• English
  • Login / Register

ಮಾರುತಿ ಜಿಮ್ನಿ ತರಹದ ಫೀಚರ್‌ನೊಂದಿಗೆ ಪುನಃ ಕಂಡುಬಂದ 5-ಡೋರ್ ಮಹೀಂದ್ರಾ ಥಾರ್

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ rohit ಮೂಲಕ ಮೇ 25, 2023 02:00 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ವಿಡೀಯೋವು ಇನ್ನು ಬಹಿರಂಗಪಡಿಸದ ಆಫ್‌ರೋಡರ್ ಅನ್ನು ತೋರಿಸುತ್ತಿದ್ದು ಇದು ಬೂಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹಿಂದೆ ಹಿಂಬದಿ ವೈಪರ್ ಅನ್ನು ಹೊಂದಿದೆ

5-door Mahindra Thar spied

  •   5-ಡೋರ್ ಮಹೀಂದ್ರಾ ಥಾರ್‌ನ ಪರೀಕ್ಷೆಯು 2022 ರಿಂದ ನಡೆಯುತ್ತಿದೆ.  
  •  ಇತ್ತೀಚಿನ ಸ್ಪೈಡ್ ವೀಡಿಯೋ ಇದು ಬಹುತೇಕ ಉತ್ಪಾದನೆಗೆ ಸಿದ್ಧವಾಗಿದೆ ಎಂಬುದನ್ನು ತಿಳಿಸುತ್ತದೆ, ಎಲ್‌ಇಡಿ ಟೈಲ್‌ಲೈಟ್‌ಗಳು, ರನ್ನಿಂಗ್ ಬೋರ್ಡ್‌ಗಳು ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿರುತ್ತದೆ.
  •  ನಿರೀಕ್ಷಿತ ಫೀಚರ್‌ಗಳಲ್ಲಿ 8-ಇಂಚಿನ ಟಚ್‌ಸ್ಕೀನ್, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
  •  ಮಹೀಂದ್ರಾ ಇದನ್ನು 3-ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳೊಂದಿಗೆ ನೀಡುತ್ತದೆ.
  • 2024 ರ ಆರಂಭದಲ್ಲಿ ರೂ.15 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್‌-ಶೋರೂಮ್) ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 ಒಂದು ವರ್ಷದ ಹಿಂದೆ ಈ 5-ಡೋರ್ ಮಹೀಂದ್ರಾ ಥಾರ್ ಅನ್ನು ಪರೀಕ್ಷಿಸುವ ಸಮಯದಲ್ಲಿ ಮೊದಲು ಸ್ಪೈ ಮಾಡಲಾಗಿದೆ. ಇದನ್ನು ಬಹಿರಂಗಪಡಿಸುವಿಕೆಗೆ ನಾವು ಕಾಯುತ್ತಿರುವಾಗ, ಈ ಎಸ್‌ಯುವಿಯ ಮತ್ತೊಂದು ಸ್ಪೈ ವೀಡಿಯೋ ಇದೀಗ ಕಂಡುಬಂದಿದೆ, ಇದು 5-ಡೋರ್ ಆಫ್‌ರೋಡರ್‌ನ ಹೆಚ್ಚು ಉತ್ಪಾದನೆಗೆ ಸಿದ್ಧವಾದ ಆವೃತ್ತಿಯ ಸುಳಿವು ನೀಡುತ್ತದೆ.

ಸ್ಪಷ್ಟ ವಿವರಗಳು

5-door Mahindra Thar spied

ಇತ್ತೀಚೆಗೆ ಸ್ಪೈ ಮಾಡಲಾದ ಪರೀಕ್ಷಾರ್ಥ ಕಾರು ಉತ್ಪಾದನೆಗೆ ಸಿದ್ಧವಾಗಿರುವ ಎಲ್‌ಇಡಿ ಟೈಲ್‌ಲೈಟ್‌ಗಳು, ಬಾಡಿ ಪ್ಯಾನೆಲ್‌ಗಳು, ಅಲಾಯ್ ವ್ಹೀಲ್‌ಗಳು ಮತ್ತು ರನ್ನಿಂಗ್ ಬೋರ್ಡ್‌ಗಳೊಂದಿಗೆ ಕಂಡುಬಂದಿದೆ. ಇದರಲ್ಲಿ ಒಂದು ಕುತೂಹಲಕಾರಿ ಅಂಶವೆಂದರೆ ಇದು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವ್ಹೀಲ್‌ನ ಹಿಂದೆ ಹಿಂಭಾಗದ ವೈಪರ್ ಅನ್ನು ಹೊಂದಿದ್ದು, ನಿಖರವಾಗಿ 5-ಡೋರ್ ಮಾರುತಿ ಜಿಮ್ನಿಯಂತೆಯೇ ಕಂಡುಬರುತ್ತದೆ.

 

ಈ ಹಿಂದೆ ಕಂಡುಬಂದ ವಿವರಗಳು

5 door Mahindra Thar

 ಇದು ಸಿ-ಪಿಲ್ಲರ್-ಮೌಂಟೆಡ್ ಹಿಂಬದಿಯ ಡೋರ್ ಹ್ಯಾಂಡಲ್‌ಗಳನ್ನು (ಮಾರುತಿ ಸ್ವಿಫ್ಟ್‌ನಂತೆಯೇ) ಪಡೆಯಲಿದೆ ಎಂದು ಈ ಮೊದಲು ಸ್ಪೈ ಮಾಡಲಾದ ಚಿತ್ರಗಳು ಹೇಳುತ್ತವೆ. ಈ 5-ಡೋರ್ ಥಾರ್ 3-ಡೋರ್ ಮಾಡೆಲ್‌ನಲ್ಲಿ ಕಂಡುಬರುವಂತೆ ವೃತ್ತಾಕಾರದ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಬರಲಿದೆ.

ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ ಪೆಟ್ರೋಲ್ – ಇಂಧನ ದಕ್ಷತೆ ಅಂಕಿಅಂಶಗಳ ಹೋಲಿಕೆ

 

ಕ್ಯಾಬಿನ್ ಮತ್ತು ಫೀಚರ್‌ಗಳು

 5-ಡೋರ್ ಥಾರ್‌ನ ಇಂಟೀರಿಯರ್ ಕುರಿತು ಯಾವುದೇ ಸ್ಪಷ್ಟ ಚಿತ್ರಗಳಿಲ್ಲದಿದ್ದರೂ, ಈ ಹಿಂದೆ ಕಂಡುಬಂದಂತೆ ಮಹೀಂದ್ರಾ ಸಂರೂರ್ಣ ಕಪ್ಪು ಕ್ಯಾಬಿನ್‌ನೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಕಾರು ತಯಾರಕರು, ನಾಲ್ಕು, ಐದು ಮತ್ತು ಏಳು ಆಸನಗಳೊಂದಿಗೆ ಬಹು ಆಸನ ಸಂರಚನೆಯಲ್ಲಿ ಉದ್ದವಾದ ವ್ಹೀಲ್‌ಬೇಸ್ ಥಾರ್ ಅನ್ನು ಸಹ ನೀಡಬಹುದು.

 ಇದರಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋ ಎಸಿ, ಆರು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮರಾ ಮತ್ತು ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಗಳನ್ನು ನಾವು ಕಾಣಬಹುದು. 3-ಡೋರ್ ಥಾರ್‌ನ 4WD ವೇರಿಯೆಂಟ್‌ಗಳಲ್ಲಿ ಕಂಡುಬರುವಂತೆ ಇದು ಮಹೀಂದ್ರಾದ ಆಫ್-ರೋಡಿಂಗ್ ಇಂಟರ್‌ಫೇಸ್ ಅನ್ನುನೀಡುತ್ತದೆ.

 

 ಪವರ್‌ಟ್ರೇನ್ ಆಯ್ಕೆಗಳ ರೇಂಜ್

Mahindra Thar diesel engine

ಈ 5-ಡೋರ್ ಥಾರ್ ಈಗಾಗಲೇ ಅಸ್ತಿತ್ವದಲ್ಲಿರುವ 3-ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಜೊತೆಗೆ ಬರುತ್ತದೆಯಾದರೂ ಹೆಚ್ಚಿನ ಔಟ್‌ಪುಟ್ ಅಂಕಿಅಂಶಗಳನ್ನು ಹೊಂದಿದೆ. 3-ಡೋರ್ ಮಾದರಿಯಲ್ಲಿ, 2-ಲೀಟರ್ ಟರ್ಬೋ-ಪೆಟ್ರೋಲ್ 150PS ಅನ್ನು ಹೊರಹಾಕುತ್ತದೆ, 2.2-ಲೀಟರ್ ಡಿಸೇಲ್ ಅನ್ನು  130PS ನಲ್ಲಿ ರೇಟ್ ಮಾಡಲಾಗಿದೆ. ಪ್ರಸ್ತುತ ಮಾದರಿಯೊಂದಿಗೆ ಇತ್ತೀಚಿಗೆ ನೋಡಿದಂತೆ ಮಹೀಂದ್ರಾ 2WD ವೇರಿಯೆಂಟ್‌ಗಳ ಆಯ್ಕೆಯೊಂದಿಗೆ ಈ ಥಾರ್ ಅನ್ನು ನೀಡುವ ನಿರೀಕ್ಷೆಯಿದೆ. ಈ ಕಾರುತಯಾರಕರು ಈ ಎಸ್‌ಯುವಿಯನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎರಡರಲ್ಲೂ ಸಜ್ಜುಗೊಳಿಸಿದ್ದಾರೆ.

 

 ಇದು ಯಾವಾಗ ಬಿಡುಗಡೆಯಾಗಬಹುದು?

 ಮಹೀಂದ್ರಾ 2024ರ ಆರಂಭದಲ್ಲಿ ರೂ. 15 ಲಕ್ಷ (ಎಕ್ಸ್‌-ಶೋರೂಮ್) ಆರಂಭಿಕ ಬೆಲೆಯಲ್ಲಿ ದೀರ್ಘವಾದ ವ್ಹೀಲ್‌ಬೇಸ್ ಆಫ್‌ರೋಡರ್ ಅನ್ನು ಪರಿಚಯಿಸಬಹುದು. ವ್ಹೀಲ್‌ಬೇಸ್‌ಗೆ ಸಂಬಂಧಿಸಿದಂತೆ, ಇದು ಮುಂಬರುವ ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಬಹುದು ಮತ್ತು  ಫೋರ್ಸ್ ಗೂರ್ಖಾದ 5-ಡೋರ್ ಪುನರಾವರ್ತನೆಗೆ ಸಮನಾಗಿರುತ್ತದೆ.

 

ಚಿತ್ರ ಕೃಪೆ

ಇನ್ನಷ್ಟು ಇಲ್ಲಿ ಓದಿ : ಥಾರ್ ಡಿಸೇಲ್

 

 

 

was this article helpful ?

Write your Comment on Mahindra ಥಾರ್‌ ROXX

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience