Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಜಿಮ್ನಿ ತರಹದ ಫೀಚರ್‌ನೊಂದಿಗೆ ಪುನಃ ಕಂಡುಬಂದ 5-ಡೋರ್ ಮಹೀಂದ್ರಾ ಥಾರ್

ಮೇ 25, 2023 02:00 pm ರಂದು rohit ಮೂಲಕ ಪ್ರಕಟಿಸಲಾಗಿದೆ
21 Views

ಈ ವಿಡೀಯೋವು ಇನ್ನು ಬಹಿರಂಗಪಡಿಸದ ಆಫ್‌ರೋಡರ್ ಅನ್ನು ತೋರಿಸುತ್ತಿದ್ದು ಇದು ಬೂಟ್ ಮೌಂಟೆಡ್ ಸ್ಪೇರ್ ವ್ಹೀಲ್ ಹಿಂದೆ ಹಿಂಬದಿ ವೈಪರ್ ಅನ್ನು ಹೊಂದಿದೆ

  • 5-ಡೋರ್ ಮಹೀಂದ್ರಾ ಥಾರ್‌ನ ಪರೀಕ್ಷೆಯು 2022 ರಿಂದ ನಡೆಯುತ್ತಿದೆ.
  • ಇತ್ತೀಚಿನ ಸ್ಪೈಡ್ ವೀಡಿಯೋ ಇದು ಬಹುತೇಕ ಉತ್ಪಾದನೆಗೆ ಸಿದ್ಧವಾಗಿದೆ ಎಂಬುದನ್ನು ತಿಳಿಸುತ್ತದೆ, ಎಲ್‌ಇಡಿ ಟೈಲ್‌ಲೈಟ್‌ಗಳು, ರನ್ನಿಂಗ್ ಬೋರ್ಡ್‌ಗಳು ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿರುತ್ತದೆ.
  • ನಿರೀಕ್ಷಿತ ಫೀಚರ್‌ಗಳಲ್ಲಿ 8-ಇಂಚಿನ ಟಚ್‌ಸ್ಕೀನ್, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
  • ಮಹೀಂದ್ರಾ ಇದನ್ನು 3-ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳೊಂದಿಗೆ ನೀಡುತ್ತದೆ.
  • 2024 ರ ಆರಂಭದಲ್ಲಿ ರೂ.15 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್‌-ಶೋರೂಮ್) ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಒಂದು ವರ್ಷದ ಹಿಂದೆ ಈ 5-ಡೋರ್ ಮಹೀಂದ್ರಾ ಥಾರ್ ಅನ್ನು ಪರೀಕ್ಷಿಸುವ ಸಮಯದಲ್ಲಿ ಮೊದಲು ಸ್ಪೈ ಮಾಡಲಾಗಿದೆ. ಇದನ್ನು ಬಹಿರಂಗಪಡಿಸುವಿಕೆಗೆ ನಾವು ಕಾಯುತ್ತಿರುವಾಗ, ಈ ಎಸ್‌ಯುವಿಯ ಮತ್ತೊಂದು ಸ್ಪೈ ವೀಡಿಯೋ ಇದೀಗ ಕಂಡುಬಂದಿದೆ, ಇದು 5-ಡೋರ್ ಆಫ್‌ರೋಡರ್‌ನ ಹೆಚ್ಚು ಉತ್ಪಾದನೆಗೆ ಸಿದ್ಧವಾದ ಆವೃತ್ತಿಯ ಸುಳಿವು ನೀಡುತ್ತದೆ.

ಸ್ಪಷ್ಟ ವಿವರಗಳು

ಇತ್ತೀಚೆಗೆ ಸ್ಪೈ ಮಾಡಲಾದ ಪರೀಕ್ಷಾರ್ಥ ಕಾರು ಉತ್ಪಾದನೆಗೆ ಸಿದ್ಧವಾಗಿರುವ ಎಲ್‌ಇಡಿ ಟೈಲ್‌ಲೈಟ್‌ಗಳು, ಬಾಡಿ ಪ್ಯಾನೆಲ್‌ಗಳು, ಅಲಾಯ್ ವ್ಹೀಲ್‌ಗಳು ಮತ್ತು ರನ್ನಿಂಗ್ ಬೋರ್ಡ್‌ಗಳೊಂದಿಗೆ ಕಂಡುಬಂದಿದೆ. ಇದರಲ್ಲಿ ಒಂದು ಕುತೂಹಲಕಾರಿ ಅಂಶವೆಂದರೆ ಇದು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವ್ಹೀಲ್‌ನ ಹಿಂದೆ ಹಿಂಭಾಗದ ವೈಪರ್ ಅನ್ನು ಹೊಂದಿದ್ದು, ನಿಖರವಾಗಿ 5-ಡೋರ್ ಮಾರುತಿ ಜಿಮ್ನಿಯಂತೆಯೇ ಕಂಡುಬರುತ್ತದೆ.

ಈ ಹಿಂದೆ ಕಂಡುಬಂದ ವಿವರಗಳು

ಇದು ಸಿ-ಪಿಲ್ಲರ್-ಮೌಂಟೆಡ್ ಹಿಂಬದಿಯ ಡೋರ್ ಹ್ಯಾಂಡಲ್‌ಗಳನ್ನು (ಮಾರುತಿ ಸ್ವಿಫ್ಟ್‌ನಂತೆಯೇ) ಪಡೆಯಲಿದೆ ಎಂದು ಈ ಮೊದಲು ಸ್ಪೈ ಮಾಡಲಾದ ಚಿತ್ರಗಳು ಹೇಳುತ್ತವೆ. ಈ 5-ಡೋರ್ ಥಾರ್ 3-ಡೋರ್ ಮಾಡೆಲ್‌ನಲ್ಲಿ ಕಂಡುಬರುವಂತೆ ವೃತ್ತಾಕಾರದ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಬರಲಿದೆ.

ಇದನ್ನೂ ಓದಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ ಪೆಟ್ರೋಲ್ – ಇಂಧನ ದಕ್ಷತೆ ಅಂಕಿಅಂಶಗಳ ಹೋಲಿಕೆ

ಕ್ಯಾಬಿನ್ ಮತ್ತು ಫೀಚರ್‌ಗಳು

5-ಡೋರ್ ಥಾರ್‌ನ ಇಂಟೀರಿಯರ್ ಕುರಿತು ಯಾವುದೇ ಸ್ಪಷ್ಟ ಚಿತ್ರಗಳಿಲ್ಲದಿದ್ದರೂ, ಈ ಹಿಂದೆ ಕಂಡುಬಂದಂತೆ ಮಹೀಂದ್ರಾ ಸಂರೂರ್ಣ ಕಪ್ಪು ಕ್ಯಾಬಿನ್‌ನೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಕಾರು ತಯಾರಕರು, ನಾಲ್ಕು, ಐದು ಮತ್ತು ಏಳು ಆಸನಗಳೊಂದಿಗೆ ಬಹು ಆಸನ ಸಂರಚನೆಯಲ್ಲಿ ಉದ್ದವಾದ ವ್ಹೀಲ್‌ಬೇಸ್ ಥಾರ್ ಅನ್ನು ಸಹ ನೀಡಬಹುದು.

ಇದರಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋ ಎಸಿ, ಆರು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮರಾ ಮತ್ತು ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಗಳನ್ನು ನಾವು ಕಾಣಬಹುದು. 3-ಡೋರ್ ಥಾರ್‌ನ 4WD ವೇರಿಯೆಂಟ್‌ಗಳಲ್ಲಿ ಕಂಡುಬರುವಂತೆ ಇದು ಮಹೀಂದ್ರಾದ ಆಫ್-ರೋಡಿಂಗ್ ಇಂಟರ್‌ಫೇಸ್ ಅನ್ನುನೀಡುತ್ತದೆ.

ಪವರ್‌ಟ್ರೇನ್ ಆಯ್ಕೆಗಳ ರೇಂಜ್

ಈ 5-ಡೋರ್ ಥಾರ್ ಈಗಾಗಲೇ ಅಸ್ತಿತ್ವದಲ್ಲಿರುವ 3-ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಜೊತೆಗೆ ಬರುತ್ತದೆಯಾದರೂ ಹೆಚ್ಚಿನ ಔಟ್‌ಪುಟ್ ಅಂಕಿಅಂಶಗಳನ್ನು ಹೊಂದಿದೆ. 3-ಡೋರ್ ಮಾದರಿಯಲ್ಲಿ, 2-ಲೀಟರ್ ಟರ್ಬೋ-ಪೆಟ್ರೋಲ್ 150PS ಅನ್ನು ಹೊರಹಾಕುತ್ತದೆ, 2.2-ಲೀಟರ್ ಡಿಸೇಲ್ ಅನ್ನು 130PS ನಲ್ಲಿ ರೇಟ್ ಮಾಡಲಾಗಿದೆ. ಪ್ರಸ್ತುತ ಮಾದರಿಯೊಂದಿಗೆ ಇತ್ತೀಚಿಗೆ ನೋಡಿದಂತೆ ಮಹೀಂದ್ರಾ 2WD ವೇರಿಯೆಂಟ್‌ಗಳ ಆಯ್ಕೆಯೊಂದಿಗೆ ಈ ಥಾರ್ ಅನ್ನು ನೀಡುವ ನಿರೀಕ್ಷೆಯಿದೆ. ಈ ಕಾರುತಯಾರಕರು ಈ ಎಸ್‌ಯುವಿಯನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎರಡರಲ್ಲೂ ಸಜ್ಜುಗೊಳಿಸಿದ್ದಾರೆ.

ಇದು ಯಾವಾಗ ಬಿಡುಗಡೆಯಾಗಬಹುದು?

ಮಹೀಂದ್ರಾ 2024ರ ಆರಂಭದಲ್ಲಿ ರೂ. 15 ಲಕ್ಷ (ಎಕ್ಸ್‌-ಶೋರೂಮ್) ಆರಂಭಿಕ ಬೆಲೆಯಲ್ಲಿ ದೀರ್ಘವಾದ ವ್ಹೀಲ್‌ಬೇಸ್ ಆಫ್‌ರೋಡರ್ ಅನ್ನು ಪರಿಚಯಿಸಬಹುದು. ವ್ಹೀಲ್‌ಬೇಸ್‌ಗೆ ಸಂಬಂಧಿಸಿದಂತೆ, ಇದು ಮುಂಬರುವ ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಬಹುದು ಮತ್ತು ಫೋರ್ಸ್ ಗೂರ್ಖಾದ 5-ಡೋರ್ ಪುನರಾವರ್ತನೆಗೆ ಸಮನಾಗಿರುತ್ತದೆ.

ಚಿತ್ರ ಕೃಪೆ

ಇನ್ನಷ್ಟು ಇಲ್ಲಿ ಓದಿ : ಥಾರ್ ಡಿಸೇಲ್

Share via

Write your Comment on Mahindra ಥಾರ್‌ ROXX

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.67.65 - 73.24 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.8.25 - 13.99 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ