ಹೊಸ ಕಿಯಾ ಸೆಲ್ಟೋಸ್ ಕಾರಿನ ಕುರಿತು ಇನ್ನೂ ತಿಳಿದಿರದ 5 ವೈಶಿಷ್ಟ್ಯಗಳು
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಅಕ್ಟೋಬರ್ 31, 2023 02:39 pm ರಂದು ಮಾರ್ಪಡಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಈ ಐದು ವೈಶಿಷ್ಟ್ಯಗಳಲ್ಲಿ ಒಂದು ವೈಶಿಷ್ಟ್ಯತೆಯು ಸದ್ಯಕ್ಕೆ ಈ ವಿಭಾಗದಲ್ಲಿ ಮಾತ್ರವೇ ದೊರೆತರೆ ಇನ್ನೊಂದು ವೈಶಿಷ್ಟ್ಯವು ಪರಿಷ್ಕರಣೆಗೆ ಮೊದಲಿನ ಸೆಲ್ಟೋಸ್ ಕಾರಿನಲ್ಲೂ ದೊರೆಯುತ್ತಿತ್ತು
ಸುಮಾರು 4 ವರ್ಷಗಳ ನಂತರ ಕಿಯಾ ಸೆಲ್ಟೋಸ್ ಕಾರಿಗೆ ಭಾರತದಲ್ಲಿ ಹೊಸ ನೋಟವನ್ನು ನೀಡಲಾಗಿದೆ. ಇದು 2023ರ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಿದ್ದು, ಪ್ಯಾನೊರಾಮಿಕ್ ಸನ್ ರೂಫ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಸೇರಿದಂತೆ ಈ ಪರಿಷ್ಕೃತ SUVಯಲ್ಲಿ ಏನೆಲ್ಲ ಇದೆ ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಆದರೆ ಸಣ್ಣಪುಟ್ಟ ಎನಿಸಿದರೂ ಅತ್ಯಂತ ಉಪಯುಕ್ತವೆನಿಸುವ ಕೆಲವೊಂದು ಅನುಕೂಲವೆನಿಸುವ ಅಂಶಗಳಿದ್ದು ಅವುಗಳಿಗೆ ಹೆಚ್ಚೇನೂ ಪ್ರಚಾರ ದೊರೆತಿಲ್ಲ. ನಾವು ಇತ್ತೀಚೆಗೆ ಕಿಯಾ ಸೆಲ್ಟೋಸ್ ಜೊತೆಗೆ ಒಂದಷ್ಟು ಸಮಯವನ್ನು ಕಳೆದ ಕಾರಣ, ಈ ಕಿಯಾ SUV ಯಲ್ಲಿ ಇರುವ 5 ಅನುಕೂಲತೆಗಳನ್ನು ನಾವು ಗುರುತಿಸಿದ್ದು, ನೀವು ಈ ಕೆಳಗೆ ವೀಕ್ಷಿಸಬಹುದಾದ ನಮ್ಮ ಹೊಸ ರೀಲ್ ನಲ್ಲಿ ಅವುಗಳನ್ನು ವಿವರಿಸಲಾಗಿದೆ.
ಇವುಗಳಲ್ಲಿ ಕೆಲವು ನಾಜೂಕಾದ ವೈಶಿಷ್ಟ್ಯಗಳಾಗಿದ್ದು, ರೀಲ್ ಗಳಲ್ಲಿ ನಾವು ಉಲ್ಲೇಖಿಸಿಲ್ಲ. ಆದರೆ ಈ ಕೆಳಗೆ ಅವುಗಳ ವಿವರಗಳನ್ನು ನೀವು ನೋಡಬಹುದು:
ʻಕೂಲ್ʼ ಟಚ್ ನೊಂದಿಗೆ ವೈರ್ ಲೆಸ್ ಫೋನ್ ಚಾರ್ಜಿಂಗ್
ಅಚ್ಚರಿಯ ವಿಷಯವೆಂದರೆ, ಪರಿಷ್ಕೃತ ವಾಹನದ ಪಾಲಿಗೆ ಇದೇನೂ ಹೊಸ ವೈಶಿಷ್ಟ್ಯವಲ್ಲ. ಹಳೆಯ ಸೆಲ್ಟೋಸ್ ಕಾರುಗಳಲ್ಲಿಯೂ ಇದನ್ನು ಕಾಣಬಹುದು. ಆದರೆ 2023 ಸೆಲ್ಟೋಸ್ SUV ಯಲ್ಲಿ ಇದನ್ನು HTX+ ವೇರಿಯಂಟ್ ನಿಂದ ಈ ವಿಶೇಷತೆಯನ್ನು ಒದಗಿಸಲಾಗುತ್ತಿದ್ದು, ಈ ಕಾರಿನ ಬೆಲೆಯು ರೂ. 18.30 ಲಕ್ಷದಿಂದ ಪ್ರಾರಂಭವಾಗುತ್ತದೆ.
- ನಿಮ್ಮ ಯಾವುದೇ ಟ್ರಾಫಿಕ್ ಚಲನ್ ನ ಪಾವತಿ ಬಾಕಿ ಇದ್ದರೆ ಇಲ್ಲಿ ಪರಿಶೀಲಿಸಿ.
ಸೆಂಟರ್ ಕನ್ಸೋಲ್ ನಲ್ಲಿ ತಂಬೂರ್ ಕವರ್
ಪರಿಷ್ಕೃತ ಸೆಲ್ಟೋಸ್ SUV ಕಾರಿಗೆ ಮಾಡಿರುವ ಒಂದು ಸಣ್ಣಪುಟ್ಟ ಸೇರ್ಪಡೆ ಎಂದರೆ, ಸೆಂಟರ್ ಕನ್ಸೋಲ್ ಸ್ಟೋರೇಜ್ ಸ್ಥಳಕ್ಕೆ ತಂಬೂರ್ ಸ್ಲೈಡಿಂಗ್ ಕವರ್ ಅನ್ನು ನೀಡಿರುವುದು. ಇದು ಎರಡು ಉದ್ದೇಶಗಳನ್ನು ಈಡೇರಿಸುತ್ತದೆ: ಮೊದಲನೆಯದಾಗಿ ಅದು ನಿಮ್ಮ ಬೆಲೆಬಾಳುವ ವಸ್ತುಗಳನ್ನು ಅಡಗಿಸಿಡುತ್ತದೆ ಮತ್ತು ಎರಡನೆಯದಾಗಿ ಧೂಳು ಮತ್ತು ಕೊಳೆಯು ಸ್ಟೋರೇಜ್ ಕಂಪಾರ್ಟ್ ಮೆಂಟ್ ಗೆ ನುಸುಳದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಈ ಸ್ಟೋರೇಜ್ ಅನ್ನು ಕಪ್ ಹೋಲ್ಡರ್ ಆಗಿ ಪರಿವರ್ತಿಸಬಲ್ಲದ ರಿಮೋವೇಬಲ್ ಪ್ಲಾಸ್ಟಿಕ್ ಡಿವೈಡರ್ ಅನ್ನು ಇದು ಪಡೆದಿದೆ.
ಅಟೋ ಅಪ್/ಡೌನ್ ಜೊತೆಗೆ ಎಲ್ಲಾ ಪವರ್ ವಿಂಡೋಗಳು
ಈ ಹಿಂದೆ ಫೋಕ್ಸ್ ವ್ಯಾಗನ್ ಪೋಲೋ ಮುಂತಾದ ವಾಹನಗಳಲ್ಲಿ ಎಲ್ಲಾ ನಾಲ್ಕು ಕಿಟಕಿಗಳಿಗೆ ವನ್ ಟಚ್ ಅಪ್ ಡೌನ್ ನಂತಹ ಸರಳ ಮತ್ತು ಉಪಯುಕ್ತ ವೈಶಿಷ್ಟ್ಯಗಳು ಇದ್ದವು. ಆದರೆ ಕಾಲ ಬದಲಾಗಿದ್ದು, ಕಾರು ತಯಾರಕ ಸಂಸ್ಥೆಗಳು ಈಗ ದೊಡ್ಡದಾದ ಸುದ್ದಿಯನ್ನು ಮಾಡುವ ತಂತ್ರಜ್ಞಾನದ ಮೇಲೆ ಮಾತ್ರವೇ ಗಮನ ನೀಡುತ್ತವೆ. ಹೀಗಾಗಿ ಈ ಸಣ್ಣಪುಟ್ಟ ಅನುಕೂಲತೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ ಕಿಯಾ ಸೆಲ್ಟೋಸ್ ನಲ್ಲಿ ಈಗ ʻಅಟೋ ಅಪ್/ಡೌನ್ ಮತ್ತು ಆ್ಯಂಟಿ - ಪಿಂಚ್ ವೈಶಿಷ್ಟ್ಯವನ್ನು ಹೊಂದಿರುವ ಎಲ್ಲಾ ಪವರ್ ವಿಂಡೋಗಳನ್ನುʼ ನೀಡಲಾಗಿದ್ದು, ಸದ್ಯಕ್ಕೆ ಭಾರತದಲ್ಲಿ ಇಂತಹ ವಿಶೇಷತೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ SUV ಇದಾಗಿದೆ. ಇದು HTX ಟ್ರಿಮ್ ಗಿಂತ ಮೇಲಿನ ಮತ್ತು ಟಾಪ್ ಸ್ಪೆಕ್ GTX ವೇರಿಯಂಟ್ ಗಿಂತ ಕೆಳಗಿನ ವೇರಿಯಂಟ್ ನಲ್ಲಿ ಲಭ್ಯ.
ಇದನ್ನು ಸಹ ಓದಿರಿ: ಹೊಸ ಗೂಗಲ್ ಮ್ಯಾಪ್ಸ್ ಪರಿಷ್ಕರಣೆಯು ನಿಮ್ಮ ಪ್ರಯಾಣಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಲು ಸಹಾಯ ಮಾಡಲಿದೆ
ಸ್ಮಾರ್ಟ್ ಕೀ ಮೂಲಕ ರಿಮೋಟ್ ಸ್ಟಾರ್ಟ್/ಸ್ಟಾಪ್
ಕ್ಯಾಬಿನ್ ಪ್ರಿಕೂಲಿಂಗ್ ಜತೆಗೆ ರಿಮೋಟ್ ಎಂಜಿನ್ ಸ್ಟಾರ್ಟ್ ಮಾಡುವುದು ಮಾಸ್ ಸೆಗ್ಮೆಂಟ್ ಗಳಲ್ಲಿ ಪ್ರೀಮಿಯಂ ಆಫರಿಂಗ್ ಗಳಲ್ಲಿ ಪ್ರಮುಖ ವೈಶಿಷ್ಟ್ಯವೆನಿಸಿದೆ. ಕಿಯಾ ಸೆಲ್ಟೋಸ್ ಕಾರಿನಲ್ಲಿ ನೀವು ಇದನ್ನು ಸ್ಮಾರ್ಟ್ ಕೀ ಬಳಸಿ ಮಾಡಬಹುದು. ಇದನ್ನು ಈ SUV ಯ ಮಿಡ್ ಸ್ಪೆಕ್ HTK+ ವೇರಿಯಂಟ್ ನಲ್ಲಿ ನೀಡಲಾಗಿದ್ದು, ವಾಹನಕ್ಕೆ ಪ್ರವೇಶಿಸುವ ಮೊದಲೇ ಕ್ಲೈಮೇಟ್ ಕಂಟ್ರೋಲ್ ಅನ್ನು ದೂರದಿಂದಲೇ ಸಕ್ರಿಯಗೊಳಿಸಲು ಇದನ್ನು ಬಳಸಬಹುದು. ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿರುವ ವೇಳೆ ಇದನ್ನು ಬಳಸಬಹುದಾಗಿದೆ.
ಡ್ರೈವರ್ ಪಕ್ಕದ ಸೀಟ್ ಬ್ಯಾಕ್ ನಲ್ಲಿ ಮೌಲ್ಡೆಡ್ ಪ್ಲಾಸ್ಟಿಕ್
ಕಾರು ಪ್ರಯಾಣಿಕರಿಂದ ತುಂಬಿದ್ದಾಗ ಚಾಲಕನು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ, ಚಾಲಕನ ಹಿಂದೆಯೇ ಕುಳಿತಿರುವ ಪ್ರಯಾಣಿಕನು ಚಾಲಕನ ಸೀಟಿಗೆ ಮೊಣಕಾಲನ್ನು ತಾಗಿಸುವುದು. ಚಾಲಕನಿಗೆ ಉಂಟಾಗುವ ಅನನುಕೂಲತೆಯನ್ನು ತಗ್ಗಿಸುವುದಕ್ಕಾಗಿ, ಹಿಂದಿನ ಪ್ರಯಾಣಿಕನಿಗೆ ಮೊಣಕಾಲನ್ನು ಚಾಚಲು ಸಿಗುವ ಸ್ಥಳವನ್ನು ಕಡಿಮೆ ಮಾಡದೆಯೇ ಚಾಲಕನ ಸೀಟಿನ ಹಿಂದುಗಡೆಗೆ ಮೌಲ್ಡೆಡ್ ಪ್ಲಾಸ್ಟಿಕ್ ಕವರ್ ಅನ್ನು ಕಿಯಾ ಸಂಸ್ಥೆಯು ಅಳವಡಿಸಿದೆ.
ಸೆಲ್ಟೋಸ್ ಎಂಜಿನ್ ವಿವರಗಳು
ಕಿಯಾ ಸಂಸ್ಥೆಯು ಸೆಲ್ಟೋಸ್ ಕಾರನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಹೊರತರುತ್ತಿದೆ. ಪ್ರತಿ ಎಂಜಿನ್ ಸಹ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನ ಆಯ್ಕೆಯನ್ನು ಹೊಂದಿದ್ದು, ಇದು ಟಾರ್ಕ್ ಕನ್ವರ್ಟರ್ ಮತ್ತು ಡ್ಯುವಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ (DCT) ಅನ್ನು ಹೊಂದಿದೆ.
ಇದನ್ನು ಸಹ ನೋಡಿರಿ: ಈ ನವೆಂಬರ್ ತಿಂಗಳಿನಲ್ಲಿ ನೀವು ನೋಡಬಹುದಾದ 5 ಕಾರುಗಳಿವು
ಕಿಯಾ ಸೆಲ್ಟೋಸ್ ಕಾರಿನ ಬೆಲೆಗಳು
ಹೊಸ ಕಿಯಾ ಸೆಲ್ಟೋಸ್ ವಾಹನವು ರೂ. 10.90 ಲಕ್ಷದಿಂದ ರೂ. 20.30 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಇದು ಹೋಂಡಾ ಎಲೆವೇಟ್, ಹ್ಯುಂಡೈ ಕ್ರೆಟಾ, ಮಾರುತಿ ಗ್ರಾಂಡ್ ವಿಟಾರ, ಸ್ಕೋಡಾ ಕುಶಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ ವ್ಯಾಗನ್ ಟೈಗುನ್, MG ಆಸ್ಟರ್, ಮತ್ತು ಸಿಟ್ರನ್ C3 ಏರ್ ಕ್ರಾಸ್ ಜೊತೆಗೆ ಸ್ಪರ್ಧಿಸುತ್ತಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೆಲ್ಟೋಸ್ ಅಟೋಮ್ಯಾಟಿಕ್
0 out of 0 found this helpful