Login or Register ಅತ್ಯುತ್ತಮ CarDekho experience ಗೆ
Login

2023 ರ ಹ್ಯುಂಡೈ ವರ್ನಾದಲ್ಲಿ ಕಂಡುಬಂದ 7 ಫೀಚರ್‌ಗಳನ್ನು ಹೊಸ ಕ್ರೆಟಾದಲ್ಲೂ ನಿರೀಕ್ಷಿಸಬಹುದು.

ಹುಂಡೈ ಕ್ರೆಟಾ ಗಾಗಿ tarun ಮೂಲಕ ಮಾರ್ಚ್‌ 27, 2023 07:58 pm ರಂದು ಪ್ರಕಟಿಸಲಾಗಿದೆ

ನವೀಕೃತ ಕ್ರೆಟಾ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಜಾಗತಿಕ ನವೀಕರಣಕ್ಕಿಂತ ಭಿನ್ನವಾಗಿರುತ್ತದೆ.

ಹೊಸ ಪೀಳಿಗೆಯ ಹ್ಯುಂಡೈ ವರ್ನಾ ಹಲವಾರು ವಿಭಾಗಗಳಲ್ಲಿ ಪ್ರಥಮ ಫೀಚರ್‌ಗಳನ್ನು ಹೊಂದಿದ್ದು, ಹೆಚ್ಚು ಶಕ್ತಿಶಾಲಿ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ವರ್ಧಿತ ಸುರಕ್ಷತಾ ಫೀಚರ್‌ಗಳನ್ನು ಹೊಂದುತ್ತದೆ. ಇದರ ಪ್ರತಿರೂಪವಾಗಿರುವ ಕ್ರೆಟಾ, ಅದೇ ರೀತಿಯ ಪ್ರೀಮಿಯಂ ಮಾದರಿಯಾಗಿ ಸ್ಥಾನ ಪಡೆದಿದೆ ಹಾಗೂ ಹೊಸ ನವೀಕರಣದೊಂದಿಗೆ ಮುಂದಿನ ವರ್ಷ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಪ್ರಸ್ತುತ ಪೀಳಿಗೆಯ ಕಾಂಪ್ಯಾಕ್ಟ್ ಎಸ್‌ಯುವಿ ಅನ್ನು 2020 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ನಂತರ ಯಾವುದೇ ಪ್ರಮುಖ ನವೀಕರಣಗಳನ್ನು ಪಡೆದಿರಲಿಲ್ಲ. ಅಂದಿನಿಂದ, ಈ ವಿಭಾಗದಲ್ಲಿ ಸ್ಪರ್ಧೆಯು ಕಠಿಣವಾಗಿದೆ ಮತ್ತು ಹೊಸ ವರ್ನಾ ಸೆಡಾನ್ ಅಲ್ಲಿ ಕಂಡುಬರುವಂತೆ ಗಮನಾರ್ಹ ಬದಲಾವಣೆಗಳು ಕ್ರೆಟಾಗೆ ಅಗತ್ಯವಿದೆ.

ಆದ್ದರಿಂದ, ನವೀಕೃತ ಕ್ರೆಟಾ ದಲ್ಲಿ ನಾವು ನಿರೀಕ್ಷಿಸುವ ಆರನೇ ಪೀಳಿಗೆಯ 7 ಫೀಚರ್‌ಗಳು ಇಲ್ಲಿವೆ:


ಹೊಸ ಟರ್ಬೋ ಪೆಟ್ರೋಲ್ ಎಂಜಿನ್

ಹೊಸ ವರ್ನಾ 160PS ಮತ್ತು 253Nm ಕಾರ್ಯಕ್ಷಮತೆಯನ್ನು ಕ್ಲೈಮ್ ಮಾಡುವ 1.5-ಲೀಟರ್ TGDi ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಅದೇ ರೀತಿಯ ಎಂಜಿನ್ ಈಗ ಅಲ್ಕಾಝರ್‌ನಲ್ಲಿಯೂ ಲಭ್ಯವಿರುತ್ತದೆ. ಬಹುಶಃ ಅದೇ ಆರು-ಸ್ಪೀಡ್ ಮ್ಯಾನ್ಯುವಲ್ ಮತ್ತು ಏಳು-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಇದು 2024 ರ ಕ್ರೆಟಾದಲ್ಲಿಯೂ ಸಹ ಲಭ್ಯವಿರುತ್ತದೆ. ಈ ಪವರ್‌ಟ್ರೇನ್ ಪ್ರಸ್ತುತ ಎಸ್‌ಯುವಿಯ 140PS 1.4-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಡಿಸಿಟಿ ಆಟೋಮ್ಯಾಟಿಕ್‌ನೊಂದಿಗೆ ಬದಲಾಯಿಸಲಾಗುತ್ತದೆ. ಹೊಸ ಟರ್ಬೋ-ಪೆಟ್ರೋಲ್ ಯೂನಿಟ್‌ನೊಂದಿಗೆ, ಸ್ಕೋಡಾ ಫೋಕ್ಸ್‌ವ್ಯಾಗನ್ ಜೋಡಿಗಿಂತ ಕ್ರೆಟಾ ಈ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿಯಾಗಲಿದೆ.

ಎಡಿಎಎಸ್

ಹ್ಯುಂಡೈ ಈಗ ಹೊಸ ವರ್ನಾದಲ್ಲಿ ADAS ಅನ್ನು ನೀಡುತ್ತಿದ್ದು, ಇದು ಕ್ರೆಟಾದಲ್ಲಿಯೂ ಮುಂದುವರಿಯುತ್ತದೆ. ಇದು ಆಟೋಮ್ಯಾಟಿಕ್ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಮುಂಭಾಗದ ಘರ್ಷಣೆ ತಪ್ಪಿಸುವಿಕೆ, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ, ಎಂಜಿ ಆಸ್ಟಾರ್ ರಾಡಾರ್ ಆಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಪಡೆಯುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಇದಾಗಿದೆ. ADAS ಕ್ರೆಟಾಗೆ ಅಸಾಧಾರಣ ಎನಿಸುವ ಫೀಚರ್ ಅಲ್ಲದಿದ್ದರೂ, ಸ್ಪರ್ಧೆಯಲ್ಲಿ ಇದು ಸಮಾನವಾಗಿ ನಿಲ್ಲುವಂತೆ ಮಾಡುತ್ತದೆ.

ಇದನ್ನೂ ಓದಿ: 9 ವಿಭಿನ್ನ ಶೇಡ್‌ಗಳಲ್ಲಿ ಖರೀದಿಸಬಹುದಾದ 2023 ಹ್ಯುಂಡೈ ವರ್ನಾ

ಸಂಯೋಜಿತ ಡ್ಯುಯಲ್ ಡಿಸ್‌ಪ್ಲೇಗಳು

ಹೊಸ ಹ್ಯುಂಡೈ ವರ್ನಾದಲ್ಲಿರುವಂತೆ ಕ್ರೆಟಾ ಈಗಾಗಲೇ 10.25-ಇಂಚಿನ ಇನ್‌ಫೊಟೈನ್‌ಮೆಂಟ್ ಟಚ್‌ಸ್ಕ್ರೀನ್‌ ಪಡೆದರೆ, ಇದು ಕ್ರೆಟಾದಲ್ಲಿನ ಸಂಯೋಜಿತ ಡ್ಯುಯಲ್ ಡಿಸ್‌ಪ್ಲೇಯನ್ನು ಸಹ ಪಡೆಯಬಹುದು. ಈ ಎಸ್‌ಯುವಿಯು ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನ ಬದಲಾಗಿ ವರ್ನಾದಲ್ಲಿ ನೀಡಲಾದ ಡಿಜಿಟೈಸ್ಡ್ ಕ್ಲಸ್ಟರ್ ಅಥವಾ ಅಲ್ಕಾಝರ್‌ನಲ್ಲಿರುವಂತೆ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯಬಹುದು.

ಬಿಸಿಯಾಗಬಹುದಾದ ಮತ್ತು ಮುಂಭಾಗದ ವೆಂಟಿಲೇಟೆಡ್ ಸೀಟುಗಳು

2024 ರ ಕ್ರೆಟಾದಲ್ಲಿ ವರ್ನಾದಲ್ಲಿರುವ ವಿಭಾಗದಲ್ಲಿಯೇ ಪ್ರಥಮ ಎನಿಸುವಂತಹ ಫೀಚರ್‌ಗಳನ್ನು ನಿರೀಕ್ಷಿಸಬಹುದು. ಕ್ರೆಟಾದ ಹೆಚ್ಚಿನ ಪ್ರತಿಸ್ಪರ್ಧಿಗಳು ಮುಂಭಾಗದ ವೆಂಟಿಲೇಟೆಡ್ ಸೀಟುಗಳನ್ನು ಪಡೆದಿದ್ದರೂ, ಬಿಸಿಯಾಗುವ ಕಾರ್ಯ ಈ ವಿಭಾಗಕ್ಕೆ ಮೊದಲನೆಯದಾಗಿದೆ.

ಸಂಪರ್ಕಿತ ಲೈಟ್‌ಗಳು

2024 ಕ್ರೆಟಾ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಪಡೆಯಲಿದೆ ಮತ್ತು ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿರುವ ನವೀಕೃತ ಆವೃತ್ತಿಯನ್ನು ಹೋಲುವುದಿಲ್ಲ ಎಂದು ನಾವು ಈಗಾಗಲೇ ವರದಿ ಮಾಡಿದ್ದೆವು. ಬದಲಾಗಿ, ಇಂಡಿಯಾ-ಸ್ಪೆಕ್ ಕ್ರೆಟಾ ನವೀಕೃತ ವರ್ನಾದಂತೆಯೇ ಸಂಪರ್ಕಿತ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಸಂಪರ್ಕಿತ ಲೈಟ್‌ಗಳು ಕಾರುತಯಾರಕರಲ್ಲಿ ಇತ್ತೀಚಿನ ಆಸಕ್ತಿಯಾಗಿದೆ ಮತ್ತು ಈ ದಿನಗಳಲ್ಲಿ ಅನೇಕ ವಿಭಾಗಗಳಾದ್ಯಂತ ಹಲವಾರು ಕಾರುಗಳಲ್ಲಿ ಇದನ್ನು ಕಾಣಬಹುದು.

ಇದನ್ನೂ ಓದಿ: ಟರ್ಬೋ ವೇರಿಯೆಂಟ್‌ಗಳಲ್ಲಿ ನೀಡಲಾದ ಹೊಸ ಹ್ಯುಂಡೈ ವರ್ನಾದ ಈ 5 ಪೀಚರ್‌ಗಳು

ಬದಲಾಯಿಸಬಹುದಾದ ಕಂಟ್ರೋಲ್‌ಗಳು

2023 ವರ್ನಾದ ಮತ್ತೊಂದು ವಿಶಿಷ್ಟ ಫೀಚರ್ ಎಂದರೆ ಬದಲಾಯಿಸಬಹುದಾದ ಕ್ಲೈಮೆಟ್ ಮತ್ತು ಇನ್‌ಫೊಟೈನ್‌ಮೆಂಟ್ ಕಂಟ್ರೋಲ್‌ಗಳು, ಹಾಗೂ ಇದನ್ನು ನಾವು ಕಿಯಾ EV6 ನಲ್ಲಿ ನೋಡಬಹುದಾಗಿದೆ. ಸ್ಪರ್ಶದಿಂದ ಸಕ್ರಿಯಗೊಳಿಸಬಹುದಾದ ಪ್ಯಾನಲ್ ಎಸಿ ನಿಯಂತ್ರಣಗಳನ್ನು ಹೊಂದಿದೆ ಮತ್ತು ಇದನ್ನು ಇನ್‌ಫೊಟೈನ್‌ಮೆಂಟ್ ಆಡಿಯೋ ಕಂಟ್ರೋಲ್‌ಗಳಿಗಾಗಿ ಬದಲಾಯಿಸಬಹುದು. ಹ್ಯುಂಡೈ ಕ್ರೆಟಾದಲ್ಲಿ ಮುಂದಿನ ದಿನಗಳಲ್ಲಿ ಬರಬಹುದಾದ ಅಂಶಗಳನ್ನು ಸಹ ನಿರೀಕ್ಷಿಸಲಾಗಿದೆ.

ಟರ್ಬೋ ವೇರಿಯೆಂಟ್‌ಗಳಿಗೆ ವಿಭಿನ್ನ ವಿನ್ಯಾಸ

ಹ್ಯುಂಡೈ ಕ್ರೆಟಾದ ಪ್ರಸ್ತುತ ಆವೃತ್ತಿಯು ಟರ್ಬೋ ಮತ್ತು ಸಾಮಾನ್ಯ ವೇರಿಯೆಂಟ್‌ಗಳ ನಡುವಿನ ಸೂಕ್ಷ್ಮ ವ್ಯತ್ಯಾಸದೊಂದಿಗೆ ಬರುತ್ತಿದೆ. ಟರ್ಬೋ ವೇರಿಯೆಂಟ್‌ಗಳು ಡ್ಯುಯಲ್ ಟಿಪ್ ಎಕ್ಸಾಸ್ಟ್‌ಗಳು, ಕೆಲವು ಬ್ಲ್ಯಾಕ್-ಔಟ್ ಎಲಿಮೆಂಟ್‌ಗಳು, ಮತ್ತು ಡ್ಯುಯಲ್ ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳನ್ನು ಪಡೆದಿರುವುದರಿಂದ ನೀವು ಅವುಗಳನ್ನು ಪ್ರತ್ಯೇಕಿಸಬಹುದು. ಆದಾಗ್ಯೂ, ಹ್ಯುಂಡೈ ಹೊಸ ವರ್ನಾದೊಂದಿಗೆ ವ್ಯತ್ಯಾಸವನ್ನು ಹೆಚ್ಚಿಸಿದೆ.

ವರ್ನಾದ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳು ಕೆಂಪು ಆ್ಯಕ್ಸೆಂಟ್‌ಗಳು, ಕಪ್ಪು ಅಲೋಯ್ ವ್ಹೀಲ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಐಚ್ಛಿಕ ಕಪ್ಪು ರೂಫ್‌ನೊಂದಿಗೆ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ನವೀಕೃತ ಕ್ರೆಟಾದ ಟರ್ಬೋ ವೇರಿಯೆಂಟ್‌ಗಳಿಗೂ ಇದೇ ರೀತಿಯ ವ್ಯತ್ಯಾಸಗಳನ್ನು ನಿರೀಕ್ಷಿಸಬಹುದು.

ಹ್ಯುಂಡೈ 2024 ರ ಮೊದಲಾರ್ಧದಲ್ಲಿ ನವೀಕೃತ ಕ್ರೆಟಾವನ್ನು ಬಿಡುಗಡೆಗೊಳಿಸಲಿದೆ. ಸೆಡಾನ್ ಮತ್ತು ಎಸ್‌ಯುವಿ ನಡುವಿನ ಒಂದು ದೊಡ್ಡ ವ್ಯತ್ಯಾಸವೆಂದರೆ ಎರಡನೆಯದು ಡಿಸೇಲ್ ಎಂಜಿನ್ ಆಯ್ಕೆಯನ್ನು ಉಳಿಸಿಕೊಳ್ಳುತ್ತದೆ. ಹೊಸ ಹ್ಯುಂಡೈ ವರ್ನಾದ ಬೆಲೆ ರೂ. 10.90 ಲಕ್ಷದಿಂದ ರೂ 17.38 ಲಕ್ಷದವರೆಗಿದ್ದರೆ, ಇಂದಿನ ಕ್ರೆಟಾ ರೂ. 10.84 ಲಕ್ಷ ಮತ್ತು ರೂ.19.13 ಲಕ್ಷಗಳ (ಎಕ್ಸ್-ಶೋರೂಮ್) ನಡುವೆ ಮಾರಾಟವಾಗುತ್ತಿದೆ.

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಹ್ಯುಂಡೈ ವರ್ನಾ ಆನ್ ರೋಡ್ ಬೆಲೆ

Share via

Write your Comment on Hyundai ಕ್ರೆಟಾ

explore similar ಕಾರುಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.2.84 - 3.12 ಸಿಆರ್*
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.50 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ