2023 ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಫೇಸ್‌ಲಿಫ್ಟ್ ಆ, ಬುಕಿಂಗ್‌ಗಳು ಪ್ರಾರಂಭ
ಟಾಟಾ ಹ್ಯಾರಿಯರ್ ಗಾಗಿ ansh ಮೂಲಕ ಅಕ್ಟೋಬರ್ 06, 2023 10:14 pm ರಂದು ಮಾರ್ಪಡಿಸಲಾಗಿದೆ
- 201 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಎಸ್‌ಯುವಿಗಳು ಆಧುನಿಕ ಸ್ಟೈಲಿಂಗ್ ಅಪ್ಡೇಟ್‌ಗಳನ್ನು ಮತ್ತು ಕ್ಯಾಬಿನ್‌ನಲ್ಲಿ ದೊಡ್ಡ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಅದರೆ ಅದೇ ಹಳೆಯ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುತ್ತವೆ
- 25,000 ಟೋಕನ್ ಮೊತ್ತಕ್ಕೆ ಎರಡೂ ಎಸ್‌ಯುವಿಗಳಿಗೆ ಬುಕಿಂಗ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
- ಎರಡೂ ಎಸ್‌ಯುವಿಗಳು ಮುಂಭಾಗ ಮತ್ತು ಹಿಂಭಾಗದಲ್ಲಿ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆಯುತ್ತಿದೆ.
- ಡೈನಾಮಿಕ್ ಕಾರ್ಯಚಟುವಟಿಕೆಗಳೊಂದಿಗೆ ಹೊಸ ಕನೆಕ್ಟೆಡ್ ಲೈಟಿಂಗ್ ಸೆಟಪ್‌ಗಳು ಇದರ ಮುಖ್ಯ ಬದಲಾವಣೆಯಾಗಿದೆ.
- ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಟಾಟಾದ ಹೊಸ ಬ್ಯಾಕ್‌ಲಿಟ್ ಸ್ಟೀರಿಂಗ್ ವೀಲ್‌ನೊಂದಿಗೆ ಕ್ಯಾಬಿನ್‌ಗಳನ್ನು ಅಪ್‌ಡೇಟ್ ಮಾಡಲಾಗಿದೆ.
- ಫೇಸ್‌ಲಿಫ್ಟೆಡ್ ಹ್ಯಾರಿಯರ್‌ನ ಎಕ್ಸ್-ಶೋರೂಂ ಬೆಲೆ 15 ಲಕ್ಷ ರೂ. ಮತ್ತು ಫೇಸ್‌ಲಿಫ್ಟೆಡ್ ಸಫಾರಿಯ ಎಕ್ಸ್-ಶೋರೂಂ ಬೆಲೆ 16 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.
ಟಾಟಾ 2023ರ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್‌ಗಳನ್ನು ಬಿಡುಗಡೆಗೆ ಮುಂಚಿತವಾಗಿ ಅನಾವರಣಗೊಳಿಸಿದೆ ಮತ್ತು ಈಗ 25,000 ರೂಪಾಯಿಗಳ ಟೋಕನ್ ಮೊತ್ತಕ್ಕೆ ಎರಡೂ ಎಸ್‌ಯುವಿಗಳ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಎರಡೂ ಎಸ್‌ಯುವಿಗಳು ಒಳಗೆ ಮತ್ತು ಹೊರಗೆ ತನ್ನ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಹೊಂದಲಿದೆ ಮತ್ತು ಕೆಲವು ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳನ್ನು ಮಾಡಲಿದೆ. ನೀವು ಈ ಎರಡರಲ್ಲಿ ಯಾವುದಾದರೂ ಒಂದನ್ನು ಖರೀದಿಸಲು ಬಯಸಿದರೆ, ನೀವು ಟಾಟಾ ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ ಡೀಲರ್‌ಶಿಪ್ ಮೂಲಕ ನಿಮ್ಮ ಬುಕಿಂಗ್‌ನ್ನು ಕಾಯ್ದಿರಿಸಬಹುದು.
ವಿನ್ಯಾಸದಲ್ಲಾದ ಅಪ್‌ಡೇಟ್‌ಗಳು
ಎರಡೂ ಎಸ್‌ಯುವಿಗಳು ವಿನ್ಯಾಸದಲ್ಲಿ ಒಂದೇ ರೀತಿಯ ಅಪ್‌ಡೇಟ್‌ಗಳನ್ನು ಹೊಂದಿದೆ. ಈ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಸ್ಲೀಕ್ ಇಂಡಿಕೇಟರ್‌ಗಳು, ನೆಕ್ಸಾನ್ ಮತ್ತು ನೆಕ್ಸಾನ್ ಇವಿ-ರೀತಿಯ ಲಂಬವಾಗಿ ಜೋಡಿಸಲಾದ ಸ್ಪ್‌ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಬಾನೆಟ್‌ನ ಅಗಲದ ಉದ್ದಕ್ಕೂ ಚಲಿಸುವ ಉದ್ದನೆಯ ಎಲ್ಇಡಿ ಡಿಆರ್‌ಎಲ್ ಸ್ಟ್ರಿಪ್ ಸೇರಿವೆ.
ಎರಡೂ ಎಸ್‌ಯುವಿಗಳ ಹಿಂದಿನ ಪ್ರೊಫೈಲ್ ಸ್ವಾಗತಾರ್ಹ ಅನಿಮೇಷನ್‌ನೊಂದಿಗೆ ಕನೆಕ್ಟೆಡ್ ಎಲ್‌ಇಡಿ ಟೈಲ್ ಲ್ಯಾಂಪ್ ಸೆಟಪ್ ಅನ್ನು ಪಡೆಯುತ್ತದೆ ಮತ್ತು ಸಫಾರಿ ಹೆಸರಿನ ಬ್ಯಾಡ್ಜ್‌ಗೆ ಬಳಸಲಾದ ಫಾಂಟ್ ಅನ್ನು ಬದಲಾಯಿಸಲಾಗಿದೆ. ಹ್ಯಾರಿಯರ್‌ನ ಟೈಲ್‌ಲ್ಯಾಂಪ್‌ಗಳು Z-ಆಕಾರದ ಲೈಟ್‌ನ ಸಿಗ್ನೇಚರ್‌ನ್ನು ಸಹ ಹೊಂದಿವೆ. ಎರಡೂ ಪರಿಷ್ಕೃತ ಬಂಪರ್ ಮತ್ತು ಹೆಚ್ಚು ಪ್ರಮುಖವಾದ ಸ್ಕಿಡ್ ಪ್ಲೇಟ್ ಅನ್ನು ಸಹ ಪಡೆಯುತ್ತವೆ.
ಇದನ್ನೂ ಓದಿ: 2023 ರ ಟಾಟಾ ನೆಕ್ಸಾನ್ Vs ಅದರ ಪ್ರತಿಸ್ಪರ್ಧಿಗಳು: ವಿಶೇಷಣಗಳನ್ನು ಹೋಲಿಕೆ
ಎರಡೂ ಎಸ್‌ಯುವಿಗಳ ಸೈಡ್ ಪ್ರೊಫೈಲ್ ಈಗ ಅಚ್ಚುಕಟ್ಟಾಗಿದೆ, ಆದರೆ ಒಟ್ಟಾರೆ ವಿನ್ಯಾಸವು ಈ ಹಿಂದಿನದ್ದೇ ಆಗಿದೆ. ಸುಧಾರಿಸಿದ ಸಫಾರಿಯು ಹೊಸ 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ ಮತ್ತು ಹ್ಯಾರಿಯರ್ ಏರೋಡೈನಾಮಿಕ್ ಒಳಸೇರಿಸುವಿಕೆಯೊಂದಿಗೆ ಹೊಸ 18-ಇಂಚಿನ ಕಪ್ಪು ಬಣ್ಣದ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ.
ಮರುವಿನ್ಯಾಸಗೊಳಿಸಲಾದ ಕ್ಯಾಬಿನ್
ಎರಡೂ ಎಸ್‌ಯುವಿಗಳು ಒಂದೇ ರೀತಿಯ ರಿಫ್ರೆಶ್ ಆಗಿರುವ ಕ್ಯಾಬಿನ್‌ಗಳನ್ನು ಪಡೆಯುತ್ತವೆ. ಡ್ಯಾಶ್‌ಬೋರ್ಡ್‌ಗಳು ಕೆಳಭಾಗದಲ್ಲಿ ವಕ್ರಾಕೃತಿಗಳೊಂದಿಗೆ ಲೇಯರ್ಡ್ ವಿನ್ಯಾಸಗಳನ್ನು ಪಡೆಯುತ್ತವೆ. ಹ್ಯಾರಿಯರ್ ಹೊರಭಾಗದ ಛಾಯೆಯನ್ನು ಆಧರಿಸಿ ವಿವಿಧ ಬಣ್ಣದ ಕ್ಯಾಬಿನ್‌ಗಳನ್ನು ಸಹ ಹೊಂದಲಿದೆ. ಈ ಕ್ಯಾಬಿನ್‌ಗಳು ಬ್ಯಾಕ್‌ಲಿಟ್ ಟಾಟಾ ಲೋಗೋದೊಂದಿಗೆ ಹೊಸ 4-ಸ್ಪೋಕ್ ಸ್ಟೀರಿಂಗ್ ವೀಲ್, ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ ಮತ್ತು ಡ್ಯಾಶ್‌ಬೋರ್ಡ್‌ನ ಸುತ್ತೆಲ್ಲ ಚಾಲನೆಯಲ್ಲಿರುವ ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್ ಗಳನ್ನು ಪಡೆಯುತ್ತದೆ.
ಇದು ಕೇವಲ ಎರಡು ಟಾಗಲ್‌ಗಳೊಂದಿಗೆ ಟಚ್-ಆಧಾರಿತ ಹವಾಮಾನ ನಿಯಂತ್ರಣ ಪ್ಯಾನಲ್‌ಗಾಗಿ ಹೊಸ ವಿನ್ಯಾಸವನ್ನು ಪಡೆಯುತ್ತದೆ. ಡ್ರೈವ್ ಮೋಡ್‌ಗಳು ಮತ್ತು ಟೆರೇನ್ ಮೋಡ್‌ಗಳಿಗಾಗಿ ಸೆಂಟರ್ ಕನ್ಸೋಲ್ ಹೊಸ ಡಯಲ್ ಅನ್ನು ಪಡೆಯುತ್ತದೆ ಹಾಗು ಅದು ಡಿಸ್‌ಪ್ಲೇಯನ್ನು ಸಹ ಹೊಂದಿದೆ.
ಕಲರ್ ಸ್ಕೀಮ್‌ಗಳ ವಿಷಯದಲ್ಲಿ, ಆಯ್ಕೆ ಮಾಡಿದ ವೇರಿಯೆಂಟ್ ಮತ್ತು ಬಾಹ್ಯ ಬಣ್ಣವನ್ನು ಅವಲಂಬಿಸಿ ಕ್ಯಾಬಿನ್‌ಗೆ ಟಾಟಾ ಅನೇಕ ಥೀಮ್‌ಗಳನ್ನು ನೀಡುತ್ತದೆ, ಇದು ಫೇಸ್‌ಲಿಫ್ಟೆಡ್ ನೆಕ್ಸಾನ್ ಮತ್ತು ನೆಕ್ಸಾನ್ EV ಗಳಲ್ಲಿ ಕಂಡುಬರುತ್ತದೆ.
ಹೊಸ ವೆರಿಯೆಂಟ್‌ಗಳು
ಹೊಸ ನೆಕ್ಸಾನ್ ಮತ್ತು ನೆಕ್ಸಾನ್ ಇವಿಯಂತೆಯೇ ಈ ಎರಡೂ ಎಸ್‌ಯುವಿಗಳು ವೇರಿಯೆಂಟ್‌ಗಳಿಗೆ ಹೊಸ ಹೆಸರನ್ನು ಪಡೆಯುತ್ತವೆ. ಸ್ಮಾರ್ಟ್, ಪ್ಯೂರ್, ಫಿಯರ್‌ಲೆಸ್ ಮತ್ತು ಅಡ್ವೆಂಚರ್ ಎಂಬ ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ 2023ರ ಹ್ಯಾರಿಯರ್ ಅನ್ನು ನೀಡಲಾಗುತ್ತಿದೆ. ಹಾಗೆಯೇ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎಂಬ ನಾಲ್ಕು ಆವೃತ್ತಿಗಳಲ್ಲಿ ಸಫಾರಿ ಫೇಸ್‌ಲಿಫ್ಟ್ ನ್ನು ಖರೀದಿಸಬಹುದು. ಈ ಎರಡೂ ಎಸ್‌ಯುವಿಗಳು ಬಾಹ್ಯ ಬಣ್ಣದ ಆಯ್ಕೆಗಳಲ್ಲಿ ಡಾರ್ಕ್ ಆವೃತ್ತಿಗಳನ್ನು ಸಹ ಪಡೆಯುತ್ತವೆ.
ಹೊಸ ಪವರ್‌ಟ್ರೇನ್ ಇಲ್ಲ
ಎರಡೂ ಎಸ್‌ಯುವಿಗಳು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಹಳೆಯ 2-ಲೀಟರ್ ಡೀಸೆಲ್ ಎಂಜಿನ್ (170PS/350Nm) ಅನ್ನು ಇದರಲ್ಲಿಯೂ ಉಳಿಸಿಕೊಂಡಿದೆ. ಆಟೋಮ್ಯಾಟಿಕ್ ವೇರಿಯಂಟ್ ಗಳು ಪ್ಯಾಡಲ್ ಶಿಫ್ಟರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಬರುತ್ತವೆ. ಅದಾಗಿಯೂ, ಟಾಟಾ ತನ್ನ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಈ ಫೇಸ್‌ಲಿಫ್ಟೆಡ್ ಎಸ್‌ಯುವಿಗಳಲ್ಲಿ ಮುಂದಿನ ದಿನಗಳಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಈ ಅಪ್‌ಡೇಟ್‌ನೊಂದಿಗೆ, ಡ್ರೈವರ್‌ನ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ದೊಡ್ಡ ಡಿಸ್‌ಪ್ಲೇಗಳ ಜೊತೆಗೆ ಹ್ಯಾರಿಯರ್ ಮತ್ತು ಸಫಾರಿ ಎರಡೂ ವೈಶಿಷ್ಟ್ಯಗಳ ನವೀಕರಣಗಳನ್ನು ಪಡೆಯಬಹುದು. ಇವೆರಡೂ ಈಗ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಗೆಸ್ಚರ್-ನಿಯಂತ್ರಿತ ಚಾಲಿತ ಟೈಲ್‌ಗೇಟ್‌ನೊಂದಿಗೆ ಬರುತ್ತವೆ. ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್‌ಡ್ ಅಡ್ಜಸ್ಟೆಬಲ್ ಮತ್ತು ವೆಂಟಿಲೇಶನ್ ಸೌಕರ್ಯ ಹೊಂದಿರುವ ಮುಂಭಾಗದ ಆಸನಗಳು (6-ಆಸನಗಳ ಸಫಾರಿಯಲ್ಲಿ ಎರಡನೇ ಸಾಲಿನ ಸೀಟ್‌ನಲ್ಲೂ ವೆಂಟಿಲೇಶನ್ ಸೌಕರ್ಯ), ಕ್ರೂಸ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿವೆ.
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದರಲ್ಲಿ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳ ಸೂಟ್ ಅನ್ನು ಪಡೆಯಬಹುದು. 2023 ಹ್ಯಾರಿಯರ್ ಮತ್ತು ಸಫಾರಿ ADAS ಪ್ರಯೋಜನಗಳ ಪಟ್ಟಿಗೆ ಹೊಂದಾಣಿಕೆಯ ಕ್ರೂಸ್ ಕಂಟ್ರೊಲ್ ಅನುಕೂಲತೆಯನ್ನು ಸೇರಿಸುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ತನ್ನ ಫೇಸ್‌ಲಿಫ್ಟೆಡ್ ಹ್ಯಾರಿಯರ್ ಮತ್ತು ಸಫಾರಿಯನ್ನು ನವೆಂಬರ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. 2023 ಹ್ಯಾರಿಯರ್ ನ ಎಕ್ಸ್ ಶೋರೂಂ ಬೆಲೆಯು 15 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 700, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ. ಮತ್ತೊಂದೆಡೆ, 2033 ಸಫಾರಿಯು ಎಕ್ಸ್-ಶೋರೂಮ್ ಬೆಲೆಯು 16 ಲಕ್ಷ ರೂಪಾಯಿಗಳಿಂದ ಶುರುವಾಗಬಹುದು. ಇದು ಮಹೀಂದ್ರಾ ಎಕ್ಸ್‌ಯುವಿ 700, MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಝಾರ್ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.
ಇನ್ನಷ್ಟು ಓದಿ: ಟಾಟಾ ಹ್ಯಾರಿಯರ್ ಡೀಸೆಲ್