5 ಡೋರ್ Mahindra Thar Roxxನ ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವರಿ ವಿವರಗಳು ಪ್ರಕಟ
ಥಾರ್ ರೋಕ್ಸ್‌ನ ಟೆಸ್ಟ್ ಡ್ರೈವ್‌ಗಳು ಸೆಪ್ಟೆಂಬರ್ 14 ರಂದು ಪ್ರಾರಂಭವಾಗಲಿದ್ದು, ಬುಕಿಂಗ್ ಅಕ್ಟೋಬರ್ 3 ರಿಂದ ಲಭ್ಯವಿರಲಿದೆ
- ಎಸ್‌ಯುವಿಯ ಗ್ರಾಹಕ ಡೆಲಿವೆರಿಗಳು 2024ರ ದಸರಾದಿಂದ ಪ್ರಾರಂಭವಾಗಲಿದೆ.
- ಮಹೀಂದ್ರಾವು ಥಾರ್ ರೋಕ್ಸ್ ಅನ್ನು MX ಮತ್ತು AX ಎಂಬ ಎರಡು ವಿಶಾಲವಾದ ಟ್ರಿಮ್‌ಗಳಲ್ಲಿ ನೀಡುತ್ತಿದೆ.
- ಹೊರಭಾಗದ ಹೈಲೈಟ್‌ಗಳು ಸಂಪೂರ್ಣ-ಎಲ್‌ಇಡಿ ಲೈಟಿಂಗ್ ಮತ್ತು 19-ಇಂಚಿನ ಡ್ಯುಯಲ್-ಟೋನ್ ಆಲಾಯ್ ವೀಲ್‌ಗಳನ್ನು ಒಳಗೊಂಡಿವೆ.
- ಕ್ಯಾಬಿನ್ ಅನ್ನು ಸಾಫ್ಟ್ ಟಚ್ ಮೆಟಿರಿಯಲ್‌ನೊಂದಿಗೆ ಡ್ಯುಯಲ್-ಟೋನ್ ಥೀಮ್‌ನಿಂದ ಮಾಡಲ್ಪಟ್ಟಿದೆ ಮತ್ತು ವೈಟ್ ಕವರ್‌ನಲ್ಲಿ ಫೀಚರ್‌ಗಳನ್ನು ಹೊಂದಿದೆ.
- ಬೋರ್ಡ್‌ನಲ್ಲಿರುವ ಫೀಚರ್‌ಗಳು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಪನೋರಮಿಕ್ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿವೆ.
- ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಪಡೆಯುತ್ತದೆ; 4WDಯು ಡೀಸೆಲ್ ಆವೃತ್ತಿಗಳಿಗೆ ಸೀಮಿತವಾಗಿದೆ.
- ಭಾರತದಾದ್ಯಂತ ಎಸ್‌ಯುವಿಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.
2024 ರ ಅತ್ಯಂತ ನಿರೀಕ್ಷಿತ ಎಸ್‌ಯುವಿ ಲಾಂಚ್‌ಗಳಲ್ಲಿ ಒಂದಾದ ಮಹೀಂದ್ರಾ ಥಾರ್ 5-ಡೋರ್ (ಈಗ ಮಹೀಂದ್ರಾ ಥಾರ್ ರೋಕ್ಸ್ ಎಂದು ಕರೆಯಲಾಗುತ್ತದೆ) ಇದೀಗ 12.99 ಲಕ್ಷ ರೂ.ನಿಂದ ಪ್ರಾರಂಭವಾಗುವ ಬೆಲೆಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಕಾರು ತಯಾರಕರು ಹಂಚಿಕೊಂಡ ವಿವಿಧ ವಿವರಗಳ ಜೊತೆಗೆ, ಎಸ್‌ಯುವಿಯ ಬುಕಿಂಗ್ ಮತ್ತು ಡೆಲಿವರಿಗಳ ಕುರಿತು ಕೆಲವು ಪ್ರಮುಖ ಮಾಹಿತಿಯನ್ನು ಸಹ ಬಹಿರಂಗಪಡಿಸಿದ್ದಾರೆ.
ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವೆರಿಗಳು
ಮಹೀಂದ್ರಾವು ಸೆಪ್ಟೆಂಬರ್ 14ರಿಂದ ತನ್ನ ಥಾರ್ ರೋಕ್ಸ್‌ನ ಟೆಸ್ಟ್ ಡ್ರೈವ್‌ಗಳನ್ನು ಪ್ರಾರಂಭಿಸಲಿದೆ. ಈ ಎಸ್‌ಯುವಿಗಾಗಿ ಬುಕ್ಕಿಂಗ್‌ಗಳು ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದ್ದು, ಗ್ರಾಹಕರಿಗೆ ಡೆಲಿವೆರಿಗಳು 2024ರ ದಸರಾ ಹಬ್ಬದ ಸಮಯದಿಂದ ಪ್ರಾರಂಭವಾಗಲಿವೆ.
ಮಹೀಂದ್ರಾ ಥಾರ್ ರೋಕ್ಸ್‌ನ ವಿವರಗಳು
ಮಹೀಂದ್ರಾ ಥಾರ್ ರೋಕ್ಸ್ MX ಮತ್ತು AX ಎಂಬ ಎರಡು ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ. ಇವುಗಳನ್ನು ಈ ಕೆಳಗಿನ ಉಪ-ವೇರಿಯೆಂಟ್‌ಗಳಾಗಿ ವಿಂಗಡಿಸಲಾಗಿದೆ:
-
MX - MX1, MX3, ಮತ್ತು MX5
-
AX - AX3L, AX5L, ಮತ್ತು AX7L
ಮಹೀಂದ್ರಾವು ಥಾರ್ ರೋಕ್ಸ್‌ಗೆ 6-ಸ್ಲ್ಯಾಟ್ ಗ್ರಿಲ್, ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳನ್ನು ನೀಡಿದೆ. ಈ ಎಸ್‌ಯುವಿಯು 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ದೊಡ್ಡದಾದ ಬಂಪರ್‌ಗಳೊಂದಿಗೆ ಬರುತ್ತದೆ. ಇದನ್ನು ಒಟ್ಟು ಏಳು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಇವೆಲ್ಲವನ್ನೂ ಕಪ್ಪು ರೂಫ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗಿದೆ.
ಇದನ್ನೂ ಓದಿ : ಈ ವಿವರವಾದ ಗ್ಯಾಲರಿಯಲ್ಲಿ 5 ಡೋರ್ ಮಹೀಂದ್ರಾ ಥಾರ್ ರೋಕ್ಸ್‌ನ ಸಂಪೂರ್ಣ ಚಿತ್ರಣ
ಫೀಚರ್‌ಗಳು ಮತ್ತು ಸುರಕ್ಷತಾ ಪ್ಯಾಕೇಜ್
ಥಾರ್ ರೋಕ್ಸ್‌ನ ಫೀಚರ್‌ಗಳ ಪಟ್ಟಿಯು 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳೊಂದಿಗೆ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಬರುತ್ತದೆ. ಬೋರ್ಡ್‌ನಲ್ಲಿರುವ ಇತರ ಫೀಚರ್‌ಗಳು ಪಪನರೋಮಿಕ್ ಸನ್‌ರೂಫ್, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು 9-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಮಹೀಂದ್ರಾವು ಈ ಉದ್ದವಾದ ಥಾರ್ ಅನ್ನು 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಬೆಟ್ಟ ಏರುವ ಮತ್ತು ಇಳಿಯುವ ಕಂಟ್ರೋಲ್‌ನಂತಹ ಸುರಕ್ಷತಾ ತಂತ್ರಜ್ಞಾನದೊಂದಿಗೆ ನೀಡುತ್ತಿದೆ. ಈ ಎಸ್‌ಯುವಿ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುತ್ತದೆ, ಇದರಲ್ಲಿ ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿವೆ.
ಇದನ್ನೂ ಓದಿ: Tata Curvv EVಗಾಗಿ ಬುಕಿಂಗ್‌ಗಳು ಪ್ರಾರಂಭ, ಶೀಘ್ರದಲ್ಲೇ ಡೆಲಿವೆರಿಗೂ ಲಭ್ಯ
ಪವರ್‌ಟ್ರೈನ್ ವಿವರಗಳು
ಥಾರ್ ರೋಕ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ, ಅದರ ವಿವರಗಳು ಈ ಕೆಳಗಿನಂತಿವೆ:
ಎಂಜಿನ್‌ಗಳು |
2-ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
177 ಪಿಎಸ್ ವರೆಗೆ |
175 ಪಿಎಸ್ ವರೆಗೆ |
ಟಾರ್ಕ್ |
380 ಎನ್‌ಎಮ್ ವರೆಗೆ |
370 ಎನ್‌ಎಮ್ ವರೆಗೆ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಆಟೋಮ್ಯಾಟಿಕ್ |
ಡ್ರೈವ್‌ಟ್ರೈನ್ |
RWD^ |
RWD, 4WD* |
^RWD- ರಿಯರ್ ವೀಲ್ ಡ್ರೈವ್
*4WD- 4-ವೀಲ್ ಡ್ರೈವ್
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಮಹೀಂದ್ರಾ ಥಾರ್ ರಾಕ್ಸ್‌ನ ಪರಿಚಯಾತ್ಮಕ, ಎಕ್ಸ್-ಶೋರೂಂ ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭವಾಗಿ 20.49 ಲಕ್ಷ ರೂ.ವರೆಗೆ ಇದೆ. ಥಾರ್ ರೋಕ್ಸ್‌ನ 4 ವೀಲ್‌ಡ್ರೈವ್ ಆವೃತ್ತಿಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಬಹಿರಂಗಪಡಿಸಿಲ್ಲ. ಮಹೀಂದ್ರಾ ಥಾರ್ ರೋಕ್ಸ್ ಮಾರುಕಟ್ಟೆಯಲ್ಲಿ 5-ಡೋರ್ ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಿದೆ, ಆದರೆ ಮಾರುತಿ ಜಿಮ್ನಿ ಮತ್ತು 3-ಡೋರ್ ಮಹೀಂದ್ರ ಥಾರ್‌ಗಳಿಗೆ ದೊಡ್ಡ ಮತ್ತು ಹೆಚ್ಚು ಪ್ರೀಮಿಯಂ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಮಿಸ್ ಮಾಡದೇ ಫಾಲೋ ಮಾಡಿ
ಇನ್ನಷ್ಟು ಓದಿ: ಥಾರ್ ರಾಕ್ಸ್ ಡೀಸೆಲ್
Write your Comment on Mahindra ಥಾರ್ ROXX
Booking procedures , how much money,afterwards waiting period