ನಡೆಯುತ್ತಿದೆ 5-ಡೋರ್ ಫೋರ್ಸ್ ಗುರ್ಖಾ ಮೇಲೆ ಪರೀಕ್ಷೆ ಹಾಗು ಒಳಗೊಂಡಿದೆ ಹೊಸ ಇಲೆಕ್ಟ್ರಾನಿಕ್ 4WD ಶಿಫ್ಟರ್
ಬಲ ಗೂರ್ಖಾ 5 ಡೋರ್ ಗಾಗಿ rohit ಮೂಲಕ ಜೂನ್ 13, 2023 02:00 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಫೋರ್ಸ್ ತನ್ನ SUV ಅನ್ನು ರೂ 16 ಲಕ್ಷ (ಎಕ್ಸ್-ಶೋರೂಂ) ನಿರೀಕ್ಷಿತ ಬೆಲೆಯಲ್ಲಿ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
-
2022ರ ಪ್ರಾರಂಭದಿಂದಲೂ, ಪೋರ್ಸ್ ಉದ್ದ ವ್ಹೀಲ್‌ಬೇಸ್‌ನ ಗುರ್ಖಾವನ್ನು ಪರೀಕ್ಷಿಸುತ್ತಿದೆ.
-
ಇತ್ತೀಚಿನ ಪರೀಕ್ಷಾರ್ಥ ಕಾರನ್ನು ಸಂಪೂರ್ಣವಾಗಿ ದಪ್ಪನೆಯ ಕವರ್ ಮಾಡಲಾಗಿತ್ತು.
-
4-ವ್ಹೀಲ್ ಡ್ರೈವ್ ಟ್ರೇನ್ ಮತ್ತು ಕೊನೆಯ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟುಗಳಿಗೆ ಶಿಫ್ಟ್-ಆನ್-ಫ್ಲೈ ಕಂಟ್ರೋಲರ್ ದೊರೆಯುತ್ತದೆ.
-
ಪಟ್ಟಿಯಲ್ಲಿರುವ ಫೀಚರ್‌ಗಳು 7-ಇಂಚು ಟಚ್‌ಸ್ಕ್ರೀನ್, ಮ್ಯಾನುವಲ್ AC, ಇದರೊಂದಿಗೆ ಅನೇಕ ವೆಂಟ್‌ಗಳು ಮತ್ತು ಪವರ್ ವಿಂಡೋಗಳು ಇರಬಹುದೆಂದು ನಿರೀಕ್ಷಿಸಲಾಗಿದೆ.
-
3-ಡೋರ್ ಮಾಡೆಲ್‌ನಂತೆಯೇ, 2.6-ಲೀಟರ್ ಡೀಸೆಲ್ ಇಂಜಿನ್‌ನಿಂದ ಚಾಲಿತವಾಗಿರಲಿದೆ.
ಈ 5-ಡೋರ್ ಫೋರ್ಸ್ ಗುರ್ಖಾದ ಪರೀಕ್ಷಾರ್ಥ ಕಾರು 2022ರಿಂದಲೇ ಕೆಲವೊಂದು ಬಾರಿ ಕಾಣಿಸಿಕೊಂಡಿದೆ. ಈಗ, ಈ ಆಫ್-ರೋಡರ್‌ನ ಸ್ಪೈ ಚಿತ್ರಗಳ ಮತ್ತೊಂದು ಗುಚ್ಛವು ಇನ್ನಷ್ಟು ವಿವರಗಳೊಂದಿಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಏನೇನು ಕಾಣುತ್ತದೆ?
5-ಡೋರ್ ಗುರ್ಖಾದ ಕೆಲವು ಯೂನಿಟ್‌ಗಳು ಈಗಾಗಲೇ ಡೀಲರ್‌ಶಿಪ್‌ಗಳಿಗೆ ಬಂದಿಳಿದಿವೆಯಾದರೂ, ಸಂಪೂರ್ಣವಾಗಿ ಮುಚ್ಚಿದ ಮಾಡೆಲ್ ಇತ್ತೀಚೆಗೆ ರಸ್ತೆಯಲ್ಲಿ ಕಂಡಿದ್ದು ಫೋರ್ಸ್ ಇದನ್ನು ಇನ್ನೂ ಅಭಿವೃದ್ಧಿಪಡಿಸುತ್ತಿರುವಂತೆ ಕಾಣುತ್ತಿದೆ. ಹಿಂದೆ ನೋಡಲಾದ ಪರಿಕ್ಷಾರ್ಥ ಕಾರುಗಳಲ್ಲಿ ಇದ್ದಂತೆಯೇ ಇರುವ ಸ್ನೋರ್‌ಕೆಲ್ ಮತ್ತು ದೊಡ್ಡದಾದ 5-ಸ್ಪೋಕ್ 18 ಇಂಚು ಅಲಾಯ್ ವ್ಹೀಲ್‌ಗಳನ್ನೇ ಇದು ಹೊಂದಿದೆ. ಈ ಗುರುತಿಸಲಾದ 5-ಡೋರ್ ಗುರ್ಖಾ ಮೇಕ್‌ಶಿಫ್ಟ್ ಫೋರ್ಸ್ ಸಿಟಿಲೈನ್ ಹೆಡ್‌ಲೈಟುಗಳನ್ನು ಹೊಂದಿದ್ದರೆ ಉತ್ಪಾದನಾ-ಸ್ಪೆಕ್ ಮಾಡೆಲ್ ವೃತ್ತಾಕಾರದ ಪ್ರಾಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ LED DRLಗಳನ್ನು ಹೊಂದಿದೆ. ಹಿಂಭಾಗದಲ್ಲಿ, 3-ಡೋರ್ ಗುರ್ಖಾದಲ್ಲಿರುವಂತೆ ಟೇಲ್-ಗೇಟ್‌ನಲ್ಲಿ ಮೌಂಟ್ ಮಾಡಲಾದ ಸ್ಪೇರ್‌ವ್ಹೀಲ್ ಹೊಂದುವುದರೊಂದಿಗೆ ತನ್ನ ಡಿಸೈನ್ ಅಂಶಗಳನ್ನು ಪೂರ್ಣಗೊಳಿಸಿದೆ.
ಹೊಸ ಸ್ಪೈ ಶಾಟ್‌ಗಳ ಬಗ್ಗೆ ಆಸಕ್ತಿಕರವಾಗಿ ಕಂಡಿದ್ದೆಂದರೆ, 4-ವ್ಹೀಲ್ ಡ್ರೈವ್ ಟ್ರೇನ್ (4WD)ಗೆ ರೆಡ್‌ವನ್ ಕಂಟ್ರೋಲರ್. 3-ಡೋರ್ ಗುರ್ಖಾದಲ್ಲಿ 4WDಗೆ ಮ್ಯಾನುವಲ್ ಲಿವರ್ ಇದ್ದು, ಇದಕ್ಕೆ ಭಿನ್ನವಾಗಿ ಈ SUVಯಲ್ಲಿ ಉದ್ದದ ಬೇಸ್ ಆವೃತ್ತಿಯನ್ನು ನೀಡಲಾಗುತ್ತಿದ್ದು ಇದರ ಜೊತೆಗೆ 4WD ಸಿಸ್ಟಮ್ ಕಾರ್ಯಾಚರಣೆಗೆ ಸೆಂಟರ್ ಕನ್ಸೋಲ್‌ನಲ್ಲಿ ಇಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ ರೊಟೇಟರ್ ಅನ್ನು ನೀಡಲಾಗಿದೆ.
ಸಂಬಂಧಿತ: ಫೋರ್ಸ್ ಬಹುಶಃ ಗುರ್ಖಾ ಲೈನ್ಅಪ್‌ನಲ್ಲಿ ಅನೇಕ ಮಾಡೆಲ್‌ಗಳನ್ನು ವಿಸ್ತರಿಸಲಿದೆ
ಕ್ಯಾಬಿನ್ ಮತ್ತು ಉಪಕರಣಗಳು
ಹಿಂದಿನ ಸ್ಪೈ ಚಿತ್ರಗಳಲ್ಲಿ ಇರುವಂತೆ, 5-ಡೋರ್ ಗುರ್ಖಾ ಡಾರ್ಕ್ ಗ್ರೇ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ. ಈ 5-ಡೋರ್ ಗುರ್ಖಾ 3-ಸಾಲಿನ ಆಫರಿಂಗ್ ಆಗಿರಲಿದೆ ಮತ್ತು ಇದರೊಂದಿಗೆ ಎರಡನೇ ಮತ್ತು ಮೂರನೇ ಸಾಲಿನಲ್ಲಿ ಅನುಕ್ರಮವಾಗಿ ಬೆಂಚ್ ಮತ್ತು ಕ್ಯಾಪ್ಟನ್ ಸೀಟುಗಳು ಇರಲಿವೆ.
ಸಲಕರಣೆಗಳ ವಿಷಯಕ್ಕೆ ಬಂದರೆ, ಫೋರ್ಸ್ 5-ಡೋರ್ ಗುರ್ಖಾಗೆ 7-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಮುಂಭಾಗದ ಮತ್ತು ಹಿಂದಿನ ಪವರ್ ವಿಂಡೋಗಳು ಮತ್ತು ಅನೇಕ ವೆಂಟ್‌ಗಳೊಂದಿಗೆ ಮ್ಯಾನುವಲ್ AC ಅನ್ನು ಹೊಂದಿರಬಹುದು. ಇದರ ಸುರಕ್ಷತಾ ಸೌಲಭ್ಯವು ಎರಡು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
ಪವರ್‌ಟ್ರೇನ್ ವಿವರಗಳು
ಈ 5-ಡೋರ್ ಗುರ್ಖಾಗೆ 3-ಡೋರ್ ಮಾಡೆಲ್‌ನಲ್ಲಿ ನೀಡಿದಂತೆ, 2.6-ಲೀಟರ್ ಡೀಸೆಲ್ ಇಂಜಿನ್ (90PS/250Nm) ಅನ್ನು ನೀಡಲಾಗಿದ್ದು ಇನ್ನೂ ಬಹುಶಃ ಸುಧಾರಿತ ಟ್ಯೂನ್‌ನಲ್ಲಿರಬಹುದು. ಅದೇ ಮಾದರಿಯ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ವ್ಹೀಲ್ ಡ್ರೈವ್ ಟ್ರೈನ್ ಅನ್ನು ಪಡೆದಿರುವ ನಿರಿಕ್ಷೆ ಇದೆ.
ಇದನ್ನೂ ಓದಿ: ಫೋರ್ಸ್ ಗುರ್ಖಾ ಪಿಕಪ್ ಪರೀಕ್ಷೆಯ ಸ್ಪೈ, ಬಿಡುಗಡೆ ಶೀಘ್ರದಲ್ಲಿ
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
5-ಡೋರ್ ಗುರ್ಖಾ ಈ ವರ್ಷದ ಯಾವುದಾದರೂ ಹಬ್ಬದ ಸಂದರ್ಭದಲ್ಲಿ ರೂ.16 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಬಹುದೆಂಬುದು ನಮ್ಮ ನಿರೀಕ್ಷೆ ಇದೆ. ಮುಂಬರುವ 5-ಡೋರ್ ಮಹೀಂದ್ರಾ ಥಾರ್ ಇದರ ಏಕೈಕ ನೇರ ಪ್ರತಿಸ್ಪರ್ಧಿ. ಅಲ್ಲದೇ ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಜಿಮ್ನಿಗಿಂತ ಇದು ದುಬಾರಿ ಆಯ್ಕೆಯಾಗಿರಲಿದೆ.
ಇನ್ನಷ್ಟು ಓದಿ : ಗುರ್ಖಾ ಡೀಸೆಲ್