Mahindra Thar Roxxನ ಸುರಕ್ಷತಾ ಪ್ಯಾಕೇಜ್ ಬಗ್ಗೆ ನಮ್ಮ ಅನುಭವ ಇಲ್ಲಿದೆ
ಆಗಸ್ಟ್ 30, 2024 02:36 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಥಾರ್ ರೋಕ್ಸ್ ಈ ಟಾಪ್-ಎಂಡ್ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ ಮೊದಲ ಜನಪ್ರಿಯ ಆಫ್-ರೋಡ್ ವಾಹನವಾಗಿದೆ, ಆ ಮೂಲಕ ಥಾರ್ ಮಾಡೆಲ್ ಗೆ ಕೂಡ ಹೊಸ ಪರಿಚಯವಾಗಿದೆ
ಮಹೀಂದ್ರಾ ಥಾರ್ ರೋಕ್ಸ್ ಈಗಾಗಲೇ ಹೊಸ ಖರೀದಿದಾರರು ಮತ್ತು ಕಾರು ಉತ್ಸಾಹಿಗಳಲ್ಲಿ ಬಿಡುಗಡೆಯ ಮೊದಲು ಮತ್ತು ನಂತರ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಮಹೀಂದ್ರಾ ಥಾರ್ ರೋಕ್ಸ್ ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಸೇರಿದಂತೆ ಹಲವು ಟಾಪ್-ಎಂಡ್ ಫೀಚರ್ ಗಳನ್ನು ಹೊಂದಿದೆ, ಮತ್ತು ಆ ಮೂಲಕ ಥಾರ್ ಮಾಡೆಲ್ ನಲ್ಲಿ ಕೂಡ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಜನಪ್ರಿಯ ಆಫ್-ರೋಡ್ ವಾಹನವೊಂದು ಈ ಟಾಪ್-ಎಂಡ್ ಸುರಕ್ಷತಾ ತಂತ್ರಜ್ಞಾನದೊಂದಿಗೆ ಬಂದಿರುವುದು ಇದೇ ಮೊದಲು. ನಾವು ಇತ್ತೀಚೆಗೆ SUV ಅನ್ನು ಟೆಸ್ಟ್ ಡ್ರೈವ್ ಮಾಡಿದ್ದೇವೆ ಮತ್ತು ಅದರ ADAS ತಂತ್ರಜ್ಞಾನವನ್ನು ಆನ್-ರೋಡ್ ಪರಿಸ್ಥಿತಿಗಳಲ್ಲಿ ಟೆಸ್ಟ್ ಮಾಡುವ ಅವಕಾಶ ಸಿಕ್ಕಿತು. ನಮ್ಮ ಅಭಿಪ್ರಾಯ ಇಲ್ಲಿದೆ:
ನಮಗೆ ಯಾವುದನ್ನೆಲ್ಲಾ ಟೆಸ್ಟ್ ಮಾಡುವ ಅವಕಾಶ ಸಿಕ್ಕಿತು?
SUV ಯೊಂದಿಗೆ ಸ್ವಲ್ಪ ಸಮಯ ಮಾತ್ರ ಸಿಕ್ಕಿದರೂ ಕೂಡ, ಅದರಲ್ಲಿರುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಲೇನ್-ಡಿಪಾರ್ಚರ್ ವಾರ್ನಿಂಗ್ ಮತ್ತು ಟ್ರಾಫಿಕ್ ಸೈನ್ ಗುರುತಿಸುವಿಕೆಯಂತಹ ಕೆಲವು ಉಪಯುಕ್ತ ADAS ಫೀಚರ್ ಗಳನ್ನು ಟೆಸ್ಟ್ ಮಾಡುವ ಅವಕಾಶ ಸಿಕ್ಕಿತು. ನಾವು ಟೆಸ್ಟ್ ಮಾಡಿದ ಎಲ್ಲಾ ADAS ಫೀಚರ್ ಗಳ ಬಗ್ಗೆ ನಮ್ಮ ಅನಿಸಿಕೆ ಇಲ್ಲಿದೆ:
-
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ - ಇದನ್ನು ಕಡಿಮೆ ಟ್ರಾಫಿಕ್ ಇರುವ ವಿಶಾಲ, ತೆರೆದ ರಸ್ತೆಗಳಲ್ಲಿ ಉತ್ತಮವಾಗಿ ಬಳಸಬಹುದು. ಸಾಮಾನ್ಯ ಹೆದ್ದಾರಿಗಳಲ್ಲಿ, ಈ ಸಿಸ್ಟಮ್ ಜರ್ಕ್ ಅನ್ನು ಅನುಭವಿಸಬಹುದು ಮತ್ತು ನೀವು ಆಕ್ಸಿಲರೇಟರ್ ಅನ್ನು ಬಿಟ್ಟಾಗಲೂ ಕೂಡ ಕಾರ್ ಆಗಾಗ್ಗೆ ಬ್ರೇಕ್ ಹಾಕುತ್ತದೆ. ನಿಮ್ಮ ಬ್ರೇಕ್ ಲೈಟ್‌ಗಳು ಮಿನುಗುತ್ತಲೇ ಇರುವ ಕಾರಣ ನಿಮ್ಮ ಹಿಂದೆ ಇರುವ ಡ್ರೈವರ್ ಗಳಿಗೆ ಇದು ಕಿರಿಕಿರಿ ಉಂಟುಮಾಡಬಹುದು.
-
ಟ್ರಾಫಿಕ್ ಸೈನ್ ಗುರುತಿಸುವಿಕೆ - ಇದು ಉತ್ತಮವಾಗಿ ಕೆಲಸ ಮಾಡುತ್ತಿತ್ತು, ಆದರೆ ಟ್ರಾಫಿಕ್ ಸೈನ್ ಗಳು ಡಿಸ್ಪ್ಲೇನಲ್ಲಿ ಒಂದರ ನಂತರ ಒಂದರಂತೆ ಬರುತ್ತಿತ್ತು, ಆದ್ದರಿಂದ ನಾವು ಅದನ್ನು ಆಫ್ ಮಾಡಿದ್ದೇವೆ.
-
ಲೇನ್ ಕೀಪ್ ಅಸಿಸ್ಟ್ ಮತ್ತು ಲೇನ್-ಡಿಪಾರ್ಚರ್ ವಾರ್ನಿಂಗ್ - ದೂರ ಪ್ರಯಾಣಗಳಿಗೆ ಇದು ಉತ್ತಮವಾಗಿದೆ, ಆದರೆ ಅಸ್ಪಷ್ಟ ಅಥವಾ ಯಾವುದೇ ಗುರುತುಗಳಿಲ್ಲದ ರಸ್ತೆಗಳಲ್ಲಿ ಇದು ಗೊಂದಲಕ್ಕೊಳಗಾಗಬಹುದು, ಆದ್ದರಿಂದ ಅಂತಹ ಸಂದರ್ಭಗಳಲ್ಲಿ ಅದನ್ನು ಆಫ್ ಮಾಡುವುದು ಉತ್ತಮವಾಗಿದೆ.
-
ಆಟೋ-ಎಮರ್ಜೆನ್ಸಿ ಬ್ರೆಕಿಂಗ್ - ತುರ್ತು ಸಂದರ್ಭಗಳಲ್ಲಿ ಬ್ರೇಕ್ ಹಾಕುವುದರ ಜೊತೆಗೆ, ಇದು ಅಗತ್ಯವಿರುವ ಸಂದರ್ಭಗಳಲ್ಲಿ ಶಾರ್ಟ್ ಬ್ರೇಕಿಂಗ್ ಅನ್ನು ಕೂಡ ಮ್ಯಾನೇಜ್ ಮಾಡುತ್ತದೆ. ಹೆದ್ದಾರಿಗಳಲ್ಲಿ ಸಣ್ಣ ಗ್ಯಾಪ್ ಗಳಲ್ಲಿ ಟ್ರಕ್‌ಗಳನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುವಾಗ ಇದು ನಿಮ್ಮನ್ನು ಗೊಂದಲಗೊಳಿಸಬಹುದು.
-
ಹೈ-ಬೀಮ್ ಅಸಿಸ್ಟ್ - ಮುಂದುಗಡೆಯಿಂದ ಬರುವ ಡ್ರೈವರ್‌ಗಳಿಗೆ ರಸ್ತೆ ಸರಿಯಾಗಿ ಕಾಣಲು, ಮುಂದೆ ಟ್ರಾಫಿಕ್ ಅನ್ನು ಪತ್ತೆಹಚ್ಚಿದಾಗ ಅದು ಆಟೋಮ್ಯಾಟಿಕ್ ಆಗಿ ಹೈ ಬೀಮ್ ನಿಂದ ಲೊ ಬೀಮ್ ಗೆ ಬದಲಾಗುತ್ತದೆ. ಥಾರ್ ರೋಕ್ಸ್ ಅನ್ನು ಓಡಿಸಿದಾಗ, ಅದರ ಹೈ-ಬೀಮ್ ಅಸಿಸ್ಟ್ ಫೀಚರ್ ಉತ್ತಮವಾಗಿ ಕೆಲಸ ಮಾಡಿದೆ.
ಇದನ್ನು ಕೂಡ ಓದಿ: 5 ಡೋರ್ ಮಹೀಂದ್ರಾ ಥಾರ್ ರೋಕ್ಸ್: ಹೊಸ ಆಫ್ ರೋಡರ್ ನಲ್ಲಿ ನಾವು ನೋಡಲು ಬಯಸುವ 10 ಫೀಚರ್ ಗಳು
ಎಸ್‌ಯುವಿಯಲ್ಲಿರುವ ಇತರ ಸುರಕ್ಷತಾ ಫೀಚರ್ ಗಳು
ADAS ಹೊರತುಪಡಿಸಿ, ಮಹೀಂದ್ರಾ ಥಾರ್ ರೋಕ್ಸ್ ಆರು ಏರ್‌ಬ್ಯಾಗ್‌ಗಳೊಂದಿಗೆ (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳೊಂದಿಗೆ ಬರುತ್ತದೆ. ಇದು ರೈನ್-ಸೆನ್ಸಿಂಗ್ ವೈಪರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಕೂಡ ಪಡೆಯುತ್ತದೆ.
ಮಹೀಂದ್ರಾ ಥಾರ್ ರೋಕ್ಸ್ ಎಂಜಿನ್ ಆಯ್ಕೆಗಳು
ಸ್ಪೆಸಿಫಿಕೇಷನ್ |
2-ಲೀಟರ್ ಟರ್ಬೊ-ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
177 PS ವರೆಗೆ |
175 PS ವರೆಗೆ |
ಟಾರ್ಕ್ |
380 Nm ವರೆಗೆ |
370 Nm ವರೆಗೆ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 6-ಸ್ಪೀಡ್ AT |
6-ಸ್ಪೀಡ್ MT, 6-ಸ್ಪೀಡ್ AT |
ಡ್ರೈವ್ ಟ್ರೈನ್ |
RWD* |
RWD, 4WD^ |
* *RWD - ರಿಯರ್-ವೀಲ್-ಡ್ರೈವ್, ^4WD - 4-ವೀಲ್-ಡ್ರೈವ್
ಇದನ್ನು ಕೂಡ ಓದಿ: 5 ಡೋರ್ ಮಹೀಂದ್ರಾ ಥಾರ್ ರೋಕ್ಸ್ ವರ್ಸಸ್ 3 ಡೋರ್ ಮಹೀಂದ್ರಾ ಥಾರ್: ಕಾರ್‌ದೇಖೋ ಇನ್ಸ್ಟಾಗ್ರಾಮ್ ವೀಕ್ಷಕರು ಯಾವ ಥಾರ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ನಿಮಗೆ ಗೊತ್ತೇ?
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ ರೋಕ್ಸ್ ಬೆಲೆಯು ರೂ 12.99 ಲಕ್ಷದಿಂದ ರೂ 20.49 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್-ಶೋ ರೂಂ ಪ್ಯಾನ್-ಇಂಡಿಯಾ). ಡೀಸೆಲ್ 4x4 ವೇರಿಯಂಟ್ ಗಳ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ. ಈ SUV ಯು ಫೋರ್ಸ್ ಗೂರ್ಖಾ 5-ಡೋರ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ, ಮತ್ತು ಮಾರುತಿ ಜಿಮ್ನಿಗೆ ಹೋಲಿಸಿದರೆ ದೊಡ್ಡ ಗಾತ್ರದ ಪರ್ಯಾಯ ಆಯ್ಕೆಯಾಗಲಿದೆ. ಇದರ ಬೆಲೆಯು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾಂಪ್ಯಾಕ್ಟ್ SUV ಗಳ ಹತ್ತಿರದಲ್ಲಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಹೀಂದ್ರಾ ಥಾರ್ ರೋಕ್ಸ್ ಆನ್ ರೋಡ್ ಬೆಲೆ