Login or Register ಅತ್ಯುತ್ತಮ CarDekho experience ಗೆ
Login

ಮುಂದಿನ ತಿಂಗಳಿನಲ್ಲೇ ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ Maruti Swift..! ಭಾರೀ ಬದಲಾವಣೆಯೊಂದಿಗೆ ಬರುತ್ತಿರುವ ಫೇಸ್‌ಲಿಫ್ಟ್‌ ಕಾರಿನಲ್ಲಿ ಏನೇನಿದೆ..?

published on ಏಪ್ರಿಲ್ 16, 2024 04:22 pm by ansh for ಮಾರುತಿ ಸ್ವಿಫ್ಟ್

ನಾಲ್ಕನೇ ತಲೆಮಾರಿನ ಸ್ವಿಫ್ಟ್ ಸೂಕ್ಷ್ಮ ವಿನ್ಯಾಸ ಬದಲಾವಣೆಗಳು, ನವೀಕರಿಸಿದ ಕ್ಯಾಬಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ

  • ಹೊಸ ವಿನ್ಯಾಸದ ಅಂಶಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಪ್ರೊಫೈಲ್ ಅನ್ನು ಪಡೆಯುತ್ತದೆ.

  • ಕ್ಯಾಬಿನ್ ಹೊಸ ಡ್ಯಾಶ್‌ಬೋರ್ಡ್ ಮತ್ತು ಲೈಟ್‌ ಆದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.

  • ಹೊಸ ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿರಬಹುದು.

  • 6 ಲಕ್ಷ ರೂ.ನಿಂದ ಇದರ ಬೆಲೆಗಳು(ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು ಕಳೆದ ವರ್ಷ ಜಪಾನ್‌ನಲ್ಲಿ ಅನಾವರಣಗೊಳಿಸಲಾಯಿತು ಮತ್ತು ನಂತರ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹ್ಯಾಚ್‌ಬ್ಯಾಕ್‌ನ ಈ ಆವೃತ್ತಿಯು ರಿಫ್ರೆಶ್ ಮಾಡಿದ ಬಾಹ್ಯ ವಿನ್ಯಾಸ, ನವೀಕರಿಸಿದ ಕ್ಯಾಬಿನ್, ಸುಧಾರಿತ ಪವರ್‌ಟ್ರೇನ್ ಮತ್ತು ಹೊಸ ವೈಶಿಷ್ಟ್ಯಗಳ ಗೊಂಚಲನ್ನು ಪಡೆಯುತ್ತದೆ. ಹೊಸ-ಜನರೇಶನ್‌ನ ಇಂಡಿಯಾ-ಸ್ಪೆಕ್ ಸ್ವಿಫ್ಟ್ ಆಗಮನಕ್ಕಾಗಿ ಈಗ ದಿನ ನಿಗದಿಯಾಗಿದೆ, ಇದು 2024ರ ಮೇ ತಿಂಗಳ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮೊದಲು, ಆಪ್‌ಗ್ರೇಡ್‌ ಮಾಡಿರುವ ಮಾರುತಿ ಸ್ವಿಫ್ಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಗಳು ಇಲ್ಲಿದೆ.

ಹೊಸ ಸ್ವಿಫ್ಟ್‌ಗಾಗಿ ಹೊಸ ವಿನ್ಯಾಸ?

2024ರ ಸ್ವಿಫ್ಟ್‌ನ ಒಟ್ಟಾರೆ ವಿನ್ಯಾಸವು ಹೆಚ್ಚು-ಕಡಿಮೆ ಪ್ರಸ್ತುತ ಆವೃತ್ತಿಯಂತೆಯೇ ಇದೆ. ಆದರೆ ಆಧುನಿಕ ಟಚ್‌ಗಾಗಿ ಹೊರಭಾಗದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಇದು ನವೀಕರಿಸಿದ ಗ್ರಿಲ್, ಸ್ಲೀಕರ್ ಬಂಪರ್‌ಗಳು, ಮರುವಿನ್ಯಾಸಗೊಳಿಸಲಾದ 15-ಇಂಚಿನ ಅಲಾಯ್‌ ವೀಲ್‌ಗಳು, ನವೀಕರಿಸಿದ ಟೈಲ್ ಲೈಟ್‌ಗಳು ಮತ್ತು ಸ್ಪೋರ್ಟಿಯರ್ ರಿಯರ್ ಸ್ಪಾಯ್ಲರ್‌ಗಳನ್ನು ಒಳಗೊಂಡಿದೆ.

ಅಲ್ಲದೆ, ಹೊಸ ಸ್ವಿಫ್ಟ್‌ನಲ್ಲಿ, ಹಿಂದಿನ ಡೋರ್ ಹ್ಯಾಂಡಲ್‌ಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಬಾಗಿಲುಗಳ ಮೇಲೆ ಜೋಡಿಸಲಾಗಿರುತ್ತದೆ, ಆದರೆ ಪ್ರಸ್ತುತ ಆವೃತ್ತಿಯಲ್ಲಿ ಅವುಗಳನ್ನು ಸಿ-ಪಿಲ್ಲರ್‌ಗಳಲ್ಲಿ ಅಳವಡಿಸಲಾಗಿದೆ.

ಇಂಟಿರೀಯರ್‌ನಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ಹೊಸ ಸ್ವಿಫ್ಟ್ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಲೈಟ್‌ ಆದ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ, ಇದು ಬಲೆನೊ ಮತ್ತು ಫ್ರಾಂಕ್ಸ್‌ನಂತಹ ಭಾರತದಲ್ಲಿನ ಇತರ ಆಪ್‌ಡೇಟ್‌ ಮಾಡಲಾಗಿರುವ ಮಾರುತಿ ಮೊಡೆಲ್‌ಗಳಿಗೆ ಹೋಲುತ್ತದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಇಂಡಿಯಾ-ಸ್ಪೆಕ್ ಸ್ವಿಫ್ಟ್ ತನ್ನ ಅಂತರಾಷ್ಟ್ರೀಯ-ಸ್ಪೆಕ್ ಆವೃತ್ತಿಯಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ, ಅವುಗಳಲ್ಲಿ ಹಲವು ಮಾರುತಿ ಬಲೆನೊದಲ್ಲಿಯೂ ಸಹ ಇರುತ್ತವೆ. ಇದು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೆಡ್ಸ್-ಅಪ್ ಡಿಸ್‌ಪ್ಲೇ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಪಡೆಯಬಹುದು.

ಇದನ್ನು ಸಹ ಓದಿ: Maruti Fronx ನಿಂದ ಈ 5 ಸೌಕರ್ಯಗಳನ್ನು ಪಡೆಯಲಿರುವ 2024ರ Maruti Swift

ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಬರಬಹುದು, ಇದರೊಂದಿಗೆ ABS ಜೊತೆಗೆ EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಪ್ರಾಯಶಃ 360 ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯಬಹುದು. ಇದು ಬ್ಲೈಂಡ್‌ಸ್ಪಾಟ್ ಮಾನಿಟರಿಂಗ್‌ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು ಸಹ ಪಡೆಯಬಹುದು.

ಪವರ್‌ಟ್ರೇನ್‌

ಹೊಸ-ಜನರೇಶನ್‌ನ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಅದು 82 PS ಮತ್ತು 112 Nm ವರೆಗೆ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ವಿಫ್ಟ್‌ನ ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಸಿವಿಟಿಯೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ ಮೈಲ್ಡ್-ಹೈಬ್ರಿಡ್ ಆವೃತ್ತಿ ಮತ್ತು AWD ಆಯ್ಕೆಯನ್ನು ಸಹ ಪಡೆಯುತ್ತದೆ, ಆದರೆ ಇವುಗಳಲ್ಲಿ ಯಾವುದನ್ನೂ ಭಾರತದಲ್ಲಿ ನೀಡಲಾಗುವುದಿಲ್ಲ.

ಇದನ್ನು ಓದಿ: Toyota Taisor ವರ್ಸಸ್‌ Maruti Fronx: ಬೆಲೆಗಳ ಹೋಲಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತವಿರುವ ಸ್ವಿಫ್ಟ್ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ, ಅದು 90 PS ಮತ್ತು 113 Nm ವರೆಗೆ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಜೋಡಿಯಾಗಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 ರ ಮಾರುತಿ ಸ್ವಿಫ್ಟ್ ನ ಬೆಲೆಗಳು(ಎಕ್ಸ್ ಶೋ ರೂಂ) 6 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ನೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸುತ್ತದೆ ಮತ್ತು ರೆನಾಲ್ಟ್ ಟ್ರೈಬರ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ಸ್ವಿಫ್ಟ್-ಆಧಾರಿತ ಸಬ್-4m ಸೆಡಾನ್ ಮಾರುತಿ ಡಿಜೈರ್ ಆಪ್‌ಡೇಟ್‌ ಆದ ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

a
ಅವರಿಂದ ಪ್ರಕಟಿಸಲಾಗಿದೆ

ansh

  • 33 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಸ್ವಿಫ್ಟ್

A
ashraf
Apr 17, 2024, 8:05:17 PM

What is the mileage

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ