Tata Curvv ಟೆಸ್ಟ್ ಮಾಡುವಾಗ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ಸುರಕ್ಷತಾ ಫೀಚರ್ ಬಹಿರಂಗ
ಟಾಟಾ ಕರ್ವ್ ಗಾಗಿ shreyash ಮೂಲಕ ಏಪ್ರಿಲ್ 12, 2024 07:00 pm ರಂದು ಪ್ರಕಟಿಸಲಾಗಿದೆ
- 72 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಕರ್ವ್ ಟಾಟಾದ ಹೊಸ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ಅನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ತರಲಿದೆ, ಅದರ ಜೊತೆಗೆ ನೆಕ್ಸನ್‌ನ ಡೀಸೆಲ್ ಪವರ್‌ಟ್ರೇನ್ ಅನ್ನು ಪಡೆಯಲಿದೆ.
- ಇತ್ತೀಚಿನ ಸ್ಪೈ ಶಾಟ್ ಟಾಟಾ ಕರ್ವ್ ನಲ್ಲಿರುವ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಫೀಚರ್ ಅನ್ನು ಖಚಿತಪಡಿಸುತ್ತದೆ.
- ಇದು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ಫೀಚರ್ ಗಳನ್ನು ಕೂಡ ಪಡೆಯಲಿದೆ.
- ಇದು 125 PS 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಮತ್ತು 115 PS 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ.
- ಬೆಲೆಯು 11 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಟಾಟಾ ಕರ್ವ್ ಟಾಟಾದ ಮುಂಬರುವ ಹೊಸ ಕಾರಾಗಿದ್ದು, ಇದು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಜನಪ್ರಿಯ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಕರ್ವ್ ಕೂಪ್ ಆಗಿರುವ ಬಾಡಿಯನ್ನು ಮತ್ತು ಟಾಟಾದ ಹೊಚ್ಚಹೊಸ SUV ಡಿಸೈನ್ ಅನ್ನು ಹೊಂದಿರುವ ಕಾರಾಗಿದೆ. ಈ ಡಿಸೈನ್ ಅನ್ನು ಇತ್ತೀಚಿನ ಫೇಸ್ ಲಿಫ್ಟ್ ಆಗಿರುವ ಟಾಟಾ SUVಗಳಲ್ಲಿ ಕೂಡ ನೋಡಬಹುದು. ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಕರ್ವ್ ಅನ್ನು ಮತ್ತೊಮ್ಮೆ ಟೆಸ್ಟ್ ಮಾಡುವಾಗ ನಮಗೆ ನೋಡಲು ಅವಕಾಶ ಸಿಕ್ಕಿದೆ ಮತ್ತು ಅದರ ವಿವರಗಳು ಇಲ್ಲಿದೆ.
ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಪಡೆಯಲಿದೆ
ಮೇಲಿನ ತೋರಿಸಿರುವ ಸ್ಪೈ ಮಾಡಿದ ಟೆಸ್ಟ್ ಗಾಡಿಯ ಚಿತ್ರವು, ಔಟ್ಸೈಡ್ ರಿಯರ್ ವ್ಯೂ ಮಿರರ್ (ORVM) ವಾರ್ನಿಂಗ್ ಲೈಟ್ ಅನ್ನು ತೋರಿಸುತ್ತಿದೆ. ಈ ಲೈಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಫೀಚರ್ ಅನ್ನು ಖಚಿತಪಡಿಸುತ್ತದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್ ಗಳನ್ನು ಒಳಗೊಂಡಿರುವ ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್ (ADAS) ಸೂಟ್‌ನ ಭಾಗವಾಗಿರಬಹುದು.
ಕರ್ವ್ ಟೆಸ್ಟ್ ಕಾರನ್ನು ಕೆಮಫ್ಲೇಜ್ ಮಾಡಲಾಗಿತ್ತು, ಆದರೆ ಅದರ ಕೂಪ್ ರೂಫ್‌ಲೈನ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳಂತಹ ಕೆಲವು ವಿವರಗಳನ್ನು ನಾವು ಇಲ್ಲಿ ನೋಡಬಹುದು.
ಇದನ್ನು ಕೂಡ ಓದಿ: ಏಪ್ರಿಲ್ ನಲ್ಲಿ ಟಾಟಾ ಟಿಯಾಗೊ EV ವೈಟಿಂಗ್ ಅವಧಿ MG ಕಾಮೆಟ್ EVಗಿಂತ ಹೆಚ್ಚಾಗಿದೆ
ಕ್ಯಾಬಿನ್ ಮತ್ತು ನಿರೀಕ್ಷಿಸಲಾಗಿರುವ ಫೀಚರ್ ಗಳು
ಕರ್ವ್ ನ ಒಳಭಾಗವು ಇನ್ನೂ ಬಹಿರಂಗವಾಗಿಲ್ಲ, ಆದರೆ ಇದು ನೆಕ್ಸಾನ್ ನಲ್ಲಿರುವ ಡ್ಯಾಶ್‌ಬೋರ್ಡ್ ಥೀಮ್ ಅನ್ನು ಪಡೆಯುವ ನಿರೀಕ್ಷೆಯಿದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರಲ್ಲಿ, ಕರ್ವ್ ಅನ್ನು ಹ್ಯಾರಿಯರ್ ತರಹದ ಹೊಳೆಯುವ ಟಾಟಾ ಲೋಗೋ ಹೊಂದಿರುವ 4-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ತೋರಿಸಲಾಗಿತ್ತು.
ಟಾಟಾ ಕರ್ವ್ 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ಸೌಕರ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್ ನಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪಡೆಯಬಹುದು.
ಕರ್ವ್ ಎಂಜಿನ್ ಆಯ್ಕೆಗಳು
ಟಾಟಾ ಕರ್ವ್ ಟಾಟಾದ ಹೊಸ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ಅನ್ನು ಪರಿಚಯಿಸುತ್ತಿದೆ. ಹಾಗೆಯೇ, ಇದು ಟಾಟಾ ನೆಕ್ಸಾನ್‌ನ ಡೀಸೆಲ್ ಪವರ್‌ಟ್ರೇನ್ ಎಂಜಿನ್ ಅನ್ನು ಕೂಡ ಬಳಸುತ್ತದೆ. SUVಯ ಪ್ರೊಡಕ್ಷನ್-ಸ್ಪೆಕ್ ಸ್ಪೆಸಿಫಿಕೇಷನ್ ಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಅವುಗಳ ವಿವರಗಳನ್ನು ಕೆಳಗೆ ನೀಡಲಾಗಿದೆ
ಇಂಜಿನ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
125 PS |
115 PS |
ಟಾರ್ಕ್ |
225 Nm |
260 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 7-ಸ್ಪೀಡ್ DCT* (ನಿರೀಕ್ಷಿಸಲಾಗಿದೆ) |
6-ಸ್ಪೀಡ್ MT |
*DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಟಾಟಾ ಕರ್ವ್, ಕರ್ವ್ವ್ EV ಎಂಬ ಆಲ್-ಎಲೆಕ್ಟ್ರಿಕ್ ವರ್ಷನ್ ನಲ್ಲಿ ಕೂಡ ಬರಲಿದೆ. ಇದು ಒಂದೇ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗಳ ಕ್ಲೇಮ್ ಮಾಡಿರುವ ಡ್ರೈವಿಂಗ್ ರೇಂಜ್ ಅನ್ನು ನೀಡಲಿದೆ. ಟಾಟಾ ಕರ್ವ್ EV ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ಇಲ್ಲಿ ಕ್ಲಿಕ್ ಮಾಡಿ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ನ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವರ್ಷನ್ 2024 ರ ಎರಡನೇ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆಯು ರೂ. 11 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಫೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, MG ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ನಂತಹ ಕಾಂಪ್ಯಾಕ್ಟ್ SUVಗಳ ಜೊತೆಗೆ ಸ್ಪರ್ಧಿಸಲಿದೆ. ಕರ್ವ್, ಇತ್ತೀಚೆಗೆ ಅನಾವರಣಗೊಂಡ ಸಿಟ್ರೊನ್ ಬಸಾಲ್ಟ್ ವಿಷನ್‌ಗೆ ಕೂಡ ಪ್ರತಿಸ್ಪರ್ಧಿಯಾಗಲಿದೆ.