• English
  • Login / Register

ಟಾಟಾ ನೆಕ್ಸಾನ್: ಮೊದಲ ಡ್ರೈವ್ ವಿಮರ್ಶೆ

Published On ಮೇ 28, 2019 By jagdev for ಟಾಟಾ ನೆಕ್ಸಾನ್‌ 2017-2020

ನೆಕ್ಸಾನ್ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ  ಮೊದಲ ಬಿಡುಗಡೆಯಲ್ಲೇ ಟಾಟಾ ಗಾಗಿ ಹೆಸರು ತರಬಹುದೇ?

Update: Tata Nexon has been launched at Rs 5.85 lakh

ಟಾಟಾ ನೆಕ್ಸಾನ್ ಒಂದು ಹೊಸ ಸೇರ್ಪಡೆಯಾಗಿದೆ ಹೆಚ್ಚು ಪ್ರಖ್ಯಾತಿ ಹೊಂದಿರುವ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ. ಇದು ಟಾಟಾ ದ ಮೊದಲ ಪ್ರಯತ್ನ ಈ ವಿಭಾಗದಲ್ಲಿ ಮತ್ತು ಇದರ ಶೈಲಿ ಗಮನಿಸಿದರೆ ಇದುಒಂದು ಸಂಪ್ರಾದಯಯಿಕ ಚಿಕ್ಕ SUV  ಎಂದೆನಿಸುವುದಿಲ್ಲ. ಈ ಸಬ್ -4m SUV ವಿಭಾಗದ ಟಾಟಾ ನೆಕ್ಸಾನ್ ನ ಪ್ರತಿಸ್ಪರ್ದಿಗಳು ಹೆಚ್ಚು ಸ್ಪರ್ಧಾತ್ಮಕ ಬೆಲೆ ಉಳ್ಳದ್ದಾಗಿದೆ ಹಾಗು ಹೆಚ್ಚು ವಾಸ್ತವಿಕವಾಗಿದೆ ಮಧ್ಯಮ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ. ಹಾಗಾಗಿ  ಟಾಟಾ ಟಾಟಾ ನೆಕ್ಸಾನ್ ಈ ವಿಭಾಗದಲ್ಲಿ ಗೆಲ್ಲಲು ಹೆಚ್ಚು ಸ್ಪರ್ಧಾತ್ಮಕವಾಗಿ ನಿಭಾಯಿಸಬೇಕಾಗಿದೆ.

ನೆಕ್ಸಾನ್ ನ ವಿಭಿನ್ನವಾದ ಶೈಲಿಯು ಈ ವೇದಿಕೆಯ ಇನ್ನಿತರ ಕಾರ್ ಗಳಾದ ಬೋಲ್ಟ್ ಹಾಗು ಝೆಸ್ಟ್ ಅನ್ನು ಹೋಲುತ್ತದೆ ಮತ್ತು ಅದು ಕೆಟ್ಟದೇನು ಅಲ್ಲ. ಆದರೆ ನೆಕ್ಸಾನ್ ನಲ್ಲಿ ಬಹಳಷ್ಟು ಮೊದಲ ಬಾರಿಯ ಬಿಡುಗಡೆಗಳಿವೆ, ಹೊಸ 1.5-ಲೀಟರ್ ಡೀಸೆಲ್ ಎಂಜಿನ್ ಹಾಗು ಒಂದು ಟ್ಯುರ್ಬೋಚಾರ್ಜ ಇರುವ 1.2-ಲೀಟರ್ ಪೆಟ್ರೋಲ್. ನಾವು ಹೊಸ ಟಾಟಾ ಕಾರ್ ಗಳಲ್ಲಿ ಅಪೇಕ್ಷಿಸುವಂತೆ, ಟಾಟಾ ನೆಕ್ಸಾನ್ ನಲ್ಲಿ ದೊಡ್ಡದಾದ ಫೀಚರ್ ಗಳ ಪಟ್ಟಿ ಇದೆ. ಇವೆಲ್ಲವೂ ಚೆನ್ನಾಗಿ ನಿಂತಿರುವ ಈ ವಿಭಾಗದ ಇತರ ಪ್ರತಿಸ್ಪರ್ದಿ ಕಾರ್ ಗಳಿಗೆ ತಕ್ಕುದಾದ ಸ್ಪರ್ಧೆ ಕೊಡುತ್ತದೆಯೇ? ಹೆಚ್ಚು ಮುಖ್ಯವಾಗಿ, ನೆಕ್ಸಾನ್ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಮೊದಲ ಬಿಡುಗಡೆಯಲ್ಲೇ ಹೆಸರು ಮಾಡುವುದೇ? ನಾವು ತಿಳಿಯೋಣ.

 ಬಾಹ್ಯ

ಟಾಟಾ  ನೆಕ್ಸಾನ್  ಒಂದು ಸಬ್ ಕಾಂಪ್ಯಾಕ್ಟ್ SUV ಅಥವಾ ಹ್ಯಾಚ್ ಬ್ಯಾಕ್ ಅಲ್ಲ, ಇದು ಒಂದು ಕ್ರಾಸ್ಒವರ್ ಆಗಿದೆ ನಿಜವಾಗಿ. ನೆಕ್ಸಾನ್ ನಲ್ಲಿರುವ SUV ತರಹದ ಗುಣಗಳೆಂದರೆ ಇದರ ಗ್ರೌಂಡ್ ಕ್ಲಿಯರೆನ್ಸ,   209mm ಇದ್ದು ಇದನ್ನು ರೆನಾಲ್ಟ್ ಡಸ್ಟರ್ ಗೆ ಹೋಲಿಸಬಹುದಾಗಿದೆ ಮತ್ತು ಇದಕ್ಕೆ ದೊಡ್ಡ 16-ಇಂಚು ವೀಲ್ ಗಳು ಇವೆ. ಇದರ ಎತ್ತರದ ನಿಲುವಿನ ಜೊತೆಗೆ ಕೋಪೇ ತರಹದ ಇಳಿಜಾರು ಇರುವ ರೂಫ್ ಲೈನ್ ರೇಂಜ್ ರೋವರ್ ಎವೋಕ್  ರೂಫ್ ಲೈನ್ ಬಿಂಬಿಸುತ್ತ್ತದೆ.

Tata Nexon: First Drive Review

ಇದರ ಅಸಾಂಪ್ರದಾಯಿಕ ವಿನ್ಯಾಸ ಆಕರ್ಷಕವಾಗಿದೆ ಮತ್ತು ಇದನ್ನು ಇತರ ಹಚ್ ಬ್ಯಾಕ್ ಮತ್ತು ಕಾಂಪ್ಯಾಕ್ಟ್ SUV  ಗಳ  ಪಕ್ಕ ನಿಲ್ಲಿಸಿದಾಗ ಎದ್ದು ಕಾಣುತ್ತದೆ. ನೆಕ್ಸಾನ್ ನ ಟಾಪ್ ಸ್ಪೆಕ್  XZ+ವೇರಿಯೆಂಟ್ ನಾವು ಡ್ರೈವ್ ಮಾಡಿದೆವು ಅದರಲ್ಲಿ ಕಾಂಟ್ರಾಸ್ಟ್ ಬಣ್ಣದ ರೂಫ್ ಸ್ಟೀಲ್ ಗ್ರೇ ಮತ್ತು ಕೆಂಪು ಮತ್ತು ನೀಲಿ ಮಿಶ್ರಿತ ಬಾಹ್ಯಗಳು ಇದ್ದವು. ಇದರ ಸಿಗ್ನೇಚರ್ ತುಣುಕುಗಳು ಬಿಳಿ ಪ್ಲಾಸ್ಟಿಕ್ ಟ್ರಿಮ್ ಹೊಂದಿದೆ ಹಾಗು ಗ್ರೀನ್ ಹೌಸ್ ತರಹ ಇದೆ ಬದಿಗಳಲ್ಲಿ. ಮತ್ತು ಇದು ಹಿಂಬದಿಗೂ ಸಹ ಹರಡುತ್ತದೆ ಆದರೆ ಅದು ಪೈಂಟ್ ಆಗಿದೆ ಪ್ಲಾಸ್ಟಿಕ್ ಅಲ್ಲ. ಟಾಟಾ ಅದನ್ನು ಹಾಗೆ ತೆದುಕೊಳ್ಳಬಹುದಿತ್ತು ಆದರೆ ಅದು ಹೆಚ್ಚಾಗೇ ಆಗಿಬಿಡುತ್ತಿತ್ತು ಮತ್ತು ಟಾಟಾ ಹಾಗೆ ಮಾಡಲಿಲ್ಲ ಕೂಡ.

ಗ್ರೇ ರೂಫ್ ಮತ್ತು ವೈಟ್ ಸಶ್ ಹೊರತಾಗಿ, ಮತ್ತೊಂದು ವಿಭಿನ್ನವಾದ ತುಣುಕು ಹೊರಭಾಗದಲ್ಲಿ ಇದೆ ಅದು ಕಪ್ಪು ಪ್ಲಾಸ್ಟಿಕ್ ಕ್ಲಾಡ್ಡಿಂಗ್. ಅದು ನೆಕ್ಸಾನ್ ಅನ್ನು ಸದೃಡವಾಳಗಿ ಮತ್ತು ಎತ್ತರದ  ನಿಲುವನ್ನು ಹೊಂದಿರುವಂತೆ ಮಾಡುತ್ತದೆ.

Tata Nexon: First Drive Review

ನೆಕ್ಸಾನ್ ನ ಕಣ್ಣುಗಳನ್ನು ನೇರವಾಗಿ ನೋಡಿ, ನಿಮಗೆ ಟಾಟಾ ದ ಇಂಪ್ಯಾಕ್ಟ್ ಡಿಸೈನ್ ನ ಸುಳಿವು ಸಿಗುತ್ತದೆ. ಮುಂಭಾಗದ ಗ್ರಿಲ್ ನ ಟಾಪ್ ಲೈನ್ ಹೆಡ್ ಲ್ಯಾಂಪ್ ತನಕ ಹರಡುತ್ತದೆ ಮತ್ತು ಬದಿಗಳಿಗೂ ಸಹ ವ್ಯಾಪಿಸುತ್ತದೆ. ಅದು ಹ್ಯುಮಾನಿಟಿ ಲೈನ್ ಎನ್ನುತ್ತಾರೆ ಟಾಟಾ ದವರು. ನೆಕ್ಸಾನ್ ನ ಡಿಸೈನ್ ಇತರ ಟಾಟಾ ಕಾರ್ ಗಳಿಗಿಂತ ತೀಕ್ಷ್ಣವಾಗಿದೆ. ಮುಂಭಾಗದ ನೋಟವನ್ನು ಚೆನ್ನಾಗಿ ಕಾಣುವಂತೆ ಮಾಡುವ ವಿಷಯಗಳೆಂದರೆ ಹಿಂಬದಿಗೆ ಎಳೆದಂತೆ ಕಾಣುವ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ LED  ಡೇ ಟೈಮ್ ರನ್ನಿಂಗ್ ಲ್ಯಾಂಪ್, ಎತ್ತರದ ಅಳವಡಿಕೆಯ ಫಾಗ್ ಲ್ಯಾಂಪ್, ದೊಡ್ಡ ಮುಂಬಾಗದ ಏರ್ ಚಾವಣಿ ಮತ್ತು ಎದ್ದು ಕಾಣುವ ವೀಲ್ ಆರ್ಚ್ ಗಳು.

Tata Nexon: First Drive Review

ನೆಕ್ಸಾನ್ SUV ತರಹ ಕಂಡರೂ ಮುಂಭಾಗದಿಂದ ಹಿಂಬದಿಯು ಹ್ಯಾಚ್ ಬ್ಯಾಕ್ ತರಹ ಕಾಣುತ್ತದೆ. ಹೈ ಗ್ರೌಂಡ್ ಕ್ಲಿಯರೆನ್ಸ್ ಗಮನಕ್ಕೆ ಬರದಿರಲಾರದು, ಮತ್ತು ಸ್ಟಾಕ್ ಟೈಯರ್ ಗಳು (215/60 R16)ಅಗಲವಾಗಿ ಕಾಣುತ್ತವೆ ನೆಕ್ಸಾನ್ ನ ಅಳತೆ ಗಮನಿಸಿದಾಗ. ಹಿಂಬದಿ ಬಂಪರ್ ನ ಫ್ಯಾಕ್ಸ್ ಸ್ಕಿಡ್ ಪ್ಲೇಟ್ ಸ್ವಲ್ಪ ಕಾಠಿಣ್ಯತೆಯನ್ನು ಕೊಡುತ್ತದೆ. ಇದರಲ್ಲಿ ಬಿಳಿ ಮತ್ತು ಹೊಳೆಯುವ ಕಪ್ಪು ತುಣುಕು ಟೈಲ್ ಲ್ಯಾಂಪ್ ಸುತ್ತ ಇದ್ದು ಡಿಸೈನ್ ಗೆ ವಿಭಿನ್ನತೆ ಕೊಡುತ್ತದೆ. ಆದರೆ  ಸಮಯ ಹೊಂದಂತೆ ನೀವು ಅದಕ್ಕೆ ಹೊಂದಿಕೊಳ್ಳುತ್ತೀರಿ.

ಆಂತರಿಕಗಳು

ಡಿಸೈನ್, ಗುಣಮಟ್ಟ, ಫಿಟ್ ಮತ್ತು ಫಿನಿಷ್, ಉಪಯುಕ್ತತೆ ಹಾಗು ಸಲಕರಣೆಗಳು

Iನೆಕ್ಸಾನ್ ನ ಆಂತರಿಕಗಳಲ್ಲಿ ಮೂರು ಪ್ರಮುಖ ಪದರಗಳಿವೆ. ಮೇಲ್ಬಾಗದಲ್ಲಿ ಡಾರ್ಕ್ ಗ್ರೇ ಪ್ಲಾಸ್ಟಿಕ್ ನಿಂದ ಫಿನಿಷ್ ಕೊಡಲಾಗಿದೆ , ಮತ್ತು ಅದರ ಗುಣಮಟ್ಟ ಚೆನ್ನಾಗಿದೆ. ಮದ್ಯದ ಭಾಗಗಳಲ್ಲಿ ಅಲ್ಯೂಮಿನಿಯಂ ಫಿನಿಷ್ ಕೊಡಲಾಗಿದೆ, ಮತ್ತು ಅದು ಮಾರುಕಟ್ಟೆಗೆ ಅನುಗುಣವಾಗಿದೆ. ಇದರ ದಪ್ಪ ಹಾಗು ಕ್ಯಾಬಿನ್ ನ ಸುತ್ತಲೂ ಹರಡಿರುವದು ನಿಮಗೆ ಒಂದು ಪ್ರೀಮಿಯಂ  ಹ್ಯಾಚ್ ಬ್ಯಾಕ್  ಕಾರ್ ನಲ್ಲಿ ಕೂತ ಅನುಭವ ಕೊಡುತ್ತದೆ. ಮೂರನೇ ಮತ್ತು ಕೆಳಭಾಗದ ಪದರದಲ್ಲಿ ಗ್ರೇ ಬಿಜ್ ತರಹದ   ಹೊರಪದರ ಹೊಂದಿರುವ  ಪ್ಲಾಸ್ಟಿಕ್ ಉಪಯೋಗಿಸಲಾಗಿದೆ. ಈ ಪ್ಲಾಸ್ಟಿಕ್ ಸ್ವಲ್ಪ ಕಠಿಣವಾಗಿದೆ ಮುಟ್ಟಿದರೆ, ಮತ್ತು ಅದರ ಫಿಟ್ ಮತ್ತು ಫಿನಿಷ್ ಗುಣಮಟ್ಟ ಕೂಡ ಅಷ್ಟೇನು ಸರಿಯಿಲ್ಲ ಎಂದೆನಿಸುತ್ತದೆ. ಉದಾಹರಣೆಗೆ ಗ್ಲೋವ್ ಬಾಕ್ಸ್ ಮುಚ್ಚಲು ಒಂದಕ್ಕಿಂತ ಹೆಚ್ಚು ಬಾರಿ ಪ್ರಯತ್ನಿಸಬೇಕಾಗುತ್ತದೆ. ಮತ್ತು ಡೋರ್ ನ ಕೆಳಭಾಗದ ಫಿಟ್ ಕೂಡ ಪ್ರಶ್ನಿಸಬಹುಆಗಿದೆ, ಅದರಲ್ಲೂ ಡೋರ್ ಪಾಕೆಟ್ ಸುತ್ತ. ಎವೆರಡು ಭಾಗಗಳಲ್ಲಿ ಮಾತ್ರ ನಿಮಗೆ ಮುಟ್ಟಿದಾಗ ಫಿಟ್ ಅಂಡ್ ಫಿನಿಷ್ ನಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದೆನಿಸುತ್ತದೆ. ಅದನ್ನು ಬಿಟ್ಟು ಟಾಟಾ ಬಹಳಷ್ಟು ಒಳ್ಳೆ ಕೆಲಸ ಮಾಡಿದೆ  ಮುಟ್ಟಬಹುದಾದ ಭಾಗಗಳ ಅಂತರಿಕಗಳ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ.

Tata Nexon: First Drive Review

ನೆಕ್ಸಾನ್ ನ ಡ್ಯಾಶ್ ಬೋರ್ಡ್ ಮೇಲೆ 6.5-ಇಂಚು ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಮತ್ತು ಮುಖ್ಯವಾಗಿ ಅದು ಹೆಚ್ಚು ಗಣಮಟ್ಟ ಹೊಂದಿದೆ ಮತ್ತು ಆಲೋಚಿಸಿ ಅಳವಡಿಸಲಾಗಿದೆ. ಡಿಸ್ಪ್ಲೇ ಯು ಚೆನ್ನಾಗಿದೆ ಮತ್ತು ಹೆಚ್ಚು ಬೆಳಕು ಇರುವಾಗಲೂ ಓದಬಹುದಾಗಿದೆ. ಕೇವಲ ಕ್ಯಾಮರಾ ಡಿಸ್ಪ್ಲೇ ಮಾತ್ರ ಸ್ವಲ್ಪ ಮಬ್ಬುಮಬ್ಬಾಗಿದೆ. ಆರೇ ಅದು ಕ್ಯಾಮರಾ ದ ಗುಣಮಟ್ಟದ ಬಗ್ಗೆ ಹೆಚ್ಚು ಅವಲಂಬಿತವಾಗಿದೆ, ಸ್ಕ್ರೀನ್ ನ್ ಗುಣಮಟ್ಟಕ್ಕಿಂತ.

Tata Nexon: First Drive Review

ಉಪಯೋಗಿಸುವವರ ಅನುಕೂಲತೆ ಚೆನ್ನಾಗಿದೆ ಮತ್ತು ಅವಶ್ಯಕವಾದ ಕಂಟ್ರೋಲ್ ಗಳಾದ ಏರ್ ಕಾನ್ ಸೆಟ್ಟಿಂಗ್ ಗಳು, ಆಡಿಯೋ ಸಿಸ್ಟಮ್, ಮತ್ತು ದೊಡ್ಡ ಮೆನು ಗಳನ್ನು ಸುಲಭವಾಗಿ ಪಡೆಯಬಹುದು. ಇದರ  ಟಚ್ ಸ್ಕ್ರೀನ್ ಹೆಚ್ಚು ಗಮನಾರ್ಹವಾಗಿಲ್ಲ, ಮತ್ತು ಪ್ರತಿಬಾರಿ ಉಪಯೋಗಿಸುವಾಗ ಸ್ವಲ್ಪ ತಡವರಿಕೆ ಇರುತ್ತದೆ. ಆದರೆ ಅದು ಇನ್ಪುಟ್ ಗಳನ್ನು  ಮಾಡುವುದಿಲ್ಲ. ನೀವು ಹೊರಗಿನ ಬಟನ್ ಗಳನ್ನೂ ಮತ್ತು ಕ್ನೋಬ್ ಗಳನ್ನೂ ಉಪಯೋಗಿಸಿದರೆ ಪ್ರತಿಕ್ರಿಯೆ ಸುಲಭವಾಗಿರುತ್ತದೆ, ಮತ್ತು ಅವನ್ನು ಟಾಟಾ ದವರು ಅನುಕೂಲವಾಗುವಂತೆ ಅಳವಡಿಸಿದ್ದಾರೆ, ನಿಮಗೆ ಡ್ರೈವ್ ಮಾಡುವಾಗ ಆಪರೇಟ್ ಮಾಡಲು ಸಹಾಯವಾಗುವಂತೆ.

ಟಾಟಾ ಆಪಲ್ ಕಾರ್ ಪ್ಲೇ ಯನ್ನು  ಬಿಡುಗಡೆ ಸಮಯದಲ್ಲಿ ಕೊಡಬೇಕೆಂದಿತ್ತು, ಆದರೆ ನಾವು ಟೆಸ್ಟ್ ಡ್ರೈವ್ ಮಾಡಿದ ಕಾರ್ ನಲ್ಲಿ ಕೇವಲ ಆಂಡ್ರಾಯ್ಡ್ ಆಟೋ ಇತ್ತು. ಡ್ರೈವರ್ ಕಡೆಯ ಇನ್ಸ್ಟ್ರುಮೆಂಟ್ ಬಿನಕ್ಲ್ ಸರಳವಾಗಿ ಡಿಸೈನ್ ಮಾಡಲಾಗಿದೆ. ಮತ್ತು ಇದರಲ್ಲಿ ಮಲ್ಟಿ ಡಿಸ್ಪ್ಲೇ ಯೂನಿಟ್ ಅನ್ನು ಸ್ಪೀಡೋಮೀಟರ್ ಹಾಗು ಟ್ಯಾಚೊಮೆತೆರ್ ಮದ್ಯ ಅಳವಡಿಸಲಾಗಿದೆ. ನಿಮಗೆ ಎರೆಡು ಟ್ರಿಪ್ ಮೀಟರ್ ಗಳು ಸಿಗುತ್ತವೆ, ಒಟ್ಟಾರೆ  ಮೈಲೇಜ್ ಸಂಖ್ಯೆ ಡಿಸ್ಪ್ಲೇ, ಖಾಲಿಯಾಗುವ ಮುಂಚೆ ಕ್ರಮಿಸಬಹುದಾದ ದೂರ, ಮತ್ತು ಇತರ ವಿವರಗಳು ಕೊಡಲಾಗಿದೆ.

Tata Nexon: First Drive Review

ಸೆಂಟರ್ ಕನ್ಸೋಲ್ ಸೆಂಟ್ರಲ್ AC ವೆಂಟ್ ಗಳಿಂದ ಹಿಡಿದು ಹಿಬದಿಯ ತನಕ ವ್ಯಾಪಿಸಿದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಕ್ನೋಬ್ ಹೊರತಾಗಿ ಇದರಲ್ಲಿ USB ಮತ್ತು AUX ಪೋರ್ಟ್ ಹಾಗು ಡ್ರೈವ್ ಸೆಲೆಕ್ಟ್ ಕ್ನೋಬ್ ಅನ್ನು ಕೊಡಲಾಗಿದೆ. ಇದರಲ್ಲಿ ಎರೆಡು ಕಪ್ ಹೋಲ್ಡರ್ ಗಳು, ಮತ್ತು ಅದಕ್ಕೆ ಟಂಬೌರ್ ಡೋರ್ ಸಹ ಕೊಡಲಾಗಿದೆ, ನೀವು ಈ ತರಹದ ರೋಲರ್ ಶಟರ್ ಅನ್ನು ಕೆಲವು ಹೈ ಎಂಡ್ ಕಾರ್ ಗಳಲ್ಲಿ ನೋಡಬಹುದಾಗಿದೆ. ನೋಟದಲ್ಲಿ ಇದು ನಿಮಗೆ ಆಕರ್ಷಕವಾಗಿರುತ್ತದೆ. ಆದರೆ ಕ್ಯೂಬ್ಬ್ಯ್ ಹೋಲ್ ಗಳು ಎರ್ಗಾನಾಮಿಕ್ ಆಗಿ ಫೇಲ್ ಆಗಿವೆ. ಅವು ತೀರಾ ಆಳವಾಗಿದ್ದು ಕಪ್ ಗಳನ್ನೂ ಇತ್ತು ಮತ್ತೆ ತೆಗೆಯುವುದಕ್ಕೆ ಕಷ್ಟವಾಗಬಹುದು. ಸ್ವಲ್ಪ ಹಿಂದಕ್ಕೆ ಸರಿದರೆ ಆರ್ಮ್ ರೆಸ್ಟ್ ಇದ್ದು ಅದರಲ್ಲಿ ಚಿಕ್ಕ ಗ್ಲೋವ್ ಬಾಕ್ಸ್ ಇದ್ದು ಅದರಲ್ಲಿ ಸ್ಮಾರ್ಟ್ ಫೋನ್ ಮತ್ತು ಪರ್ಸ್ ಗಳನ್ನು ಇಡಲು ಸಾಕಷ್ಟು ಜಾಗ ಇದೆ. ಈ ಜಾಗದಲ್ಲಿ USB ಮತ್ತು  AUX ಸಾಕೆಟ್ ಗಳು ಇರಬೇಕಾಗಿತ್ತು. ಸೆಂಟರ್ ಆರ್ಮ್ ಹಿಂಬದಿಯ ಕ್ಯಾಬಿನ್ ತನಕ ಚಾಚುತ್ತದೆ ಮತ್ತು ಅದರಲ್ಲಿ ಏರ್ ಕಾನ್ ಬ್ಲೋವೆರ್ ಗಳನ್ನೂ  ಹಿಂಬದಿಯ ಪ್ಯಾಸೆಂಜರ್ ಗಳಿಗಾಗಿ ಅಳವಡಿಸಲಾಗಿದೆ.

ಆರಾಮದಾಯಕಗಳು

ನೆಕ್ಸಾನ್ ನ ಕ್ಯಾಬಿನ್ ಎಷ್ಟು ಆರಾಮದಾಯಕವಾಗಿದೆ ಎಂದರೆ ಏನನ್ನು ಒಮ್ಮೆ ಹೇಳಲೇಬೇಕಾಗುತ್ತದೆ. ವಿಷಯವನ್ನು ನೇರವಾಗಿ ಹೇಳಬೇಕೆಂದರೆ ನೆಕ್ಸಾನ್ ಕಾರ್ ನಾಲ್ಕು ಜನಕ್ಕೆ ಹೆಚ್ಚು ಸೂಕ್ತವಾಗಿದೆ. ನಾವು ಹೀಗೆ ಹೇಳಿದಾಗ ಅದರ ಅರ್ಥ ಕ್ಯಾಬಿನ್ ಚಿಕ್ಕದಾಗಿದೆ ಎಂದಲ್ಲ. ಹಿಂಬದಿಯ ಸೀಟ್ ಅನ್ನು ಹಾಗೆ ಡಿಸೈನ್ ಮಾಡಿದ್ದಾರೆ ಎಂದು ಹೇಳಲು. ಹಾಗಾಗಿ ನೀವು ಹಿಂಬದಿಯಲ್ಲಿ ಕುಳಿತುಕೊಳ್ಳಬೇಕಾದರೆ ಸೀಟ್ ಅನ್ನು ಇಬ್ಬರು ಪ್ಯಾಸೆಂಜರ್ ಗಳು ಕೂರಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಸೆಂಟ್ರಲ್ ಆರ್ಮ್ ರೆಸ್ಟ್ ಇದ್ದು ಅದನ್ನು ಮೂರನೇ ಪ್ಯಾಸೆಂಜರ್ ಕುಳಿತುಕೊಳ್ಳಬಯಸಿದಾದರೆ ಹಿಂದಕ್ಕೆ ಮಡಚಬಹುದು. ಆದರೆ ನೀವು ಹಾಗೆ ಮಾಡುವ ಸಾಧ್ಯತೆ ಕಡಿಮೆ, ನೀವು ಹತ್ತಿರದ ಪ್ರಯಾಣ ಮಾಡದಿದ್ದ ಹೊರತು.

Tata Nexon: First Drive Review

ಇದರ ಹೊರತಾಗಿ ನೆಕ್ಸಾನ್ ನ ಕ್ಯಾಬಿನ್ ಒಂದು ಹೆಚ್ಚು ಆರಾಮದಾಯಕವಾಗಿರುವ ಕ್ಯಾಬಿನ್ ಹೊಂದಿರುವ ಸಬ್ -4m ವಾಹನದ ವಿಭಾಗದಲ್ಲಿರುವ ಕಾರ್ ಆಗಿದೆ. ಸ್ಟಿಯರಿಂಗ್ ನ ರೇಕ್ ಅನ್ನು ಹೊಂದಿಸಬಹುದಾಗಿದೆ. ಡ್ರೈವರ್ ಸೀಟ್ ನ ಎತ್ತರ ಸರಿಹೊಂದಿಸಬಹುದಾಗಿದೆ ಮತ್ತು ಸೊಂಟದ ಭಾಗಕ್ಕೆ ಚೆನ್ನಾಗಿ ಬೆಂಬಲ ಸಿಗುತ್ತದೆ. ಹಾಗಾಗಿ ಡ್ರೈವಿಂಗ್ ಪೊಸಿಷನ್ ಗೆ ಬರಲು ಸುಲಭವಾಗುತ್ತದೆ. ಬಕೆಟ್ ಸೀಟ್ ಗಳು ವಿಭಿನ್ನವಾದ ಅಳತೆಯ ಪ್ಯಾಸೆಂಜರ್ ಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಮತ್ತು ತೊಡೆಗಳಿಗೆ ಹೆಚ್ಚು ಸಪೋರ್ಟ್ ಇದ್ದು ಪ್ಯಾಸೆಂಜರ್ ಗಳಿಗೆ ಆರಾಮದಾಯಕವಾಗಿರುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.

Tata Nexon: First Drive Review

ಹಿಂಬದಿಯ ಸೀಟ್ ಗಳಿಗೂ ಹಾಗೆ ಇದೆ. ಹಿಂಬದಿಯ ಎರೆಡು ಸೀಟ್ ಗಳನ್ನು ಕ್ಯಾಪ್ಟನ್ ಸೀಟ್ ಗಳಂತೆ ಭಾವಿಸಬಹುದು (ಹೌದು, ಅದನ್ನು ಅಷ್ಟು ಚೆನ್ನಾಗಿ ವಿನ್ಯಾಸ ಮಾಡಿದ್ದಾರೆ) ಮತ್ತು ನೀವು ಅದರಲ್ಲಿ ಸೇರಿಕೊಂಡುಬಿಡುತ್ತೀರಿ. ಸೀಟ್ ನ ಹಿಂಬದಿಯ ಕೋನಗಳು ಹೇಗಿವೆಯೆಂದರೆ ಅವನ್ನು ಕಂಫರ್ಟ್ ಮೋಡ್ ಗೆ ಸೆಟ್ ಮಾಡಿದಂತಿದೆ. ಸೊಂಟ ಹಾಗು ತೊಡೆಗಳ ಸುತ್ತಲಿನ ಭಾಗವನ್ನು ಹಚ್ಚು ಮೆತ್ತಗೆ ಮಾಡಿದ್ದಾರೆ ಇತರ ಬಾಗಗಳಿಗೆ ಹೋಲಿಸಿದರೆ, ಮತ್ತು ಸೀಟ್ ಅನ್ನು ತಮಗೆ ಬೇಕಾದಂತೆ ಹೇಳಿ ಮಾಡಿಸಿದಂತೆ ಇದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್

ನೆಕ್ಸಾನ್ ನಲ್ಲಿ 1.2-ಲೀಟರ್ ಟರ್ಬೋಚಾರ್ಜ ಪೆಟ್ರೋಲ್ ಎಂಜಿನ್ ಇದೆ ಮತ್ತು ಒಂದು 1.5-ಲೀಟರ್ ಟರ್ಬೋಚಾರ್ಜ ಡೀಸೆಲ್ ಎಂಜಿನ್ ಸಹ ಇದೆ. ಎರೆಡೂ  ಎಂಜಿನ್ ಗಳಿಗೆ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ, ಮತ್ತು 110PS  ಗರಿಷ್ಟ ಪವರ್ ಹೊರಸೂಸುತ್ತದೆ. ಎರೆಡನ್ನು ಟಾಟಾ ದವರು ಮಾಡಿದ್ದಾರೆ ಮತ್ತು ಪೆಟ್ರೋಲ್ ಎಂಜಿನ್ ಖಂಡಿತವಾಗಿಯೂ ಟರ್ಬೋಚಾರ್ಜ್ಡ್ ಎಂಜಿನ್ ಆಗಿದ್ದು ಟಿಗೋರ್ ನ ಎಂಜಿನ್ ಸಹ ಆಗಿದೆ. ಡೀಸೆಲ್ ಎಂಜಿನ್ ಹೊಸದಾಗಿ ಮಾಡಲಾಗಿದೆ.

Tata Nexon: First Drive Review

ಡೀಸೆಲ್ ಎಂಜಿನ್

ಇದು ಟಾಟಾ ದ ಇಲ್ಲಿಯವರೆಗಿನ  ಅತಿ ಚೆನ್ನಾಗಿರುವ ಡೀಸೆಲ್ ಎಂಜಿನ್ ಆಗಿದೆ, ಮತ್ತು ಇದನ್ನು ಕಾಂಪ್ಯಾಕ್ಟ್ ಕಾರ್ ಗಳಲ್ಲಿ ಅತುತ್ತಮವಾಗಿರುವ ಡೀಸೆಲ್ ಎಂಜಿನ್ ಎಂದು  ಪರಿಗಣಿಸಬಹುದು. ಈ ಎಂಜಿನ್ ಗರಿಷ್ಟ 260Nm  ಟಾರ್ಕ್ ಅನ್ನು  1500-2700rpm ನಲ್ಲಿ ಕೊಡುತ್ತದೆ ಹಾಗು ಗರಿಷ್ಟ  110PS ಪವರ್ ಅನ್ನು 3750rpm ನಲ್ಲಿ ಕೊಡುತ್ತದೆ. ಪೇಪರ್ ನಲ್ಲಿ ಅತಿ ಹೆಚ್ಚು ತಾರ್ಕ್ ಹೊಂದಿರುವ ಕಾರ್ ಆಗಿದೆ ಈ ವಿಭಾಗದಲ್ಲಿ. ಮತ್ತು ಗರಿಷ್ಟ ಟಾರ್ಕ್ ಕೊಡುವ ವಿಷಯ ಮತ್ತು ಅದರ ವ್ಯಾಪ್ತಿ ಹೆಚ್ಚು ವೈಶಿಷ್ಟ್ಯತೆ ಹೊಂದಿದೆ. ಇದು ನಿಮಗೆ ಮೂರನೇ ಗೇರ್ ನಲ್ಲಿ 30-40kmph ವೇಗದಲ್ಲಿ ಕಡಿಮೆ ಗೇರ್ ಗಳಿಗೆ ಹೋಗದೆ ಡ್ರೈವ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಮತ್ತು ಇದು  80kmph ಅನ್ನು ನಾಲ್ಕನೇ ಗೇರ್ ನಲ್ಲಿ  4000rpm(ರೆಡ್ ಲೈನ್ ಸ್ಟಾರ್ಟ್ ಆಗುತ್ತದೆ )ನಲ್ಲಿ ಪಡೆಯಬಹುದು ಹೆಚ್ಚು ಪರಿಶ್ರಮವಿಲ್ಲದೆ.

ಪೆಟ್ರೋಲ್ ಎಂಜಿನ್

ಇದರಲ್ಲಿರುವ 1.2-ಲೀಟರ್,3-ಸಿಲಿಂಡರ್ ಎಂಜಿನ್ ಟಿಗೋರ್ ನಿಂದ ಪಡೆದದ್ದು  25PS  ಪವರ್ ಅನ್ನು ಟರ್ಬೋಚಾರ್ಜರ್ ನೊಂದಿಗೆ ಪಡೆಯುತ್ತದೆ. ಇದರಲ್ಲಿ ಗರಿಷ್ಟ 110PS ಪವರ್  5000rpm  ನಲ್ಲಿ ಹಾಗು 170Nm ಗರಿಷ್ಠಾ ಟಾರ್ಕ್ 1750-4000rpm ನಲ್ಲಿ ಕೊಡುತ್ತದೆ.

ಆದರೂ ಪೆಟ್ರೋಲ್ ಎಂಜಿನ್ ಡೀಸೆಲ್ ಎಂಜಿನ್ ನಂತೆ ಹೆಚ್ಚು ಉತ್ಸಾಹಭರಿತವಾಗಿಲ್ಲ ಮತ್ತು ನವೀಕರಣ ಹೊಂದಿಲ್ಲ. ಹಾಗಾಗಿ ಡೀಸೆಲ್ ಎಂಜಿನ್ ಕಡಿಮೆ rpm ನಲ್ಲೂ ಸಹ ಬೇಗನೆ ಪ್ರತಿಕ್ರಿಯಿಸುತ್ತದೆ, ಪೆಟ್ರೋಲ್ ಎಂಜಿನ್ ಸ್ವಲ್ಪ ಮಂದವಾಗಿ ಪ್ರತಿಕ್ರಯಿಸುತ್ತದೆ, ಮತ್ತು ನೀವೇನಾದರೂ ಎಲ್ಲ ಪ್ಯಾಸೆಂಜರ್ ಗಾಲ ಜೊತೆ ಪ್ರಯಾಣಿಸುತ್ತಿದ್ದರೆ ಹೆಚ್ಚು  ಮಂದಗತಿ ಪಡೆಯುತ್ತದೆ. ಪೆಟ್ರೋಲ್ ಎಂಜಿನ್ ತನ್ನ ಗರಿಷ್ಟ ಪವರ್ ಅನ್ನು 3000rpm ನಲ್ಲಿ ಪಡೆಯುತ್ತದೆ  ಟರ್ಬೋಚಾರ್ಜ ಕೆಲಸಮಾಡುವ 1750rpm ನಲ್ಲಿ ಅಲ್ಲ.

ಪೆಟ್ರೋಲ್ ಎಂಜಿನ್ ಸುಲಭವಾಗಿ ವೇಗಗತಿ ಪಡೆಯುವ ಗುಣ ಹೊಂದಿಲ್ಲ,ಮತ್ತು ಟಾರ್ಕ್  ನ ಮೇಲೆ ಹೆಚ್ಚು ಅವಲಂಬಿಸಿರುತ್ತದೆ ವೇಗಗತಿ ಪಡೆಯಲು. ಟಾರ್ಕ್ ಬ್ಯಾಂಡ್  ಅಗಲವಾಗಿದ್ದು ನೆಕ್ಸಾನ್ 4000rpm ನಂತರವೂ ವೇಗಗತಿ ಪಡೆಯುತ್ತದೆ. ಆಶ್ಚರ್ಯಕರ ವಿಷಯವೆಂದರೆ ಎಂಜಿನ್ 5500rpm  ರೆಡ್ ಲೈನ್ ನಂತರವೂ ಹೆಚ್ಚು ಕರ್ಕಶವಾಗಿ ಇರುವುದಿಲ್ಲ. ಎಂಜಿನ್ ನ ಶಬ್ದ 3000rpm ನಂತರ ಹೆಚ್ಚು ಸ್ಪರ್ಧಾತ್ಮಕವಾಗಿ ಇರುತ್ತದೆ.

ಟ್ರಾನ್ಸ್ಮಿಷನ್ ಮತ್ತು ಡ್ರೈವ್ ಮೋಡ್ ಗಳು

Tata Nexon: First Drive Review

ನೆಕ್ಸಾನ್ ನಲ್ಲಿ ಮೂರು ಡ್ರೈವ್ ಮೋಡ್ ಗಳು ಲಭ್ಯವಿದೆ. ಸ್ಪೋರ್ಟ್, ಏಕೋ ಮತ್ತು ಸಿಟಿ ಇವೆಲ್ಲವೂ ಎಂಜಿನ್ ನ ಗುಣಗಳನ್ನು ಬದಲಾಯಿಸುತ್ತದೆ ನಿಮಗೆ ಅದರ ಉಪಯೋಗ ಮಾಡಿಕೊಳ್ಳಲು ಸಹಾಯವಾಗುವಂತೆ. ಸ್ಪೋರ್ಟ್ ಮೋಡ್ ನಲ್ಲಿ ಹೆಚ್ಚು ವೇಗಗತಿ ಮಾಡೆಯಬಹುದು, ಸಿಟಿ ಮೋಡ್ ನಲ್ಲಿ ನೀವು ವೇಗ ಹೆಚ್ಚಿಸಿದಾಗ ಎಂಜಿನ್ ಕಷ್ಟಪಡುವಂತೆ ಭಾಸವಾಗುವುದು. ಏಕೋ ಮೋಡ್ ನಲ್ಲಿ ಹೆಚ್ಚು ಮೈಲೇಜ್ ಪಡೆಯಬಹುದು. ಎಂಜಿನ್ ನ ಗಮನರ್ಹ ಬದಲಾವಣೆಯಿಂದಾಗಿ ನೀವು ಸ್ಪೋರ್ಟ್ ಮೋಡ್ ನಲ್ಲಿ ಇಲ್ಲದಿದ್ದರೆ ಆಗಾಗ್ಗೆ ಗೀಕ್ರ್ ಬದಲಾಯಿಸಬಯಸಬಹುದು ಎಂಜಿನ್ ವೇಗಗತಿ ಕಡಿಮೆಯಾದಾಗ.

ಗೇರ್ ಬದಲಾವಣೆಗಳ ಬಗ್ಗೆ ಹೇಳುವುದಾದರೆ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅತಿ ಹೆಚ್ಚು ಸುಲಭವಾಗಿಲ್ಲದಿದ್ದರೂ ಹೆಚ್ಚು ಪರಿಶ್ರಮವಿಲ್ಲದೆ ಗೇರ್ ಬದಲಾವಣೆ ಮಾಡಬಹುದು. ಗೇರ್ ನ ಬದಲಾವಣೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಆದರೆ ಕ್ಲಚ್ ಅತಿ ಸುಲಭವಾಗಿದೆ.

ರೈಡ್ ಮತ್ತು ಹ್ಯಾಂಡಲಿಂಗ್

ನೆಕ್ಸಾನ್ ನಲ್ಲಿ ಮ್ಯಾಕ್ ಫೆರ್ಸನ್ ಸ್ಟ್ರೆಟ್ ಗಳನ್ನೂ ಮುಂದಿನ ಭಾಗದಲ್ಲಿ ಅಳವಡಿಸಲಾಗಿದೆ ಮತ್ತು ಟ್ವಿಸ್ಟ್ ಬೀಮ್ ಸೆಟ್ ಅಪ್ ಅನ್ನು ಹಿಂದಿನ ಭಾಗದಲ್ಲಿ ಅಳವಡಿಸಲಾಗಿದೆ. ರೈಡ್ ನಯವಾಗಿದ್ದು ಹೆಚ್ಚು ಬಾಡಿ ರೋಲ್ ಇಲ್ಲದ್ದರಿಂದ ಒಳಗಡೆ ಹೆಚ್ಚು ಸೌಕರ್ಯವಾಗಿರುತ್ತದೆ. ಇದು ಪಾಟ್ ಹೋಲ್ ಗಳನ್ನು ದೊಡ್ಡ SUV  ಗಳಂತೆ ನಿಭಾಯಿಸುತ್ತದೆ. ಹಾಗಾಗಿ ನಿಮಗೆ ಕೇಳಬಹುದಾದ ಶಬ್ದವೆಂದರೆ ತಡ್ ಎಂಬ ಶಬ್ದ ಮತ್ತು ಸ್ವಲ್ಪ ಎಳೆತ ಮತ್ತು ಅವು ಬೇಗನೆ ಸರಿಹೊಂದುತ್ತದೆ. ಡೀಸೆಲ್ ನೆಕ್ಸಾನ್ ಪೆಟ್ರೋಲ್ ನೆಕ್ಸಾನ್ ಗಿಂತಲೂ  68kg ಹೆಚ್ಚು ಬಾರವಾಗಿದೆ. ಮತ್ತು ಹೆಚ್ಚಿನ ಬಾರಾ ಅದನ್ನು ಅಂಕು ಡೊಂಕು ರಸ್ತೆಗಳಲ್ಲಿ ಸದೃಢವಾಗಿ ಇರುವಂತೆ ಮಾಡುತ್ತದೆ.

Tata Nexon: First Drive Review

ಡೀಸೆಲ್ ನೆಕ್ಸಾನ್ ತನ್ನ ಹೆಚ್ಚಿನ ಬಾರದ ಪರಿಣಾಮವನ್ನು ರೈಡ್ ಮೇಲೆ ತೋರುತ್ತದೆ ಆದರೆ ಹೆಚ್ಚಾಗಿ ಅಲ್ಲ. ಇದರ ಭಿನ್ನತೆ ಗೆ ಕಾರಣ  ತಿರುವುಗಳಲ್ಲಿ ಡೀಸೆಲ್ ನೆಕ್ಸಾನ್ ಅಂಡರ್ ಸ್ಪೀರ್  ಆಗುತ್ತದೆ, ಅದೇ ಸಮಯದಲ್ಲಿ ಪೆಟ್ರೋಲ್ ನೆಕ್ಸಾನ್ ಉತ್ಸುಕವಾಗಿ ಚಲಿಸಿತ್ತದೆ ಹೋಲಿಕೆಯಲ್ಲಿ. ಒಟ್ಟಿನಲ್ಲಿ, ನೆಕ್ಸಾನ್ ರೋಡ್ ಮೇಲೆ ಹೆಚ್ಚು ವಿಶ್ವಾಸ ಮೂಡಿಸುತ್ತದೆ. ಮತ್ತು ಹೈವೇ ಗಳಲ್ಲಿನ ದೃಢತೆ ಮತ್ತು ಹೆಚ್ಚು ವೇಗಗಗತಿ ಪಡೆಯುವಿಕೆ ಬಗ್ಗೆ ಚಿಂತಿಸಬೇಕಾಗಿಲ್ಲ.

ಡಿಸ್ಕ್ ಬ್ರೇಕ್ ಗಳು ಮುಂದುಗಡೆ ಇದ್ದು ಡ್ರಮ್ ಬ್ರೇಕ್ ಗಳು ಹಿಂಬದಿಯಲ್ಲಿ ಕೊಡಲಾಗಿದೆ ಹಾಗಾಗಿ ಶೀಘ್ರವಾಗಿ ಬ್ರೇಕ್ ಹಾಕಬೇಕಾದರೆ ಅನುಕೂಲವಾಗುತ್ತದೆ. ಆದರೆ, ಬ್ರೇಕ್ ಗಳು ಒಮ್ಮೆಲೇ ಆಗುವುದಿಲ್ಲ. ನೀವು ಬ್ರೇಕ್ ಹಾಕುವುದನ್ನು ಸಮಯೋಚಿತವಾಗಿ  ಬಳಸಬೇಕಾಗುತ್ತದೆ.

ಅಂತಿಮ ಅನಿಸಿಕೆ

ನೆಕ್ಸಾನ್ ನ ಶೈಲಿ ಎಲ್ಲರಿಗೂ ಇಷ್ಟವಾಗದಿರಬಹುದು. ಆದರೆ ಯಾರು ವಿಭಿನ್ನವಾಗಿರುವ ಮತ್ತು ಅದರದೇ ಆದ ವೈಶಿತ್ಯತೆ ಹೊಂದಿರುವ ಕಾರ್ ಅನ್ನು ಬಯಸುವವರಿಗೆ ಇಷ್ಟವಾಗಬಹುದು. ಫೀಚರ್ ಗಳ ಲಿಸ್ಟ್ ಹತ್ತಿರದ ಪ್ರತಿಸ್ಪರ್ದಿಗಳಿಗೆ ತಕ್ಕುದಾಗಿದೆ. ಮತ್ತು ಇದರಲ್ಲಿ ಚತುರತೆಗಳು ಕೂಡ ಇದೆ ( ಛತ್ರಿ ಹಿಡಿಯುವುದಕ್ಕೆ ಜಾಗ, ಮತ್ತು ಆಕ್ಟಿವಿಟಿ ಕೀ ) ಅವು ಇದರ ವಿಭಿನ್ನತೆಗೆ ಪೂರಕವಾಗಿವೆ. ಇದರ ಜೊತೆಗೆ ಹೆಚ್ಚು ಟಾರ್ಕ್ ಇರುವ ಡೀಸೆಲ್ ಎಂಜಿನ್ , ಮತ್ತು ವಿಶಾಲವಾದ ಕ್ಯಾಬಿನ್/ಬೂಟ್ ಜಾಗ, ಮತ್ತು ಟಾಟಾ ಇದರಲ್ಲಿ ತನ್ನ ಪ್ರಾವೀಣ್ಯತೆ ತೋರಿದೆ ಎಂದು ಅನ್ನಿಸುತ್ತದೆ.

Tata Nexon: First Drive Review

ಹೌದು, ಕ್ವಾಲಿಟಿ ಗುಣಮಟ್ಟ ಇನ್ನು ಸ್ವಲ್ಪ ಸುಧಾರಿಸಬಹುದಿತ್ತು, ಮತ್ತು ಪೆಟ್ರೋಲ್ ಎಂಜಿನ್ ಹೆಚ್ಚು ಪವರ್ ಹೊರಹೊಮ್ಮಬಹುದಿತ್ತು. ಇದು ಹೇಳಿದ ನಂತರ, ಇವೆಲ್ಲವೂ ನೆಕ್ಸಾನ್ ಬೇಡ ಎನ್ನುವುದಕ್ಕೆ ಕಾರಣವಾಗುವುದಿಲ್ಲ. ಇದರ ಊಹಿಸಬಹುದಾದ ಬೆಲೆ ಪಟ್ಟಿ ಆದ ರೂ  6 ಲಕ್ಷ ದಿಂದ  to Rs 9 ಲಕ್ಷ ವರೆಗೆ, ಇದು ಸಬ್ 4-ಮೀಟರ್ ನಲ್ಲಿನ SUV  ವಿಭಾಗದಲ್ಲಿನ ಪ್ರತಿಸ್ಪರ್ದಿಗಳಿಗೆ ಸಮಸ್ಯೆ ಕೊಡುತ್ತದೆ.

Images: Vikrant Date

 

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience