• English
    • ಲಾಗಿನ್/ರಿಜಿಸ್ಟರ್
    • ಟಾಟಾ ಹ್ಯಾರಿಯರ್ ಮುಂಭಾಗ left side image
    • Tata Harrier Signature Harrier Mascot on doors
    1/2
    • Tata Harrier
      + 7ಬಣ್ಣಗಳು
    • Tata Harrier
      + 16ಚಿತ್ರಗಳು
    • Tata Harrier
    • 1 shorts
      shorts
    • Tata Harrier
      ವೀಡಿಯೋಸ್

    ಟಾಟಾ ಹ್ಯಾರಿಯರ್

    4.6260 ವಿರ್ಮಶೆಗಳುrate & win ₹1000
    Rs.15 - 26.50 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer

    ಟಾಟಾ ಹ್ಯಾರಿಯರ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್1956 ಸಿಸಿ
    ಪವರ್167.62 ಬಿಹೆಚ್ ಪಿ
    ಟಾರ್ಕ್‌350 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌ ಅಥವಾ ಹಿಂಬದಿ ವೀಲ್‌
    ಮೈಲೇಜ್16.8 ಕೆಎಂಪಿಎಲ್
    • powered ಮುಂಭಾಗ ಸೀಟುಗಳು
    • ವೆಂಟಿಲೇಟೆಡ್ ಸೀಟ್‌ಗಳು
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಡ್ರೈವ್ ಮೋಡ್‌ಗಳು
    • ಕ್ರುಯಸ್ ಕಂಟ್ರೋಲ್
    • ಏರ್ ಪ್ಯೂರಿಫೈಯರ್‌
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • 360 degree camera
    • ಸನ್ರೂಫ್
    • adas
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು
    space Image

    ಹ್ಯಾರಿಯರ್ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪೂರ್ಣ 5-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಅಪ್‌ಡೇಟ್ ಮಾಡಲಾದ ಹ್ಯಾರಿಯರ್ ಎಷ್ಟು ಲಗೇಜ್‌ಗೆ ಅವಕಾಶ ಕಲ್ಪಿಸುತ್ತದೆ ಎಂಬುದನ್ನು ತಿಳಿಯೋಣ.

    ಬೆಲೆ: ಆಪ್‌ಡೇಟ್‌ ಆಗಿರುವ ಟಾಟಾ ಹ್ಯಾರಿಯರ್ ನ ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

    ವೇರಿಯೇಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ. 

    ಬಣ್ಣಗಳು: ನೀವು ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು  ಸನ್‌ಲೈಟ್ ಯೆಲ್ಲೊ, ಕೋರಲ್ ರೆಡ್, ಪೆಬಲ್ ಗ್ರೇ, ಲೂನಾರ್ ವೈಟ್, ಒಬೆರಾನ್ ಬ್ಲಾಕ್, ಸೀವೀಡ್ ಗ್ರೀನ್ ಮತ್ತು ಆಶ್ ಗ್ರೇ ಎಂಬ 7 ಬಣ್ಣದ ಆಯ್ಕೆಗಳಲ್ಲಿ ಆಯ್ಕೆ ಮಾಡಬಹುದು.

    ಬೂಟ್ ಸ್ಪೇಸ್: ಇದು 445 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. 

    ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌: 2023 ಟಾಟಾ ಹ್ಯಾರಿಯರ್ ಈ ಹಿಂದಿನ ಮಾದರಿಯಂತೆಯೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು (170PS/350Nm) ಬಳಸುತ್ತದೆ. ಈ ಎಂಜಿನ್‌ನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಮೈಲೇಜ್‌ನ ಕುರಿತು ಟಾಟಾ ನೀಡಿರುವ ಅಂಕಿಆಂಶಗಳು ಇಲ್ಲಿದೆ:

    • ಮ್ಯಾನುಯಲ್‌ -  ಪ್ರತಿ ಲೀ.ಗೆ 16.80 ಕಿ.ಮೀ

    • ಆಟೋಮ್ಯಾಟಿಕ್‌ - ಪ್ರತಿ ಲೀ.ಗೆ 14.60 ಕಿ.ಮೀ

    ವೈಶಿಷ್ಟ್ಯಗಳು: 2023 ಹ್ಯಾರಿಯರ್‌ನಲ್ಲಿರುವ ವೈಶಿಷ್ಟ್ಯಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಡ್ರೈವರ್ ಸೀಟ್, 4-ವೇ ಪವರ್ಡ್ ಸಹ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ (ಲೈಟಿಂಗ್‌ನ ಮೋಡ್‌ಗೆ ಅನುಗುಣವಾಗಿ), ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್, ಮತ್ತು ಏರ್ ಪ್ಯೂರಿಫೈಯರ್ ಅನ್ನು ಸಹ ಪಡೆಯುತ್ತದೆ.

    ಸುರಕ್ಷತೆ: ಇದು 7 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್), ಹಿಲ್ ಅಸಿಸ್ಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಅನ್ನು ಪಡೆಯುತ್ತದೆ. , ಇದು ಈಗ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.

    ಪ್ರತಿಸ್ಪರ್ಧಿಗಳು: ಇದು ಮಾರುಕಟ್ಟೆಯಲ್ಲಿ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಮಾಡೆಲ್ ನೊಂದಿಗೆ ಸ್ಪರ್ಧಿಸುತ್ತದೆ. 

    ಮತ್ತಷ್ಟು ಓದು
    ಹ್ಯಾರಿಯರ್ ಸ್ಮಾರ್ಟ್(ಬೇಸ್ ಮಾಡೆಲ್)1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌15 ಲಕ್ಷ*
    ಹ್ಯಾರಿಯರ್ ಸ್ಮಾರ್ಟ್ (ಒಪ್ಶನಲ್)1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌15.85 ಲಕ್ಷ*
    ಹ್ಯಾರಿಯರ್ ಪಿಯೋರ್‌1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌16.85 ಲಕ್ಷ*
    ಹ್ಯಾರಿಯರ್ ಪ್ಯೂರ್‌ (ಒಪ್ಶನಲ್)1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌17.35 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌18.55 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌18.85 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌19.15 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌19.35 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌19.55 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್ ಆಟೋಮ್ಯಾಟಿಕ್‌1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌19.85 ಲಕ್ಷ*
    ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌20 ಲಕ್ಷ*
    ಅಗ್ರ ಮಾರಾಟ
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌
    21.05 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌21.55 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌22.05 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌22.45 ಲಕ್ಷ*
    ಹ್ಯಾರಿಯರ್ ಫಿಯರ್ಲೆಸ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌22.85 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌22.95 ಲಕ್ಷ*
    ಹ್ಯಾರಿಯರ್ ಫಿಯರ್ಲೆಸ್ ಡಾರ್ಕ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌23.35 ಲಕ್ಷ*
    ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌23.45 ಲಕ್ಷ*
    ಹ್ಯಾರಿಯರ್ ಫಿಯರ್ಲೆಸ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌24.25 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌24.35 ಲಕ್ಷ*
    ಹ್ಯಾರಿಯರ್ ಫಿಯರ್ಲೆಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌24.75 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌24.85 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ stealth1956 ಸಿಸಿ, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌25.10 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌25.75 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌26.25 ಲಕ್ಷ*
    ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ stealth ಎಟಿ(ಟಾಪ್‌ ಮೊಡೆಲ್‌)1956 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್‌26.50 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ಟಾಟಾ ಹ್ಯಾರಿಯರ್ ವಿಮರ್ಶೆ

    Overview

    2023 Tata Harrier Facelift

    2023 ಟಾಟಾ ಹ್ಯಾರಿಯರ್ ದೊಡ್ಡ 5-ಆಸನಗಳ ಫ್ಯಾಮಿಲಿ ಎಸ್‌ಯುವಿಗೆ ಕೇವಲ ಒಂದು ಸಣ್ಣ ಆಪ್‌ಡೇಟ್‌ಗಿಂತ ಹೆಚ್ಚಾಗಿರುತ್ತದೆ.  ಇದು ಸಾಂಪ್ರದಾಯಿಕ ಅರ್ಥದಲ್ಲಿ ಸಂಪೂರ್ಣವಾಗಿ ಹೊಸ ಜನರೇಶನ್‌ ಅಲ್ಲ, ಅಂದರೆ ಇದು ಇನ್ನೂ ಮೊದಲಿನಂತೆಯೇ ಅದೇ ಪ್ಲಾಟ್‌ಫೊರ್ಮ್‌ನ್ನು ಆಧರಿಸಿದೆ, ಆದರೆ ಇದರಲ್ಲಿ ದೊಡ್ಡ ಬದಲಾವಣೆಯಾಗಿದೆ.

    ಟಾಟಾ ಹ್ಯಾರಿಯರ್ 2023 5-ಆಸನಗಳ ಎಸ್‌ಯುವಿಯಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 15-25 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ. ಇದು ಟಾಟಾ ಸಫಾರಿಗಿಂತ ಸ್ವಲ್ಪ ಚಿಕ್ಕದಾಗಿದೆ ಆದರೆ ಅದೇ ರೀತಿಯ ಕಮಾಂಡ್‌ ಮಾಡುವಂತಹ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ.

    ನೀವು 2023 ರಲ್ಲಿ ಟಾಟಾ ಹ್ಯಾರಿಯರ್ ಖರೀದಿಸಲು ಯೋಚಿಸುತ್ತಿದ್ದರೆ, ನೀವು MG ಹೆಕ್ಟರ್ ಅಥವಾ ಮಹೀಂದ್ರಾ XUV700 ನಂತಹ ಇತರ ಎಸ್‌ಯುವಿಗಳನ್ನು ಸಹ ನೋಡಬಹುದು. ಅವುಗಳು ಸರಿಸುಮಾರು ಒಂದೇ ಗಾತ್ರದ ವಾಹನಗಳಾಗಿವೆ.  ಅಥವಾ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೊಕ್ಸ್‌ವಾಗನ್‌ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಎಂಜಿ ಆಸ್ಟರ್‌ನಂತಹ ಸಣ್ಣ ಎಸ್‌ಯುವಿಗಳ ಟಾಪ್‌-ಎಂಡ್‌ ಆವೃತ್ತಿಗಳನ್ನು ಟಾಟಾ ಹ್ಯಾರಿಯರ್‌ನ ಮಿಡ್ ರೇಂಜ್‌ ಮೊಡೆಲ್‌ಗಳಿಗೆ ಸಮಾನವಾದ ಬೆಲೆಗೆ ಖರೀದಿಸಬಹುದು.

    ಮತ್ತಷ್ಟು ಓದು

    ಎಕ್ಸ್‌ಟೀರಿಯರ್

    2023 Tata Harrier Facelift Front

    ಹೊಸ ಟಾಟಾ ಹ್ಯಾರಿಯರ್ ಅದರ ನೋಟದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಹ್ಯಾರಿಯರ್‌ನ ಮುಖ್ಯ ಆಕಾರವು ಒಂದೇ ಆಗಿರುತ್ತದೆ, ಅದು ಈಗ ಬಹುತೇಕ ಕಾನ್ಸೆಪ್ಟ್ ಕಾರಿನಂತೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ.  ಕ್ರೋಮ್‌ನಂತೆ ಪ್ರಕಾಶಮಾನವಾಗಿರದಿದ್ದರೂ ಹೊಳೆಯುವ ಬೆಳ್ಳಿಯ ಅಂಶಗಳೊಂದಿಗೆ ಗ್ರಿಲ್ ಹೆಚ್ಚು ಪ್ರಮುಖವಾಗಿದೆ. ಇದು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದ್ದು, ನೀವು ಕಾರನ್ನು ಅನ್‌ಲಾಕ್ ಮಾಡಿದಾಗ ಅಥವಾ ಲಾಕ್ ಮಾಡಿದಾಗ ತಂಪಾದ ಸ್ವಾಗತ ಮತ್ತು ವಿದಾಯದ ಎಫೆಕ್ಟ್‌ಗಳನ್ನು  ನೀಡುತ್ತದೆ. ಈ ಲೈಟ್‌ಗಳ ಕೆಳಗೆ, ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಿವೆ.

    2023 Tata Harrier Facelift Side

    ಬದಿಗಳಲ್ಲಿ, 2023 ಹ್ಯಾರಿಯರ್ ಹೊಸ 18-ಇಂಚಿನ ಆಲಾಯ್‌ ಚಕ್ರಗಳನ್ನು ಪಡೆಯುತ್ತದೆ ಮತ್ತು ನೀವು #ಡಾರ್ಕ್ ಆವೃತ್ತಿಯ ಹ್ಯಾರಿಯರ್ ಅನ್ನು ಆರಿಸಿದರೆ ನೀವು ಇನ್ನೂ ದೊಡ್ಡದಾದ 19-ಇಂಚಿನ ಚಕ್ರಗಳನ್ನು ಪಡೆಯಬಹುದು. ಹಿಂಭಾಗದಲ್ಲಿ, 2023 ಹ್ಯಾರಿಯರ್ ಅದರ ಟೈಲ್‌ಲೈಟ್‌ಗಳಿಗಾಗಿ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಹಿಂಭಾಗದ ಫೆಂಡರ್‌ಗಳಲ್ಲಿ ರಿಫ್ಲೆಕ್ಟರ್‌ಗಳೊಂದಿಗೆ ನೀವು ಕೆಲವು ತೀಕ್ಷ್ಣವಾದ ಶೈನಿಂಗ್‌ನ್ನು ನೋಡುತ್ತೀರಿ.

    2023 Tata Harrier Facelift Rear

    2023 ಹ್ಯಾರಿಯರ್ ಸಾಮಾನ್ಯ ಬಿಳಿ ಮತ್ತು ಬೂದು ಜೊತೆಗೆ ಸನ್‌ಲಿಟ್ ಯೆಲ್ಲೋ, ಕೋರಲ್ ರೆಡ್ ಮತ್ತು ಸೀವೀಡ್ ಗ್ರೀನ್‌ನಂತಹ ಅತ್ಯಾಕರ್ಷಕ ಹೊಸ ಬಣ್ಣಗಳಲ್ಲಿ ಬರುತ್ತದೆ.

    ಮತ್ತಷ್ಟು ಓದು

    ಇಂಟೀರಿಯರ್

    2023 Tata Harrier Facelift Cabin

    2023 ರ ಹ್ಯಾರಿಯರ್‌ನಲ್ಲಿನ ಒಂದು ದೊಡ್ಡ ಬದಲಾವಣೆಯೆಂದರೆ ಅದು ವಿಭಿನ್ನ "ಪರ್ಸೊನಾಸ್‌ " ಆಗಿ ಆಯೋಜಿಸಲ್ಪಟ್ಟಿದೆ, ಪ್ರತಿಯೊಂದೂ ತನ್ನದೇ ಆದ ಇಂಟಿರೀಯರ್‌ ಬಣ್ಣ ಮತ್ತು ಸ್ಟೈಲ್‌ನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಹೊಸ ನೋಟವನ್ನು ಹೊಂದಿದ್ದು, ಇದು ನೀವು ಆಯ್ಕೆ ಮಾಡಿದ ಪರ್ಸೊನಾಗೆ ಹೊಂದಿಕೆಯಾಗುತ್ತದೆ. ಉದಾಹರಣೆಗೆ, ಫಿಯರ್‌ಲೆಸ್ ಪರ್ಸನಾದಲ್ಲಿ, ಹಳದಿ ಬಾಡಿ ಕಲರ್‌ನ ಕಾರನ್ನು ಆಯ್ಕೆಮಾಡಿದರೆ, ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಮಾನವಾದ ಹಳದಿ ಪ್ಯಾನೆಲ್‌ನ ಜೊತೆಗೆ ಡೋರ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಹಳದಿ ಕಾಂಟ್ರಾಸ್ಟ್ ಫಿನಿಶರ್‌ಗಳನ್ನು ಪಡೆಯಲಾಗುತ್ತದೆ.

    2023 Tata Harrier Facelift Rear Seats

    2023 ಹ್ಯಾರಿಯರ್ ಎತ್ತರದ ಚಾಲಕರಿಗೆ ಹೆಚ್ಚು ಆರಾಮದಾಯಕವಾಗಿದೆ ಮತ್ತು ಇದು ಐದು ಜನರಿಗೆ ಶಾಂತವಾಗಿ ಪ್ರಯಾಣಿಸಲು ಸಾಕಷ್ಟು ಸ್ಥಳಾವಕಾಶವಿದೆ. 6 ಅಡಿ ಎತ್ತರದ ಚಾಲಕರು ಈ ಹಿಂದೆ ತಮ್ಮ ಮೊಣಕಾಲು ಸೆಂಟರ್ ಕನ್ಸೋಲ್‌ಗೆ ತಾಗುತ್ತಿದ್ದಂತೆ ಈ ಫೇಸ್‌ಲಿಫ್ಟ್‌ನಲ್ಲಿ ಅದರ ಅನುಭವವಾಗುವುದಿಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಲೆಥೆರೆಟ್ ಅಂಶಗಳ ಬಳಕೆಯೊಂದಿಗೆ ಪೂರಕವಾದ ಆಂತರಿಕ ಫಿಟ್‌ಮೆಂಟ್ ಗುಣಮಟ್ಟದಲ್ಲಿ ಮತ್ತೊಂದು ಗಮನಾರ್ಹ ಸುಧಾರಣೆ ಕಂಡುಬರುತ್ತದೆ.

    ತಂತ್ರಜ್ಞಾನ:

    2023 Tata Harrier Facelift Touchscreen

    2023 ಹ್ಯಾರಿಯರ್‌ನ್ನು ಹೊಸ ತಂತ್ರಜ್ಞಾನದೊಂದಿಗೆ ಲೋಡ್ ಮಾಡಲಾಗಿದೆ.  ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಡ್ರೈವರ್‌ಗಾಗಿ ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಪವರ್-ಆಪರೇಟೆಡ್ ಟೈಲ್‌ಗೇಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಹೈಲೈಟ್ ಆಗಿದೆ.  ಇದು ಬಳಸಲು ಸುಲಭವಾಗಿದೆ ಮತ್ತು ಉತ್ತಮ ಗುಣಮಟ್ಟದ 10-ಸ್ಪೀಕರ್‌ನ JBL ಸೌಂಡ್ ಸಿಸ್ಟಮ್ ಮತ್ತು ಮೂಡ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ನಿಯಂತ್ರಿಸುತ್ತದೆ. 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ, ಇದು ನೀವು ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇಯನ್ನು ಬಳಸುತ್ತಿದ್ದರೆ ನಿಮ್ಮ ನ್ಯಾವಿಗೇಶನ್ ಅನ್ನು ತೋರಿಸುತ್ತದೆ (ನೀವು ಆಪಲ್ ಕಾರ್‌ಪ್ಲೇಅನ್ನು ಬಳಸುತ್ತಿದ್ದರೆ ಗೂಗಲ್  ಮ್ಯಾಪ್‌ ಇದಕ್ಕೆ ಸಪೋರ್ಟ್‌ ಆಗುವುದಿಲ್ಲ, ಕೇವಲ ಆಪಲ್ ಮ್ಯಾಪ್‌ ಬಳಸಬೇಕು).

    2023 Tata Harrier Facelift Drive Mode Selector

    ಇತರ ವೈಶಿಷ್ಟ್ಯಗಳೆಂದರೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ವಿವಿಧ ಯುಎಸ್‌ಬಿ ಪೋರ್ಟ್‌ಗಳು, ಸ್ಮಾರ್ಟ್ ಹೋಮ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು ಮತ್ತು ಆರಾಮದಾಯಕ ಲೆಥೆರೆಟ್ ಸೀಟುಗಳಾಗಿವೆ.  ಹ್ಯಾರಿಯರ್ ಫೇಸ್‌ಲಿಫ್ಟ್‌ ವಿವಿಧ ರೀತಿಯ ರಸ್ತೆಗಳಿಗಾಗಿ ಡ್ರೈವ್ ಮೋಡ್‌ಗಳನ್ನು ಸಹ ಹೊಂದಿದೆ.

    ಮತ್ತಷ್ಟು ಓದು

    ಸುರಕ್ಷತೆ

    2023 Tata Harrier Facelift ADAS Camera

    2023 ಹ್ಯಾರಿಯರ್ ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ, ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಮತ್ತು ಟಾಪ್‌ ಮೊಡೆಲ್‌ಗಳಲ್ಲಿ ಹೆಚ್ಚುವರಿ ಮೊಣಕಾಲಿನ ಏರ್‌ಬ್ಯಾಗ್ ಹೊಂದಿದೆ. ಇದು ಉತ್ತಮ ಗೋಚರತೆಗಾಗಿ ಹೈ ರೆಸಲ್ಯೂಶನ್‌ನ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ABS, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ವಯಂ-ಮಬ್ಬಾಗಿಸುವ ರಿಯರ್‌ವ್ಯೂ ಮಿರರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

    ADAS

    ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅಡ್ವೆಂಚರ್+ ಎ, ಅಕಾಂಪ್ಲಿಶ್ಡ್+ ಮತ್ತು ಅಕಾಂಪ್ಲಿಶ್ಡ್+ ಡಾರ್ಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 

    ವೈಶಿಷ್ಟ್ಯ ಇದು ಹೇಗೆ ಕೆಲಸ ಮಾಡುತ್ತದೆ? ಟಿಪ್ಪಣಿಗಳು
    ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ + ಆಟೋ ತುರ್ತು ಬ್ರೇಕಿಂಗ್ ಮುಂಭಾಗದಲ್ಲಿರುವ ವಾಹನದೊಂದಿಗೆ ಸಂಭವನೀಯ ಘರ್ಷಣೆಯನ್ನು ಪತ್ತೆ ಮಾಡುತ್ತದೆ ಮತ್ತು ನಿಮಗೆ ಕೇಳುವಂತೆ ಎಚ್ಚರಿಕೆಯನ್ನು ನೀಡುತ್ತದೆ. ನೀವು ಬ್ರೇಕ್ ಹಾಕದಿದ್ದರೆ, ಅಪಘಾತವನ್ನು ತಪ್ಪಿಸಲು ವಾಹನವು ಆಟೋಮ್ಯಾಟಿಕ್‌ ಆಗಿ ನಿಧಾನವಾಗುತ್ತದೆ. ಉದ್ದೇಶಿಸಿದಂತ ಕಾರ್ಯಗಳಾಗಿವೆ. ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುತ್ತದೆ. ಘರ್ಷಣೆಯ ಎಚ್ಚರಿಕೆಯ ಸೂಕ್ಷ್ಮತೆಯನ್ನು ಕಡಿಮೆ, ಮಧ್ಯಮ, ಹೈ ಎಂಬುವುದಾಗಿ ಆಯ್ಕೆಮಾಡಬಹುದಾಗಿದೆ. 
    ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಸ್ಟಾಪ್ ಮತ್ತು ಗೋ ಕಾರ್ಯದೊಂದಿಗೆ) ನೀವು ಗರಿಷ್ಠ ವೇಗವನ್ನು ಹೊಂದಿಸಬಹುದು ಮತ್ತು ನಿಮ್ಮ ಮತ್ತು ನಿಮ್ಮ ಮುಂದೆ ಇರುವ ವಾಹನದ ನಡುವಿನ ಅಂತರವನ್ನು ಸೆಟ್‌ ಮಾಡಬಹುದು. ಅಂತರವನ್ನು ಕಾಯ್ದುಕೊಳ್ಳಲು ಸಫಾರಿ ವೇಗವನ್ನು ನಿರ್ವಹಿಸುತ್ತದೆ. ಸ್ಟಾಪ್ ಮತ್ತು ಗೋ ಕಾರ್ಯನಿರ್ವಹಣೆಯೊಂದಿಗೆ, ಇದು ಸಂಪೂರ್ಣವಾಗಿ (0kmph) ನಿಲ್ಲುತ್ತದೆ ಮತ್ತು ಮುಂಭಾಗದಲ್ಲಿರುವ ವಾಹನವು ಚಲಿಸಲು ಪ್ರಾರಂಭಿಸಿದಾಗ ಆಟೋಮ್ಯಾಟಿಕ್ ಆಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ.  ಬಂಪರ್-ಟು-ಬಂಪರ್ ಡ್ರೈವಿಂಗ್‌ನಲ್ಲಿ ಈ ಸೌಕರ್ಯ ಅದ್ಭುತವಾಗಿ ಸಹಾಯಕವಾಗಿದೆ. ಸದ್ಯದ ನಮ್ಮ ಟ್ರಾಫಿಕ್‌ನ ಸ್ಥಿತಿಗಳನ್ನು ಗಮನಿಸುವಾಗ ಕನಿಷ್ಠ ದೂರವು ಇನ್ನೂ ಸ್ವಲ್ಪ ಹೆಚ್ಚಾದಂತೆ ಅನಿಸುತ್ತದೆ. ಸರಾಗವಾಗಿ ಚಾಲನೆಯನ್ನು ಪುನರಾರಂಭಿಸುತ್ತದೆ. ದೀರ್ಘಾವಧಿಗೆ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ನೀವು ಸ್ಟೀರಿಂಗ್ ವೀಲ್‌ನಲ್ಲಿರುವ 'ರೆಸ್' ಬಟನ್ ಅನ್ನು ಒತ್ತಬೇಕು ಅಥವಾ ಎಕ್ಸಲರೇಟರ್‌ನ್ನು ಬಳಕೆ ಮಾಡಬೇಕು.
    ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಿಮ್ಮ ಹಿಂದೆ ಇರುವ ವಾಹನವು ನಿಮ್ಮ ಕನ್ನಡಿ ವೀಕ್ಷಣಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಉದ್ದೇಶಿಸಿದಂತೆ ಕಾರ್ಯಗಳು. ಕನ್ನಡಿಯ ಮೇಲೆ ಕಿತ್ತಳೆ ಬಣ್ಣದ ಸೂಚನೆ ಗೋಚರಿಸುತ್ತದೆ. ಇದು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಮತ್ತು ನಗರ ಸಂಚಾರದಲ್ಲಿ ಸಹಾಯಕವಾಗಿದೆ. 
    ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್  ವಾಹನದ ಹಿಂದಿನಿಂದ ಬರುವ ವಾಹನಗಳನ್ನು ಪತ್ತೆ ಮಾಡುತ್ತದೆ. ನೀವು ಪಾರ್ಕಿಂಗ್ ಸ್ಥಳದಿಂದ ಹೆಚ್ಚಾಗಿ ಹಿಂದೆಗೆ ಹೋಗುತ್ತಿದ್ದರೆ ಮತ್ತು ಮುಂಬರುವ ವಾಹನವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಸೌಕರ್ಯ ಸಹಾಯಕವಾಗಿದೆ. ನೀವು ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬಾಗಿಲು ತೆರೆದ ಎಚ್ಚರಿಕೆಯನ್ನು ಸಹ ನೀಡುತ್ತದೆ. 

    ಟ್ರಾಫಿಕ್ ಇರುವುದನ್ನು ಗುರುತಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್‌, ಹಿಂಭಾಗದ ಡಿಕ್ಕಿಯ ವಾರ್ನಿಂಗ್‌ ಮತ್ತು ಓವರ್‌ಟೇಕಿಂಗ್ ಸಹಾಯದಂತಹ ಇತರ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಲೇನ್ ಸೆಂಟ್ರಿಂಗ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಸಾಫ್ಟ್‌ವೇರ್ ಅಪ್‌ಡೇಟ್ ಆಗಿ ಸೇರಿಸುತ್ತದೆ.

    ಮತ್ತಷ್ಟು ಓದು

    ಬೂಟ್‌ನ ಸಾಮರ್ಥ್ಯ

    2023 Tata Harrier Facelift Boot

    445-ಲೀಟರ್ ಬೂಟ್ ಸ್ಥಳವು ಸಾಕಷ್ಟು ದೊಡ್ಡದಾಗಿದೆ, ಇದು ಕುಟುಂಬದ ಪ್ರವಾಸಗಳಿಗೆ ಅಥವಾ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ನೀವು ಅನೇಕ ದೊಡ್ಡ ಸೂಟ್‌ಕೇಸ್‌ಗಳನ್ನು ಸಾಗಿಸಲು ಇದು ಉತ್ತಮವಾಗಿದೆ. 

    ಮತ್ತಷ್ಟು ಓದು

    ಕಾರ್ಯಕ್ಷಮತೆ

    2023 Tata Harrier Facelift Engine

    2023ರ ಹ್ಯಾರಿಯರ್ ಇಂದಿನ 2-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತಿದ್ದು, ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 170PS ಮತ್ತು 350Nm 

    ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.ಆರಾಮದಾಯಕ ಡ್ರೈವ್‌ ಆನುಭವಕ್ಕಾಗಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಪ್ಯಾಡಲ್-ಶಿಫ್ಟರ್‌ಗಳನ್ನು ಸೇರಿಸುವ ಮೂಲಕ ಸಹಾಯ ಮಾಡುತ್ತದೆ. ಮಡ್‌ ರೋಡ್‌ಗಳಲ್ಲಿಯೂ ಸಹ ಸವಾರಿ ಆರಾಮದಾಯಕವಾಗಿದೆ ಮತ್ತು ಇದು ಹೆಚ್ಚಿನ ವೇಗದಲ್ಲಿ ಉತ್ತಮವಾಗಿ ನಿರ್ವಹಿಸುತ್ತದೆ. ಆದಾಗಿಯೂ, ಎಂಜಿನ್ ಸ್ವಲ್ಪ ಸೌಂಡ್‌ ಮಾಡುತ್ತದೆ.

    2023 Tata Harrier Facelift

    2023 ರಲ್ಲಿ, ಟಾಟಾ ಹ್ಯಾರಿಯರ್‌ನ ಪೆಟ್ರೋಲ್ ಆವೃತ್ತಿಯನ್ನು ಸಣ್ಣ ಎಂಜಿನ್‌ನೊಂದಿಗೆ ಪರಿಚಯಿಸಲಿದೆ. 

    ಮತ್ತಷ್ಟು ಓದು

    ವರ್ಡಿಕ್ಟ್

    2023 Tata Harrier Facelift2023 ಟಾಟಾ ಹ್ಯಾರಿಯರ್ ವಿಶಾಲವಾದ, ಆರಾಮದಾಯಕ ಮತ್ತು ಪ್ರಾಯೋಗಿಕ ಫ್ಯಾಮಿಲಿ ಎಸ್‌ಯುವಿ ಆಗಿದೆ. ಇದು ತಾಜಾ, ಪರ್ಸನಲೈಸ್‌ಡ್‌ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಮತ್ತು ಬಳಕೆದಾರ ಸ್ನೇಹಿ ಟೆಕ್ ಪ್ಯಾಕೇಜ್ ಅನ್ನು ಹೊಂದಿದೆ.

    ಮತ್ತಷ್ಟು ಓದು

    ಟಾಟಾ ಹ್ಯಾರಿಯರ್

    ನಾವು ಇಷ್ಟಪಡುವ ವಿಷಯಗಳು

    • ದೊಡ್ಡ ಗಾತ್ರ ಮತ್ತು ಬಲವಾದ ರೋಡ್‌ ಪ್ರೆಸೆನ್ಸ್‌
    • ಹಲವು ವೈಶಿಷ್ಟ್ಯಗಳ ಪಟ್ಟಿ
    • ಬಳಸಲು ಸುಲಭವಾದ ತಂತ್ರಜ್ಞಾನವನ್ನು ಪಡೆಯುತ್ತದೆ
    View More

    ನಾವು ಇಷ್ಟಪಡದ ವಿಷಯಗಳು

    • ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ
    • ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ

    ಟಾಟಾ ಹ್ಯಾರಿಯರ್ comparison with similar cars

    ಟಾಟಾ ಹ್ಯಾರಿಯರ್
    ಟಾಟಾ ಹ್ಯಾರಿಯರ್
    Rs.15 - 26.50 ಲಕ್ಷ*
    ಟಾಟಾ ಸಫಾರಿ
    ಟಾಟಾ ಸಫಾರಿ
    Rs.15.50 - 27.25 ಲಕ್ಷ*
    ಮಹೀಂದ್ರ ಎಕ್ಸ್‌ಯುವಿ 700
    ಮಹೀಂದ್ರ ಎಕ್ಸ್‌ಯುವಿ 700
    Rs.14.49 - 25.14 ಲಕ್ಷ*
    ಮಹೀಂದ್ರಾ ಎಕ್ಸ್‌ಇವಿ 9ಇ
    ಮಹೀಂದ್ರಾ ಎಕ್ಸ್‌ಇವಿ 9ಇ
    Rs.21.90 - 30.50 ಲಕ್ಷ*
    ಮಹೀಂದ್ರ ಥಾರ್‌ ರಾಕ್ಸ್‌
    ಮಹೀಂದ್ರ ಥಾರ್‌ ರಾಕ್ಸ್‌
    Rs.12.99 - 23.39 ಲಕ್ಷ*
    ಮಹೀಂದ್ರಾ ಸ್ಕಾರ್ಪಿಯೋ ಎನ್
    ಮಹೀಂದ್ರಾ ಸ್ಕಾರ್ಪಿಯೋ ಎನ್
    Rs.13.99 - 25.42 ಲಕ್ಷ*
    ಹುಂಡೈ ಕ್ರೆಟಾ
    ಹುಂಡೈ ಕ್ರೆಟಾ
    Rs.11.11 - 20.50 ಲಕ್ಷ*
    ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.21.49 - 30.23 ಲಕ್ಷ*
    rating4.6260 ವಿರ್ಮಶೆಗಳುrating4.5185 ವಿರ್ಮಶೆಗಳುrating4.61.1K ವಿರ್ಮಶೆಗಳುrating4.891 ವಿರ್ಮಶೆಗಳುrating4.7475 ವಿರ್ಮಶೆಗಳುrating4.5811 ವಿರ್ಮಶೆಗಳುrating4.6404 ವಿರ್ಮಶೆಗಳುrating4.935 ವಿರ್ಮಶೆಗಳು
    ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಇಂಜಿನ್1956 ಸಿಸಿಇಂಜಿನ್1956 ಸಿಸಿಇಂಜಿನ್1999 ಸಿಸಿ - 2198 ಸಿಸಿಇಂಜಿನ್not applicableಇಂಜಿನ್1997 ಸಿಸಿ - 2184 ಸಿಸಿಇಂಜಿನ್1997 ಸಿಸಿ - 2198 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್not applicable
    ಇಂಧನದ ಪ್ರಕಾರಡೀಸಲ್ಇಂಧನದ ಪ್ರಕಾರಡೀಸಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಎಲೆಕ್ಟ್ರಿಕ್
    ಪವರ್167.62 ಬಿಹೆಚ್ ಪಿಪವರ್167.62 ಬಿಹೆಚ್ ಪಿಪವರ್152 - 197 ಬಿಹೆಚ್ ಪಿಪವರ್228 - 282 ಬಿಹೆಚ್ ಪಿಪವರ್150 - 174 ಬಿಹೆಚ್ ಪಿಪವರ್130 - 200 ಬಿಹೆಚ್ ಪಿಪವರ್113.18 - 157.57 ಬಿಹೆಚ್ ಪಿಪವರ್235 - 390 ಬಿಹೆಚ್ ಪಿ
    ಮೈಲೇಜ್16.8 ಕೆಎಂಪಿಎಲ್ಮೈಲೇಜ್16.3 ಕೆಎಂಪಿಎಲ್ಮೈಲೇಜ್17 ಕೆಎಂಪಿಎಲ್ಮೈಲೇಜ್-ಮೈಲೇಜ್12.4 ಗೆ 15.2 ಕೆಎಂಪಿಎಲ್ಮೈಲೇಜ್12.12 ಗೆ 15.94 ಕೆಎಂಪಿಎಲ್ಮೈಲೇಜ್17.4 ಗೆ 21.8 ಕೆಎಂಪಿಎಲ್ಮೈಲೇಜ್-
    ಗಾಳಿಚೀಲಗಳು6-7ಗಾಳಿಚೀಲಗಳು6-7ಗಾಳಿಚೀಲಗಳು2-7ಗಾಳಿಚೀಲಗಳು6-7ಗಾಳಿಚೀಲಗಳು6ಗಾಳಿಚೀಲಗಳು2-6ಗಾಳಿಚೀಲಗಳು6ಗಾಳಿಚೀಲಗಳು6
    gncap ಸುರಕ್ಷತೆ ratings5 ಸ್ಟಾರ್‌gncap ಸುರಕ್ಷತೆ ratings5 ಸ್ಟಾರ್‌gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-
    currently viewingಹ್ಯಾರಿಯರ್ vs ಸಫಾರಿಹ್ಯಾರಿಯರ್ vs ಎಕ್ಸ್‌ಯುವಿ 700ಹ್ಯಾರಿಯರ್ vs ಎಕ್ಸ್‌ಇವಿ 9ಇಹ್ಯಾರಿಯರ್ vs ಥಾರ್‌ ರಾಕ್ಸ್‌ಹ್ಯಾರಿಯರ್ vs ಸ್ಕಾರ್ಪಿಯೊ ಎನ್ಹ್ಯಾರಿಯರ್ vs ಕ್ರೆಟಾಹ್ಯಾರಿಯರ್ vs ಹ್ಯಾರಿಯರ್ ಇವಿ
    space Image

    ಟಾಟಾ ಹ್ಯಾರಿಯರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್��ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
      Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

      ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

      By anshDec 18, 2024

    ಟಾಟಾ ಹ್ಯಾರಿಯರ್ ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ260 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (260)
    • Looks (65)
    • Comfort (109)
    • ಮೈಲೇಜ್ (39)
    • ಇಂಜಿನ್ (65)
    • ಇಂಟೀರಿಯರ್ (59)
    • space (20)
    • ಬೆಲೆ/ದಾರ (25)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • C
      chethan gowda on Jun 28, 2025
      4.7
      Once A Tata Fan Always Tata Fan.
      Indian Affordable Range Rover, Extraordinary road presence and Desired performance. Diesel Dhamaka engine feel keeps a mindful of Coolness and Feel ness. From past 5 years thought a buying a Tata harrier before facelift version but i was studying at that time, But because of tata harrier I learned driving and no second thought or imagining about other car. I will buy a Tata harrie in 2026 for sure.
      ಮತ್ತಷ್ಟು ಓದು
    • H
      honey on Jun 28, 2025
      5
      It Was A Great Experience
      It was a great experience to have this type of car in India this is a heavy duty and highly monster car which can help you out in. Every situation and give a luxury comfort as a decent way and the sound quality is damn good as Jbl woofers are added into it it gives you massive feel to drive the car this one
      ಮತ್ತಷ್ಟು ಓದು
    • S
      sanjiv kumar on Jun 28, 2025
      4.5
      Safety = Tata
      Harrier boost the new life in Tata automobile sector. Safety wise it's very genuine and we must greatful for this vehicle. Harrier is very smooth and we felt comfortable journey into this vehicle. Whenever we discussed about vehicle in today's era or lot of traffic in gurgaon area we must prefer Tata harrier as our best partner.
      ಮತ್ತಷ್ಟು ಓದು
    • D
      deepak bore on Jun 27, 2025
      5
      Indigenous N Value For Money.
      Excellent and balanced car for family and professional usage...... Safety is also the main feature. Product of india where quality and cost both are best....... seating arrangement is most comfortable in segment... Long drive is very comfortable... Grip on road surface in all weather conditions is excellent..
      ಮತ್ತಷ್ಟು ಓದು
    • S
      sahejad khokhar on Jun 24, 2025
      5
      About Driving Experience
      Excellent driving experience and very well cabin inside the car you will get good experience and pleasure to drive the car, TATA'S best car now days as we see it's better than any other car camper to other company even Tata salary can't compete with it. If any want take the car don't think too much it's very safe car and experience good
      ಮತ್ತಷ್ಟು ಓದು
    • ಎಲ್ಲಾ ಹ್ಯಾರಿಯರ್ ವಿರ್ಮಶೆಗಳು ವೀಕ್ಷಿಸಿ

    ಟಾಟಾ ಹ್ಯಾರಿಯರ್ ವೀಡಿಯೊಗಳು

    • full ವೀಡಿಯೋಸ್
    • shorts
    • Tata Harrier Review: A Great Product With A Small Issue12:32
      Tata Harrier Review: A Great Product With A Small Issue
      10 ತಿಂಗಳುಗಳು ago102.1K ವ್ಯೂವ್ಸ್‌
    • ಟಾಟಾ ಹ್ಯಾರಿಯರ್ - highlights
      ಟಾಟಾ ಹ್ಯಾರಿಯರ್ - highlights
      10 ತಿಂಗಳುಗಳು ago1 ನೋಡಿ

    ಟಾಟಾ ಹ್ಯಾರಿಯರ್ ಬಣ್ಣಗಳು

    ಟಾಟಾ ಹ್ಯಾರಿಯರ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಹ್ಯಾರಿಯರ್ ಪೆಬಲ್ ಗ್ರೇ colorಪೆಬಲ್ ಗ್ರೇ
    • ಹ್ಯಾರಿಯರ್ ಲೂನರ್‌ ವೈಟ್‌ colorಲೂನರ್‌ ವೈಟ್‌
    • ಹ್ಯಾರಿಯರ್ ಸೀವೀಡ್‌ ಗ್ರೀನ್‌ colorಸೀವೀಡ್‌ ಗ್ರೀನ್‌
    • ಹ್ಯಾರಿಯರ್ ಸನ್‌ಲೈಟ್‌ ಯೆಲ್ಲೊ colorಸನ್‌ಲೈಟ್‌ ಯೆಲ್ಲೊ
    • ಹ್ಯಾರಿಯರ್ ಆಶ್‌ ಗ್ರೇ colorಆಶ್‌ ಗ್ರೇ
    • ಹ್ಯಾರಿಯರ್ ಕೊರಲ್‌ ರೆಡ್‌ colorಕೊರಲ್‌ ರೆಡ್‌
    • ಹ್ಯಾರಿಯರ್ ಕಪ್ಪು colorಕಪ್ಪು

    ಟಾಟಾ ಹ್ಯಾರಿಯರ್ ಚಿತ್ರಗಳು

    ನಮ್ಮಲ್ಲಿ 16 ಟಾಟಾ ಹ್ಯಾರಿಯರ್ ನ ಚಿತ್ರಗಳಿವೆ, ಹ್ಯಾರಿಯರ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Tata Harrier Front Left Side Image
    • Tata Harrier Exterior Image Image
    • Tata Harrier Exterior Image Image
    • Tata Harrier Exterior Image Image
    • Tata Harrier Exterior Image Image
    • Tata Harrier Grille Image
    • Tata Harrier Wheel Image
    • Tata Harrier Headlight Image
    space Image
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Krishna asked on 24 Feb 2025
      Q ) What voice assistant features are available in the Tata Harrier?
      By CarDekho Experts on 24 Feb 2025

      A ) The Tata Harrier offers multiple voice assistance features, including Alexa inte...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      NarsireddyVannavada asked on 24 Dec 2024
      Q ) Tata hariear six seater?
      By CarDekho Experts on 24 Dec 2024

      A ) The seating capacity of Tata Harrier is 5.

      Reply on th IS answerಎಲ್ಲಾ Answers (2) ವೀಕ್ಷಿಸಿ
      Anmol asked on 24 Jun 2024
      Q ) Who are the rivals of Tata Harrier series?
      By CarDekho Experts on 24 Jun 2024

      A ) The Tata Harrier compete against Tata Safari and XUV700, Hyundai Creta and Mahin...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 8 Jun 2024
      Q ) What is the engine capacity of Tata Harrier?
      By CarDekho Experts on 8 Jun 2024

      A ) The Tata Harrier features a Kryotec 2.0L with displacement of 1956 cc.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 5 Jun 2024
      Q ) What is the mileage of Tata Harrier?
      By CarDekho Experts on 5 Jun 2024

      A ) The Tata Harrier has ARAI claimed mileage of 16.8 kmpl, for Manual Diesel and Au...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      40,642edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಟಾಟಾ ಹ್ಯಾರಿಯರ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ
      space Image

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.18.96 - 33.21 ಲಕ್ಷ
      ಮುಂಬೈRs.17.94 - 31.40 ಲಕ್ಷ
      ತಳ್ಳುRs.18.40 - 32.19 ಲಕ್ಷ
      ಹೈದರಾಬಾದ್Rs.18.49 - 32.37 ಲಕ್ಷ
      ಚೆನ್ನೈRs.18.72 - 33.07 ಲಕ್ಷ
      ಅಹ್ಮದಾಬಾದ್Rs.16.99 - 31.25 ಲಕ್ಷ
      ಲಕ್ನೋRs.17.51 - 31.25 ಲಕ್ಷ
      ಜೈಪುರRs.17.91 - 31.25 ಲಕ್ಷ
      ಪಾಟ್ನಾRs.18.92 - 41.10 ಲಕ್ಷ
      ಚಂಡೀಗಡ್Rs.17.10 - 31.25 ಲಕ್ಷ

      ಟ್ರೆಂಡಿಂಗ್ ಟಾಟಾ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience