• English
  • Login / Register

ಟಾಟಾ ನೆಕ್ಸಾನ್ vs ಮಾರುತಿ ಸುಜುಕಿ ವಿಟಾರಾ ಬ್ರೆಝ : ಹೋಲಿಕೆ ವಿಮರ್ಶೆ

Published On ಮೇ 28, 2019 By alan richard for ಟಾಟಾ ನೆಕ್ಸಾನ್‌ 2017-2020

  • 1 View
  • Write a comment

ಹೊಸ ಶೈಲಿಯ ಪ್ರತಿಸ್ಪರ್ದಿ ಒಂದು ಬಂದಿದೆ ವಿಟಾರಾ ಬ್ರೆಝ ದ ಕಿರೀಟವನ್ನು ತೆಗೆದುಕೊಳ್ಳಲು, ಸಬ್ 4-ಮೀಟರ್ SUV ವಿಭಾಗದಲ್ಲಿ. ಅದರ ಫಲಿತಾಂಶ ಆಶ್ಚರ್ಯಕರವಾಗಿದೆ.

  • ಪರೀಕ್ಷಿಸಿದ ಕಾರ್: ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝ

  • ಎಂಜಿನ್: 1.5-ಲೀಟರ್ ಡೀಸೆಲ್ ಮಾನ್ಯುಯಲ್ 110PS/260Nm vs 1.3-ಲೀಟರ್ ಈಸೆಲ್ ಮಾನ್ಯುಯಲ್ | 90PS/200NM

  • ARAI ಘೋಷಿಸಲ್ಪಟ್ಟ ಮೈಲೇಜ್ :21.5kmpl (ನೆಕ್ಸಾನ್)/ 24.3kmpl (ವಿಟಾರಾ ಬ್ರೆಝ)

  • ನೆಕ್ಸಾನ್ ರೋಡ್ ಟೆಸ್ಟ್ ಮೈಲೇಜ್: 16.8kmpl (ಸಿಟಿ ) / 23.97kmpl (ಹೈವೇ)

  • ವಿಟಾರಾ ಬ್ರೆಝ ರೋಡ್ ಟೆಸ್ಟ್ ಮೈಲೇಜ್: 21.70kmpl (ಸಿಟಿ) / 25.30kmpl (ಹೈವೇ)

Tata Nexon vs Maruti Suzuki Vitara Brezza: Comparison Review

ಪರ

  • ನೆಕ್ಸಾನ್ : ಕಣ್ಣು ಸೆಳೆಯುವ ಡಿಸೈನ್ ಅದ್ಭುತವಾಗಿ ವಿನ್ಯಾಸ ಮಾಡಿರುವ ಕಾರ್ ಗಳಿಗೆ ಹೋಲುತ್ತದೆ.

  • ನೆಕ್ಸಾನ್: ಹೆಚ್ಚು ಟಾರ್ಕ್ ಉಳ್ಳ ಎಂಜಿನ್ ಮತ್ತು ನಗರಗಳಲ್ಲಿ ಡ್ರೈವ್ ಮಾಡಲು ಅನುಕೂಲವಾಗಿರುತ್ತದೆ.

  • ನೆಕ್ಸಾನ್ : ಮೂರು ಡ್ರೈವ್ ಮೋಡ್ ಗಳು ಹೆಚ್ಚು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.

Tata Nexon vs Maruti Suzuki Vitara Brezza: Comparison Review

  • ವಿಟಾರಾ ಬ್ರೆಝ: ಹಳೆ ಶಾಲೆ SUV ನೋಟ ಮತ್ತು ಅವು ಇಂದಿಗೂ ಆಕರ್ಷವಾಗಿದೆ 
  • ವಿಟಾರಾ ಬ್ರೆಝ: ಹಿಂಬದಿಯ ಸೀಟ್ ಮೂರು ಮಂದಿಗೆ ಸರಿಯಾಗಿದೆ

  • ವಿಟಾರಾ ಬ್ರೆಝ: ಬೂಟ್ ನ ಶೈಲಿ

  • ವಿಟಾರಾ ಬ್ರೆಝ: ಸ್ಪರ್ಧಾತ್ಮಕವಾದ ಹ್ಯಾಂಡಲಿಂಗ್ ಹಾಗು ಹೈವೇ ಯಲ್ಲಿನ ನಡವಳಿಕೆ

  • ವಿಟಾರಾ ಬ್ರೆಝ: ಮಾರುತಿಯ  ಅಧಿಕ ನಂಬಲರ್ಹ ಮತ್ತು ವ್ಯಾಪಕವಾದ ನೆಟ್ವರ್ಕ್

Tata Nexon vs Maruti Suzuki Vitara Brezza: Comparison Review

ವಿರೋಧ

  • ನೆಕ್ಸಾನ್: ಫಿಟ್ ಮತ್ತು ಫಿನಿಷ್ ಮತ್ತಷ್ಟು ಆ ಚೆನ್ನಾಗಿದ್ದಿರಬಹುದಿತ್ತು
  • ನೆಕ್ಸಾನ್: ಸ್ವಲ್ಪ ಮಟ್ಟಿಗೆ ಇಲೆಕ್ಟ್ರಾನಿಕ್ ಗೊಂದಲಗಳು
  • ನೆಕ್ಸಾನ್: ನಗರಗಳಲ್ಲಿ ಅಷ್ಟೇನು ಮೈಲೇಜ್ ಇಲ್ಲ

 Tata Nexon vs Maruti Suzuki Vitara Brezza: Comparison Review

  • ವಿಟಾರಾ ಬ್ರೆಝ: ಗಟ್ಟಿ ಸಸ್ಪೆನ್ಷನ್  ಸೆಟ್ ಅಪ್ ನಗರಗಳಿಗೆ ಸರಿಹೊಂದುವುದಿಲ್ಲ
  • ವಿಟಾರಾ ಬ್ರೆಝ: ಇಂಜಿನ್  ನಗರಗಳಿಗೆ ಅಷ್ಟೇನು ಹೊಂದಿಕೊಳ್ಳುವುದಿಲ್ಲ
  • ವಿಟಾರಾ ಬ್ರೆಝ: ಹಳೆ ಮಾದರಿ  SUV ಶೈಲಿಯ ನೋಟ ಮಂದವಾಗಿ ಕಾಣಿಸುತ್ತದೆ ಹೋಲಿಕೆಯಲ್ಲಿ

Tata Nexon vs Maruti Suzuki Vitara Brezza: Comparison Review

ಸುರಕ್ಷತೆಗಳು

  • ನೆಕ್ಸಾನ್: ಆಲ್ರೌಂಡ್ ಹೊಂದಿಕೊಳ್ಳುವಿಕೆ ಮತ್ತು ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಅರ್ಹತೆ
  • ವಿಟಾರಾ ಬ್ರೆಝ:ಅದ್ಭುತವಾದ ಮೈಲೇಜ್

ಬಾಹ್ಯ

Tata Nexon vs Maruti Suzuki Vitara Brezza: Comparison Review

ಟಾಟಾ ದ ಇಂಪ್ಯಾಕ್ಟ್ ಶೈಲಿಯ ತತ್ವ ಅದ್ಭುತವಾಗಿದೆ, ನಾವು ಬಹಳಷ್ಟು ಜನರು ಬಂದು ಹೋದ ನಂತರ ನಾವು ನೆಕ್ಸಾನ್ ಬಳಿಗೆ ಬಂದು ಮಾತನಾಡಲು ಪ್ರಾರಂಭಿಸಿದೆವು. ಈ ಹೊಲಕೆಯಲ್ಲಿ ಯಾವುದು ಚೆನ್ನಾಗಿದೆ ಎಂದು ಹೇಳುವುದು ಸುಲಭ, ಅದರಲ್ಲೂ ಹೊರ ನೋಟದ ವಿಷಯಕ್ಕೆ ಸಂಬಂಧಿಸಿದಂತೆ. ಪ್ರೀತಿಸಿ ಅಥವಾ ದ್ವೇಷಿಸಿ ನೆಕ್ಸಾನ್ ಒಂದು ಆಕರ್ಷಕವಾದ ಕಾರ್ ಎಂಬುದರಲ್ಲಿ ಸಂಶಯವಿಲ್ಲ. ಹೊರ ನೋಟದಲ್ಲಿ ಬಹಳ ಆಕರ್ಷಕತೆ ಇದೆ ಮತ್ತು ಅದಕ್ಕಾಗಿ  ಟಾಟಾ ವನ್ನು ಮೆಚ್ಚಬೇಕು, ಇದರಲ್ಲಿ ಬಹಳಷ್ಟು ಅದ್ಭುತವಾದ ವಿನ್ಯಾಸದ ಮಾದರಿಗಳನ್ನು ಪರಿಗಣಿಸಲಾಗಿದೆ , ಮತ್ತು ಅವನ್ನು 2014 ಆಟೋ ಎಕ್ಸ್ಪೋ ದಲ್ಲಿ ತೋರಿಸಲಾಗಿತ್ತು.

Tata Nexon vs Maruti Suzuki Vitara Brezza: Comparison Review

ಬಹಳಷ್ಟು ಮೆಚ್ಚಬಹುದಾದ ಫೀಚರ್ ಗಳಾದ ಹೊರಗಡೆಯ ರೇರ್ ವ್ಯೂ ಕ್ಯಾಮರಾ ವನ್ನು ಇನ್ನಷ್ಟು ಚೆನ್ನಾಗಿರುವ ಹಾಗು ಸಾಂಪ್ರದಾಯಿಕ ಶೈಲಿಯ ಮತ್ತು ಸೂಕ್ಷ್ಮತೆ ಹೊಂದಿರುವ ಮಿರರ್ ಗಳಿಂದ ಬದಲಿಸಲಾಗಿದೆ, ಆದರೂ ನೆಕ್ಸಾನ್  ಟಾಟಾ ದಿಂದ ಮುಂಬರುವ ಬಹಳಷ್ಟು ಪೀಳಿಗೆಗೆ ಹೊಂದುವಂತಹ ಶೈಲಿ ಹೊಂದಿದೆ. ಇದು ಸಾಂಪ್ರದಾಯಿಕ SUV  ಯನ್ನು ಹೊರತಳ್ಳಿದೆ ಮತ್ತು ಹೆಚ್ಚು ಕಾಂಪ್ಯಾಕ್ಟ್ ಮತ್ತು ನವೀನ ಶೈಲಿಯ ನೋಟ ಹೊಂದಿದೆ. ಹಾಗು ನೀವು ಇದರ ಆಂತರಿಕಗಳನ್ನು ನೋಡಿದಾಗ ಮಾತ್ರ ಇದು ಮಾರುತಿ ಸುಜುಕಿ ವಿಟಾರಾ ಗಿಂತಲೂ ಚಿಕ್ಕದಾಗಿಲ್ಲ ಎಂದು ತೋರಲ್ಪಡುತ್ತದೆ.

Tata Nexon vs Maruti Suzuki Vitara Brezza: Comparison Review

ವಿಟಾರಾ  ಬ್ರೆಝ  ಕೆವಲ 37mm ಹೆಚ್ಚು ಉದ್ದ ಇದೆ,  ಕೇವಲ ಉದ್ದ (3995mm vs 3994mm  ನೆಕ್ಸಾನ್) ಮತ್ತು ಕೇವಲ 21mm ಕಡಿದಾಗಿದೆ ನೆಕ್ಸಾನ್ ಗಿಂತಲೂ. ಇದರಲ್ಲಿ ಬಹಳಷ್ಟು ಸಾಂಪ್ರದಾಯಿಕ ಶೈಲಿಯ SUV  ತರಹದ ಗೆರೆಗಳು ಇವೆ ಮತ್ತು ಬಹಳಷ್ಟು ಹಳೆಯದು ಎನ್ನಬಹುದು. ನೆಕ್ಸಾನ್ ಮುಂದೆ ಬಂದಾಗ ಇದು ಸ್ವಲ್ಪ ಹಿಂದೆ ಹೋಗುತ್ತದೆ. ಇದು ಒಂದು ಒಪ್ಪಲಾರದ ವಿಷಯವಾಗಿದೆ ಅದರಲ್ಲೂ ನಾವು ವಿಟಾರಾ ಬ್ರೆಝ ದ ಅಭಿಮಾನಿಗಳಾಗಿರುವಾಗ. ಅಗಲವಾದ ಮತ್ತು ಎತ್ತರವಾದ ಶೋಲ್ಡರ್ ಮತ್ತು ನೇರವಾದ ಬಾನೆಟ್  ಮೇಲಿನ ಗೆರೆಗಳು ಮತ್ತು ರೂಫ್ ಇದನ್ನು ಹೆಚ್ಚು ಆಕರ್ಷಕವಾಗಿರುವಂತೆ ಮಾಡುತ್ತದೆ, ಅಥ್ಲೆಟಿಕ್ ತರಹ.

Tata Nexon vs Maruti Suzuki Vitara Brezza: Comparison Review

ಹತ್ತಿರದಿಂದ ನೋಡಿದಾಗ, ನೆಕ್ಸಾನ್ ನಲ್ಲಿ ಕೊರತೆಗಳು ಇಲ್ಲದಿಲ್ಲ. ಬಿಳಿಯ ಅಸೆಂಟ್ ಗಳು ಬಾನೆಟ್ ನಿಂದ ಶೋಲ್ಡರ್ ಮುಖಾಂತರ ಮುಂದುವರೆದು C-ಪಿಲ್ಲರ್ ತಲುಪಿ ಟೈಲ್ ಗೇಟ್ ನಲ್ಲಿ ಕೊನೆಗೊಳ್ಳುತ್ತದೆ. ಇದರಲ್ಲಿಬ ಪ್ಲಾಸ್ಟಿಕ್ ಇನ್ಸರ್ಟ್ ಗಳು ಫಿನಿಷ್ ಗಳು ನಮಗೆ ಪರೀಕ್ಷಿಸುವಾಗ ಹೆಚ್ಚು ಆಕರ್ಷಕವಾಗಿ ಕಂಡವು.

Tata Nexon vs Maruti Suzuki Vitara Brezza: Comparison Review

 

ಆಂತರಿಕಗಳು

ಮಾರುತಿ ಬ್ರೆಝ 2016 ನಲ್ಲಿ ಬಿಡುಗಡೆಯಾದಾಗ ಆಂತರಿಕಗಳ ಕಪ್ಪು ಮತ್ತು ಗ್ರೇ ಬಣ್ಣಗಳು  ಅದ್ಭುತವಾಗಿ ಕಾಣುತ್ತಿತ್ತು. ದುಂಡಾದ ಕೊನೆಗಳು ಕ್ಯೂಬ್ ಶೈಲಿಯ ವಿನ್ಯಾಸದ ತುಣುಕುಗಳು ನೋಡಲು ಆಕರ್ಷಕವಾಗಿದ್ದವು ಆದರೆ ನೆಕ್ಸಾನ್ ಬಂಡ ನಂತರ ಅವು ಹಳತಾಗಿ ಕಾಣುವಂತಾಯಿತು. ಬಾಹ್ಯದ ಡಿಸೈನ್ ಗೆ ವಿರುದ್ಧವಾಗಿ ನೆಕ್ಸಾನ್ ನ ಕ್ಯಾಬಿನ್ ಚೆನ್ನಾಗಿದೆ ಮತ್ತು ಯೂರೋಪ್ ಶೈಲಿಯಲ್ಲಿದೆ. ಸರಳವಾದ ಗೆರೆಗಳು ಮತ್ತು ಪಿಯಾನೋ ಬ್ಲಾಕ್ ಆಂತರಿಕಗಳು ವಿಶಿಷ್ಟವಾಗಿ ಕಾಣುತ್ತವೆ ಮತ್ತು ನೀವು ಹೆಚ್ಚಿನ ವಿಭಾಗದ ಕಾರ್ ನಲ್ಲಿ ಕುಳಿತ ಅನುಭವ ಆಗುತ್ತದೆ.

Tata Nexon vs Maruti Suzuki Vitara Brezza: Comparison Review

ಇದರಲ್ಲಿರುವ 6.5-ಇಂಚು ಕ್ಯಾಮೆರಾ ಡ್ಯಾಶ್ ಮೇಲೆ ಎದ್ದು ಕಾಣುವಂತೆ ಇದೆ, ಮತ್ತು AC ವೆಂಟ್ ಗಳು ಕೆಳ ಭಾಗದಲ್ಲಿವೆ. ಮತ್ತು AC ಕಂಟ್ರೋಲ್ ಗಳು ಟಚ್ ಸ್ಕ್ರೀನ್ ನ ಕೆಳಭಾಗದಲ್ಲಿವೆ ಮತ್ತು ಡ್ಯಾಶ್ ನಯವಾಗಿ ಗೇರ್ ಲೀವರ್, ಸ್ಟೋಟಗೆ ಯೂನಿಟ್, ಹಾಗು ಸೆಂಟ್ರಲ್ ಆರ್ಮ್ ರೆಸ್ಟ್ ಕಡೆಗೆ ಚಾಚಿದೆ. ಇದು ಪ್ಯಾಸೆಂಜರ್ ಸ್ಪೇಸ್ ಒಳಕ್ಕೆ ಹೋಗುವುದಿಲ್ಲ ಆದರೆ ಕ್ಯಾಬಿನ್ ಅನ್ನು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

Tata Nexon vs Maruti Suzuki Vitara Brezza: Comparison Review

ಬ್ರೆಝ ನೆಕ್ಸಾನ್ ಅನ್ನು ಹಿಂದಿಕ್ಕುವುದು ಅದರ ಉಪಯುಕ್ತತೆ ಹಾಗು ಶೇಖರಣಾ  ಜಾಗ ಇರುವಿಕೆಯಲ್ಲಿ. ನೆಕ್ಸಾನ್ ನಲ್ಲೂ ಸಹ ಬಹಳಷ್ಟು ಶೇಖರಣಾ  ಜಾಗ ಇದೆ ಆದರೆ ಅದರ ವಿನ್ಯಾಸ ಎರ್ಗಾನೋಮಿಕ್ ಆಗಿ ಇಲ್ಲ, ಅದಕ್ಕೆ ಉದಾಹರಣೆ 'ಟಂಬೌರ್' ಡೋರ್  ಇರುವ ಶೇಖರಣಾ ಜಾಗ. ಸ್ಲೈಡ್ ಮಾಡುವ ಗೇಟ್ ಹಿಂದಿನಿಂದ ಮುಂದಕ್ಕೆ ಸಾಗುತ್ತದೆ ಅದರ ಅರ್ಥ ನೀವು ನಿಮ್ಮ ಕೈ ಅನ್ನು ಸುತ್ತಿ ಬಳಸಿ ಎಳೆಯಬೇಕು, ತೆಗೆಯಲು. ಒಳಭಾಗದಲ್ಲಿ ಕಡಿದಾದ ಮತ್ತು ಆಳವಾದ ಕ್ಯೂಬ್ಬ್ಯ್ ಹೋಲ್ ಗಳು ಇದ್ದು ಎರೆಡು ಕಪ್ ಗಳನ್ನು ಇರಿಸಲು ಸಾಧ್ಯವಿದೆ.

Tata Nexon vs Maruti Suzuki Vitara Brezza: Comparison Review

ಇದರ ಅರ್ಥ ನಿಮಗೆ ಕಪ್ ನಲ್ಲಿ ಇರುವ ವಸ್ತುವನ್ನು ಚೆಲ್ಲದೇ ಕಪ್ ಅನ್ನು ಹೊರ ತರಲು ಆಗುವುದಿಲ್ಲ.  ಮತ್ತು USB  ಪೋರ್ಟ್ ಅನ್ನು ಸಹ ಕಷ್ಟಪಟ್ಟು ತಲುಪಬಹುದಾದ ಜಗದಲ್ಲಿ, ಗೇರ್ ಕ್ನೋಬ್ ನ ಮುಂದುಗಡೆ ಕೊಡಲಾಗಿದೆ. ಮತ್ತು ಪ್ಲಗ್ ಇನ್ ಮಾಡಲು ನೀವು ಸ್ವಲ್ಪ ತಡಕಾಡಬೇಕಾಗುತ್ತದೆ.ನೆಕ್ಸಾನ್ ನಲ್ಲಿ ಇರುವ  ಕೆಲವು ಪ್ಯಾನೆಲ್ ಮೇಲೆ ಇರುವ  ಫಿಟ್ ಮತ್ತು ಫಿನಿಷ್ ಸಹ ಅಷ್ಟೇನೂ ಸಮಂಜಸವಾಗಿಲ್ಲ, ಹತ್ತಿರದಿಂದ ಪರೀಕ್ಷಿಸಿದಾಗ, ಮತ್ತು ವಿಟಾರಾ ಬ್ರೆಝ ದಲ್ಲಿ ಹೀಗೆ ಇಲ್ಲ.

Tata Nexon vs Maruti Suzuki Vitara Brezza: Comparison Review

ಬ್ರೆಝ ಅಗಲ 1410mm ಇದ್ದು ಅದು ನೆಕ್ಸಾನ್ ಗಿಂತ ಕೇವಲ 5mm ಹೆಚ್ಚು ಅಗಲವಾಗಿದೆ, ಆದರೂ ಇದರ ಕ್ಯಾಬಿನ್ ವಿಶಾಲವಾಗಿ ಕಾಣುತ್ತದೆ, ಅದಕ್ಕೆ ಸೆಂಟ್ರಲ್ ಕನ್ಸೋಲ್ ಹೆಚ್ಚು ಜಾಗ ತೆಗೆದುಕೊಳ್ಳದಿರುವುದು ಕಾರಣವಾಗಿದೆ. ಅಳತೆಗಳಲ್ಲಿ ನೆಕ್ಸಾನ್ ಬ್ರೆಝ ಗಿಂತ ಹೆಚ್ಚು ಮೊಣಕಾಲು ಇರಿಸುವ ಜಾಗ ಹೊಂದಿದ್ದು 770mm  ಇದೆ, ನೆಕ್ಸಾನ್ ನಲ್ಲಿ ಇದು 760mm ಇದೆ.

Tata Nexon vs Maruti Suzuki Vitara Brezza: Comparison Review

ಹೆಡ್ ರೂಮ್ ಸಹ ಹೆಚ್ಚು ಇದ್ದು ನೆಕ್ಸಾನ್ ಗಿಂತ ಬ್ರೆಝ ದಲ್ಲಿ 10mm ಹೆಚ್ಚು ಜಾಗ ಇದೆ. ಬ್ರೆಝ ದ ಹಿಂಭಾಗದಲ್ಲಿ ಪ್ಯಾಸೆಂಜರ್ ಗಳಿಗೆ ಹೆಚ್ಚು ಜಾಗ ಇದ್ದು 25mm ಹೆಚ್ಚು ಶೋಲ್ಡರ್ ರೂಮ್ ಇದೆ, 5mm ಹೆಚ್ಚು ಹೆಡ್ ರೂಮ್ ಇದೆ, ಮತ್ತು ಅಗಲವಾದ ಸೀಟ್ ಇದ್ದು ಮೂರು ಮಧ್ಯಮ ಅಳತೆಯ ವಯಸ್ಕರು ಕುಳಿತುಕೊಳ್ಳಬಹುದಾಗಿದೆ. ನೆಕ್ಸಾನ್ ನಲ್ಲಿ ಒಪ್ಪಬಹುದಾದ ಶೋಲ್ಡರ್ ರೂಮ್ ಇದ್ದು ಸೀಟ್ ನ ಬೇಸ್  80mm or 8 ಸೆಂಟಿಮೀಟರ್ ಕಡಿಮೆ ಅಗಲವಿದೆ ಬ್ರೆಝ ಗೆ ಹೋಲಿಸಿದಾಗ, ಹಾಗಾಗಿ ಇದರಲ್ಲಿ  ಮೂವರು ಕುಳಿತುಕೊಳ್ಳಲು ಸ್ವಲ್ಪ ಇಕ್ಕಟ್ಟಾಗಬಹುದು.

Tata Nexon vs Maruti Suzuki Vitara Brezza: Comparison Review

ಆರಾಮದಾಯಕಗಳ ವಿಷ್ಯಕ್ಕೆ ಬಂದರೆ ದೂರದ ಪ್ರಯಾಣಕ್ಕೆ ಬ್ರೆಝ ಹೆಚ್ಚು ಸೂಕ್ತವಾಗಿದೆ. ನೆಕ್ಸಾನ್ ನ ಸೀಟ್ ಮೃದುವಾಗಿದೆ ಮತ್ತು ಬ್ರೆಝ ಗಿಂತಲು ಹೆಚ್ಚು ಮೆತ್ತಗಿದೆ., ಆದರೂ ನೆಕ್ಸಾನ್ ನಲ್ಲಿನ ಸೀಟ್ ಹಿಂಬದಿ ಸ್ವಲ್ಪ ಕಠಿಣವಾಗಿದೆ. ಬ್ರೆಝ ದ ಸೀಟ್ ಗಳು ಕಡಿಮೆ ವಕ್ರತೆಗಳನ್ನು ಹೊಂದಿದೆ ಆದರೆ ಬ್ಯಾಕ್ ರ್ಸ್ಟ್ ನ ಕೋನಗಳು ಆರಾಮದಾಯಕವಾಗಿರುವುದಕ್ಕೆ ಸಹಕಾರಿಯಾಗಿದೆ.  ಬ್ರೆಝ ದ ಮುಂದಿನ ಸೀಟ್ ಗಳು ಸಹ ಮೃದುವಾಗಿದೆ, ಮತ್ತು ಡ್ರೈವರ್ ಗೆ ಬಹಳಷ್ಟು ಆರಾಮದಾಯಕವಾಗಿದೆ ನೆಕ್ಸಾನ್ ಗೆ ಹೋಲಿಸಿದಾಗ. ನೆಕ್ಸಾನ್ ನಲ್ಲಿ ಸೀಟ್ ಮೃದುವಾಗಿದೆ ಆದರೆ ಪಕ್ಕಗಳ ಬೆಂಬಲ ಅಷ್ಟು ಚೆನ್ನಾಗಿಲ್ಲ.

Tata Nexon vs Maruti Suzuki Vitara Brezza: Comparison Review

ಲಗೇಜ್ ಇಡುವ ಜಾಗವನ್ನು ಪರಿಗಣಿಸಿದಾಗ ನೆಕ್ಸಾನ್ ನಲ್ಲಿ ಹೆಚ್ಚು ದೊಡ್ಡದಾಗಿದೆ 350 ಲೀಟರ್ ಹೊಂದಿದ್ದು  ಬ್ರೆಝ ದಲ್ಲಿ  328ಲೀಟರ್ ಇದೆ, ಆದರೆ ಮಾರುತಿಯ ಲಗೇಜ್ ಜಾಗದ  ವಿನ್ಯಾಸ ಹಚೆನ್ನಾಗಿದ್ದು ಲಗೇಜ್ ಇಡಲು ಅನುಕೂಲವಾಗಿದೆ.

Tata Nexon vs Maruti Suzuki Vitara Brezza: Comparison Review

ಎರೆಡೂ ಹಿಂಬದಿಯ   ಬೆಂಚ್ ಗಳು ಜಾರುವುಕೆಯಿಂದ ಇದೆ ಮತ್ತು ಪೂರ್ಣ ಚಪ್ಪಟೆಯಾಗಿ ಮಡಚಬಹುದಾಗಿದೆ. ಮತ್ತು ಹೆಚ್ಚು ಶೇಖರಣಾ ಜಾಗ ಹೊಂದಿದ್ದು ಉಪಯುಕ್ತವಾಗಿದೆ. ಎರೆಡೂ ಕಾರ್ ಗಳಲ್ಲಿ 60/40 ಹಿಂಬದಿಯ ಬೆಂಚ್ ಸೀಟ್ ಇದೆ. ಹಾಗಾಗಿ ಬ್ರೆಝ ಹೆಚ್ಚು ಉಪಯುಕ್ತತೆಯಿಂದ ಕೂಡಿದ್ದು ನೀವು ಹೆಚ್ಚು ಲಗೇಜ್ ಅನ್ನು ಇಡಬಹುದಾಗಿದೆ.

Tata Nexon vs Maruti Suzuki Vitara Brezza: Comparison Review

ಟೆಕ್ನಲಾಜಿ

ನೆಕ್ಸಾನ್ ನಲ್ಲಿರುವ 6.5-ಇಂಚು ಹೈ ಡೆಫಿನಿಷನ್ ಸ್ಕ್ರೀನ್ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ, ಇದರ ಟಚ್ ರೆಸ್ಪಾನ್ಸ್, ಮತ್ತು ಶಾರ್ಟ್ ಕಟ್ ಬಟನ್ ಗಳು ಉತ್ತಮವಾಗಿದೆ. ಹಾಗಾಗಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಉಪಯೋಗಿಸುವುದು ಸುಲಭವಾಗಿದೆ ಮತ್ತು ಡ್ರೈವ್ ಮಾಡುವಾಗಲೂ ಸಹ ಬುತ್ತಿನ್ ಗಳು ಈ ಸುಲಭವಾಗಿ ಸಿಗುತ್ತದೆ. ಬ್ರೆಝ  ದ ಟಚ್ಸ್ಕ್ರೀನ್ ಹೆಚ್ಚು ಸರಳವಾಗಿದೆ ಹಾಗು ಬೇಗನೆ ಪ್ರತಿಕ್ರಿಯಿಸುತ್ತದೆ. ಕಂಟ್ರೋಲ್ ಹಾಗು ಮೆನು ಸಿಸ್ಟಮ್ ನ ಲೇಔಟ್ ಹೆಚ್ಚು ಸುಲಭವಾಗಿಲ್ಲ ಆಪರೇಟ್ ಮಾಡಲು ಹಾಗು ಇದು ಪೂರ್ಣವಾದ ಟಚ್ ಸ್ಕ್ರೀನ್ ಹೊಂದಿಲ್ಲ ಎಂಬ ವಿಷಯ ನಿಮಗೆ ಡ್ರೈವ್ ಮಾಡುವಾಗ ಅಷ್ಟು ಸಹಕಾರಿಯಾಗಿರುವುದಿಲ್ಲ.

 

Tata Nexon vs Maruti Suzuki Vitara Brezza: Comparison Review

ನೆಕ್ಸಾನ್ ನಲ್ಲಿರುವ ಕನೆಕ್ಟ್ ನೆಕ್ಸ್ಟ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಅಳವಡಿಸಲಾಗಿದೆ, ಆದರೆ ಬ್ರೆಝ ದಲ್ಲಿ ಮಿರರ್ ಲಿಂಕ್ ಹಾಗು ಕಾರ್ ಪ್ಲೇ ಮಾತ್ರ ಇದೆ. ಬ್ರೆಝ ದ ಸಿಸ್ಟಮ್ ಆಂಡ್ರಾಯ್ಡ್ ಆಟೋ ಜೊತೆ ಹೊಂದಿಕೊಳ್ಳುತ್ತದೆ, ನಾವು ಹೊಸ ಡಿಸೈರ್ ನಲ್ಲಿ ನೋಡಿದಂತೆ, ಮಾರುತಿಯು ಸಾಫ್ಟ್ವೇರ್ ನವೀಕರಣವನ್ನು S-ಕ್ರಾಸ್ ಹಾಗು ವಿಟಾರಾ ಬ್ರೆಝ ದಲ್ಲಿ ಮಾಡಿಲ್ಲ.

Tata Nexon vs Maruti Suzuki Vitara Brezza: Comparison Review

ಸೌಂಡ್ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಇದರಲ್ಲಿರುವ  8-ಸ್ಪೀಕರ್  ಸೆಟ್ ಅಪ್ ಹರ್ಮಾನ್ ತಯಾರಿಸಿರುವುದು ಮತ್ತು ಟಾಟಾ ದಲ್ಲಿ ಅಳವಡಿಸಿರುವುದು ನಮಗೆ ಮೆಚ್ಚಿತು. ಬ್ರೆಝ ದಲ್ಲಿ ಬಹಳಷ್ಟು ನವೀಕರಣ ಮಾಡಲಾಗಿದೆ, ಹಾಗಾಗಿ ಇದರಲ್ಲಿ ಆಡಿಯೋ ಗುಣಮಟ್ಟ ಬಹಳಷ್ಟು ಉತ್ತಮವಾಗಿದೆ, ಸಬ್ ವೂಫರ್ ಗಳು, ಮತ್ತು ಆಂಪ್ಲಿಫೈಯರ್ ಗಳು ಮತ್ತು  i ಕ್ರೆತೆ ಅಸ್ಸೇಸ್ಸೋರಿ ಪ್ರೋಗ್ರಾಮ್ ಕೊಡಲಾಗಿದೆ, ಮತ್ತು ಇವೆಲ್ಲ ಹೆಚ್ಚು ಬೆಲೆ ಪಟ್ಟಿಗೂ ಕಾರಣವಾಗಿದೆ.

Tata Nexon vs Maruti Suzuki Vitara Brezza: Comparison Review

ನೆಕ್ಸಾನ್ ನಲ್ಲಿ ಇರುವ  ಬ್ರೆಝ ಗಿಂತಲೂ ಹೆಚ್ಚು ಮುಂದುವರೆದ ವಿಷಯಗಳೆಂದರೆ ಅದು ಮೂರು ದ್ರ್ರಿವೆ ಮೋಡ್ ಗಳು.  ಸ್ಪೋರ್ಟ್, ಸಿಟಿ ಹಾಗು ಏಕೋ ಮೋಡ್ ಗಳು ಮತ್ತು ಇವನ್ನು ಡ್ರೈವ್ ಮಾಯುತ್ತಿರಬೇಕಾದರೆ ಬದಲಿಸಬಹುದು, ದೊಡ್ಡ ಕ್ನೋಬ್ ಸೆಂಟ್ರಲ್ ಕನ್ಸೋಲ್ ನಲ್ಲಿ ಇರುವುದು ಮತ್ತು ಗೇರ್ ಲಿವರ್ ಹತ್ತಿರ ಇದ್ದು ಉಪಯೋಗಿಸಲು ಅನುಕೂಲವಾಗಿದೆ.  ನಾವು ಇದು ಎಷ್ಟು ಹೆಚ್ಚು ಪ್ರೀಮಿಯಂ ಆಗಿದೆ ಎಂದು ನಂತರ ವಿಶ್ಲೇಷಿಸುತ್ತೇವೆ.

ಎವೆರೆಡರಲ್ಲೂ ಬಹಳಷ್ಟು ಫೀಚರ್ ಗಳು ಇವೆ ಆದರೆ ಬ್ರೆಝ ದಲ್ಲಿ ರೈನ್ ಸೆನ್ಸಿಂಗ್ ವೈಪರ್ ಗಳು, ಆಟೋ ಹೆಡ್ ಲ್ಯಾಂಪ್ ಗಳು, ಮತ್ತು ಕ್ರೂಸ್ ಕಂಟ್ರೋಲ್ ಗಳು ಇದ್ದು ಅವು ನೆಕ್ಸಾನ್ ನಲ್ಲಿ ಮಿಸ್ ಆಗಿವೆ.

ಇಲ್ಲಿರುವ ಮುಖ್ಯ ಸಮಸ್ಯೆಯೆಂದರೆ ನೆಕ್ಸಾನ್ ನ ಬಿಲ್ಡ್ ಕ್ವಾಲಿಟಿ ಹಾಗು ನಂಬಲರ್ಹತೆ ಗುಣಗಳು, ನಮಗೆ ಡೋರ್ ಲಾಕ್ ಮೆಕ್ಯಾನಿಸ್ಮ್ ಹಾಗು ಲೈಟ್ ವಿಷಯದಲ್ಲಿ ಸಮಸ್ಯೆ ಇತ್ತು. ಇವನ್ನು ಕೆಲವು ಸಮಸ್ಯೆಗಳೆಂದು ಪರಿಗಣಿಸಬಹುದಾದರೂ ,ಇವು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದವೇ ನಮ್ಮ ಟೆಸ್ಟ್ ಡ್ರೈವ್ ನಲ್ಲಿ.

ಕಾರ್ಯದಕ್ಷತೆ

Tata Nexon vs Maruti Suzuki Vitara Brezza: Comparison Review

ನೆಕ್ಸಾನ್ ನಲ್ಲಿರುವ 1.5-ಲೀಟರ್ ರೆವೊಟಾರ್ಕ್ ಡೀಸೆಲ್ 110PS ಪವರ್ ಕೊಡುತ್ತದೆ ಹಾಗು ಡ್ರೈವ್ ಮಾಡಲು ಸುಲಭವಾಗಿದೆ. ಕ್ಲಚ್ ಸಹ ಸುಲಭವಾಗಿದ್ದು ಇದರಲ್ಲಿರುವ ಆರು ಸ್ಪೀಡ್ ಗೇರ್ ಬಾಕ್ಸ್ ಸಿಟಿ ಟ್ರಾಫಿಕ್ ನಲ್ಲಿ ಡ್ರೈವ್ ಮಾಡಲು ಸುಲಭವಾಗಿದೆ. ಆದರೆ ಮುಖ್ಯ ವಿಷಯವೆಂದರೆ ಡೀಸೆಲ್ ಎಂಜಿನ್ ಕಡಿಮೆ rpm ನಲ್ಲಿ ಸಹ ವೇಗವಾಗಿರುತ್ತದೆ. ಇದರಲ್ಲಿ 260Nm ಗರಿಷ್ಟ ಟಾರ್ಕ್ ಕಡಿಮೆ ಅಂದರೆ 1500rpm ನಲ್ಲಿ ಸಿಗುತ್ತದೆ ಮತ್ತು ಪವರ್ ಹೊರಹೊಮ್ಮುವಿಕೆ ನೇರವಾಗಿದೆ, ಹಾಗು ಟರ್ಬೊ ಕೆಲಸ ಮಾಡುತ್ತಿದ್ದಂತೆ ಟಾರ್ಕ್ ಹೆಚ್ಚುತ್ತದೆ. ಮಾರುತಿಯದರಲ್ಲಿರುವ 1.3-ಲೀಟರ್ DDiS 200 ಡೀಸೆಲ್ ಎಂಜಿನ್ ಹೆಚ್ಚು ಶಕ್ತಿಭರಿತವಾಗಿಲ್ಲ 90PS ಪವರ್ ಮತ್ತು 200Nm ಟಾರ್ಕ್ ಮತ್ತು ಟರ್ಬೊ ಕಾರ್ಯತತ್ಪರವಾದಾಗ  ಹೆಚ್ಚು ಆಗುತ್ತದೆ. ಇದು ಸಿಟಿಯಲ್ಲಿ ಡ್ರೈವ್ ಮಾಡಲು ಸುಲಭವಾಗಿಲ್ಲ, ಆಗಾಗ ಗೇರ್ ಬದಲಾಯಿಸುತ್ತಿರಬೇಕಾಗುತ್ತದೆ ಎಂಜಿನ್ ಅನ್ನು  1700rpm ಗಿಂತ ಹೆಚ್ಚು ವೇಗದಲ್ಲಿರಿಸಲು.

Tata Nexon vs Maruti Suzuki Vitara Brezza: Comparison Review

ಮಾರುತಿಯು ಹೈವೇ ಯಲ್ಲಿ ಸದೃಢವಾಗಿರುತ್ತದೆ ಹಾಗು ಇಅರಲ್ಲಿರುವ ಚಿಕ್ಕ ಎಂಜಿನ್ ಹೆಚ್ಚು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.  ಇದು  0-100kmph ಬೇಗನೆ ಪಡೆಯುತ್ತದೆ ಕೆಲವೇ ಕ್ಷಣಗಳಲ್ಲಿ ಮತ್ತು ಗೇರ್ ಬಾಕ್ಸ್ ನ ಡಿಸೈನ್ ಇದಕ್ಕೆ ಸಹಕಾರಿಯಾಗಿದೆ. ನೆಕ್ಸಾನ್ ನ ಗೇರ್ ಬಾಕ್ಸ್ ನಲ್ಲಿ 100kmph ವೇಗಗತಿ ಪಡೆಯಲು ಬ್ರೆಝ ಗಿಂತ ಹೆಚ್ಚಿನ ಗೇರ್ ಗಳನ್ನೂ ಆಯ್ಕೆ ಮಾಡಬೇಕಾಗುತ್ತದೆ.  ಅಂಕೆ ಸಂಖ್ಯೆ ಗಳಲ್ಲಿ ವಿಭಿನ್ನವಾದ ಕತೆ ಇರುತ್ತದೆ , ನೆಕ್ಸಾನ್ ನಲ್ಲಿ 3rd ಮತ್ತು  4th ಗೇರ್ ನಲ್ಲಿ ಹೆಚ್ಚು ವಾಗಾಗತಿ ಪಡೆಯುತ್ತೇವೆ ಹಾಗು ಅದರಿಂದಾಗಿ ಸಿಟಿ ಯಲ್ಲಿ ಹೆಚ್ಚು ಚೆನ್ನಾಗಿ ಡ್ರೈವ್ ಮಾಡಲು ಸಾಧ್ಯವಾಗುತ್ತದೆ.

Tata Nexon vs Maruti Suzuki Vitara Brezza: Comparison Review

ಮತ್ತು ಇದು ನಮಗೆ ನೆಕ್ಸಾನ್ ನ ಡ್ರೈವ್ ಮೋಡ್ ಗಳ  ವಿಚಾರಕ್ಕೆ ತರುತ್ತದೆ. ಎಲ್ಲ ಕಾರ್ಯದಕ್ಷತೆ ಪರೀಕ್ಷೆಗಳನ್ನು ಸ್ಪೋರ್ಟ್ ಮೋಡ್ ನಲ್ಲಿ ಮಾಡಲಾದರೂ, ಸಿಟಿ ಮೋಡ್ ನಲ್ಲಿ ಪವರ್ ಕಡಿಮೆ ಆಗುತ್ತದೆ ಹಾಗು   ಟಾರ್ಕ್  ಹಾಗು ಬಮ್ಪ್  ಗಳನ್ನೂ ಸಹ ಮೃದುಗೊಳಿಸುತ್ತದೆ. ಇದು ಸಿಟಿ ಯಲ್ಲಿನ ಡ್ರೈವ್ ಅನ್ನು ಉತ್ತಮಗೊಳಿಸುತ್ತದೆ ಹಾಗು ನೀವು ನೆಕ್ಸಾನ್ ಅನ್ನು 3rd ಅಥವಾ 4th ಗೇರ್ ನಲ್ಲಿ ಹಾಗೆ ಬಿಡಬಹುದು ಮತ್ತು ಹಾಗೆ ಡ್ರೈವ್ ಮಾಡಬಹುದು. ಏಕೋ ಮೋಡ್ ನಲ್ಲಿ ಪವರ್ ಹೊರಹೊಮ್ಮುವಿಕೆ ಬಹಳಷ್ಟು ಕ್ಷೀಣಿಸುತ್ತದೆ ಆದರೆ ಮೈಲೇಜ್ ಹೆಚ್ಚುತ್ತದೆ. ನಮಗೆ ಅನಿಸಿದ್ದು ನೀವು ಇದನ್ನು ಹೆಚ್ಚು ಮೈಲೇಜ್ ಗಳಿಸಲು ಬಯಸಿದಾಗ ಮಾತ್ರ ಹೆಚ್ಚು ಸೂಕ್ತವಾಗಿರುತ್ತದೆ.

Tata Nexon vs Maruti Suzuki Vitara Brezza: Comparison Review

ಹೆಚ್ಚು ಮೈಲೇಜ್ ಪಡೆಯಲು ಬಯಸಿದಾಗ ಡೀಸೆಲ್ ಎಂಜಿನ್ ನ ಏಕೋ ಮೋಡ್ ನಲ್ಲಿ, ನೆಕ್ಸಾನ್ ನಿಮಗೆ 6-ಗೇರ್ ಬಾಕ್ಸ್ ನ ಕಾರ್ಯ ನಿರ್ವಹಣೆಯೊಂದಿಗೆ  23.97kmpl ಅನ್ನು ಹೈವೇ ಯಲ್ಲಿ ಹಾಗು ಕೇವಲ 16.08kmpl  ಸಿಟಿ ಯಲ್ಲಿ ಕೊಡುತ್ತದೆ. ಬ್ರೆಝ ನಮಗೆ 25.30kmpl ಹೈವೇ ಯಲ್ಲಿ ಹಾಗು 21.70kmpl ಸಿಟಿ ಯಲ್ಲಿ ಕೊಡುವುದರೊಂದಿಗೆ ಹೆಚ್ಚು ಮೆಚ್ಚುಗೆ ಪಡೆಯುತ್ತದೆ.

ರೈಡ್ ಮತ್ತು ಹ್ಯಾಂಡಲಿಂಗ್

Tata Nexon vs Maruti Suzuki Vitara Brezza: Comparison Review

ವಿಟಾರಾ ಬ್ರೆಝ ನಾವು ಡ್ರೈವ್ ಮಾಡುವುದಕ್ಕೆ ಹೆಚ್ಚು ಮೆಚ್ಚುವಂತಹ ಕಾರ್ ಆಗಿದೆ. ಇದರಲ್ಲಿರುವ ದೃಢ ಸಸ್ಪೆನ್ಷನ್ ಹೆಚ್ಚು ವೇಗಗಳಲ್ಲಿ ಡ್ರೈವ್ ಮಾಡುವುದಕ್ಕೆ ಸಹಕಾರಿಯಾಗಿದೆ. ಮತ್ತು ಹೈವೇ ಗಳಲ್ಲಿ ಬ್ರೆಝ ಹೆಚ್ಚು ನಯವಾಗಿ ವರ್ತಿಸುತ್ತದೆ. ತಿರುವುಗಳಲ್ಲಿಯೂ ಸಹ ಸದೃಢವಾದ ಸ್ಟಿಯರಿಂಗ್ ನೇರವಾಗಿ ಹಾಗು ಹಗುರವಾಗಿಯೂ ಇರುತ್ತದೆ. ಮತ್ತು ನಿಮಗೆ ತಿರುವುಗಳಲ್ಲಿ ಹೆಚ್ಚು ಸಹಕಾರಿಯಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇಗವಾಗಿ ಡ್ರೈವ್ ಮಾಡಲು ಮಜಾ ಬರುತ್ತದೆ.

Tata Nexon vs Maruti Suzuki Vitara Brezza: Comparison Review

ನೆಕ್ಸಾನ್ ನಲ್ಲಿ ಇದೆ ತರಹದ ವೇಗಗತಿ ನಡವಳಿಕೆ ಇರುತ್ತದೆ. ಮತ್ತು ಹೈವೇ ಗಳಲ್ಲಿ ಸದೃಢವಾಗಿದೆ. ತಿರುವುಗಳಲ್ಲಿ ಇದು ಬ್ರೆಝ ದಷ್ಟೇ ಕಾರ್ಯ ತತ್ಪರವಾಗಿದೆ ಆದರೆ ಸ್ಟಿಯರಿಂಗ್ ಅಷ್ಟು ಸಂವಹನವಾಗಿಲ್ಲ ಮತ್ತು ಹೊಂದಿಕೊಳ್ಳುವುದಿಲ್ಲ. ಮೆಚ್ಚುವಂತಹ ವಿಷಯವೆಂದರೆ ಡ್ರೈವ್ ನ ಅನುಭವ, ನಿಮಗೆ ಗರಿಷ್ಟ ವೇಗದಲ್ಲಿದ್ದರೂ ನಿಮಗೆ ಹೆಚ್ಚು ಗೊಂದಲವಾಗದೆ ಸಾವಧಾನವಾಗಿ ಡ್ರೈವ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ಇದರ ಉತ್ತಮ ಕಾರ್ಯಡಾಕ್ಷ್ಯತೆಯ ಒಂದು ಬಾಗ  ಟಾಟಾ  ನೆಕ್ಸಾನ್ ಗಾಗಿ ಆಯ್ಕೆ ಮಾಡಿರುವ ಹಾಗು ಇದರಲ್ಲಿರುವ ಗೂಡಿಯೆರ್ ಟೈಯರ್ ಗಳಿಗೂ ಸಲ್ಲುತ್ತದೆ.

Tata Nexon vs Maruti Suzuki Vitara Brezza: Comparison Review

ಸಿಟಿ ಯಲ್ಲಿ ನೆಕ್ಸಾನ್ ಹೆಚ್ಚು ಮುಂದುವರೆಯುತ್ತದೆ ಅನುಕೂಲಕರವಾದ ಸೆಟ್ ಅಪ್ ನೊಂದಿಗೆ. ಬಮ್ಪ್ ಗಳನ್ನು ಚೆನ್ನಾಗಿ ತೆಗೆದುಕೊಳ್ಳುತ್ತದೆ, ಮತ್ತು ಕಠಿಣ ರಸ್ತೆಗಳಲ್ಲೂ ಸಹ ಕ್ಯಾಬಿನ್ ನಿಶಬ್ದ ವಾಗಿರುತ್ತದೆ. ವಿಟಾರಾ ಬ್ರೆಝ ಇನ್ನೊಂದು ಬದಿಯಲ್ಲಿ ಸ್ವಲ್ಪ ಶಬ್ದ ಬರುವಂತೆ ಮಾಡುತ್ತದೆ ಮತ್ತು ಈ  ಮಾರುತಿ ಯಲ್ಲಿ ಪ್ಯಾಸೆಂಜರ್ ಗಳಿಗೆ  ಸಮಾಧಾನಕರವಾದ ರೈಡ್ ಸಿಗದಿರಬಹುದು.

Tata Nexon vs Maruti Suzuki Vitara Brezza: Comparison Review

ಸುರಕ್ಷತೆ

Tata Nexon vs Maruti Suzuki Vitara Brezza: Comparison Review

ಟಾಟಾ ನೆಕ್ಸಾನ್ ನಲ್ಲಿ ABS, EBD ಮತ್ತು ಡುಯಲ್ ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಆಗಿ ಬರುತ್ತವೆ, ಎಲ್ಲ ವೇರಿಯೆಂಟ್ ಗಳಲ್ಲಿ.  ವಿಟಾರಾ  ಬ್ರೆಝ್ಯೇ ದಲ್ಲಿ ಈ ಫೀಚರ್ ಗಳು ಎರೆಡು ಕೆಲ ಹಂತದ ವೇರಿಯೆಂಟ್ ಗಳಲ್ಲಿ ಆಯ್ಕೆಯಾಗಿ ಕೊಡಲಾಗಿದೆ ಮತ್ತು ಇತರ ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.  ನೆಕ್ಸಾನ್ ನಲ್ಲಿ ಪಾರ್ಕಿಂಗ್ ಸೆನ್ಸರ್ ಗಳನ್ನು ನಾಲ್ಕು ವೇರಿಯೆಂಟ್ ಗಳಲ್ಲಿನ ಮೂರು ವೇರಿಯೆಂಟ್  ಗಳಲ್ಲಿ ಕೊಡಲಾಗಿದೆ ಮತ್ತು ಪಾರ್ಕಿಂಗ್ ಕ್ಯಾಮರಾ ವನ್ನು ಟಾಪ್ ಎಂಡ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ. ಬ್ರೆಝ ದ ಪಾರ್ಕಿಂಗ್ ಕ್ಯಾಮೆರಾ ಹೆಚ್ಚಿನ ಡೆಫಿನಿಷನ್ ನಲ್ಲಿ ಇದ್ದು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನೆಕ್ಸಾನ್ ನ ಪಾರ್ಕಿಂಗ್ ಕ್ಯಾಮರಾ ಡೈನಾಮಿಕ್ ಕಾರ್ನೆರಿಂಗ್ ಗೆರೆಗಳನ್ನು ತೋರಿಸುತ್ತದೆ ಮತ್ತು ಅದನ್ನು ಬೆಳಗಿನ ಹೊತ್ತಿನಲ್ಲೂ ಉಪಯೋಗಿಸಲು ಸಹಕಾರಿಯಾಗಿದೆ. ಆದರೆ ವಾಸ್ತವವಾಗಿ ಕತ್ತಲಲ್ಲಿ ಉಪಯುಕ್ತವಲ್ಲ ಏಕೆಂದರೆ ಕಡಿಮೆ ಬೆಳಕು ಇರುವುದರಿಂದ ಗೆರೆಗಳು ಹೆಚ್ಚು ಕನು ಬರುತ್ತದೆ ಮತ್ತು ಚಿತ್ರಣ ಕುಂಠಿತಗೊಳ್ಳುತ್ತದೆ ಮತ್ತು ಅಡತಡೆ ಗಳನ್ನು ಗಮನಿಸಲು ಕಷ್ಟವಾಗುತ್ತದೆ.

ವೇರಿಯೆಂಟ್ ಗಳು

Tata Nexon vs Maruti Suzuki Vitara Brezza: Comparison Review

ನೆಕ್ಸಾನ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಅವತರಣಿಕೆಯಲ್ಲಿ ಸಿಗುತ್ತದೆ ಮತ್ತು ನಾಲ್ಕು ಟ್ರಿಮ್ ಗಳಲ್ಲಿ ಸಿಗುತ್ತದೆ. XE ಒಂದು ಬೇಸ್ ವೇರಿಯೆಂಟ್ ಆಗಿದ್ದು ಅದರ ನಂತರ XM ಹಾಗು  XT ಇರುತ್ತದೆ, ಮತ್ತು XZ+  ಟಾಪ್ ಎಂಡ್ ವೇರಿಯೆಂಟ್ ಆಗಿದೆ. ನಮ್ಮ ಪರಿಣಿತರ ವಿಮರ್ಶೆಯನ್ನು ಓದಿರಿ ನೆಕ್ಸಾನ್ ನ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಕಾರ್ಯದಕ್ಷತೆ ತಿಳಿಯಲು. ಹಾಗು  ಓದಿರಿ ನಮ್ಮ "ವೇರಿಯೆಂಟ್ ವಿವರಣೆ " ವಿಡಿಯೋ ಗಳನ್ನು ನೆಕ್ಸಾನ್ ನ  ವಿವಿಧ  ಟ್ರಿಮ್ ಗಳ ಬಗ್ಗೆ ತಿಳಿಯಲು.

ಇನ್ನೊಂದು ಬದಿಯಲ್ಲಿ ವಿಟಾರಾ ಬ್ರೆಝ ದಲ್ಲಿ ಕೇವಲ ಡೀಸೆಲ್ ಎಂಜಿನ್ ಆಯ್ಕೆ ಇದೆ ಆದರೆ ನಿಮಗೆ ಆರು ಟ್ರಿಮ್ ಗಳ  ಆಯ್ಕೆ ಸಿಗುತ್ತದೆ.  LDI  ಮತ್ತು VDI ವೇರಿಯೆಂಟ್ ಗಳು ಬೇಸ್ ವೇರಿಯೆಂಟ್ ಗಳಾಗಿದ್ದು LDI(O),  VDI(O) ZDI ಮತ್ತು  ZDI+ಗಳು ಆಯ್ಕೆ ಪ್ರಧಾನ ವೇರಿಯೆಂಟ್ ಗಳಾಗಿದ್ದು ABS, EBD ಮತ್ತು ಡುಯಲ್ ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಆಗಿ ಇರುತ್ತದೆ.

ಅನಿಸಿಕೆ

ನಾವು ವಿಮರ್ಶೆಯನ್ನು ಇಲ್ಲೇ ಕೊನೆಗಾಣಿಸಿ ತೀರ್ಪು ಕೊಡುವುದಾದರೆ ವಿಟಾರಾ ಬ್ರೆಝ ಅದರ ತಕ್ಕ್ ಪ್ರತಿಸ್ಪರ್ದಿಯನ್ನು ಪಡೆದಿದೆ ಎಂದು ಹೇಳಬಹುದು. ನೆಕ್ಸಾನ್ ನೋಡಲು ಅದ್ಭುತವಾಗಿದೆ, ಸಿಟಿ ಯಲ್ಲಿ ಡ್ರೈವ್ ಮಾಡಲು ಉತ್ತಮವಾಗಿದೆ, ಮತ್ತು ಇದು ಬ್ರೆಝ ಗೆ ಎಲ್ಲ ರೀತಿಯಲ್ಲೂ ತಕ್ಕ ಪ್ರತಿಸ್ಪರ್ದಿಯಾಗಿದೆ. ಮಾತ್ತು ಇದನ್ನು ತಿರುವುಗಳಲ್ಲಿ ಡ್ರೈವ್ ಮಾಡಲು ಉಲ್ಲಾಸಭರಿತವಾಗಿದೆ. ಬೆಲೆ ವಿಚಾರದಲ್ಲಿ ಇದರ   ಬೆಲೆ ರೂ 47,000  ಬ್ರೆಝ ಗಿಂತ ಕಡಿಮೆಯಾಗಿದೆ, ನಾವು ಟಾಪ್ ಎಂಡ್ ನ ವೇರಿಯೆಂಟ್  ಗಳೊಂದಿಗೆ ಪರೀಕ್ಷಿಸಿದಾಗ.

Tata Nexon vs Maruti Suzuki Vitara Brezza: Comparison Review

ಆದರೆ ನಾವು ಪೆಟ್ರೋಲ್ ಹಾಗು ಡೀಸೆಲ್ ನೆಕ್ಸಾನ್ ಗಳ  ಜೊತೆಗೆ ಕಳೆದ ಒಂದು ವಾರ ಯಾವುದೇ ಅವಘಡಗಳಿಲ್ಲದೆ ಇರಲಿಲ್ಲ. ಒಂದು ಸಮಯದಲ್ಲಿ ಮುಂದಿನ ಬಲಭಾಗದ DRL ಮತ್ತು ಹಿಂಬದಿಯ ಬಲಭಾಗದ LED ಟೈಲ್ ಲೈಟ್ ಗಳು ಎರೆಡೂ ನೆಕ್ಸಾನ್ ಗಳಲ್ಲಿ ಆರಿಹೋದವು. ಇನ್ನೊಂದು ಸಮಯದಲ್ಲಿ ಡೀಸೆಲ್ ನೆಕ್ಸಾನ್ ನ ಸ್ಟಾರ್ಟರ್ ಸಿಕ್ಕಿಕೊಂಡಿತು ಹಾಗಾಗಿ ನಾವು ಸ್ವಿಚ್ ಅನ್ನು ಹಲವು ಬಾರಿ ಆನ್ ಮತ್ತು ಆಫ್ ಮಾಡಬೇಕಾಯಿತು. ಮತ್ತೊಂದು ಸಮಯದಲ್ಲಿ   ನೆಸ್ವ್ನ್ ಡೀಸೆಲ್ ನ ಡ್ರೈವರ್ ಬದಿಯ ಡೋರ್ ಅನ್ಲಾಕ್ ಆಗಲು ತಡಮಾಡಿತು. ನಾವು ಎರೆಡೂ ಕಾರ್ ಗಳನ್ನೂ ವರ್ಕ್ ಶಾಪ್ ಗೆ ಕಳುಹಿಸಿದೆವು ಸರಿ ಮಾಡಲು. ರಿಪೇರಿ ಆದ ನಂತರ ನಾವು ಸುಮಾರು 150  ಕಿಲೋಮೀಟರು ಡ್ರೈವ್ ಮಾಡಿದೆವು ಆಗ ಯಾವುದೇ ಸಮಸ್ಯೆ ಮತ್ತೆ ಎದುರಾಗಲಿಲ್ಲ.

ಅಂತಿಮ ಅನಿಸಿಕೆ

ನಾವು ಎಲ್ಲ ವಿಚಾರಗಳನ್ನು ಪರಿಗಣಿಸಿದಾಗ ನಮಗೆ ಸ್ವಲ್ಪ ಗೊಂದಲವುಂಟಾಯಿತು. ಪೇಪರ್ ಗಳಲ್ಲಿ ನಮ್ಮ ಬಹಳಷ್ಟು ಪರೀಕ್ಷೆಗಳಲ್ಲಿ ನೆಕ್ಸಾನ್ ಒಂದು ವಿಟಾರಾ ಗೆ ತಕ್ಕ ಪ್ರತಿಸ್ಪರ್ದಿ ಎನಿಸಿತು. ಇದು ಸಿಟಿ ಯಲ್ಲಿ ಉತ್ತಮವಾಗಿ ಹಾಗು ಹೈವೇ ಯಲ್ಲಿ ಹೊಂದುಕೊಳ್ಳುವಂತೆ ಇತ್ತು.  ಇದು ಒಂದು ಮೌಲ್ಯಯುಕ್ತವಾದ ಮತ್ತು ಈ ವಿಭಾಗದಲ್ಲಿ ಹೆಚ್ಚು ಗಮನ ಸೆಳೆಯುವ ಕಾರ್ ಆಗಿದೆ. ಆದರೆ ಬಹಳ ಕಾಲದ ಉಪಯುಕ್ತತೆಯು ಕೊಳ್ಳುವವರಿಗೆ ಹೆಚ್ಚು ಪ್ರಿಯವಾಗುವ ವಿಚಾರವಾಗಿದೆ. ಈ ವಿಷಯದಲ್ಲಿ ನೆಕ್ಸಾನ್ ನಲ್ಲಿ ಸ್ವಲ್ಪ ಉತ್ತಮ ಬದಲಾವಣೆ ತರಬಹುದು.

Tata Nexon vs Maruti Suzuki Vitara Brezza: Comparison Review

ಹಾಗಾಗಿ, ಭಾರತೀಯರ ಉಪಯೋಗಕ್ಕ್ಕೆ ಅನುಗುಣವಾಗಿ, ಎಲ್ಲಿ ಕಾರ್ ಅನ್ನು ಒಂದು ಬಹಳ ಕಾಲ ಉಪಯೋಗಕ್ಕೆ ಬರುವ ಬಂಡವಾಳವಾಗಿ ಪರಿಗಣಿಸುತ್ತಾರೆ, ನೆಕ್ಸಾನ್ ಹೆಚ್ಚು ಸದೃಢವಾಗಿ ಹಾಗು ನೋಡಲು ಚೆನ್ನಾಗಿದ್ದರೂ , ಅದರಲ್ಲಿ ಸ್ವಲ್ಪ ಅನುಮಾನಗಳು ಮೂಡುತ್ತವೆ ಬಹಳ ಕಾಲದ ಉಪಯುಕ್ತತೆಯಲ್ಲಿ. ನಾವು ಗಮನಿಸಿದಂತಹ ಸಮಸ್ಯೆಗಳು ನಾವು ಟಾಟಾ ಕಾರು ಗಳಲ್ಲಿ ಹತ್ತು ವರ್ಷದ ಹಿಂದೆ ಒಪ್ಪಬಹುದಾಗಿತ್ತು. ಆದರೆ ಟಿಯಾಗೋ ಮತ್ತಿ ಟಿಗೋರ್ ಗಳನ್ನೂ ಮಾಡಿದವರಿಂದಲ್ಲ. ಅವು ಹೆಚ್ಚು ಮುಂದುವರೆದಿದ್ದವು ಬಿಲ್ಡ್ ಗುಣಮಟ್ಟದಲ್ಲಿ ಹಾಗು ಬಹುಕಾಲದ ಉಪಯುಕ್ತತೆಯಲ್ಲಿ. ಒಟ್ಟಿನಲ್ಲಿ ಇದು ಒಂದು ಕಷ್ಟಕರವಾದ ಗೆಲುವಾಗಿದೆ ವಿಟಾರಾ ಬ್ರೆಝ ಗೆ. ನಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಗಮನಕ್ಕೆ ತೆಗೆದುಕೊಂಡಾಗ, ಚಿಂತನೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಾಗ ಮತ್ತು ನಮಗೆ  ಸುರಕ್ಷಿತವಾದ ಮತ್ತು ಆಲೋಚನಬದ್ದವಾದ ಆಯ್ಕೆ ಆಗುತ್ತದೆ.

Published by
alan richard

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience