• English
  • Login / Register

2024 Jeep Compass Night Eagle ಬಿಡುಗಡೆ, ಬೆಲೆಗಳು 25.04 ಲಕ್ಷ ರೂ.ನಿಂದ ಪ್ರಾರಂಭ

ಜೀಪ್ ಕಾಂಪಸ್‌ ಗಾಗಿ rohit ಮೂಲಕ ಏಪ್ರಿಲ್ 10, 2024 08:06 pm ರಂದು ಪ್ರಕಟಿಸಲಾಗಿದೆ

  • 60 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಂಪಾಸ್ ನೈಟ್ ಈಗಲ್ ಸ್ಪೋರ್ಟ್ಸ್ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಒಳಗೆ ಮತ್ತು ಹೊರಗೆ ಸಂಪೂರ್ಣ ಕಪ್ಪು ಥೀಮ್‌ ಅನ್ನು ಹೊಂದಿದೆ

2024 Jeep Compass Night Eagle edition launched

  • ಇದು ಗ್ರಿಲ್, ಫಾಗ್ ಲ್ಯಾಂಪ್ ಹೌಸಿಂಗ್‌ಗಳು ಮತ್ತು ರೂಫ್ ರೈಲ್‌ಗಳಿಗೆ ಕಪ್ಪು ಫಿನಿಶ್‌ ಅನ್ನು ಪಡೆಯುತ್ತದೆ.
  • 18-ಇಂಚಿನ ಕಪ್ಪು-ಔಟ್ ಅಲಾಯ್‌ ವೀಲ್‌ಗಳು ಮತ್ತು 'ನೈಟ್ ಈಗಲ್' ಬ್ಯಾಡ್ಜ್‌ನೊಂದಿಗೆ ಬರುತ್ತದೆ.
  • ಹೆಚ್ಚುವರಿ ವೈಶಿಷ್ಟ್ಯಗಳು ಮುಂಭಾಗ ಮತ್ತು ಹಿಂಭಾಗದ ಡ್ಯಾಶ್‌ಕ್ಯಾಮ್‌ಗಳು ಮತ್ತು ಹಿಂಭಾಗದ ಮನರಂಜನಾ ಸ್ಕ್ರೀನ್‌ಗಳನ್ನು ಒಳಗೊಂಡಿವೆ.
  • ಎಸ್‌ಯುವಿಯ 2-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
  • ಭಾರತದಾದ್ಯಂತ 2024ರ ಕಂಪಾಸ್ ನೈಟ್ ಈಗಲ್ ಆವೃತ್ತಿಯು 25.04 ಲಕ್ಷ ರೂ.ನಿಂದ 27.04 ಲಕ್ಷ ರೂ.ವರೆಗೆ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

 ಭಾರತದಲ್ಲಿ Jeep Compass ಅನ್ನು ಮತ್ತೊಮ್ಮೆ ನೈಟ್ ಈಗಲ್ ಆವೃತ್ತಿಯಲ್ಲಿ  ಪರಿಚಯಿಸಲಾಗಿದೆ. ಈ ಸೀಮಿತ ಆವೃತ್ತಿಯನ್ನು ಮೊದಲು 2020 ರಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ನಂತರ 2022 ರಲ್ಲಿ ಫೇಸ್‌ಲಿಫ್ಟೆಡ್ ಎಸ್‌ಯುವಿಯಲ್ಲಿ ಮರುಪರಿಚಯಿಸಲಾಯಿತು. ಇದೀಗ 2024ರಲ್ಲಿ, ಕಂಪಾಸ್ ನೈಟ್ ಈಗಲ್ ಆವೃತ್ತಿಯು   ಒಳಗೆ ಮತ್ತು ಹೊರಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ, ಹಾಗೆಯೇ, ಕೆಲವು ಆಡ್-ಆನ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ವೇರಿಯಂಟ್-ವಾರು ಬೆಲೆಗಳು

ವೇರಿಯೆಂಟ್‌

ನೈಟ್‌ ಈಗಲ್‌ ಬೆಲೆ

ಮ್ಯಾನುಯಲ್‌

25.04 ಲಕ್ಷ ರೂ.

ಆಟೋಮ್ಯಾಟಿಕ್‌

27.04 ಲಕ್ಷ ರೂ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳು

ಹೊರಭಾಗದಲ್ಲಿ ಏನು ಬದಲಾಗಿದೆ?

2024 Jeep Compass Night Eagle edition cabin

ಕಂಪಾಸ್‌ನ ಇತ್ತೀಚಿನ ನೈಟ್ ಈಗಲ್ ಆವೃತ್ತಿಯು ಹಳೆಯ ನೈಟ್ ಈಗಲ್ ಮೊಡೆಲ್‌ಗಳಲ್ಲಿ ಪ್ರಚಲಿತದಲ್ಲಿರುವಂತೆ ಗ್ರಿಲ್, ಫಾಗ್ ಲ್ಯಾಂಪ್ ಹೌಸಿಂಗ್ ಮತ್ತು ರೂಫ್ ರೈಲ್‌ಗಳಿಗೆ ಗ್ಲಾಸ್ ಬ್ಲ್ಯಾಕ್ ಫಿನಿಶ್ ಅನ್ನು ಪಡೆಯುತ್ತದೆ. ಜೀಪ್ ಸೈಡ್ ಫೆಂಡರ್‌ಗಳಲ್ಲಿ ಕಪ್ಪು ಬಣ್ಣದ  ಮಾನಿಕರ್‌ಗಳು ಮತ್ತು 18-ಇಂಚಿನ ಕಪ್ಪು-ಬಣ್ಣದ ಅಲಾಯ್‌ ವೀಲ್‌ಗಳನ್ನು ಸಹ ಒದಗಿಸಿದೆ. ಜೀಪ್ ಎಸ್‌ಯುವಿಯ ನೈಟ್ ಈಗಲ್ ಆವೃತ್ತಿಯು ಕಪ್ಪು, ಬಿಳಿ ಮತ್ತು ಕೆಂಪು ಎಂಬ ಮೂರು ಬಾಡಿ ಕಲರ್‌ಗಳಲ್ಲಿ ನೀಡುತ್ತಿದೆ. ಹಾಗೆಯೇ ಈ ಮೂರೂ ಬಣ್ಣಗಳು ಕಪ್ಪು ರೂಫ್‌ನೊಂದಿಗೆ ಸ್ಟ್ಯಾಂಡರ್ಡ್‌ ಆಗಿ ಬರುತ್ತವೆ.

ಇದನ್ನು ಸಹ ಓದಿ: ಹೊಸ Blackstorm ಎಡಿಷನ್‌ನ ಪಡೆಯುತ್ತಿರುವ MG Hector: ಬೆಲೆಗಳು 21.25 ಲಕ್ಷ ರೂ.ನಿಂದ ಪ್ರಾರಂಭ

ಕ್ಯಾಬಿನ್ ಪರಿಷ್ಕರಣೆಗಳು ಮತ್ತು ವೈಶಿಷ್ಟ್ಯಗಳ ವಿವರ 

2024 ರ ಜೀಪ್ ಕಂಪಾಸ್ ನೈಟ್ ಈಗಲ್ ಆವೃತ್ತಿಯು ಡೋರ್ ಟ್ರಿಮ್‌ಗಳಲ್ಲಿ ಕಪ್ಪು ಇನ್ಸರ್ಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್‌ನಲ್ಲಿ ಬರುತ್ತದೆ. ಇದು ಮುಂಭಾಗ ಮತ್ತು ಹಿಂಭಾಗದ ಡ್ಯಾಶ್‌ಕ್ಯಾಮ್‌ಗಳು, ಏರ್ ಪ್ಯೂರಿಫೈಯರ್, ಹಿಂಭಾಗದ ಮನರಂಜನಾ ಸ್ಕ್ರೀನ್‌ಗಳು ಮತ್ತು ನೀಲಿ ಆಂಬಿಯೆಂಟ್ ಲೈಟಿಂಗ್‌ಗಳನ್ನು ವೈಶಿಷ್ಟ್ಯಗಳ ಪಟ್ಟಿಗೆ ಸೇರಿಸುತ್ತದೆ. ಲಿಮಿಟೆಡ್‌-ರನ್ ಕಂಪಾಸ್ ಆವೃತ್ತಿಯ ಇತರ ವೈಶಿಷ್ಟ್ಯಗಳೆಂದರೆ ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಆಗಿದೆ.

ಜೀಪ್ ಕಂಪಾಸ್ ನೈಟ್ ಈಗಲ್ ಅನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ರಿವರ್ಸಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನೀಡುತ್ತಿದೆ.

ಅದೇ ಡೀಸೆಲ್ ಪವರ್‌ಟ್ರೇನ್

Jeep Compass 2-litre diesel engine

ಕಂಪಾಸ್ ಅನ್ನು 2-ಲೀಟರ್ ಡೀಸೆಲ್ ಎಂಜಿನ್ (170 PS/350 Nm) ಜೊತೆಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ನೈಟ್ ಈಗಲ್ ಆವೃತ್ತಿಯಲ್ಲಿಯು ಇದೇ ಆಯ್ಕೆಗಳು ಇರಲಿದೆ.

ಇದನ್ನು ಸಹ ನೋಡಿ: ಮತ್ತೊಮ್ಮೆ ರಹಸ್ಯವಾಗಿ Tata Curvvನ ಟೆಸ್ಟಿಂಗ್‌, ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಬಹಿರಂಗ 

ಪ್ರತಿಸ್ಪರ್ಧಿಗಳ ಕುರಿತು

ಜೀಪ್ ಕಂಪಾಸ್ ನೈಟ್ ಈಗಲ್ ಆವೃತ್ತಿಯು ಎಮ್‌ಜಿ ಹೆಕ್ಟರ್ ಬ್ಲಾಕ್‌ಸ್ಟಾರ್ಮ್ ಆವೃತ್ತಿ ಮತ್ತು ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್‌ಗಳಂತಹ ಸಂಪೂರ್ಣ-ಕಪ್ಪು ಬಣ್ಣದ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಪ್ರೀಮಿಯಂ ಪರ್ಯಾಯವಾಗಿದೆ. ಇದು ಹ್ಯುಂಡೈ ಟಕ್ಸನ್ ಮತ್ತು ಸಿಟ್ರೊಯೆನ್ C5 ಏರ್‌ಕ್ರಾಸ್ ಪ್ರೀಮಿಯಂ ಎಸ್‌ಯುವಿಗಳಿಗೆ ಸ್ಪೋರ್ಟಿಯರ್ ಆಗಿ ಕಾಣುವ ಪರ್ಯಾಯವಾಗಿಯೂ ಕಾರ್ಯನಿರ್ವಹಿಸುತ್ತದೆ.

 ಇದರ ಬಗ್ಗೆ ಇನ್ನಷ್ಟು ಓದಿ : ಕಂಪಾಸ್‌ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Jeep ಕಾಂಪಸ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience