತದೆ. ಆದಾಗಿಯೂ, ತಮ್ಮ ಕಾರುಗಳಲ್ಲಿ ವ್ಯಾಪಕವಾದ ಕ್ರೋಮ್‌ನ ಬಳಸಲು ಇಚ್ಚಿಸದವರು ಖಂಡಿತವಾಗಿಯೂ ಇದರಲ್ಲಿ ಅತಿಯಾಗಿದೆ ಎಂದು ಭಾವಿಸುತ್ತಾರೆ.
ಎಮ್‌ಜಿಯು ಹೆಕ್ಟರ್‌ನ ಪ್ರಿ-ಫೇಸ್‌ಲಿಫ್ಟ್ ಆವೃತ್ತಿಯಿಂದ ಅದೇ ಸ್ಪ್ಲಿಟ್ ಆಟೋ-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಅನ್ನು ಉಳಿಸಿಕೊಂಡಿದೆ, ಎಲ್‌ಇಡಿ ಫಾಗ್ ಲ್ಯಾಂಪ್‌ಗಳ ಜೊತೆಗೆ ಬಂಪರ್‌ನಲ್ಲಿ ಇರಿಸಲಾಗಿದೆ, ಎಲ್‌ಇಡಿ ಡಿಆರ್‌ಎಲ್‌ಗಳು ಮೇಲಿನ ಸ್ಥಾನದಲ್ಲಿದೆ. ಪರಿಷ್ಕೃತ ಏರ್ ಡ್ಯಾಮ್ ಅನ್ನು ಪಡೆಯುವ ಮುಂಭಾಗದ ಬಂಪರ್, ಹೆಚ್ಚುವರಿ ದೊಡ್ಡ ಗ್ರಿಲ್ ಅನ್ನು ಸರಿಹೊಂದಿಸಲು ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಮೊದಲಿನಂತೆ ಸ್ಕಿಡ್ ಪ್ಲೇಟ್ ಅನ್ನು ಸಹ ಪಡೆಯುತ್ತದೆ, ಈಗ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ರಾಡಾರ್ ಅನ್ನು ಹೊಂದಿದೆ
ಈ ಎಸ್‌ಯುವಿಯ ಸೈಡ್‌ನಿಂದ ನೋಡುವಾಗ ಇದಕ್ಕೆ ಯಾವುದೇ ರೀತಿಯ ಬದಲಾವಣೆಗಳನ್ನು ನೀಡಲಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹೆಕ್ಟರ್‌ನ ಹೆಚ್ಚಿನ ವಿಶೇಷತೆಯನ್ನು ಹೊಂದಿರುವ ಟಾಪ್ ಆವೃತ್ತಿಗಳು 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ನೊಂದಿಗೆ ಬರುತ್ತದೆ. ಆದರೆ ಲೋವರ್ ಆವೃತ್ತಿಗಳು 17-ಇಂಚಿನ ಚಕ್ರಗಳನ್ನು ಪಡೆಯುತ್ತವೆ. ಅದರ ಬಗ್ಗೆ ಹೇಳುವುದಾದರೆ, MG ಯು ಎಸ್‌ಯುವಿಯಲ್ಲಿ 19-ಇಂಚಿನ ಚಕ್ರಗಳನ್ನು ನೀಡುವುದನ್ನು ನೋಡಲು ನಾವು ಇಷ್ಟಪಡುತ್ತೇವೆ, ಅವುಗಳು ಐಚ್ಛಿಕ ಹೆಚ್ಚುವರಿಗಳಾಗಿದ್ದರೂ ಸಹ. ಫೇಸ್‌ಲಿಫ್ಟೆಡ್ ಹೆಕ್ಟರ್ ಅದೇ 'ಮೋರಿಸ್ ಗ್ಯಾರೇಜಸ್' ಚಿಹ್ನೆ ಮತ್ತು ಕ್ರೋಮ್ ಇನ್ಸರ್ಟ್ಸ್‌ನೊಂದಿಗೆ ಬಾಡಿ ಸೈಡ್ ಕ್ಲಾಡಿಂಗ್ ಅನ್ನು ಹೊಂದಿದೆ.
ಹೆಕ್ಟರ್ ಈಗ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಬರುತ್ತದೆ, ಇದರ ಮಧ್ಯಭಾಗದಲ್ಲಿ ಲೈಟಿಂಗ್ ಅಂಶಗಳನ್ನು ನೀಡಲಾಗಿದೆ. ಅದರ ಹೊರತಾಗಿ, ಎಸ್‌ಯುವಿಯ 'ಇಂಟರ್ನೆಟ್ ಇನ್‌ಸೈಡ್' ಬ್ಯಾಡ್ಜ್ ಅನ್ನು ADAS ನೊಂದಿಗೆ ಬದಲಾಯಿಸಲಾಗಿದೆ. ಆದರೆ ಅದರ ಟೈಲ್‌ಗೇಟ್‌ನಲ್ಲಿ 'ಹೆಕ್ಟರ್' ಮಾನಿಕರ್ ಅನ್ನು ಹೊಂದಿದೆ. ಕ್ರೋಮ್ ಸ್ಟ್ರಿಪ್ ಈಗ ಎಸ್‌ಯುವಿಯ ಡೆರಿಯೆರ್‌ನ ಅಗಲವನ್ನು ನಡೆಸುತ್ತದೆ ಮತ್ತು ಹೆಕ್ಟರ್‌ನ ಹಿಂಭಾಗದ ಬಂಪರ್ ಅನ್ನು ಸ್ವಲ್ಪಮಟ್ಟಿಗೆ ಆಪ್‌ಡೇಟ್ ಮಾಡಲಾಗಿದೆ.
ಇಂಟೀರಿಯರ್
ನೀವು MG ಯ ಎಸ್‌ಯುವಿಗಳನ್ನು ಈಗಾಗಲೇ ಬಹಳ ಸಮಯಗಳಿಂದ ಬಳಕೆ ಮಾಡುತ್ತಿದ್ದರೆ, ನೀವು ಫೇಸ್‌ಲಿಫ್ಟೆಡ್ ಮಾಡೆಲ್‌ನೊಳಗೆ ಒಮ್ಮೆ ಹೆಜ್ಜೆ ಹಾಕಿದಾಗ ನೀವು ತಕ್ಷಣ ಮನೆಯಲ್ಲಿರುವ ಅನುಭವ ನಿಮಗಾಗುತ್ತದೆ. ಕ್ಯಾಬಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮರುವಿನ್ಯಾಸಗೊಳಿಸಲಾಗಿದ್ದರೂ, ಇದು ಇನ್ನೂ ಅದೇ ಸ್ಟೀರಿಂಗ್ ವೀಲ್‌ನ್ನು(ರೇಕ್ ಮತ್ತು ರೀಚ್ ಹೊಂದಾಣಿಕೆ ಎರಡನ್ನೂ ಹೊಂದಿದೆ) ಮತ್ತು ಲಂಬವಾಗಿ ಜೋಡಿಸಲಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನ್ನು ಹೊಂದಿದೆ. ಈ ಎಸ್‌ಯುವಿಯೂ ಅದರ ಕೆಲವು ಪ್ರತಿಸ್ಪರ್ಧಿಗಳಂತೆ ಹೆಚ್ಚು ಪ್ರಾಯೋಗಿಕತೆಯನ್ನು ನೀಡದಿದ್ದರೂ, ಈ ಹಿಂದಿನಂತೆ ಇದು ಹೊಂದಿರುವ ಸಾಕಷ್ಟು ಜಾಗಕ್ಕೆ ದೊಡ್ಡ ಅರ್ಥವನ್ನು ಹುಟ್ಟುಹಾಕುತ್ತದೆ.
ಈ ಎಸ್‌ಯುವಿಯ ಇಂಟಿರೀಯರ್‌ನಲ್ಲಿ ಅದೃಷ್ಟವಶಾತ್ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಉಳಿಸಿಕೊಂಡಿದೆ, ಇದು ಮೊದಲಿನಂತೆ ಉತ್ತಮ ಗಾಳಿ ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಸುಧಾರಿಸಲಾಗಿರುವ ಡ್ಯಾಶ್‌ಬೋರ್ಡ್ ಅನ್ನು ಕಪ್ಪು ಬಣ್ಣದಲ್ಲಿ ಫಿನಿಶ್ ಮಾಡಿರುವುದನ್ನು ನಾವು ಗಮನಿಸಬಹುದು. ಇದು AC ವೆಂಟ್ ಘಟಕಗಳಲ್ಲಿ ಸ್ಪೋರ್ಟ್ಸ್ ಸಿಲ್ವರ್ ಮತ್ತು ಕ್ರೋಮ್‌ನ ಎಕ್ಸೆಂಟ್ ಮತ್ತು ಪಿಯಾನೋ ಬ್ಲ್ಯಾಕ್ ಅಂಶಗಳೊಂದಿಗೆ ಶ್ರೀಮಂತ ಮತ್ತು ಪ್ರೀಮಿಯಂ ಅನುಭವವನ್ನು ನೀಡುತ್ತದೆ. MGಯು ಡ್ಯಾಶ್‌ಬೋರ್ಡ್‌ನ ಮೇಲಿನ ಭಾಗ, ಡೋರ್ ಪ್ಯಾಡ್‌ಗಳು ಮತ್ತು ಗ್ಲೋವ್‌ಬಾಕ್ಸ್‌ನ ಮೇಲ್ಭಾಗದಲ್ಲಿ ಸಾಫ್ಟ್-ಟಚ್ ಮೆಟಿರಿಯಲ್‌ಗಳನ್ನು ಬಳಸಿದೆ. ಆದರೆ ಕೆಳಗಿನ ಅರ್ಧವು ಕೇವಲ ಗಟ್ಟಿಯಾದ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ, ಇದು ನಿಮಗೆ ದೊಡ್ಡ ಮಟ್ಟದಲ್ಲಿ ನಿರಾಶೆಯನ್ನು ಉಂಟುಮಾಡುತ್ತದೆ. ಇದು ದೊಡ್ಡ ಟಚ್‌ಸ್ಕ್ರೀನ್ ನ್ನು ಇರಿಸಲು ಸೆಂಟ್ರಲ್ AC ವೆಂಟ್‌ಗಳನ್ನು ಪರಿಷ್ಕರಿಸಲಾಗಿದೆ, ಸ್ಟಾರ್ಟ್/ಸ್ಟಾಪ್ ಬಟನ್ ಈಗ ವೃತ್ತಾಕಾರಕ್ಕಿಂತ ಹೆಚ್ಚು ಚೌಕಾಕಾರವಾಗಿದೆ. ಹಾಗೇಯೆ ಇದು ಹೊಸ ಗೇರ್ ಶಿಫ್ಟ್ ಲಿವರ್ ಅನ್ನು ಸಹ ಪಡೆಯುತ್ತದೆ.
ಸೆಂಟರ್ ಕನ್ಸೋಲ್ ಅನ್ನು ಸಹ ಆಪ್‌ಡೇಟ್ ಮಾಡಲಾಗಿದೆ. ಈಗ ಗೇರ್ ಲಿವರ್, ಕಪ್ ಹೋಲ್ಡರ್‌ಗಳು ಮತ್ತು ಇತರ ಕಂಟ್ರೋಲ್‌ಗಳ ಸುತ್ತಲೂ ಬೆಳ್ಳಿಯ ಉದಾರವಾದ ಡಾಲಪ್ ಅನ್ನು ನಾವು ಕಾಣಬಹುದು ಮತ್ತು ಇದು ಟಚ್‌ಸ್ಕ್ರೀನ್ ಘಟಕಕ್ಕೆ ಸಂಪರ್ಕವನ್ನು ಹೊಂದಿದೆ. ಇದು ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್‌ಗೆ ಕಾರಣವಾಗುತ್ತದೆ, ಇದನ್ನು ಸ್ಲೈಡ್ ಮಾಡಬಹುದು ಮತ್ತು ನಿಮ್ಮ ಸಣ್ಣ-ಸಣ್ಣ ವಸ್ತುಗಳಿಗೆ ಸಾಕಾಗುವಷ್ಟು ಸ್ಟೋರೆಜ್‌ನ್ನು ಒಳಗೊಂಡಿರುತ್ತದೆ.
ಇದರ ಆಸನಗಳನ್ನು ಮರಳಿನ ಬಣ್ಣದಲ್ಲಿ ಫಿನಿಶ್ ಮಾಡಲಾಗಿದೆ ಮತ್ತು ಉತ್ತಮವಾದ ಆಸನದ ಭಂಗಿಯನ್ನು ನೀಡುವುದರ ಜೊತೆಗೆ ಚೆನ್ನಾಗಿ ಬಲವನ್ನು ಮತ್ತು ಬೆಂಬಲವನ್ನು ನೀಡುತ್ತವೆ. ಮುಂಭಾಗದ ಆಸನಗಳು ಪವರ್ ಎಡ್ಜಸ್ಟೆಬಲ್ ಆಗಿದ್ದು, ಆರು ಅಡಿ ಎತ್ತರದವರಿಗೂ ಸಹ ಇಲ್ಲಿ ಸಾಕಷ್ಟು ಹೆಡ್‌ರೂಮ್ ಮತ್ತು ಆರಾಮವಾಗಿ ಮೊಣಕಾಲು ಚಾಚಲು ಜಾಗವಿದೆ. ಸೂಕ್ತವಾದ ಡ್ರೈವಿಂಗ್ ಸ್ಥಾನವನ್ನು ಪಡೆಯಲು ಮತ್ತು ವಿಂಡ್‌ಶೀಲ್ಡ್‌ನಿಂದ ವಿಸ್ತಾರವಾದ ನೋಟವನ್ನು ಆನಂದಿಸಲು ನಿಮಗೆ ಸಹಾಯ ಮಾಡಲು ಡ್ರೈವರ್ ಸೀಟಿಗೆ ಹಲವಾರು ಅಡ್ಜಸ್ಟ್‌ಮೆಂಟ್‌ಗಳನ್ನು ನೀಡಲಾಗಿದೆ.
ಲಾಂಗ್ ಡ್ರೈವ್ ಇಷ್ಟಪಡುವವರಿಗೆ, ಹಿಂಬದಿಯ ಆಸನಗಳು ವಿಶಾಲವಾಗಿರುತ್ತವೆ ಮತ್ತು ಉದ್ದನೆಯ ಹಾಗು ಸಾಮಾನ್ಯ ಗಾತ್ರದ ಮೂವರು ವಯಸ್ಕರು ಆರಾಮವಾಗಿ ಕುಳಿತುಕೊಳ್ಳಬಹುದು. ಇದರಲ್ಲಿ ಹೆಡ್‌ರೂಮ್ ಮತ್ತು ಲೆಗ್‌ರೂಮ್‌ಗೆ ಯಾವುದೇ ಕೊರತೆಯಿಲ್ಲದಿದ್ದರೂ, ಪ್ರಯಾಣಿಕರ ಸಂಖ್ಯೆ ಎರಡನ್ನು ದಾಟಿದ ನಂತರ ಭುಜವಿಡುವ ಜಾಗ ಸಹ ಐಷಾರಾಮಿಯಾಗುತ್ತದೆ. ಅದೃಷ್ಟವಶಾತ್, ಯಾವುದೇ ಸೆಂಟ್ರಲ್ ಟ್ರಾನ್ಸ್ಮಿಷನ್ ಟನಲ್ ಇಲ್ಲದಿರುವುದರಿಂದ, ಮಧ್ಯಮ ಪ್ರಯಾಣಿಕರು ಉತ್ತಮವಾದ ಲೆಗ್‌ರೂಮ್‌ನ್ನು ಪಡೆಯುತ್ತಾರೆ. ಇನ್ನೂ ಹೆಚ್ಚಿನ ಸೌಕರ್ಯಕ್ಕಾಗಿ MG ಹಿಂಭಾಗದ ಸೀಟುಗಳನ್ನು ಸ್ಲೈಡ್ ಮತ್ತು ರಿಕ್ಲೈನ್ ಕಾರ್ಯವನ್ನು ಒದಗಿಸಿದೆ ಮತ್ತು ಎಲ್ಲಾ ಮೂರು ಹಿಂಬದಿ ಪ್ರಯಾಣಿಕರಿಗೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳಿವೆ.
ನಾವು ಇದರಲ್ಲಿರುವ ಕೆಲವು ನ್ಯೂನತೆಗಳನ್ನ ಪಟ್ಟಿ ಮಾಡುವುದಾದರೆ, ಆಸನದ ಬಾಹ್ಯರೇಖೆಯು ಇನ್ನು ಸ್ವಲ್ಪ ಉತ್ತಮವಾಗಿಸಬಹುದಿತ್ತು, ವಿಶೇಷವಾಗಿ ಹಿಂದಿನ ಸೀಟ್‌ನ ಬದಿಗಳಲ್ಲಿ. ಹಾಗೆಯೇ ತೊಡೆಯ ಭಾಗದ ಸಪೋರ್ಟ್‌ನ್ನು ಇನ್ನೂ ಹೆಚ್ಚಿಸಬಹುದಿತ್ತು. ಬ್ರೈಟ್ ಆಗಿರುವ ಸೈಡ್‌ನ್ನು ಗಮನಿಸುವಾಗ, ಈ ಎಸ್‌ಯುವಿಯ ದೊಡ್ಡ ವಿಂಡೋಗಳು ಕ್ಯಾಬಿನ್ ಒಳಗೆ ಹೆಚ್ಚು ಗಾಳಿ ಮತ್ತು ಬೆಳಕನ್ನು ಪ್ರವೇಶಿಸಲು ಸಹಕಾರಿಯಾಗಿದೆ. ಆದರೆ ಇದು ಬೇಸಿಗೆಯಲ್ಲಿ ಪ್ರಯಾಣಿಕರಿಗೆ ನಿರಾಶೆ ಮೂಡಿಸಬಹುದು. MG ಯು AC ವೆಂಟ್‌ಗಳು, ಎರಡು ಕಪ್ ಹೋಲ್ಡರ್‌ಗಳು ಮತ್ತು ಹಿಂಭಾಗದಲ್ಲಿ ಕುಳಿತಿರುವವರಿಗೆ USB ಫಾಸ್ಟ್ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಫೋನ್ ಇಡಲು ಸಣ್ಣ ಸ್ಟ್ಯಾಂಡ್‌ನ್ನು ನೀಡುತ್ತಿದೆ.
ಅದ್ಭುತವಾದ ಟೆಕ್ನಾಲಾಜಿ
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ 14-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಫೇಸ್‌ಲಿಫ್ಟೆಡ್ ಹೆಕ್ಟರ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಅದರ ಡಿಸ್‌ಪ್ಲೇ ಹೆಚ್ಚು ಸ್ಪಷ್ಟ ಮತ್ತು ದೊಡ್ಡದಾಗಿದ್ದರೂ, ಯೂಸರ್ ಇಂಟರ್‌ಫೇಸ್ (UI) ಮಂದಗತಿಯಲ್ಲಿದೆ, ಕೆಲವೊಮ್ಮೆ ಪ್ರತಿಕ್ರಿಯೆ ನೀಡಲು ಹಲವು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಅದರ ವಾಯ್ಸ್ ಕಮಾಂಡ್‌ಗಳು ಸಹ ಕ್ರಿಯಾತ್ಮಕವಾಗಿದ್ದರೂ, ನಿಮ್ಮ ಅಗತ್ಯ ಕ್ರಿಯೆಗಳನ್ನು ತಪ್ಪಾಗಿ ಕೇಳಿಸಿಕೊಳ್ಳುತ್ತವೆ. ಅನೇಕ ಆಧುನಿಕ ಟೆಕ್-ಭರಿತ ಕಾರುಗಳಲ್ಲಿ ಪ್ರಚಲಿತದಲ್ಲಿರುವ ಮತ್ತೊಂದು ತೊಂದರೆಯೆಂದರೆ, ಹವಾನಿಯಂತ್ರಣ ಮತ್ತು ಇತರ ವೈಶಿಷ್ಟ್ಯಗಳನ್ನು ನಿಯಂತ್ರಿಸಲು ಬಟನ್ ಸ್ವಿಚ್‌ಗಳ ಮಿಸ್ ಆಗಿರುವುದು ಆಗಿದೆ.
MG ಯ ಈ ಎಸ್‌ಯುವಿನಲ್ಲಿರುವ ಇತರ ಸೌಕರ್ಯಗಳಲ್ಲಿ ಬೃಹತ್ ಪನೋರಮಿಕ್ ಸನ್‌ರೂಫ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಎಂಟು-ಬಣ್ಣದ ಆಂಬಿಯಂಟ್ ಲೈಟಿಂಗ್ ಮತ್ತು ವೆಂಟಿಲೇಶನ್ ಸೌಕರ್ಯ ಹೊಂದಿರುವ ಮುಂಭಾಗದ ಸೀಟುಗಳನ್ನು ಹೊಂದಿದೆ. ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ನೊಂದಿಗೆ ಎಂಟು-ಸ್ಪೀಕರ್‌ನ ಇನ್ಫಿನಿಟಿ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು 75 ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ
ಸುರಕ್ಷತೆ
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹಿಲ್-ಹೋಲ್ಡ್ ಅಸಿಸ್ಟ್, ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳ ದೊಡ್ಡ ಪಟ್ಟಿಯನ್ನೇ ಹೆಕ್ಟರ್ ಹೊಂದಿದೆ.
ಫೇಸ್‌ಲಿಫ್ಟ್‌ನೊಂದಿಗೆ, ಅದರ ಸುರಕ್ಷತಾ ಜಾಲವನ್ನು ಸಹ ಹೆಚ್ಚಿಸಲಾಗಿದೆ. ಈಗ ADAS ಸೌಕರ್ಯವನ್ನು ಸಹ ಸೇರಿಸಲಾಗಿದ್ದು, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ-ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ನ್ನು ಒಳಗೊಂಡಿದೆ. ಇದರ ADAS, ಅಂತಹ ಸಹಾಯ ವ್ಯವಸ್ಥೆಗಳನ್ನು ಹೊಂದಿರುವ ಎಲ್ಲಾ ಕಾರುಗಳಂತೆ, ಚಾಲಕನಿಗೆ ಸಹಾಯ ಮಾಡಲು ಮಾತ್ರ ನೀಡಲಾಗಿದ್ದು ಮತ್ತು ವಾಹನದ ಸಂಪೂರ್ಣ ನಿಯಂತ್ರಣವನ್ನು ಇದು ತೆಗೆದುಕೊಳ್ಳುವುದಿಲ್ಲ. ವಿಶೇಷವಾಗಿ ನಮ್ಮಂತಹ ಅಸ್ತವ್ಯಸ್ತವಾಗಿರುವ ಟ್ರಾಫಿಕ್ ಸನ್ನಿವೇಶಗಳಲ್ಲಿ. ಅದರೆ ಈ ADAS ನ ಸೌಕರ್ಯಗಳು ಹೆದ್ದಾರಿಗಳಲ್ಲಿ ಅಥವಾ ಎಕ್ಸ್‌ಪ್ರೆಸ್ ವೇ ನಂತಹ ಉತ್ತಮವಾಗಿ ಸುಸಜ್ಜಿತ ಮತ್ತು ಸೂಪರ್ ಫಾಸ್ಟ್ ರಸ್ತೆಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಒಳನುಗ್ಗುವಿಕೆಯನ್ನು ಅನುಭವಿಸುವುದಿಲ್ಲ ಮತ್ತು ಈ ಎಸ್‌ಯುವಿಯ ಮುಂಭಾಗದಲ್ಲಿರುವ ವಾಹನಗಳ ಟೈಪ್‌ಗಳನ್ನು ಗುರುತಿಸಲು ಮತ್ತು ಅದನ್ನು ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯಲ್ಲಿ ತೋರಿಸಲು ಸಾಧ್ಯವಾಗುತ್ತದೆ.
ಬೂಟ್‌ನ ಸಾಮರ್ಥ್ಯ
ವೀಕೆಂಡ್‌ನ ಪ್ರವಾಸಕ್ಕೆ ಬೇಕಾಗುವ ಎಲ್ಲಾ ಲಗೇಜ್‌ಗಳನ್ನು ಇಡಲು ಸಾಕಾಗುವಷ್ಟು ಬೂಟ್ ಸ್ಪೇಸ್ ಅನ್ನು ಹೆಕ್ಟರ್ ಹೊಂದಿದೆ. ಇದು ಹಿಂದಿನ ಸೀಟ್‌ಗಳಿಗೆ 60:40 ಸ್ಪ್ಲಿಟ್ ಮಾಡುವ ಆಯ್ಕೆಯನ್ನು ಅನ್ನು ಸಹ ನೀಡುತ್ತದೆ. ಇದರಿಂದ ಕಡಿಮೆ ಜನ ಈ ಕಾರಿನಲ್ಲಿ ಪ್ರಯಾಣಿಸುವಾಗ. ಹಿಂದಿನ ಸೀಟನ್ನು ಮಡಚಿ ಬೂಟ್‌ನಲ್ಲಿ ಹೆಚ್ಚಿನ ಬ್ಯಾಗ್‌ಗಳನ್ನು ಇಡಲು ಸಾಕಾಗುವ ಜಾಗವನ್ನು ಪಡೆದುಕೊಳ್ಳಬಹುದು. ಪವರ್‌ಡ್ ಟೈಲ್‌ಗೇಟ್‌ನ ಸೇರ್ಪಡೆಯ ಮೂಲಕ ಮಾಲೀಕರು ಇದರ ಪ್ರಯೋಜನ ಪಡೆಯಬಹುದು, ಇದು ಸೆಗ್ಮೆಂಟ್‌ನಲ್ಲಿ ಮೊದಲನೆಯ ಬಾರಿ ನೀಡಲಾಗುತ್ತಿದೆ ಎಂದು MG ಹೇಳಿಕೊಂಡಿದೆ.
ಕಾರ್ಯಕ್ಷಮತೆ
ಈ ಎಸ್‌ಯುವಿ ಈ ಹಿಂದಿನಂತೆಯೇ 1.5-ಲೀಟರ್ ಟರ್ಬೊ-ಪೆಟ್ರೋಲ್ (143PS/250Nm) ಮತ್ತು 2-ಲೀಟರ್ ಡೀಸೆಲ್ (170PS/350Nm) ಇಂಜಿನ್‌ಗಳನ್ನು ಪಡೆಯುತ್ತದೆಯಾದರೂ, ಇದರಲ್ಲಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಕೈ ಬಿಟ್ಟಿದೆ. ಆರು-ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್‌ನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದರೂ, ಪೆಟ್ರೋಲ್ ಅನ್ನು ಐಚ್ಛಿಕ ಎಂಟು-ಸ್ಪೀಡ್‌ನ CVT ಯೊಂದಿಗೆ ಹೊಂದಬಹುದು. ಈ ಎರಡು ಟ್ರಾನ್ಸ್‌ಮಿಶನ್‌ಗಳು ಮುಂಭಾಗದ ಚಕ್ರಗಳಿಗೆ ಎಲ್ಲಾ ಶಕ್ತಿಯನ್ನು ಕಳುಹಿಸುತ್ತದೆ.
ನಾವು ಟೆಸ್ಟ್ ಡ್ರೈವ್‌ಗೆ ಪೆಟ್ರೋಲ್-ಸಿವಿಟಿ ಕಾಂಬಿನೇಶನ್‌ನ ಕಾರನ್ನು ಚಲಾಯಿಸಿದ್ದು, ಇದು ಉತ್ತಮವಾಗಿ ಸಂಸ್ಕರಿಸಿದ ಯುನಿಟ್ ಆಗಿ ನಮಗೆ ಕಂಡುಬಂದಿದೆ. ಆಫರ್‌ನಲ್ಲಿ ಸಾಕಷ್ಟು ಪ್ರಮಾಣದ ಟಾರ್ಕ್ ನೀಡುತ್ತಿರುವುದರಿಂದ ಲೈನ್‌ನಿಂದ ಹೊರಬರುವುದು ಈಗ ತುಂಬಾ ಸುಲಭವಾಗಿದೆ. ಇದು ಸಿಟಿ ಡ್ರೈವ್‌ಗಳು ಅಥವಾ ಹೆದ್ದಾರಿ ಪ್ರಯಾಣವಾಗಿರಲಿ, ಹೆಕ್ಟರ್ ಸಿವಿಟಿಗೆ ಹೆಚ್ಚಿನ ಶ್ರಮ ಅಗತ್ಯವಿಲ್ಲ ಮತ್ತು ಮೂರು-ಅಂಕಿಯ ವೇಗವನ್ನು ಸುಲಭವಾಗಿ ತಲುಪಬಹುದು.
ಪವರ್ ಡೆಲಿವರಿಯು ರೇಖೀಯ ಶೈಲಿಯಲ್ಲಿ ನಡೆಯುತ್ತದೆ ಮತ್ತು ಪೆಡಲ್‌ನ ಟ್ಯಾಪ್‌ನಲ್ಲಿ ಲಭ್ಯವಿದೆ, ಕೇವಲ ಟಾರ್ ರಸ್ತೆಯ ನೇರ ತೇಪೆಗಳ ಮೇಲೆ ಮಾತ್ರವಲ್ಲದೆ ಗುಡ್ಡ ಪ್ರದೇಶಗಳಿಗೆ ಹೋಗುವಾಗ ಅಥವಾ ತಿರುವುಗಳನ್ನೇ ಕೂಡಿದ ರಸ್ತೆಗಳಲ್ಲಿಯೂ ಸಹ. ಇದು ಇನ್ನೂ CVT-ಸುಸಜ್ಜಿತ ಮೊಡೆಲ್‌ಗಳಲ್ಲಿ ಕಂಡುಬರುವ ವಿಶಿಷ್ಟವಾದ ರಬ್ಬರ್-ಬ್ಯಾಂಡ್ ಪರಿಣಾಮವನ್ನು ಹೊಂದಿದ್ದರೂ, ಹೆಕ್ಟರ್ ಅದನ್ನು ಯಾವುದೇ ಹಂತದಲ್ಲೂ ನಿರಾತಂಕವಾಗಲು ಬಿಡುವುದಿಲ್ಲ. ಸಂಯೋಜಿತ ಶೈಲಿಯ ಡ್ರೈವಿಂಗ್‌ಗಾಗಿ ಈ ಎಸ್‌ಯುವಿಯು ಹೆಚ್ಚು ಮತ್ತು ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ಸಾಕಷ್ಟು ಪಂಚ್ ಅನ್ನು ಒದಗಿಸುತ್ತದೆ.
ರೈಡ್ ಅಂಡ್ ಹ್ಯಾಂಡಲಿಂಗ್
ಹೆಕ್ಟರ್‌ನ ಪ್ರಮುಖ ಬಲವಾದ ಅಂಶವೆಂದರೆ ಯಾವಾಗಲೂ ಅದರ ಮೆತ್ತನೆಯ ಡ್ರೈವ್ ಗುಣಮಟ್ಟವಾಗಿದೆ. ಪ್ರಯಾಣಿಕರಿಂದ, ವಿಶೇಷವಾಗಿ ಹೆದ್ದಾರಿ ಪ್ರಯಾಣದಲ್ಲಿನ ಏರಿಳಿತಗಳು ಮತ್ತು ಸ್ಪೀಡ್ ಬ್ರೇಕರ್‌ನಂತಹ ಮೇಲ್ಮೈಗಳಿಂದ ಬಹುತೇಕ ಎಲ್ಲಾ ಪರಿಣಾಮಗಳನ್ನು ಪ್ರಯಾಣಿಕರಿಗೆ ಅನುಭವವಾಗದ ರೀತಿಯಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ರಫ್ ಆಗಿರುವ ರಸ್ತೆಗಳ ಮೇಲೆ ಇದು ಕಡಿಮೆ ವೇಗದಲ್ಲಿ ಸಾಗುವಾಗ ಮಾತ್ರ ನಿಮಗೆ ಕೆಲವೊಮ್ಮೆ ಬದಿಯಿಂದ ಬದಿಗೆ ಹೋಗುವ ಅನುಭವವಾಗಬಹುದು. ಹಾಗೆಯೇ ನಿರ್ದಿಷ್ಟವಾಗಿ ಶಾರ್ಪ್ ಆಗಿರುವ ಉಬ್ಬುಗಳ ಮೇಲೆ ಸಂಚರಿಸುವಾಗ ಕ್ಯಾಬಿನ್ ಒಳಗೆಯು ನಿಮಗೆ ಅನುಭವವಾಗಬಹುದು.
ಈ ಎಸ್‌ಯುವಿಯ ಲೈಟ್ ಸ್ಟೀರಿಂಗ್ ಚಕ್ರವು ಚಾಲಕನಿಗೆ ತನ್ನ ಕೆಲಸವನ್ನು ಸುಲಭಗೊಳಿಸುತ್ತದೆ, ವಿಶೇಷವಾಗಿ ಜನದಟ್ಟನೆಯ ಸ್ಥಳಗಳಲ್ಲಿ ಮತ್ತು ತಿರುವುಗಳಲ್ಲಿ ಚಾಲನೆ ಮಾಡುವಾಗ. ಹೆದ್ದಾರಿಯಲ್ಲಿಯೂ ಸಹ, 100kmph ವೇಗವನ್ನು ಪಡೆಯುವ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇದು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
ವರ್ಡಿಕ್ಟ್
ಆದ್ದರಿಂದ ನೀವು ಹೊಸ ಎಂಜಿ ಹೆಕ್ಟರ್ ಅನ್ನು ಖರೀದಿಸಬೇಕೇ? ನೀವು ಮೋಜಿನ ಡ್ರೈವ್ ಮತ್ತು ಕಾರ್ಯಕ್ಷಮತೆ ಕೇಂದ್ರಿತ ಮಧ್ಯಮ ಗಾತ್ರದ ಎಸ್ ಯುವಿ ಅನ್ನು ಹುಡುಕುತ್ತಿದ್ದರೆ ಹೆಕ್ಟರ್ ನಿಮಗೆ ಹೆಚ್ಚು ಇಷ್ಟವಾಗದಿರಬಹುದು. ಬದಲಿಗೆ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಅಥವಾ ಕಿಯಾ ಸೆಲ್ಟೋಸ್ ಅನ್ನು ನೋಡಲು ನಾವು ಶಿಫಾರಸು ಮಾಡುತ್ತೇವೆ.
ಈಗಾಗಲೇ ಹೇಳಿರುವ ಹಾಗೆ, ಹೆಕ್ಟರ್ ಇನ್ನೂ ತನ್ನ ಮೂಲಭೂತ ಅಂಶಗಳಾದ ಸ್ಥಳಾವಕಾಶ, ಸೌಲಭ್ಯ, ಸವಾರಿ ಗುಣಮಟ್ಟ, ಪ್ರೀಮಿಯಂ ಆಕರ್ಷಣೆ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವೆಲ್ಲಾ ಕುಟುಂಬ ಸ್ನೇಹಿ ಎಸ್ ಯುವಿ ಬಯಸುವವರಿಗೆ ಸೂಕ್ತವಾಗಿದೆ.
ಎಂಜಿ ಹೆಕ್ಟರ್
- ನಾವು ಇಷ್ಟಪಡುವ ವಿಷಯಗಳು
- ನಾವು ಇಷ್ಟಪಡದ ವಿಷಯಗಳು
- ಕಾರಿನ ಒಳಗೆ ಮತ್ತು ಹೊರಗೆ ಹೆಚ್ಚು ಪ್ರೀಮಿಯಂ ಅನುಭವವಾಗುತ್ತದೆ ಮತ್ತು ಕಾಣುತ್ತದೆ.
- ವಿಶಾಲವಾದ ಕ್ಯಾಬಿನ್ ಸ್ಥಳ ಎತ್ತರದ ಪ್ರಯಾಣಿಕರಿಗೆ ಆರಾಮದಾಯಕವಾಗಿದೆ.
- ಹೆಚ್ಚಿನ ತಂತ್ರಜ್ಞಾನವನ್ನು ಒಳಗೊಂಡಿದೆ.
- ADAS ಸೇರ್ಪಡೆಯಿಂದ ಸುರಕ್ಷತಾ ಕಿಟ್ ಇನ್ನೂ ಬೂಸ್ಟ್ ಆಗಿದೆ.
- ಆರಾಮದಾಯಕ ಸವಾರಿ ಗುಣಮಟ್ಟದೊಂದಿಗೆ ಸಂಸ್ಕರಿಸಿದ ಪೆಟ್ರೋಲ್ ಎಂಜಿನ್ ಹೊಂದಿದೆ.
- ಇದರ ವಿನ್ಯಾಸ ಕೆಲವು ಖರೀದಿದಾರರಿಗೆ ತುಂಬಾ ದುಬಾರಿ ಆಗಿ ಕಾಣಿಸಬಹುದು
- ಲಘು ಹೈಬ್ರಿಡ್ ತಂತ್ರಜ್ಞಾನವನ್ನು ಕಳೆದುಕೊಂಡಿದ್ದು, ಡೀಸೆಲ್ ಆಟೋ ಕಾಂಬೋ ಹೊಂದಿಲ್ಲ.
- ಇದರ ಎಲೆಕ್ಟ್ರಾನಿಕ್ಸ್ ಹೆಚ್ಚು ಸಂವೇದನಾಶೀಲವಾಗಿರಬಹುದಿತ್ತು.
- ಉತ್ತಮ ಬಾಹ್ಯರೇಖೆಯ ಆಸನಗಳು ಮತ್ತು ಹಿಂಭಾಗದಲ್ಲಿ ಆಸನದ ಕೆಳಭಾಗಕ್ಕೆ ಬೆಂಬಲವನ್ನು ಹೊಂದಿರಬೇಕಿತ್ತು.
ಎಂಜಿ ಹೆಕ್ಟರ್ comparison with similar cars
ಎಂಜಿ ಹೆಕ್ಟರ್ Rs.14 - 22.89 ಲಕ್ಷ* | ಮಹೀಂದ್ರ ಎಕ್ಸ್‌ಯುವಿ 700 Rs.13.99 - 25.74 ಲಕ್ಷ* | ಟಾಟಾ ಹ್ಯಾರಿಯರ್ Rs.15 - 26.50 ಲಕ್ಷ* | ಮಹೀಂದ್ರಾ ಸ್ಕಾರ್ಪಿಯೋ ಎನ್ Rs.13.99 - 24.89 ಲಕ್ಷ* | ಕಿಯಾ ಸೆಲ್ಟೋಸ್ Rs.11.19 - 20.51 ಲಕ್ಷ* | ಹುಂಡೈ ಕ್ರೆಟಾ Rs.11.11 - 20.50 ಲಕ್ಷ* | ಮಹೀಂದ್ರ ಥಾರ್ Rs.11.50 - 17.60 ಲಕ್ಷ* | ಎಂಜಿ ಹೆಕ್ಟರ್ ಪ್ಲಸ್ Rs.17.50 - 23.67 ಲಕ್ಷ* |
Rating321 ವಿರ್ಮಶೆಗಳು | Rating1.1K ವಿರ್ಮಶೆಗಳು | Rating246 ವಿರ್ಮಶೆಗಳು | Rating775 ವಿರ್ಮಶೆಗಳು | Rating421 ವಿರ್ಮಶೆಗಳು | Rating388 ವಿರ್ಮಶೆಗಳು | Rating1.3K ವಿರ್ಮಶೆಗಳು | Rating149 ವಿರ್ಮಶೆಗಳು |
Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ |
Engine1451 cc - 1956 cc | Engine1999 cc - 2198 cc | Engine1956 cc | Engine1997 cc - 2198 cc | Engine1482 cc - 1497 cc | Engine1482 cc - 1497 cc | Engine1497 cc - 2184 cc | Engine1451 cc - 1956 cc |
Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ |
Power141.04 - 167.67 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power167.62 ಬಿಹೆಚ್ ಪಿ | Power130 - 200 ಬಿಹೆಚ್ ಪಿ | Power113.42 - 157.81 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power116.93 - 150.19 ಬಿಹೆಚ್ ಪಿ | Power141.04 - 167.67 ಬಿಹೆಚ್ ಪಿ |
Mileage15.58 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage16.8 ಕೆಎಂಪಿಎಲ್ | Mileage12.12 ಗೆ 15.94 ಕೆಎಂಪಿಎಲ್ | Mileage17 ಗೆ 20.7 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage8 ಕೆಎಂಪಿಎಲ್ | Mileage12.34 ಗೆ 15.58 ಕೆಎಂಪಿಎಲ್ |
Boot Space587 Litres | Boot Space400 Litres | Boot Space- | Boot Space- | Boot Space433 Litres | Boot Space- | Boot Space- | Boot Space- |
Airbags2-6 | Airbags2-7 | Airbags6-7 | Airbags2-6 | Airbags6 | Airbags6 | Airbags2 | Airbags2-6 |
Currently Viewing | ಹೆಕ್ಟರ್ vs ಎಕ್ಸ್‌ಯುವಿ 700 | ಹೆಕ್ಟರ್ vs ಹ್ಯಾರಿಯರ್ | ಹೆಕ್ಟರ್ vs ಸ್ಕಾರ್ಪಿಯೊ ಎನ್ | ಹೆಕ್ಟರ್ vs ಸೆಲ್ಟೋಸ್ | ಹೆಕ್ಟರ್ vs ಕ್ರೆಟಾ | ಹೆಕ್ಟರ್ vs ಥಾರ್ | ಹೆಕ್ಟರ್ vs ಹೆಕ್ಟರ್ ಪ್ಲಸ್ |
ಎಂಜಿ ಹೆಕ್ಟರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
2024ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ 20,000 ಕ್ಕೂ ಹೆಚ್ಚು ಯುನಿಟ್ ಮಾರಾಟದೊಂದಿಗೆ, ವಿಂಡ್ಸರ್ ಇವಿ ಭಾರತದಲ್ಲಿ ಈ ಮಾರಾಟದ ಗಡಿಯನ್ನು ದಾಟಿದ ಅತ್ಯಂತ ವೇಗದ ಇವಿ ಆಗಿದೆ
ಎಮ್‌ಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎರಡರ ಬ್ಲಾಕ್‌ಸ್ಟಾರ್ಮ್ ಆವೃತ್ತಿಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ
ಈ ಕಾರು ತಯಾರಕ ಸಂಸ್ಥೆಯು ಆಸ್ಟರ್, ಹೆಕ್ಟರ್, ಕೋಮೆಟ್ EV ಮತ್ತು ZS EV ಗಳಿಗೆ 100ನೇ ವರ್ಷದ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ
ಗ್ಲೋಸ್ಟರ್ ಮತ್ತು ಆಸ್ಟರ್ ಎಸ್‌ಯುವಿಗಳ ನಂತರ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯನ್ನು ಪಡೆಯುತ್ತಿರುವ ಹೆಕ್ಟರ್, MGಯ ಮೂರನೇ ಎಸ್‌ಯುವಿ ಆಗಿದೆ.
ಗ್ಲೋಸ್ಟರ್ ಮತ್ತು ಆಸ್ಟರ್ ನಂತರ, ಹೆಕ್ಟರ್ ಈ ವಿಶೇಷ ಆವೃತ್ತಿಯನ್ನು ಪಡೆಯುವ MG ಯ ಮೂರನೇ ಮೊಡೆಲ್ ಆಗಿದೆ
ಕಾಮೆಟ್ ಇವಿ ಕಳೆದ 10 ತಿಂಗಳಿನಿಂದ ನಮ್ಮೊಂದಿಗೆ ಇದೆ ಮತ್ತು ಇದು ಸ್ವತಃ ಪರಿಪೂರ್ಣ ನಗರ ಪ್ರಯಾಣದ ಸಾರಥಿಯೆಂದು ಸಾಬೀತುಪಡಿಸಿದೆ
MG ಕಾಮೆಟ್ ನಗರದ ಟ್ರಾಫಿಕ್ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ
MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್ಗಳಿ...
ಎಂಜಿ ಹೆಕ್ಟರ್ ಬಳಕೆದಾರರ ವಿಮರ್ಶೆಗಳು
- All (321)
- Looks (91)
- Comfort (143)
- Mileage (69)
- Engine (80)
- Interior (81)
- Space (43)
- Price (64)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- Critical
- This Car Is Good
This car is very good for family and for other purposes it as very good performance and the comfort is also good but his touch screen sometimes is very laggy that all the controls are in the touch screen of 14 inch it is difficult to control it for new persons but its Chrome and the finish is very good if you are looking for a car that is good in looks and have features full I will suggest him this car because of his very good look but the mileage in diesel is below average because the average is very low.ಮತ್ತಷ್ಟು ಓದು
- M g Hector Review. Great Car. Unacceptable Feature.
One of the greatest car i have ever seen and driven. personally i don't have it but i took my friends car to drive. It was a wonderful experience in my opinion.ಮತ್ತಷ್ಟು ಓದು
- Good Option
Very good car value for money..seats are very comfortable...and performance is too good..ac is good..in short very good car in this budget and it's enfoterment system is gud and speaker quality goodಮತ್ತಷ್ಟು ಓದು
- Its Good Car And It's My Genuine Opinion To Buy
It's a good car you can buy you will never regret it good for maintanence i recommend you to buy this car this car is good in experience mg hector black stormಮತ್ತಷ್ಟು ಓದು
- Comfortable, And Also Goodnes
Very good car , and also very comfortable , this car mileage is low , but I am fan of this car look , suspension, design, and comfortness ,overall good car.ಮತ್ತಷ್ಟು ಓದು
ಎಂಜಿ ಹೆಕ್ಟರ್ ಮೈಲೇಜ್
ಹಕ್ಕು ಸಾಧಿಸಿದ ARAI ಮೈಲೇಜ್: . ಡೀಸಲ್ ಮೊಡೆಲ್‌ಗಳು 13.79 ಕೆಎಂಪಿಎಲ್ ಗೆ 15.58 ಕೆಎಂಪಿಎಲ್ ನಡುವೆ ಮೈಲೇಜ್ ರೇಂಜ್ ಅನ್ನು ಹೊಂದಿವೆ. ಪೆಟ್ರೋಲ್ ಮೊಡೆಲ್‌ಗಳು 8.5 ಕೆಎಂಪಿಎಲ್ ಗೆ 13.79 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್ ಅನ್ನು ಹೊಂದಿವೆ.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ ಮೈಲೇಜ್ |
---|---|---|
ಡೀಸಲ್ | ಮ್ಯಾನುಯಲ್ | 15.58 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 13.79 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 12.34 ಕೆಎಂಪಿಎಲ್ |
ಎಂಜಿ ಹೆಕ್ಟರ್ ವೀಡಿಯೊಗಳು
- Full ವೀಡಿಯೊಗಳು
- Shorts
- 17:11MG Hector India Price starts at Rs 12.18 Lakh | Detailed Review | Rivals Tata Harrier & Jeep Compass2 ತಿಂಗಳುಗಳು ago | 5.9K ವ್ಯೂವ್ಸ್
- Highlights5 ತಿಂಗಳುಗಳು ago |
ಎಂಜಿ ಹೆಕ್ಟರ್ ಬಣ್ಣಗಳು
ಎಂಜಿ ಹೆಕ್ಟರ್ ಚಿತ್ರಗಳು
ನಮ್ಮಲ್ಲಿ 19 ಎಂಜಿ ಹೆಕ್ಟರ್ ನ ಚಿತ್ರಗಳಿವೆ, ಹೆಕ್ಟರ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು 360° ವೀಕ್ಷಣೆ ಸೇರಿದೆ.
ಎಂಜಿ ಹೆಕ್ಟರ್ ಇಂಟೀರಿಯರ್
ಎಂಜಿ ಹೆಕ್ಟರ್ ಎಕ್ಸ್‌ಟೀರಿಯರ್
Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) The MG Hector has max power of 227.97bhp@3750rpm.
A ) The MG Hector has ARAI claimed mileage of 12.34 kmpl to 15.58 kmpl. The Manual P...ಮತ್ತಷ್ಟು ಓದು
A ) MG Hector is available in 9 different colours - Green With Black Roof, Havana Gr...ಮತ್ತಷ್ಟು ಓದು
A ) The MG Hector is available in Petrol and Diesel fuel options.
A ) The MG Hector is available in Petrol and Diesel fuel options.