Login or Register ಅತ್ಯುತ್ತಮ CarDekho experience ಗೆ
Login

ಹೋಂಡಾದ ಎಲಿವೇಟ್ ಎಸ್‌ಯುವಿಯಿಂದ ನೀವು ನಿರೀಕ್ಷಿಸಬಹುದಾದ 5 ವಿಷಯಗಳು

ಹೊಂಡಾ ಇಲೆವಟ್ ಗಾಗಿ rohit ಮೂಲಕ ಮೇ 12, 2023 03:48 pm ರಂದು ಪ್ರಕಟಿಸಲಾಗಿದೆ

ಜೂನ್‌ನಲ್ಲಿ ಅನಾವರಣಗೊಳ್ಳಲಿರುವ ಈ ಎಲಿವೇಟ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ

ಹೋಂಡಾ ಎಲಿವೇಟ್ ಸದ್ಯದಲ್ಲಿಯೇ ಭಾರತೀಯ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಲಿದೆ. ಹೋಂಡಾ ಶೀಘ್ರದಲ್ಲಿಯೇ ಈ ಎಸ್‌ಯುವಿ ಅನ್ನು ಅನಾವರಣಗೊಳಿಸಲಿದ್ದು, ಇದು ಜೂನ್‌ನಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮುಂಬರುವ ಹ್ಯುಂಡೈ ಕ್ರೆಟಾದ ಪ್ರತಿಸ್ಪರ್ಧಿಯ ಕುರಿತು ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ:

ಸಂಪೂರ್ಣವಾಗಿ ಒಂದು ಹೊಸ ವಿನ್ಯಾಸ

ಈ ಎಸ್‌ಯುವಿಯ ಪರೀಕ್ಷಾರ್ಥ ಕಾರುಗಳ ಕೆಲವೊಂದು ದೃಶ್ಯಗಳು ಅದರ ಟೀಸರ್‌ನ ಚಿತ್ರವು, ಇದು ಈಗಾಗಲೇ ದೊಡ್ಡ ಗ್ರಿಲ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಫಾಗ್‌ಲ್ಯಾಂಪ್‌ಗಳನ್ನು ಹೊಂದಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತವೆ. ಈ ಎಲಿವೇಟ್ ಗಟ್ಟಿಮುಟ್ಟಾದ ವ್ಹೀಲ್ ಆರ್ಚ್‌ಗಳು, ರೂಫ್ ರೈಲ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿರುತ್ತದೆ. ಇದರ ಹೆಸರನ್ನು ಬಹಿರಂಗಪಡಿಸುವ ಟೀಸರ್‌ ಈ ಎಸ್‌ಯವಿ ಅದರ ಟೈಲ್‌ಗೇಟ್‌ನಲ್ಲಿ “ಎಲಿವೇಟ್” ಬ್ಯಾಡ್ಜ್ ಅನ್ನು ಹೊಂದಿದೆ ಎಂದು ಸೂಚಿಸುತ್ತದೆ.

ಒಳಭಾಗದಲ್ಲಿ ಪ್ರೀಮಿಯಂ

ಸಿಟಿಯ ನಮ್ಮ ಅನುಭವದ ಪ್ರಕಾರ, ಈ ಎಲಿವೇಟ್ ಎಸ್‌ಯುವಿಯ ಕ್ಯಾಬಿನ್ ಸಹ ಪ್ರೀಮಿಯಂ ಅನುಭವವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲಾ ಟಚ್‌ ಪಾಯಿಂಟ್‌ಗಳಲ್ಲಿ ಗುಣಮಟ್ಟದ ವಸ್ತುಗಳನ್ನು ಹೊಂದಿರುವುದರ ಜೊತೆಗೆ ಇಂಟೀರಿಯರ್‌ನಾದ್ಯಂತ ಮತ್ತು ಮೇಲ್ಗವಸಿನಲ್ಲಿ ಎರಡು-ಮೂರು ಬಣ್ಣದ ಸಂಯೋಜನೆಯನ್ನು ಕಾಣಬಹುದು.

ಇದನ್ನೂ ಓದಿ: ಆಧುನಿಕ ಎಂಜಿನ್ ಬ್ರೇಕ್-ಇನ್ ವಿಧಾನಗಳ ಸುತ್ತಲಿನ ಮಿಥ್ಯಗಳನ್ನು ಮತ್ತು ವಿಧಾನಗಳನ್ನು ಪತ್ತೆಹಚ್ಚುವಿಕೆ

ಸಂಪೂರ್ಣ ಫೀಚರ್‌-ಭರಿತ

ಹೋಂಡಾ ತನ್ನ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ವೈರ್‌ಲೆಸ್ ಫೋನ್ ಚಾರ್ಜಿಂಗ್, ಸಿಂಗಲ್-ಪೇನ್ ಸನ್‌ರೂಫ್, ಸಿಟಿಯಲ್ಲಿರುವುದಕ್ಕಿಂತ ದೊಡ್ಡ ಟಚ್‌ಸ್ಕ್ರೀನ್, ವೇಂಟಿಲೇಟೆಡ್ ಮುಂಭಾಗದ ಸೀಟುಗಳು, ಡಿಜಿಟಲ್ ಡ್ರೈವಲ್ ಡಿಸ್‌ಪ್ಲೇ ತರಹದ ಪ್ರೀಮಿಯಂ ಫೀಚರ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಿದ್ದೇವೆ.

ಸುರಕ್ಷತೆಯ ದೃಷ್ಟಿಯಿಂದ, ಈ ಎಲಿವೇಟ್ 360-ಡಿಗ್ರಿ ಕ್ಯಾಮರಾ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್, ಮತ್ತು ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಹೊಂದಿರಬಹುದು.

ಇದು “ಪೆಟ್ರೋಲ್-ಮಾತ್ರ” ಆಯ್ಕೆಯನ್ನು ಹೊಂದಿರುತ್ತದೆ

ಹೋಂಡಾ ಎಲಿವೇಟ್ ಎಸ್‌ಯುವಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಸಿವಿಟಿ ಆಯ್ಕೆಗಳ ಜೊತೆಗೆ ತನ್ನ ಸಿಟಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ (121PS and 145Nm) ಅನ್ನು ಒದಗಿಸುವ ಸಾಧ್ಯತೆಯಿದೆ. ಸಿಟಿ ಹೈಬ್ರಿಡ್‌ನ 126PS ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಇತರ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳಂತೆಯೇ ಇದರಲ್ಲಿ ಯಾವುದೇ ಡಿಸೇಲ್ ಆಯ್ಕೆಗಳಿಲ್ಲ.

ಇದನ್ನೂ ಓದಿ: ನಿಮ್ಮ ಕಾರ್‌ಡ್ಯಾಶ್‌ಬೋರ್ಡ್‌ನಲ್ಲಿ ನೀವು ತಿಳಿದಿರಬೇಕಾದ 10 ಎಚ್ಚರಿಕೆ ಸೂಚನೆಗಳು

ಇದರ ಬೆಲೆ ಎಷ್ಟು ?

ಈ ಹೋಂಡಾ ಎಲಿವೇಟ್ ರೂ. 11 ಲಕ್ಷದಿಂದ (ಎಕ್ಸ್‌-ಶೋರೂಮ್) ಬೆಲೆಯನ್ನು ಹೊಂದಿರಬಹುದಾಗಿದ್ದು ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಸಿಟ್ರಾನ್ C3 ಏರ್‌ಕ್ರಾಸ್, ಸ್ಕೋಡಾ ಕುಶಾಕ್, ಟೊಯೋಟಾ ಹೈರೈಡರ್, ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

Share via

Write your Comment on Honda ಇಲೆವಟ್

R
rsubba rao
May 9, 2023, 4:20:47 PM

The car length is to be equal or a little more than creta and seltas. If it is sub four meters or even 4.2 meters also it can't compete with creta and seltas.

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ