• English
    • Login / Register
    • Hyundai Venue Front Right Side
    • ಹುಂಡೈ ವೆನ್ಯೂ ಹಿಂಭಾಗ left ನೋಡಿ image
    1/2
    • Hyundai Venue
      + 6ಬಣ್ಣಗಳು
    • Hyundai Venue
      + 21ಚಿತ್ರಗಳು
    • Hyundai Venue
    • 1 shorts
      shorts
    • Hyundai Venue
      ವೀಡಿಯೋಸ್

    ಹುಂಡೈ ವೆನ್ಯೂ

    4.4438 ವಿರ್ಮಶೆಗಳುrate & win ₹1000
    Rs.7.94 - 13.62 ಲಕ್ಷ*
    *ಹಳೆಯ ಶೋರೂಮ್ ಬೆಲೆ ನವ ದೆಹಲಿ
    ವೀಕ್ಷಿಸಿ ಮೇ ಕೊಡುಗೆಗಳು

    ಹುಂಡೈ ವೆನ್ಯೂ ನ ಪ್ರಮುಖ ಸ್ಪೆಕ್ಸ್

    ಇಂಜಿನ್998 ಸಿಸಿ - 1493 ಸಿಸಿ
    ಪವರ್82 - 118 ಬಿಹೆಚ್ ಪಿ
    ಟಾರ್ಕ್‌113.8 Nm - 250 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    ಮೈಲೇಜ್24.2 ಕೆಎಂಪಿಎಲ್
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • wireless charger
    • ಸನ್ರೂಫ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • cooled glovebox
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಡ್ರೈವ್ ಮೋಡ್‌ಗಳು
    • ಕ್ರುಯಸ್ ಕಂಟ್ರೋಲ್
    • ಏರ್ ಪ್ಯೂರಿಫೈಯರ್‌
    • adas
    • powered ಮುಂಭಾಗ ಸೀಟುಗಳು
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ವೆನ್ಯೂ ಇತ್ತೀಚಿನ ಅಪ್ಡೇಟ್

    ಹ್ಯುಂಡೈ ವೆನ್ಯೂ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

    ಹುಂಡೈಯು ವೆನ್ಯೂನ ಹೊಸ ಮಿಡ್-ಸ್ಪೆಕ್ ಎಸ್ ಪ್ಲಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಸನ್‌ರೂಫ್ ಅನ್ನು ಇನ್ನಷ್ಟು ಕಡಿಮೆ ಬೆಲೆಯಲ್ಲಿ ನೀಡುತ್ತದೆ. 

    ವೆನ್ಯೂವಿನ ಬೆಲೆ ಎಷ್ಟು?

    ಇದರ ಬೇಸ್‌ ಮೊಡೆಲ್‌ ಇ-ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯು 7.94 ಲಕ್ಷ ರೂ,ನಿಂದ ಬೆಲೆಯನ್ನು ಹೊಂದಿದೆ ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಯ ಬೆಲೆಯು 13.48 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ) ಇರಲಿದೆ.

    ವೆನ್ಯುವಿನಲ್ಲಿ ಎಷ್ಟು ಆವೃತ್ತಿಗಳಿವೆ ?

    ವೆನ್ಯೂವನ್ನು E, ಎಕ್ಸಿಕ್ಯುಟಿವ್, S, S+/S(ಒಪ್ಶನಲ್‌), SX, ಮತ್ತು SX(ಒಪ್ಶನಲ್‌) ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

    ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

    ವೆನ್ಯೂವಿನ ಎಸ್‌(ಒಪ್ಶನಲ್‌)/ಎಸ್‌+ ಆವೃತ್ತಿಯು ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆವೃತ್ತಿಯಾಗಿದೆ.  ರೂಪಾಂತರಕ್ಕೆ ಹೆಚ್ಚಿನ ಮೌಲ್ಯವಾಗಿದೆ. ಇದು ವೆನ್ಯೂನ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುವ ಏಕೈಕ ಆವೃತ್ತಿಯಾಗಿದೆ ಮತ್ತು ಪ್ರಭಾವಶಾಲಿ ಫೀಚರ್‌ಗಳ ಪಟ್ಟಿಯನ್ನು ಹೊಂದಿದೆ, ಇದು ನಿಮ್ಮ ಎಲ್ಲಾ ಆರಾಮದಾಯಕ ಸೌಕರ್ಯಗಳು ಮತ್ತು ಅಗತ್ಯತೆಗಳನ್ನು ಒಳಗೊಂಡಿದೆ. ಈ ಆವೃತ್ತಿಯ ಮತ್ತು ಅದರ  ಗಳ ಫೀಚರ್‌ಗಳನ್ನು ವಿವರವಾಗಿ ತಿಳಿಯಲು ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.   

    ವೆನ್ಯೂ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

    ವೆನ್ಯೂನ ಟಾಪ್‌-ಸ್ಪೆಕ್ ಆವೃತ್ತಿಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಸನ್‌ರೂಫ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್ ಮತ್ತು ಕೀಲೆಸ್ ಎಂಟ್ರಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್‌ನಂತಹ ಫೀಚರ್‌ಗಳನ್ನು ಪಡೆಯುತ್ತವೆ.  

    ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೆವೆಲ್-1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ಎಡಿಎಎಸ್) ಪಡೆಯುತ್ತದೆ.

    ಇದು ಎಷ್ಟು ವಿಶಾಲವಾಗಿದೆ? 

    ಹ್ಯುಂಡೈ ವೆನ್ಯೂ, ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವುದರಿಂದ 4 ಪ್ರಯಾಣಿಕರಿಗೆ ಹೆಚ್ಚು ಸೂಕ್ತವಾಗಿರುತ್ತದೆ ಮತ್ತು 5 ಪ್ರಯಾಣಿಕರು ಕುಳಿತು ಪ್ರಯಾಣಿಸಿದಾಗ ಕಿರಿಕಿರಿ ಉಂಟಾಗಬಹುದು. ಆದಾಗ್ಯೂ, ಇದು ಮೊಣಕಾಲು ಇಡುವಲ್ಲಿ ಉತ್ತಮ ಜಾಗ, ಹೆಡ್‌ರೂಮ್ ಮತ್ತು ಯೋಗ್ಯವಾದ ತೊಡೆಯ ಬೆಂಬಲವನ್ನು ನೀಡುತ್ತದೆ. ವೆನ್ಯೂವಿನ  ಕ್ಯಾಬಿನ್ ಸ್ಥಳಾವಕಾಶದ ಕುರಿತು ಉತ್ತಮ ಕಲ್ಪನೆಯನ್ನು ಪಡೆಯಲು ನಮ್ಮ ಸುದ್ದಿಯನ್ನು ಪರಿಶೀಲಿಸಿ.

    ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

    2024 ಹ್ಯುಂಡೈ ವೆನ್ಯೂ 3 ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇವೆಲ್ಲವೂ ಮುಂಭಾಗದ ಚಕ್ರಗಳಿಗೆ ಮಾತ್ರ ಶಕ್ತಿಯನ್ನು ನೀಡುತ್ತದೆ. ಆಯ್ಕೆಗಳೆಂದರೆ:

    • 1.2-ಲೀಟರ್ ಪೆಟ್ರೋಲ್ (83 ಪಿಎಸ್‌ /114 ಎನ್‌ಎಮ್‌) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ

    • 1-ಲೀಟರ್ ಟರ್ಬೊ-ಪೆಟ್ರೋಲ್ (120 ಪಿಎಸ್‌ /172 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಅಥವಾ ಒಪ್ಶನಲ್‌ 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌),

    • 1.5-ಲೀಟರ್ ಡೀಸೆಲ್ ಎಂಜಿನ್‌ (116 ಪಿಎಸ್‌/250 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲ್ಪಟ್ಟಿದೆ.

    ವೆನ್ಯೂವಿನ ಮೈಲೇಜ್‌ ಎಷ್ಟು ?

    ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ನೀವು ಆಯ್ಕೆ ಮಾಡುವ ಆವೃತ್ತಿ ಮತ್ತು ಪವರ್‌ಟ್ರೇನ್ ಅನ್ನು ಅವಲಂಬಿಸಿರುತ್ತದೆ. ವೇರಿಯಂಟ್-ವಾರು ಕ್ಲೈಮ್ ಮಾಡಿದ ಮೈಲೇಜ್‌ನ ನೋಟ ಇಲ್ಲಿದೆ:

    • 1.2-ಲೀಟರ್ ನ್ಯಾ/ಆಸ್ಪಿರೇಟೆಡ್‌ ಪೆಟ್ರೋಲ್ ಮ್ಯಾನುಯಲ್‌ - ಪ್ರತಿ ಲೀ.ಗೆ 17 ಕಿ.ಮೀ

    • 1-ಲೀಟರ್ ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 18 ಕಿ.ಮೀ

    • 1-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ - ಪ್ರತಿ ಲೀ.ಗೆ 18.3 ಕಿ.ಮೀ

    • 1.5-ಲೀಟರ್ ಡೀಸೆಲ್ ಮ್ಯಾನುಯಲ್‌ - ಪ್ರತಿ ಲೀ.ಗೆ 22.7 ಕಿ.ಮೀ

    ವೆನ್ಯೂ ಎಷ್ಟು ಸುರಕ್ಷಿತವಾಗಿದೆ?

    ವೆನ್ಯೂವಿನ ಸುರಕ್ಷತಾ ಜಾಲವು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 6 ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿದಂತೆ ಲೆವೆಲ್-1 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

    ವೆನ್ಯೂವಿನ ಗ್ಲೋಬಲ್ ಎನ್‌ಸಿಎಪಿ ಅಥವಾ ಭಾರತ್ ಎನ್‌ಸಿಎಪಿ ಸುರಕ್ಷತಾ ಕ್ರ್ಯಾಶ್ ಪರೀಕ್ಷೆಯನ್ನು ಇನ್ನೂ ನಡೆಸಿಲ್ಲ.

    ಎಷ್ಟು ಬಣ್ಣದ ಆಯ್ಕೆಗಳಿವೆ?

    ವೆನ್ಯೂ ಆರು ಮೊನೊಟೋನ್ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ: ಟೈಟಾನ್ ಗ್ರೇ, ಡೆನಿಮ್ ಬ್ಲೂ, ಟೈಫೂನ್ ಸಿಲ್ವರ್, ಫಿಯರಿ ರೆಡ್, ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಎಂಬ ಸಿಂಗಲ್‌ ಟೋನ್‌ ಬಣ್ಣಗಳಾದರೆ ಮತ್ತು ಫಿಯರಿ ರೆಡ್ ವಿತ್ ಅಬಿಸ್ ಬ್ಲ್ಯಾಕ್ ರೂಫ್ ಎಂಬ ಡ್ಯುಯಲ್‌ ಟೋನ್‌ ಆಯ್ಕೆಯಲ್ಲಿ ಪಡೆಯಬಹುದು.

    ನಾವು ವೆನ್ಯೂವನ್ನು ಖರೀದಿಸಬಹುದೇ?

    ಹೌದು, ನೀವು ಸಣ್ಣ ಕುಟುಂಬವನ್ನು ಹೊಂದಿದ್ದರೆ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳು ಮತ್ತು ಎಲ್ಲಾ ಅಗತ್ಯ ಫೀಚರ್‌ಗಳನ್ನು ಒದಗಿಸುವ ಉತ್ತಮ-ಪ್ಯಾಕ್ ಮಾಡಲಾದ ಸಬ್‌ಕಾಂಪ್ಯಾಕ್ಟ್  ಎಸ್‌ಯುವಿಗಾಗಿ ನೀವು ಹುಡುಕಾಟದಲ್ಲಿದ್ದರೆ, ವೆನ್ಯೂವನ್ನು ಪರಿಗಣಿಸಬಹುದು. ಹಾಗೆಯೇ, ನೀವು 4 ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಹೆಚ್ಚಿನ ಸ್ಥಳಾವಕಾಶಕ್ಕಾಗಿ ನೀವು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಎಸ್‌ಯುವಿಗಳ ಮಿಡ್‌-ಸ್ಪೆಕ್ ಆವೃತ್ತಿಗಳನ್ನು ಪರಿಗಣಿಸಬಹುದು. ಅಲ್ಲದೆ, ನೀವು ಹೆಚ್ಚು ಫೀಚರ್‌ಗಳನ್ನು ಹೊಂದಿರುವ ಎಸ್‌ಯುವಿಯನ್ನು ಹುಡುಕುತ್ತಿದ್ದರೆ, ನೀವು ಕಿಯಾ ಸೊನೆಟ್‌ ಅನ್ನು ಆಯ್ಕೆ ಮಾಡಬಹುದು, ಆದರೆ ಹೆಚ್ಚುವರಿ ಫೀಚರ್‌ಗಳು ಹೆಚ್ಚು ಬೆಲೆಯನ್ನು ಹೊಂದಿದೆ. 

    ನನ್ನ ಪರ್ಯಾಯಗಳು ಯಾವುವು?

    ವೆನ್ಯೂವು ಹೆಚ್ಚು ಕಾರುಗಳನ್ನು ಹೊಂದಿರುವ ಸೆಗ್ಮೆಂಟ್‌ನ ಒಂದು ಭಾಗವಾಗಿದ್ದು, ಅಲ್ಲಿ ಹಲವಾರು ಆಯ್ಕೆಗಳು ಲಭ್ಯವಿವೆ. ಈ ಆಯ್ಕೆಗಳಲ್ಲಿ ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3XO, ಮಾರುತಿ ಫ್ರಾಂಕ್ಸ್, ಟೊಯೋಟಾ ಟೈಸರ್ ಮತ್ತು ಮಾರುತಿ ಬ್ರೆಝಾ ಮುಂತಾದ ಸಬ್‌-4 ಮೀಟರ್ ಎಸ್‌ಯುವಿಗಳು ಸೇರಿವೆ.

    ಮತ್ತಷ್ಟು ಓದು
    ವೆನ್ಯೂ ಇ(ಬೇಸ್ ಮಾಡೆಲ್)1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌7.94 ಲಕ್ಷ*
    ವೆನ್ಯೂ ಇ ಪ್ಲಸ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌8.32 ಲಕ್ಷ*
    ವೆನ್ಯೂ ಎಸ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌9.28 ಲಕ್ಷ*
    ವೆನ್ಯೂ ಎಸ್‌ ಪ್ಲಸ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ವೈಟಿಂಗ್‌9.53 ಲಕ್ಷ*
    ವೆನ್ಯೂ ಎಸ್ ಒಪ್ಶನಲ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌10 ಲಕ್ಷ*
    ವೆನ್ಯೂ ಎಸ್‌ ಒಪ್ಶನಲ್‌ ಪ್ಲಸ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌10 ಲಕ್ಷ*
    ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೊ998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌10 ಲಕ್ಷ*
    ವೆನ್ಯೂ ಎಸ್ ಒಪ್ಶನಲ್‌ ನೈಟ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌10.35 ಲಕ್ಷ*
    ವೆನ್ಯೂ ಎಸ್‌ ಒಪ್ಶನಲ್‌ ಪ್ಲಸ್ ಅಡ್ವೆಂಚರ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌10.37 ಲಕ್ಷ*
    ಅಗ್ರ ಮಾರಾಟ
    ವೆನ್ಯೂ ಎಸ್‌ಎಕ್ಸ್ ಎಕ್ಸಿಕ್ಯೂಟಿವ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌
    10.79 ಲಕ್ಷ*
    ವೆನ್ಯೂ ಎಸ್‌ ಪ್ಲಸ್ ಡೀಸಲ್1493 ಸಿಸಿ, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌10.80 ಲಕ್ಷ*
    ವೆನ್ಯೂ ಎಸ್ ಒಪ್ಶನಲ್‌ ಟರ್ಬೊ998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 14.5 ಕೆಎಂಪಿಎಲ್1 ತಿಂಗಳು ವೈಟಿಂಗ್‌10.84 ಲಕ್ಷ*
    ವೆನ್ಯೂ ಎಸ್‌ಎಕ್ಸ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.14 ಲಕ್ಷ*
    ವೆನ್ಯೂ ಎಸ್ಎಕ್ಸ್ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.29 ಲಕ್ಷ*
    ವೆನ್ಯೂ ಎಸ್‌ಎಕ್ಸ್ ಆಡ್ವೆನ್ಚರ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.30 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಆಡ್ವೆಂಚರ್‌ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.45 ಲಕ್ಷ*
    ವೆನ್ಯೂ ಎಸ್ಎಕ್ಸ್ ನೈಟ್1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.47 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ನೈಟ್ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌11.62 ಲಕ್ಷ*
    ವೆನ್ಯೂ ಎಸ್‌ ಒಪ್ಶನಲ್‌ ಟರ್ಬೊ ಡಿಸಿಟಿ998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌11.95 ಲಕ್ಷ*
    ವೆನ್ಯೂ ಎಸ್‌ಎಕ್ಸ್ ಡೀಸಲ್1493 ಸಿಸಿ, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌12.46 ಲಕ್ಷ*
    ವೆನ್ಯೂ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಟರ್ಬೊ998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌12.53 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಡ್ಯುಯಲ್‌ ಟೋನ್‌ ಡೀಸೆಲ್1493 ಸಿಸಿ, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌12.61 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡ್ಯುಯಲ್‌ ಟೋನ್‌998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್‌12.68 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌12.74 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡ್ಯುಯಲ್‌ ಟೋನ್‌998 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ವೈಟಿಂಗ್‌12.89 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.32 ಲಕ್ಷ*
    ವೆನ್ಯೂ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಡೀಸೆಲ್1493 ಸಿಸಿ, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌13.38 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡಿಸಿಟಿ998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.42 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೋ ಆಡ್ವೆಂಚರ್‌ ಡಿಸಿಟಿ998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.47 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.47 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಡ್ಯುಯಲ್‌ ಟೋನ್‌ ಡೀಸೆಲ್1493 ಸಿಸಿ, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್1 ತಿಂಗಳು ವೈಟಿಂಗ್‌13.53 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.57 ಲಕ್ಷ*
    ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೋ ಆಡ್ವೆಂಚರ್‌ ಡಿಸಿಟಿ ಡ್ಯುಯಲ್‌ ಟೋನ್‌(ಟಾಪ್‌ ಮೊಡೆಲ್‌)998 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್1 ತಿಂಗಳು ವೈಟಿಂಗ್‌13.62 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಹುಂಡೈ ವೆನ್ಯೂ ವಿಮರ್ಶೆ

    CarDekho Experts
    "ವೆನ್ಯೂವು ಒಂದು ಸರಳ ಮತ್ತು ಸಂವೇದನಾಶೀಲ ಸಣ್ಣ ಎಸ್‌ಯುವಿ ಆಗಿದ್ದು, ಸಣ್ಣ ಕುಟುಂಬವನ್ನು ಮುದ್ದಿಸಲು ಫೀಚರ್‌ಗಳು ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಇದು ಸೆಗ್ಮೆಂಟ್‌ನಲ್ಲಿ ಸುರಕ್ಷಿತ ಆಯ್ಕೆಯಾಗಿ ಉಳಿದಿದೆ ಮತ್ತು ಅದರ ಪರಿಷ್ಕೃತ ನೋಟದಿಂದ ಹೆಚ್ಚು ಗಮನ ಸೆಳೆಯುತ್ತದೆ."

    Overview

    Overview

    ವೆನ್ಯೂ ಕಾರ್ ಅನ್ನು 2019 ರಲ್ಲಿ ಮೊದಲು ಮಾರುಕಟ್ಟೆಗೆ ಬಿಡುಗಡೆಗೊಳಿಸಿದಾಗ ದೊಡ್ಡ ಯಶಸ್ಸನ್ನು ತಂದುಕೊಡಬಹುದಾದ ಒಂದು ಸ್ಥಿರ ವಿಶೇಷತೆಗಳನ್ನು ಒಳಗೊಂಡಿತ್ತು. ಆದರೂ ಕೂಡಾ ಸೆಗ್ ಮೆಂಟ್ ನಲ್ಲಿ ವೆನ್ಯೂ ಪ್ರಮುಖ ಆಯ್ಕೆಯಾಗಿಲ್ಲ. ಈ 2022 ರ ವೆನ್ಯೂ ಫೇಸ್‌ ಲಿಫ್ಟ್ ನಲ್ಲಿ ಸೇರಿಸಲಾದ ವೈಶಿಷ್ಟ್ಯಗಳು ಅದರ ವರ್ಚಸ್ಸನ್ನು ಮರಳಿ ಪಡೆದುಕೊಳ್ಳಲು ಸಹಾಯ ಮಾಡಬಹುದೇ?

    ಮತ್ತಷ್ಟು ಓದು

    ಹುಂಡೈ ವೆನ್ಯೂ ಎಕ್ಸ್‌ಟೀರಿಯರ್

    Exterior

    ವೆನ್ಯೂವು ಸಾಮಾನ್ಯವಾಗಿ ಫೇಸ್‌ಲಿಫ್ಟ್ ಗಿಂತ ಹಿಂದಿನ ಆವೃತ್ತಿಯ ಕಾರಿನಂತೆಯೇ ಇದೆ, ಆದರೆ ಮೊದಲಿಗಿಂತ ಈಗ ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಪರಿಷ್ಕರಿಸಲ್ಪಟ್ಟಿರುವ ಗ್ರಿಲ್ ಈಗ ದೊಡ್ಡ ಹುಂಡೈ ಎಸ್‌ಯುವಿಗಳೊಂದಿಗೆ ಜೋಡಿಯಾಗಿದ್ದು, ಇದು ಹೆಚ್ಚು ಪ್ರಬಲವಾಗಿ ಕಾಣಲು ಸಹಾಯ ಮಾಡುತ್ತದೆ. ಜೊತೆಗೆ ಗ್ರಿಲ್ ಡಾರ್ಕ್ ಕ್ರೋಮ್ ಅನ್ನು ಪಡೆಯುತ್ತಿದ್ದು, ಇದು ಸೌಂದರ್ಯವನ್ನು ಹೆಚ್ಚಿಸಿದೆ ಎಂಬುವುದು ನಮ್ಮ ಅಭಿಪ್ರಾಯ. ಕೆಳಭಾಗದಲ್ಲಿ, ಬಂಪರ್ ಅನ್ನು ಹೆಚ್ಚು ಸ್ಪೋರ್ಟಿಯಾಗಿ ಮಾಡಲಾಗಿದೆ ಮತ್ತು ಸ್ಕಿಡ್ ಪ್ಲೇಟ್ ಹೆಚ್ಚು ಪ್ರಮುಖವಾಗಿದೆ. ಬಿಳಿ ಬೆಳಕನ್ನು ಹೊರಸೂಸುವ ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಖರೀದಿದಾರರು ಇಷ್ಟಪಡುತ್ತಾರೆ. ಆದಾಗ್ಯೂ, ಇಂಡಿಕೇಟರ್‌ಗಳಲ್ಲಿ ಇನ್ನೂ ಬಲ್ಬ್‌ಗಳನ್ನೇ ಬಳಸಲಾಗುತ್ತಿದ್ದು, ಈ ಪರಿಷ್ಕೃತ  ಮುಂಭಾಗದಲ್ಲಿ ಇದು ಚೌಕಟ್ಟಿನಿಂದ ಹೊರಗೆ ಕಾಣುತ್ತವೆ.

    Exterior

    ಸೈಡ್‌ ಪ್ರೋಫೈಲ್‌ನಲ್ಲಿ ದಪ್ಪವಾದ 16-ಇಂಚಿನ ಡ್ಯುಯಲ್ ಟೋನ್  ಅಲಾಯ್‌ ವೀಲ್‌ಗಳನ್ನು ಹೊಂದಿದೆ ಮತ್ತು ನೀವು ಕಾರನ್ನು ಲಾಕ್/ಅನ್ಲಾಕ್ ಮಾಡಿದಾಗ ORVM ಗಳು (ಸೈಡ್‌ ಮಿರರ್‌ಗಳು) ಈಗ  ಆಟೋಮ್ಯಾಟಿಕ್‌ ಆಗಿ ಒಳಗೆ ಮತ್ತು ಹೊರಗೆ ಮಡಚಿಕೊಳ್ಳುತ್ತವೆ. ಅವುಗಳು ಪಡಲ್‌ ಲೈಟ್‌ಗಳನ್ನು ಸಹ ಹೊಂದಿದೆ. ರೂಫ್ ರೈಲ್‌ಗಳು ಹೊಸ ವಿನ್ಯಾಸದಲ್ಲಿ ಬಂದಿದೆ, ಆದರೆ ವ್ಯತ್ಯಾಸವನ್ನು ವಿವರಿಸುವುದು ಕಷ್ಟ. ವೆನ್ಯೂವು 6 ಶಾಂತವಾದ ಬಾಡಿ ಬಣ್ಣಗಳಲ್ಲಿ ನೀಡಲಾಗುತ್ತಿದೆ ಮತ್ತು ಕೆಂಪು ಮಾತ್ರ ಬ್ಲ್ಯಾಕ್‌ ರೂಫ್‌ ಆಯ್ಕೆಯನ್ನು ಪಡೆಯುತ್ತದೆ.

    Exterior

    ಹಿಂಭಾಗದಲ್ಲಿ ಲುಕ್‌ನಲ್ಲಿ ವೆನ್ಯೂವು ಸರಿಯಾಗಿ ಆಧುನಿಕವಾಗಿ ಕಾಣುತ್ತದೆ. ಹೊಸ ಎಲ್ಇಡಿ ಅಂಶವು ಬ್ರೇಕ್‌ಗಾಗಿ ಕನೆಕ್ಟೆಡ್‌ ಸ್ಟ್ರಿಪ್ ಮತ್ತು ಬ್ಲಾಕ್ ಲೈಟಿಂಗ್‌ನೊಂದಿಗೆ ವಿಶೇಷವಾಗಿ ಕಾಣುತ್ತದೆ. ಬಂಪರ್‌ನಲ್ಲಿ ಕೂಡ ರಿಫ್ಲೆಕ್ಟರ್‌ಗಳಿಗೆ ಮತ್ತು ರಿವರ್ಸ್ ಲೈಟ್‌ಗಳಿಗೆ ಬ್ಲಾಕ್ ಅಂಶವನ್ನು ಸೇರಿಸಲಾಗಿದೆ. ಒಟ್ಟಾರೆಯಾಗಿ, ಇದು ಇನ್ನೂ ತಕ್ಷಣವೇ ವೆನ್ಯೂ ಎಂದು ಗುರುತಿಸಬಹುದಾದರೂ, ಬದಲಾವಣೆಗಳು ಇದನ್ನು ದಿಟ್ಟವಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ಉತ್ತಮ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ.

    ಮತ್ತಷ್ಟು ಓದು

    ವೆನ್ಯೂ ಇಂಟೀರಿಯರ್

    Interior

    ವೆನ್ಯೂವಿನ ಕ್ಯಾಬಿನ್ ಹೊರಭಾಗಕ್ಕಿಂತ ಕಡಿಮೆ ಬದಲಾವಣೆಗಳನ್ನು ಕಂಡಿದೆ. ಡ್ಯಾಶ್‌ಬೋರ್ಡ್‌ಗೆ ಈಗ ಡ್ಯುಯಲ್ ಟೋನ್‌ನ ಫಿನಿಶಿಂಗ್‌ ನೀಡಲಾಗಿದೆ ಮತ್ತು ಇದಕ್ಕೆ ಸರಿ ಹೊಂದಲು ಅಪ್‌ಹೋಲ್‌ಸ್ಟರಿಯನ್ನು ನವೀಕರಿಸಲಾಗಿದೆ. ಆದಾಗಿಯೂ, ನೀವು ಇದಕ್ಕೆ ಲೆಥೆರೆಟ್ ನ ಟಚ್‌ ಅನ್ನು ಪಡೆಯುತ್ತೀರಿ ಮತ್ತು ಕೆಲವು ಖರೀದಿದಾರರು ಆದ್ಯತೆ ನೀಡುವ ಸಂಪೂರ್ಣ ಲೆಥೆರೆಟ್ ಆಗಿರುವ ಅಪ್‌ಹೋಲ್‌ಸ್ಟರಿ ಲಭ್ಯವಿಲ್ಲ.  

    Interior

    ವೈಶಿಷ್ಟ್ಯದ ಆಪ್‌ಡೇಟ್‌ಗಳ ವಿಷಯದಲ್ಲಿ, ಚಾಲಕನು ಹೆಚ್ಚಿನದನ್ನು ಪಡೆಯುತ್ತಾನೆ. ಡ್ರೈವರ್ ಸೀಟ್ ಈಗ ಒರಗುವ ಮತ್ತು ಜಾರಿಸುವ ಅಯ್ಕೆಯೊಂದಿಗೆ ಚಾಲಿತವಾಗಿದೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈಗ ಹೈಲೈನ್ ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ (ವೈಯಕ್ತಿಕ ಟೈರ್ ಒತ್ತಡಗಳನ್ನು ಪ್ರದರ್ಶಿಸಲಾಗುತ್ತದೆ) ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಡಿಸ್‌ಪ್ಲೇ ಮತ್ತು ಸಾಧನಗಳ ಚಾರ್ಜ್‌ ಮಾಡಲು ಇದು ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಟರ್ಬೊ-ಪೆಟ್ರೋಲ್-ಡಿಸಿಟಿ ಪವರ್‌ಟ್ರೇನ್ ಡ್ರೈವ್ ಮೋಡ್‌ಗಳನ್ನು ಸಹ ಪಡೆಯುತ್ತದೆ, ಅದನ್ನು ನಾವು ಮುಂದಿನ ದಿನಗಳಲ್ಲಿ ಪಡೆಯುವ ನಿರೀಕ್ಷೆಯಿದೆ.

    Interior

    ಇತರ ವೈಶಿಷ್ಟ್ಯಗಳ ಸೇರ್ಪಡೆಗಳಲ್ಲಿ ಡ್ಯಾಶ್‌ಬೋರ್ಡ್‌ನ ಸ್ಟೋರೆಜ್‌ ಭಾಗದಲ್ಲಿ ಆಂಬಿಯೆಂಟ್‌ ಲೈಟಿಂಗ್‌ ಮತ್ತು ಸೆಂಟರ್-ಆರ್ಮ್‌ರೆಸ್ಟ್‌ನಲ್ಲಿ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್ ಸೇರಿವೆ, ಇದನ್ನು ಮೊದಲು ಕಪ್ ಹೋಲ್ಡರ್‌ನ ಒಂದರಲ್ಲಿ ಇರಿಸಲಾಗಿತ್ತು. ಆದರೆ ಇದರ ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೊಸ 8-ಇಂಚಿನ ಸ್ಕ್ರೀನ್‌ನ್ನು ನೀಡಲಾಗುತ್ತಿದೆ. ಆದರೆ ನಾವು ಇದರಲ್ಲಿ 10-ಇಂಚಿನ ಡಿಸ್‌ಪ್ಲೇಯನ್ನು ನೋಡಲು ಬಯಸುತ್ತೆವೆ. ಸ್ಕ್ರೀನ್‌ನ ಇಂಟರ್ಫೇಸ್ ಈಗ ಸಂಪೂರ್ಣವಾಗಿ ಹೊಸತನದಿಂದ ಕೂಡಿದೆ. ಪ್ರದರ್ಶನವು ತೀಕ್ಷ್ಣವಾಗಿದೆ ಮತ್ತು ಐಕಾನ್‌ಗಳು ಉತ್ತಮವಾಗಿ ಕಾಣುತ್ತವೆ. ಸಿಸ್ಟಮ್‌ನ ಇಂಟರ್‌ಫೇಸ್‌ ಮತ್ತು ರೆಸ್ಪಾನ್ಸ್‌ ಮೊದಲಿಗಿಂತ ನಯವಾಗಿದೆ. ಇದರಲ್ಲಿ 10 ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನು ನೀಡಲಾಗುತ್ತಿದ್ದು, ಹೆಚ್ಚಿನ ಎಲ್ಲಾ ಧ್ವನಿ ಆಜ್ಞೆಗಳನ್ನು ಈಗ ಸಿಸ್ಟಮ್‌ನಿಂದ ಪ್ರಕ್ರಿಯೆಗೊಳಿಸಲಾಗಿದೆ ಮತ್ತು ನೆಟ್‌ವರ್ಕ್ ಅವಲಂಬಿತವಾಗಿಲ್ಲ. ಇದು ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡುತ್ತದೆ. ಕನೆಕ್ಟೆಡ್‌ ಕಾರ್ ತಂತ್ರಜ್ಞಾನದಲ್ಲಿನ ನವೀಕರಣವು ಇದೀಗ ಟೈರ್ ಒತ್ತಡಗಳು, ಇಂಧನ ಮಟ್ಟ ಮತ್ತು ಹೆಚ್ಚಿನವುಗಳಿಗಾಗಿ ಸ್ಕ್ರೀನ್‌ನ ಹೋಮ್‌ನಲ್ಲಿರುವ ಗೂಗಲ್ ಅಥವಾ ಅಲೆಕ್ಸಾವನ್ನು ಕೇಳಲು ನಿಮಗೆ ಅನುಮತಿಸುತ್ತದೆ. ಈ ಬದಲಾವಣೆಗಳು ಇನ್ಫೋಟೈನ್‌ಮೆಂಟ್‌ನ ಅನುಭವವನ್ನು ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ.

    Interior

    ಆದಾಗಿಯೂ, ಈ ನವೀಕರಣದಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಿದ್ದೇವೆ. ವೆನ್ಯೂವು ಹೊಂದಿರುವ ಕೆಲವು ದಡ್ಡತನವನ್ನು ಮತ್ತು ವೈಶಿಷ್ಟ್ಯಗಳಲ್ಲಿ ಇತರ ಪ್ರಮುಖ ಲೋಪಗಳನ್ನು ತಪ್ಪಿಸಬಹುದಾಗಿತ್ತು. ಎತ್ತರ ಹೊಂದಾಣಿಕೆ ಮಾಡಬಲ್ಲ ಮತ್ತು ಗಾಳಿಯಾಡುವ ಆಸನದಂತಹ ಸೌಕರ್ಯಗಳು ಚಾಲಕನ ಸೀಟ್‌ನಲ್ಲಿ ಮಿಸ್‌ ಆಗಿದೆ. ಇತರ ಸಣ್ಣ ಲೋಪಗಳೆಂದರೆ ಆಟೋ ಡೇ/ನೈಟ್ IRVM, ಬ್ರಾಂಡೆಡ್ ಸೌಂಡ್ ಸಿಸ್ಟಮ್ ಅಥವಾ ಟ್ಯೂನಿಂಗ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ಹೊಂದಾಣಿಕೆಯಂತಹ ವೈಶಿಷ್ಟ್ಯಗಳು ಮಿಸ್‌ ಆಗಿರುವುದು. ಈ ವೈಶಿಷ್ಟ್ಯಗಳು ಪ್ರಸ್ತುತದಲ್ಲಿ ಇರುತ್ತಿದ್ದರೆ, ವೈಶಿಷ್ಟ್ಯಗಳ ವಿಭಾಗದಲ್ಲಿ ಮತ್ತೊಮ್ಮೆ ವೆನ್ಯೂವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದಿತ್ತು.

    Interior

    ಹ್ಯುಂಡೈ ಹಿಂಬದಿ ಸೀಟಿನ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದೆ. ಮೊಣಕಾಲು ಇಡುವಲ್ಲಿ ಉತ್ತ, ಕೋಣೆಯನ್ನು ನೀಡಲು ಮುಂಭಾಗದ ಸೀಟಿನ ಹಿಂಭಾಗವನ್ನು ಈಗ ಸ್ಕೂಪ್ ಮಾಡಲಾಗಿದೆ ಮತ್ತು ಉತ್ತಮವಾದ  ತೊಡೆಯ ಕೆಳಭಾಗಕ್ಕೆ ಬೆಂಬಲವನ್ನು ನೀಡಲು ಸೀಟ್ ಬೇಸ್ ಅನ್ನು ಬದಲಾವಣೆ ಮಾಡಲಾಗಿದೆ ಮತ್ತು ಇದು ಕೆಲಸ ಮಾಡಿದೆ. ಆಸನವು 2 ಹಂತದ ಬ್ಯಾಕ್‌ರೆಸ್ಟ್ ರಿಕ್ಲೈನ್ ಅನ್ನು ಸಹ ಒಳಗೊಂಡಿದೆ, ಇದು ಪ್ರಯಾಣಿಕರಿಗೆ ವೈಯಕ್ತಿಕಗೊಳಿಸಿದ ಸೌಕರ್ಯದ ಪದರವನ್ನು ನೀಡುತ್ತಿದೆ.

    Interior

    ಮತ್ತೊಂದು ಸ್ವಾಗತಾರ್ಹ ಸೇರ್ಪಡೆಯೆಂದರೆ ಎಸಿ ವೆಂಟ್‌ಗಳ ಅಡಿಯಲ್ಲಿ 2 ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತಿರುವುದು. ಇವುಗಳೊಂದಿಗೆ ಹಿಂದಿನ ಸೀಟಿನ ಅನುಭವವು ಉತ್ತಮವಾಗಿದೆ. ಈ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ಹ್ಯುಂಡೈ ಸನ್‌ಶೇಡ್‌ಗಳು ಮತ್ತು ಉತ್ತಮ ಕ್ಯಾಬಿನ್ ಇನ್ಸುಲೇಶನ್ (ರಬ್ಬರಿನ ಮುಚ್ಚುವಿಕೆ) ಅನ್ನು ನೀಡಬಹುದಿತ್ತು.

    ಮತ್ತಷ್ಟು ಓದು

    ವೆನ್ಯೂ ಸುರಕ್ಷತೆ

    Safety

    ಟಾಪ್-ಎಂಡ್‌ ಆವೃತ್ತಿಯಾಗಿರುವ SX(O) ವೇರಿಯೆಂಟ್‌ನೊಂದಿಗೆ ಮಾತ್ರ ವೆನ್ಯೂ ಈಗ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಆದರೆ ತನ್ನ ಇತರ ಎಲ್ಲಾ ವೇರಿಯೆಂಟ್‌ಗಳು ಕೇವಲ 2 ಏರ್‌ಬ್ಯಾಗ್‌ಗಳನ್ನು ಪಡೆಯುತ್ತವೆ. ಅಲ್ಲದೆ,  ಬೇಸ್‌ ವೇರಿಯೆಂಟ್‌ ಆಗಿರುವ  E ಆವೃತ್ತಿಯಲ್ಲಿ ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಮತ್ತು ಹಿಲ್ ಅಸಿಸ್ಟ್ ಕಂಟ್ರೋಲ್ (HAC) ನಂತಹ ಎಲೆಕ್ಟ್ರಾನಿಕ್ ಸಾಧನಗಳು ಮಿಸ್‌ ಆಗಿವೆ. ಆದರೆ ISOFIX ಮೌಂಟ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ನೀಡಲಾಗುತ್ತಿದೆ.

    ಮತ್ತಷ್ಟು ಓದು

    ಹುಂಡೈ ವೆನ್ಯೂ ಕಾರ್ಯಕ್ಷಮತೆ

    1.2ಲೀ ಪೆಟ್ರೋಲ್ 1.5 ಲೀ ಡೀಸೆಲ್  1.0ಲೀ ಟರ್ಬೊ ಪೆಟ್ರೋಲ್
    ಪವರ್‌ 83PS 100PS 120PS
    ಟಾರ್ಕ್ 115Nm 240Nm 172Nm
    ಟ್ರಾನ್ಸ್ಮಿಷನ್  5-ಸ್ಪೀಡ್‌ ಮ್ಯಾನುಯಲ್‌ 6-ಸ್ಪೀಡ್‌ ಮ್ಯಾನುಯಲ್‌ 6-ಸ್ಪೀಡ್ iMT / 7-ಸ್ಪೀಡ್ DCT
    ಇಂಧನ ದಕ್ಷತೆ ಪ್ರತಿ ಲೀ.ಗೆ 17.0 ಕಿ.ಮೀ ಪ್ರತಿ ಲೀ.ಗೆ 22.7 ಕಿ.ಮೀ ಪ್ರತಿ ಲೀ.ಗೆ 18  ಕಿ.ಮೀ(iMT) / ಪ್ರತಿ ಲೀ.ಗೆ 18.3  ಕಿ.ಮೀ(DCT)

    Performance

    ವೆನ್ಯೂ ಈ ಒಂದನ್ನು ಹೊರತುಪಡಿಸಿ, ತನ್ನ ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಹಿಂದಿನದ್ದನ್ನೇ ಉಳಿಸಿಕೊಂಡಿದೆ. ಟರ್ಬೊ-ಪೆಟ್ರೋಲ್ ಎಂಜಿನ್ ಈಗ ಸುಧಾರಿಸಿದ DCT ಟ್ರಾನ್ಸ್‌ಮಿಷನ್ ಮತ್ತು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ. ಆದಾಗಿಯೂ ನಾವು ಮಿಸ್‌ ಮಾಡಿಕೊಳ್ಳುವುದು ಕಿಯಾ ಸೋನೆಟ್ ನೀಡುವ ಡೀಸೆಲ್-ಆಟೋಮ್ಯಾಟಿಕ್ ಡ್ರೈವ್‌ಟ್ರೇನ್ ನ್ನು ಮತ್ತು ಅಪ್‌ಗ್ರೇಡ್ ಮಾಡಲಾದ ವೆನ್ಯೂನಲ್ಲಿ ನಾವು ಇದನ್ನು ಸಹ ನಿರೀಕ್ಷಿಸಿದ್ದೆವು.

    Performance

    ಚಾಲನೆಯ ಆರಂಭದಿಂದಲೇ, ಈ DCT ಸುಧಾರಿಸಿದ ಅನುಭವ ನೀಡುತ್ತದೆ. ಕ್ರಾಲ್ ಸುಗಮವಾಗಿದೆ ಮತ್ತು ಇದು ಜನನಿಬಿಡ ನಗರಗಳಲ್ಲಿ ಡ್ರೈವ್ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಸಹಾಯ ಮಾಡುತ್ತದೆ. ಗೇರ್ ಶಿಫ್ಟ್‌ಗಳು ವೇಗವಾಗಿರುತ್ತವೆ, ಇದು ವೆನ್ಯೂವನ್ನು ಓಡಿಸಲು ಹೆಚ್ಚು ಶ್ರಮ ಬೇಕಿಲ್ಲ ಎಂಬ ಭಾವನೆ ಬರಲು ಸಹಾಯ ಮಾಡುತ್ತದೆ. ಇದೇನು ದೊಡ್ಡ ಸುಧಾರಣೆಯಲ್ಲದಿದ್ದರೂ, ಇದು ನಿಮ್ಮ ಡ್ರೈವಿಂಗ್‌ ಅನುಭವವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. 

    Performance

    ಡ್ರೈವ್ ಮೋಡ್‌ಗಳು ಇದರಲ್ಲಾಗಿರುವ ಪ್ರಮುಖ ಸುಧಾರಣೆ ಎನ್ನಬಹುದು. 'ಇಕೊ', 'ನಾರ್ಮಲ್‌' ಮತ್ತು 'ಸ್ಪೋರ್ಟ್‌' ಮೋಡ್‌ಗಳು ಟ್ರಾನ್ಸ್‌ಮಿಷನ್‌ನ ಶಿಫ್ಟ್ ಲಾಜಿಕ್ ಮತ್ತು ಥ್ರೊಟಲ್‌ನ ರೆಸ್ಪಾನ್ಸ್‌ನ್ನು ಬದಲಾಯಿಸುತ್ತವೆ. ಇಕೋದಲ್ಲಿ, ಕಾರು ಡ್ರೈವಿಂಗ್‌ಗೆ ತುಂಬಾ ಯೋಗ್ಯವಾಗಿದೆ  ಮತ್ತು ನೀವು ಸಾಮಾನ್ಯವಾಗಿ ಟಾಪ್‌ ಗೇರ್ ನಲ್ಲಿ ಚಾಲನೆ ಮಾಡುತ್ತಿರುವುದರಿಂದ, ಇದು ಹೆಚ್ಚಿನ ಮೈಲೇಜ್‌ ಪಡೆಯಲು ಸಹಾಯ ಮಾಡುತ್ತದೆ. ಸಿಟಿ ಮತ್ತು ಹೆದ್ದಾರಿಗಳಿಗೆ ನಾರ್ಮಲ್‌ ಸೂಕ್ತವಾದ ಮೋಡ್ ಆಗಿದೆ. ಹಾಗೆಯೇ ಸ್ಪೋರ್ಟ್ ಮೋಡ್ ಆಕ್ರಮಣಕಾರಿ ಡೌನ್‌ಶಿಫ್ಟ್‌ಗಳು ಮತ್ತು ತೀಕ್ಷ್ಣವಾದ ಥ್ರೊಟಲ್ ರೆಸ್ಪಾನ್ಸ್‌ನೊಂದಿಗೆ ವೆನ್ಯೂವನ್ನು ಹೆಚ್ಚು ಸ್ಪೋರ್ಟಿಯಾದ ಅನುಭವ ನೀಡುವಂತೆ ಮಾಡುತ್ತದೆ. ಈ ಎಂಜಿನ್ ನಗರ ಮತ್ತು ಹೆದ್ದಾರಿ ಎರಡಕ್ಕೂ ಸ್ಪಂದಿಸುತ್ತದೆ ಮತ್ತು ಉತ್ತಮವಾಗಿದೆ. ನೀವು ಆಲ್-ರೌಂಡರ್‌ ಕಾರಿನ  ಅನುಭವವನ್ನು ಹುಡುಕುತ್ತಿದ್ದರೆ ಆಯ್ಕೆ ಮಾಡಲು ಇದು ಸೂಕ್ತವಾದ ಡ್ರೈವ್‌ಟ್ರೇನ್ ಆಗಿದೆ. 

    ಮತ್ತಷ್ಟು ಓದು

    ಹುಂಡೈ ವೆನ್ಯೂ ರೈಡ್ ಅಂಡ್ ಹ್ಯಾಂಡಲಿಂಗ್

    Ride and Handling

    ವೆನ್ಯೂವು ತನ್ನ ಸ್ಥಿರವಾದ ಸವಾರಿ ಸೌಕರ್ಯವನ್ನು  ಇನ್ನೂ ಉಳಿಸಿಕೊಂಡಿದೆ. ಇದು ಸ್ಪೀಡ್ ಬ್ರೇಕರ್ ಅಥವಾ ಗುಂಡಿ ಆಗಿರಲಿ, ರಸ್ತೆಯ ಗಡಸುತನದಿಂದ ಪ್ರಯಾಣಿಕರಿಗೆ ಕುಶನ್‌ನ ಅನುಭವ ನೀಡುತ್ತದೆ. ರಸ್ತೆಯಲ್ಲಿರುವ ತೀಕ್ಷ್ಣವಾದ ಉಬ್ಬುಗಳ ಅನುಭವ ಕ್ಯಾಬಿನ್‌ನ ಒಳಗೂ ಆಗುತ್ತದೆ, ಆದರೆ ಪ್ರಯಾಣಿಕರಿಗೆ ಇದರಿಂದ ಯಾವುದೇ ಅನಾನುಕೂಲವಾಗುವುದಿಲ್ಲ. ಹೆದ್ದಾರಿಗಳಲ್ಲಿಯೂ ಸಹ ಸವಾರಿ ಸ್ಥಿರವಾಗಿರುತ್ತದೆ ಮತ್ತು ಹಾಗೆಯೇ ವೆನ್ಯೂವು ದೂರದ ಪ್ರಯಾಣವನ್ನು ಕ್ರಮಿಸಲು ಉತ್ತಮ ಕಾರಾಗಿ ಉಳಿದಿದೆ. ನಿರ್ವಹಣೆಯು ಇನ್ನೂ ಉತ್ತಮವಾಗಿದೆ ಮತ್ತು ಕುಟುಂಬದ ರಸ್ತೆ ಪ್ರವಾಸಗಳಿಗೆ ಆತ್ಮವಿಶ್ವಾಸದ ಸ್ಪೂರ್ತಿದಾಯಕವಾಗಿದೆ.

    ಮತ್ತಷ್ಟು ಓದು

    ಹುಂಡೈ ವೆನ್ಯೂ ರೂಪಾಂತರಗಳು

    Variants

    ಹುಂಡೈ ವೆನ್ಯೂ 2022 ರ ಬೆಲೆಗಳು ಪೆಟ್ರೋಲ್ ವೇರಿಯೆಂಟ್‌ಗಳಿಗೆ 7.53 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಟರ್ಬೊ ಮತ್ತು ಡೀಸೆಲ್ ವೇರಿಯೆಂಟ್‌ಗಳಿಗೆ ಬೆಲೆಯನ್ನು 10 ಲಕ್ಷ ರೂ.ಗೆ ನಿಗದಿ ಪಡಿಸಲಾಗಿದೆ. ವೇರಿಯೆಂಟ್‌ಗಳಲ್ಲಿ E, S, S+/S(O), SX, ಮತ್ತು SX(O) ಸೇರಿವೆ. ಹಳೆಯ ಎಸ್‌ಯುವಿಗೆ ಹೋಲಿಸಿದರೆ, ನೀವು ವೆನ್ಯೂವಿನ ಪ್ರತಿ ವೇರಿಯಂಟ್‌ಗೆ ಸರಿಸುಮಾರು 50,000 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ ಮತ್ತು ಈ ಬೆಲೆ ಏರಿಕೆಯು ಸ್ವಲ್ಪ ಮಿತಿ ಮೀರಿದಂತಿದೆ. ಹ್ಯುಂಡೈ ವೈಶಿಷ್ಟ್ಯಗಳ ಸೌಕರ್ಯವನ್ನು ಸ್ವಲ್ಪ ಹೆಚ್ಚು ಹೆಚ್ಚಿಸಿದ್ದರೆ ಅಥವಾ ಶಬ್ದ ನಿರೋಧನಕ್ಕೆ ಸುಧಾರಣೆಗಳನ್ನು ಮಾಡಿದ್ದರೆ, ಈ ಬೆಲೆ ಹೆಚ್ಚಳವು ಹೆಚ್ಚು ಸಮರ್ಥನೀಯವಾಗುತ್ತಿತ್ತು. 

    ಮತ್ತಷ್ಟು ಓದು

    ಹುಂಡೈ ವೆನ್ಯೂ ವರ್ಡಿಕ್ಟ್

    Verdict

    ಹುಂಡೈ ವೆನ್ಯೂ 2019 ರಲ್ಲಿ ಪ್ರಥಮ ಬಾರಿಗೆ ಲಾಂಚ್ ಆದಾಗ ಹೆಸರುವಾಸಿಯಾಗಿದ್ದ ಎಲ್ಲಾ ಉತ್ತಮ ಗುಣಗಳನ್ನು ಉಳಿಸಿಕೊಂಡಿದೆ. ಇದು ಒಂದು ಸರಳ ಮತ್ತು ಚಿಕ್ಕ ಸಂವೇದನಾಶೀಲ ಎಸ್ ಯುವಿ ಆಗಿದ್ದು, ಒಂದು ಸಣ್ಣದಾದ ಕುಟುಂಬವನ್ನು ಕೇರ್ ಮಾಡಬಲ್ಲಂತಹ ವೈಶಿಷ್ಟ್ಯಗಳು ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಆದರೂ ಕೂಡಾ ಈ ಫೇಸ್‌ಲಿಫ್ಟ್‌ನಿಂದ ನಾವು ಸ್ವಲ್ಪ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಇದರಲ್ಲಿ ಸ್ವಲ್ಪ ಹೆಚ್ಚಿನ ವೈಶಿಷ್ಟ್ಯಗಳು, ಸೂಕ್ಷ್ಮತೆ ಮತ್ತು ವಾವ್ ಎನ್ನಬಹುದಾದ ಅಂಶಗಳಿವೆ.‌ ಇವುಗಳೆಲ್ಲಾ ಮತ್ತೆ ಉನ್ನತ ಆಯ್ಕೆಯಾಗಿ ಪರಿಗಣಿಸಬಹುದಾದ ವಿಷಯಗಳಾಗಿವೆ.

    Verdict

    ನಮ್ಮ ನಿರೀಕ್ಷೆಗಳ ಹೊರತಾಗಿಯೂ ಕೂಡಾ ವೆನ್ಯೂ ಅದರ ವಿಭಾಗದಲ್ಲಿ ಇನ್ನೂ ಸುರಕ್ಷಿತವೆನಿಸಿರುವಂತಹ  ಆಯ್ಕೆಯಾಗಿ ಉಳಿಸಿಕೊಂಡಿದೆ ಮತ್ತು ಅದರ ಪರಿಷ್ಕೃತ ವಿನ್ಯಾಸದೊಂದಿಗೆ ವೆನ್ಯೂ ಮತ್ತಷ್ಟು ಗಮನ ಸೆಳೆಯುತ್ತದೆ.

    ಮತ್ತಷ್ಟು ಓದು

    ಹುಂಡೈ ವೆನ್ಯೂ

    ನಾವು ಇಷ್ಟಪಡುವ ವಿಷಯಗಳು

    • ನವೀಕರಿಸಿದ ವಿನ್ಯಾಸ ಹೆಚ್ಚು ಅತ್ಯಾಕರ್ಷಕ ಮತ್ತು ಬೆಲೆಯುಳ್ಳದಂತಾಗಿ ಕಾಣುವಂತೆ ಮಾಡುತ್ತದೆ.
    • ಡ್ಯುಯಲ್-ಟೋನ್ ಇಂಟೀರಿಯರ್ ಕ್ಲಾಸಿ, ಕ್ಯಾಬಿನ್‌ನಲ್ಲಿರುವ ವಸ್ತುಗಳ ಗುಣಮಟ್ಟವೂ ಉತ್ತಮವಾಗಿದೆ.
    • ಸ್ವಯಂಚಾಲಿತ ಡ್ರೈವರ್ ಸೀಟ್, ಅಲೆಕ್ಸಾ/ಗೂಗಲ್ ಹೋಮ್ ಕನೆಕ್ಟಿವಿಟಿ, ಡಿಜಿಟಲ್ ಡ್ರೈವರ್
    View More

    ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಸ್ವಯಂಚಾಲಿತ ಅಥವಾ ಸಿಎನ್ ಜಿ ಪವರ್‌ಟ್ರೇನ್ ಆಫರ್‌ನಲ್ಲಿ ಇಲ್ಲ.
    • ಕಿರಿದಾದ ಕ್ಯಾಬಿನ್ ಆಗಿರುವುದರಿಂದ ಸ್ಥಳವು ನಾಲ್ವರಿಗೆ ಸೂಕ್ತ.
    • ಸ್ವಯಂ ಹಗಲು/ರಾತ್ರಿ ಐಆರ್ ವಿಎಂ ಮತ್ತು ಆಸನದ ಎತ್ತರ ಹೊಂದಾಣಿಕೆಯಂತಹ ಸಣ್ಣ ಲೋಪಗಳಿವೆ.

    ಹುಂಡೈ ವೆನ್ಯೂ comparison with similar cars

    ಹುಂಡೈ ವೆನ್ಯೂ
    ಹುಂಡೈ ವೆನ್ಯೂ
    Rs.7.94 - 13.62 ಲಕ್ಷ*
    ಕಿಯಾ ಸೊನೆಟ್
    ಕಿಯಾ ಸೊನೆಟ್
    Rs.8 - 15.60 ಲಕ್ಷ*
    ಮಾರುತಿ ಬ್ರೆಝಾ
    ಮಾರುತಿ ಬ್ರೆಝಾ
    Rs.8.69 - 14.14 ಲಕ್ಷ*
    ಟಾಟಾ ನೆಕ್ಸಾನ್‌
    ಟಾಟಾ ನೆಕ್ಸಾನ್‌
    Rs.8 - 15.60 ಲಕ್ಷ*
    ಮಾರುತಿ ಫ್ರಾಂಕ್ಸ್‌
    ಮಾರುತಿ ಫ್ರಾಂಕ್ಸ್‌
    Rs.7.54 - 13.04 ಲಕ್ಷ*
    ಹುಂಡೈ ಎಕ್ಸ್‌ಟರ್
    ಹುಂಡೈ ಎಕ್ಸ್‌ಟರ್
    Rs.6 - 10.51 ಲಕ್ಷ*
    ಸ್ಕೋಡಾ ಕೈಲಾಕ್‌
    ಸ್ಕೋಡಾ ಕೈಲಾಕ್‌
    Rs.8.25 - 13.99 ಲಕ್ಷ*
    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
    Rs.7.99 - 15.79 ಲಕ್ಷ*
    Rating4.4438 ವಿರ್ಮಶೆಗಳುRating4.4175 ವಿರ್ಮಶೆಗಳುRating4.5730 ವಿರ್ಮಶೆಗಳುRating4.6707 ವಿರ್ಮಶೆಗಳುRating4.5610 ವಿರ್ಮಶೆಗಳುRating4.61.2K ವಿರ್ಮಶೆಗಳುRating4.7246 ವಿರ್ಮಶೆಗಳುRating4.5287 ವಿರ್ಮಶೆಗಳು
    Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
    Engine998 cc - 1493 ccEngine998 cc - 1493 ccEngine1462 ccEngine1199 cc - 1497 ccEngine998 cc - 1197 ccEngine1197 ccEngine999 ccEngine1197 cc - 1498 cc
    Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
    Power82 - 118 ಬಿಹೆಚ್ ಪಿPower81.8 - 118 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower99 - 118.27 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower114 ಬಿಹೆಚ್ ಪಿPower109.96 - 128.73 ಬಿಹೆಚ್ ಪಿ
    Mileage24.2 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage20.6 ಕೆಎಂಪಿಎಲ್
    Boot Space350 LitresBoot Space385 LitresBoot Space-Boot Space382 LitresBoot Space308 LitresBoot Space-Boot Space446 LitresBoot Space-
    Airbags6Airbags6Airbags6Airbags6Airbags2-6Airbags6Airbags6Airbags6
    Currently Viewingವೆನ್ಯೂ vs ಸೊನೆಟ್ವೆನ್ಯೂ vs ಬ್ರೆಝಾವೆನ್ಯೂ vs ನೆಕ್ಸಾನ್‌ವೆನ್ಯೂ vs ಫ್ರಾಂಕ್ಸ್‌ವೆನ್ಯೂ vs ಎಕ್ಸ್‌ಟರ್ವೆನ್ಯೂ vs ಕೈಲಾಕ್‌ವೆನ್ಯೂ vs ಎಕ್ಸ್ ಯುವಿ 3ಎಕ್ಸ್ ಒ
    space Image

    ಹುಂಡೈ ವೆನ್ಯೂ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ:  ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..
      Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ: ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..

      ಎಲೆಕ್ಟ್ರಿಕ್ ಕ್ರೆಟಾವು ಎಸ್‌ಯುವಿಯ ವಿನ್ಯಾಸ ಮತ್ತು ಪ್ರೀಮಿಯಂ ಅನ್ನು ಒಂದು ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಅದರ ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿಗಿಂತ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ

      By anshFeb 07, 2025
    • Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ
      Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

      ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ

      By AnonymousNov 25, 2024
    • Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌
      Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌

      ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ

      By alan richardAug 21, 2024
    • Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!
      Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

      ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನು ಸೇರಿಸಿದೆ. ಇದು ಇಷ್ಟು ಸಾಕಾಗುತ್ತದೆಯೇ ?

      By nabeelMay 31, 2024
    • Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?
      Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

      ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

      By anshJun 06, 2024

    ಹುಂಡೈ ವೆನ್ಯೂ ಬಳಕೆದಾರರ ವಿಮರ್ಶೆಗಳು

    4.4/5
    ಆಧಾರಿತ438 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹1000
    ಜನಪ್ರಿಯ Mentions
    • All (437)
    • Looks (127)
    • Comfort (176)
    • Mileage (131)
    • Engine (78)
    • Interior (86)
    • Space (54)
    • Price (76)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • S
      somya bhadauria on May 14, 2025
      4.8
      This Is Our First Car
      This is our first car so it is a special experience actually this car has all the features and was under our budget.car has good styling looks classy , its ac is just too good, reqires less maintainance but it has limited rear seat space sometime has delayed gear shifting . After sales service are good as they attains all problem efficently without wasting our time.They call timely for informing you about your service details.
      ಮತ್ತಷ್ಟು ಓದು
    • M
      mrinmoy bordoloi on May 06, 2025
      5
      Amazing Ownership Of Hyundai Venue
      I've been using this car since 2 years and my overall experience is amazing all good mileage comfort driving experience everything just love this car everyone should go for this car ..hyundai after sale service is just mind blowing..and the driving pleasure this car gives is top notch..I just love this car
      ಮತ್ತಷ್ಟು ಓದು
    • G
      ganesh on May 03, 2025
      4.2
      Muscular Car, Easy On Pocket
      It has been one month and I am loving my venue. My model is ranger kaki automatic. The top end of this car looks fantastic, especially the rare, looking forward to long rides with this car. mileage is showing around 15, but it has very between 9 to 20 in Bangalore city. There is a slight lag when you want to quickly overtake, but with use, you will get used to this lag
      ಮತ್ತಷ್ಟು ಓದು
    • P
      prasanna kumar on May 03, 2025
      4.2
      Hyundai Venue Very Nice To Drive
      Good performance good driving experience and quality is very good and future is nice but mileage is little bit low and so many very aunties there but some features not given low basis vehicle but when you SX + option is very nice and performance is very good and good experience speaker quality is very good and take screen system and navigation also very good
      ಮತ್ತಷ್ಟು ಓದು
    • A
      abhi gowda on May 02, 2025
      4
      Best Commuter Car
      Overall Best looking car with sufficient power and milage and decent comfort, milage also not Bad it's best for daily commute amd long drives also so i definitely recommend this car for family use and also for working purpose, when it's come to durability i give five star for hyundai cars there's no doubt about it
      ಮತ್ತಷ್ಟು ಓದು
    • ಎಲ್ಲಾ ವೆನ್ಯೂ ವಿರ್ಮಶೆಗಳು ವೀಕ್ಷಿಸಿ

    ಹುಂಡೈ ವೆನ್ಯೂ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಡೀಸಲ್ ಮೊಡೆಲ್‌ 24.2 ಕೆಎಂಪಿಎಲ್ ಮೈಲೇಜ್ ಹೊಂದಿದೆ. ಪೆಟ್ರೋಲ್ ಮೊಡೆಲ್‌ಗಳು 14.5 ಕೆಎಂಪಿಎಲ್ ಗೆ 24.2 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್‌ ಅನ್ನು ಹೊಂದಿವೆ.

    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ ಮೈಲೇಜ್
    ಡೀಸಲ್ಮ್ಯಾನುಯಲ್‌24.2 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌24.2 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌18.31 ಕೆಎಂಪಿಎಲ್

    ಹುಂಡೈ ವೆನ್ಯೂ ವೀಡಿಯೊಗಳು

    • Highlights

      Highlights

      6 ತಿಂಗಳುಗಳು ago

    ಹುಂಡೈ ವೆನ್ಯೂ ಬಣ್ಣಗಳು

    ಹುಂಡೈ ವೆನ್ಯೂ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ವೆನ್ಯೂ ಉರಿಯುತ್ತಿರುವ ಕೆಂಪು colorಉರಿಯುತ್ತಿರುವ ಕೆಂಪು
    • ವೆನ್ಯೂ ಉರಿಯುತ್ತಿರುವ ಕೆಂಪು with ಅಬಿಸ್ ಬ್ಲ್ಯಾಕ್‌ colorಅಬಿಸ್ ಬ್ಲ್ಯಾಕ್‌ ರೂಫ್‌ನೊಂದಿಗೆ ಫಿಯೆರಿ ರೆಡ್
    • ವೆನ್ಯೂ ಅಟ್ಲಾಸ್ ವೈಟ್ colorಅಟ್ಲಾಸ್ ವೈಟ್
    • ವೆನ್ಯೂ ರೇಂಜರ್ ಖಾಕಿ colorರೇಂಜರ್ ಖಾಕಿ
    • ವೆನ್ಯೂ ಟೈಟಾನ್‌ ಗ್ರೇ colorಟೈಟಾನ್‌ ಗ್ರೇ
    • ವೆನ್ಯೂ ಅಬಿಸ್ ಬ್ಲ್ಯಾಕ್‌ colorಅಬಿಸ್ ಬ್ಲ್ಯಾಕ್‌

    ಹುಂಡೈ ವೆನ್ಯೂ ಚಿತ್ರಗಳು

    ನಮ್ಮಲ್ಲಿ 21 ಹುಂಡೈ ವೆನ್ಯೂ ನ ಚಿತ್ರಗಳಿವೆ, ವೆನ್ಯೂ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Hyundai Venue Front Left Side Image
    • Hyundai Venue Rear Left View Image
    • Hyundai Venue Front View Image
    • Hyundai Venue Rear view Image
    • Hyundai Venue Grille Image
    • Hyundai Venue Front Grill - Logo Image
    • Hyundai Venue Hill Assist Image
    • Hyundai Venue Exterior Image Image
    space Image

    ನವ ದೆಹಲಿ ನಲ್ಲಿ ಶಿಫಾರಸು ಮಾಡಲಾದ ಬಳಸಿದ ಹುಂಡೈ ವೆನ್ಯೂ ಕಾರುಗಳು

    • ಹುಂಡೈ ವೆನ್ಯೂ S 2023-2025
      ಹುಂಡೈ ವೆನ್ಯೂ S 2023-2025
      Rs8.90 ಲಕ್ಷ
      20241,600 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ S 2023-2025
      ಹುಂಡೈ ವೆನ್ಯೂ S 2023-2025
      Rs8.00 ಲಕ್ಷ
      202430,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ S 2023-2025
      ಹುಂಡೈ ವೆನ್ಯೂ S 2023-2025
      Rs7.88 ಲಕ್ಷ
      202335,40 3 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ ಎಸ್‌ಎಕ್ಸ್
      ಹುಂಡೈ ವೆನ್ಯೂ ಎಸ್‌ಎಕ್ಸ್
      Rs9.50 ಲಕ್ಷ
      202325, 300 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ S Opt Turbo iMT BSVI
      ಹುಂಡೈ ವೆನ್ಯೂ S Opt Turbo iMT BSVI
      Rs9.50 ಲಕ್ಷ
      202313,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ ಎಸ್‌
      ಹುಂಡೈ ವೆನ್ಯೂ ಎಸ್‌
      Rs8.52 ಲಕ್ಷ
      202316,858 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ ಎಸ್‌
      ಹುಂಡೈ ವೆನ್ಯೂ ಎಸ್‌
      Rs7.22 ಲಕ್ಷ
      20238,989 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ
      ಹುಂಡೈ ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ
      Rs11.26 ಲಕ್ಷ
      20238,15 3 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ S 2023-2025
      ಹುಂಡೈ ವೆನ್ಯೂ S 2023-2025
      Rs7.90 ಲಕ್ಷ
      202323,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ S Opt 2023-2025
      ಹುಂಡೈ ವೆನ್ಯೂ S Opt 2023-2025
      Rs7.75 ಲಕ್ಷ
      202310,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Vinay asked on 21 Dec 2024
      Q ) Venue, 2020 model, tyre size
      By CarDekho Experts on 21 Dec 2024

      A ) The Hyundai Venue comes in two tire sizes: 195/65 R15 and 215/60 R16

      Reply on th IS answerಎಲ್ಲಾ Answer ವೀಕ್ಷಿಸಿ
      Bipin asked on 12 Oct 2024
      Q ) Aloy wheel in venue?
      By CarDekho Experts on 12 Oct 2024

      A ) Yes, alloy wheels are available for the Hyundai Venue; most notably on the highe...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 9 Oct 2023
      Q ) Who are the rivals of Hyundai Venue?
      By CarDekho Experts on 9 Oct 2023

      A ) The Hyundai Venue competes with the Kia Sonet, Mahindra XUV300, Tata Nexon, Maru...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 24 Sep 2023
      Q ) What is the waiting period for the Hyundai Venue?
      By CarDekho Experts on 24 Sep 2023

      A ) For the availability, we would suggest you to please connect with the nearest au...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      SatishPatel asked on 6 Aug 2023
      Q ) What is the ground clearance of the Venue?
      By CarDekho Experts on 6 Aug 2023

      A ) As of now, the brand hasn't revealed the completed details. So, we would sug...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      Your monthly EMI
      20,557Edit EMI
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಹುಂಡೈ ವೆನ್ಯೂ brochure
      ಡೌನ್ಲೋಡ್ brochure for detailed information of specs, features & prices.
      download brochure
      continue ಗೆ download brouchure
      space Image

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.9.63 - 16.92 ಲಕ್ಷ
      ಮುಂಬೈRs.9.23 - 16.29 ಲಕ್ಷ
      ತಳ್ಳುRs.9.23 - 16.18 ಲಕ್ಷ
      ಹೈದರಾಬಾದ್Rs.9.54 - 16.72 ಲಕ್ಷ
      ಚೆನ್ನೈRs.9.43 - 16.85 ಲಕ್ಷ
      ಅಹ್ಮದಾಬಾದ್Rs.9 - 15.41 ಲಕ್ಷ
      ಲಕ್ನೋRs.9.41 - 15.65 ಲಕ್ಷ
      ಜೈಪುರRs.9.28 - 16.27 ಲಕ್ಷ
      ಪಾಟ್ನಾRs.9.24 - 16 ಲಕ್ಷ
      ಚಂಡೀಗಡ್Rs.8.92 - 15.25 ಲಕ್ಷ

      ಟ್ರೆಂಡಿಂಗ್ ಹುಂಡೈ ಕಾರುಗಳು

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಮೇ offer
      space Image
      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
      ×
      We need your ನಗರ to customize your experience