Login or Register ಅತ್ಯುತ್ತಮ CarDekho experience ಗೆ
Login

2023 ಮುಗಿಯುವ ಮೊದಲೇ ನೀವು ಖರೀದಿಸಬಹುದಾದ 7 ಎಸ್‌ಯುವಿಗಳಿವು

published on ಡಿಸೆಂಬರ್ 15, 2023 01:03 pm by rohit for ರೆನಾಲ್ಟ್ ಕೈಗರ್

ಈ ಪಟ್ಟಿಯಲ್ಲಿ ರೆನೋ ಕೈಗರ್‌ ಕಾರು ಅತ್ಯಂತ ಅಗ್ಗದ ಕಾರು ಎನಿಸಿದರೆ MG ZS EV ರೂಪದಲ್ಲಿ ಒಂದು ಎಲೆಕ್ಟ್ರಿಕ್‌ SUV ಸಹ ಇಲ್ಲಿ ಕಾಣಿಸಿಕೊಂಡಿದೆ

ಹೊಸ ವರ್ಷವಾದ 2024 ಅನ್ನು ಸ್ವಾಗತಿಸಲು ಕೆಲವೇ ದಿನಗಳು ಉಳಿದಿರುವುದು ನಿಜ. ಹಾಗಂತ ನೀವು ಹೊಸ ಕಾರನ್ನು ಖರೀದಿಸಬಾರದು ಅಂತ ಏನಿಲ್ಲ. ನಿಮ್ಮಲ್ಲಿ ಅನೇಕರು 2023 ಮುಗಿಯುವ ಮೊದಲೇ ವಿವಿಧ ಕೊಡುಗೆಗಳ ಜೊತೆಗೆ ಕಾರನ್ನು ಖರೀದಿಸುವ ಯೋಚನೆ ಹೊಂದಿರಬಹುದು. ಆದರೆ ಈ ಡಿಸೆಂಬರ್‌ ತಿಂಗಳಿನಲ್ಲಿ ಭಾರತದ ಪ್ರಮುಖ ಎಂಟು ನಗರಗಳಲ್ಲಿ ಒಂದು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಕಾಯುವಿಕೆ ಅವಧಿಯೊಂದಿಗೆ ಕೆಲವೇ SUV ಗಳು ಲಭ್ಯ.

ಅಲ್ಲದೆ ಇವುಗಳಲ್ಲಿ ಹೆಚ್ಚಿನ SUV ಗಳ ಬೆಲೆಯಲ್ಲಿ 2024ರ ಜನವರಿ ತಿಂಗಳಿನಿಂದ ಏರಿಕೆ ಉಂಟಾಗಲಿದ್ದು, ಯಾವುದೇ ಹೆಚ್ಚುವರಿ ಮೊತ್ತ ಪಾವತಿಸದೆ ಇವುಗಳನ್ನು ಖರೀದಿಸಲು ಈ ತಿಂಗಳು ಸೂಕ್ತ. ಸರಿ, ನಾವೀಗ ಅದನ್ನು ಪರಿಶೀಲಿಸೋಣ.

ರೆನೋ ಕೈಗರ್

ಬೆಲೆ ಶ್ರೇಣಿ: ರೂ. 6.50 ಲಕ್ಷದಿಂದ ರೂ. 11.23 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ಪುಣೆ, ಚೆನ್ನೈ, ಜೈಪುರ, ಗುರುಗ್ರಾಮ, ಲಕ್ನೊ, ಥಾಣೆ, ಸೂರತ್‌, ಪಾಟ್ನಾ, ಮತ್ತು ನೋಯ್ಡಾ.

  • ರೆನೋ ಕೈಗರ್ ವಾಹನವು ಭಾರತದಲ್ಲಿ ಈ ಕಾರು ತಯಾರಕ ಸಂಸ್ಥೆಯು ಅತ್ಯಂತ ಅಗ್ಗದ SUV ಯಾಗಿದೆ.

  • ಕೈಗರ್‌ ಕಾರು ಪೆಟ್ರೋಲ್ ಎಂಜಿನ್‌ ಗಳ ಎರಡು ಆಯ್ಕೆಗಳೊಂದಿಗೆ ಬರಲಿದೆ: 1-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಯೂನಿಟ್ (72 PS/ 96 Nm) ಮತ್ತು 1‌ ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ (100 PS/ 160 Nm). ಎರಡೂ ಘಟಕಗಳನ್ನು ಪ್ರಮಾಣಿತವಾಗಿ 5 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗಿದೆ. ಮೊದಲನೆಯದ್ದನ್ನು ಐಚ್ಛಿಕ 5 ಸ್ಪೀಡ್ AMT‌ ಜೊತೆಗೆ ಪಡೆಯಬಹುದಾಗಿದ್ದು ಎರಡನೆಯದ್ದು CVT ಜೊತೆಗೆ ಬರುತ್ತದೆ.

  • ರೆನೋ ಸಂಸ್ಥೆಯು ಇದರಲ್ಲಿ 8 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ, 7 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೆ, ವೈರ್‌ ಲೆಸ್‌ ಫೋನ್‌ ಚಾರ್ಜರ್‌, ಮತ್ತು PM2.5 ಏರ್‌ ಪ್ಯೂರಿಫೈರ್‌ ಅನ್ನು ಅಳವಡಿಸಿದೆ. ಪ್ರಯಾಣಿಕರ ಸುರಕ್ಷತೆಗಾಗಿ 4 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ರಿಯರ್‌ ಪಾರ್ಕಿಂಗ್‌ ಕ್ಯಾಮರಾ, ಮತ್ತು ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS) ಅನ್ನು ನೀಡಲಾಗಿದೆ.

MG ಆಸ್ಟರ್‌

ಬೆಲೆ ಶ್ರೇಣಿ: ರೂ. 10.82 ಲಕ್ಷದಿಂದ ರೂ. 18.69 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ಬೆಂಗಳೂರು, ಮುಂಬೈ, ಹೈದರಾಬಾದ್‌, ಪುಣೆ, ಕೋಲ್ಕತಾ, ಗಾಜಿಯಾಬಾದ್‌, ಕೊಯಮತ್ತೂರು ಮತ್ತು ನೋಯ್ಡಾ

  • MG ಆಸ್ಟರ್‌ ವಾಹನವು ಭಾರತದಲ್ಲಿ ಈ ಕಾರು ತಯಾರಕ ಸಂಸ್ಥೆಯು ಅತ್ಯಂತ ಅಗ್ಗದ SUV ಯಾಗಿದೆ.

  • MG ಸಂಸ್ಥೆಯು ಆಸ್ಟರ್ ಅನ್ನು ಎಂಜಿನ್‌ ಗಳ ಎರಡು ಆಯ್ಕೆಗಳೊಂದಿಗೆ ಹೊರತರುತ್ತಿದೆ: 1.3-ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ (140 PS/ 220 Nm) ಮತ್ತು 1.5-ಲೀಟರ್‌ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ (110 PS/ 144 Nm). ಮೊದಲನೆಯದ್ದನ್ನು 6 ಸ್ಪೀಡ್‌ ಅಟೋಮ್ಯಾಟಿಕ್‌ ಜೊತೆಗೆ ಹೊಂದಿಸಿದರೆ ಎರಡನೆಯದ್ದು 6 ಸ್ಪೀಡ್‌ ಮ್ಯಾನುವಲ್‌ ಅಥವಾ CVT ಅಟೋಮ್ಯಾಟಿಕ್‌ ಜೊತೆಗೆ ಬರಲಿದೆ.

  • ಇದು 10 ಇಂಚಿನ ಟಚ್‌ ಸ್ಕ್ರೀನ್‌, ಪ್ಯಾನೊರಾಮಿಕ್‌ ಸನ್‌ ರೂಫ್‌ 6 ವೇ ಪವರ್ಡ್‌ ಡ್ರೈವರ್‌ ಸೀಟ್‌, ಆರರಷ್ಟು ಏರ್‌ ಬ್ಯಾಗ್‌ ಗಳು, ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಇತ್ಯಾದಿ ವೈಶಿಷ್ಟ್ಯತೆಗಳು ಮತ್ತು ಸುರಕ್ಷಾ ಸಾಧನಗಳನ್ನು ಹೊಂದಿದೆ.

ಸ್ಕೋಡಾ ಕುಶಕ್

ಬೆಲೆ ಶ್ರೇಣಿ: ರೂ. 10.89 ಲಕ್ಷದಿಂದ ರೂ. 20 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ನವದೆಹಲಿ, ಬೆಂಗಳೂರು, ಅಹ್ಮದಾಬಾದ್‌, ಗುರುಗ್ರಾಮ, ಕೋಲ್ಕತಾ, ಥಾಣೆ, ಸೂರತ್‌, ಗಾಜಿಯಾಬಾದ್‌, ಪಾಟ್ನಾ, ಮತ್ತು ಫರೀದಾಬಾದ್

  • ಸ್ಕೋಡಾ ಕುಶಕ್ ಕಾರು VW ಟೈಗುನ್‌ ನ ಪ್ಲಾಟ್‌ ಫಾರ್ಮ್‌ ದಾಯಾದಿ ಆಗಿದ್ದು, ಈ ಡಿಸೆಂಬರ್‌ ತಿಂಗಳಿನಲ್ಲಿ ನಿಖರವಾಗಿ ಭಾರತದ 10 ಪ್ರಮುಖ ನಗರಗಳಲ್ಲಿ ಸುಲಭವಾಗಿ ದೊರೆಯಲಿದೆ.

  • ಇದು ಎರಡು ಟರ್ಬೊ ಪೆಟ್ರೋಲ್‌ ಯೂನಿಟ್‌ ಗಳಲ್ಲಿ ಬರಲಿದೆ: ಮೊದಲನೆಯದ್ದು 1 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ (115 PS/178 Nm) ಮತ್ತು ಎರಡನೆಯದ್ದು 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಯೂನಿಟ್‌ (150 PS/250 Nm). ಎರಡರಲ್ಲೂ ಪ್ರಮಾಣಿತವಾಗಿ 6 ಸ್ಪೀಡ್‌ MT ದೊರೆತರೆ, ಮೊದಲನೆಯದ್ದು ಐಚ್ಛಿಕ 6 ಸ್ಪೀಡ್‌ AT ಯನ್ನು ಪಡೆಯಲಿದ್ದು ಎರಡನೆಯದ್ದು 7 ಸ್ಪೀಡ್ DCT‌ ಯೊಂದಿಗೆ ಬರಲಿದೆ.

  • ಕುಶಕ್‌ ವಾಹನವು 10 ಇಂಚಿನ ಟಚ್‌ ಸ್ಕ್ರೀನ್‌, ವೆಂಟಿಲೇಟೆಡ್‌ ಮತ್ತು ಪವರ್ಡ್‌ ಫ್ರಂಟ್‌ ಸೀಟ್‌ ಗಳು, 8 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಆರರಷ್ಟು ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ಮತ್ತು ರಿವರ್ಸಿಂಗ್‌ ಕ್ಯಾಮರಾ ಇತ್ಯಾದಿಗಳನ್ನು ಹೊಂದಿದೆ.

ಇದನ್ನು ಸಹ ಓದಿರಿ: ಭಾರತದ ಮತ್ತು ಆಸ್ಟ್ರೇಲಿಯಾದ 5 ಡೋರ್‌ ಮಾರುತಿ ಸುಜುಕಿ ಜಿಮ್ನಿ ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳು

ಫೋಕ್ಸ್‌ ವ್ಯಾಗನ್‌ ಟೈಗುನ್

ಬೆಲೆ ಶ್ರೇಣಿ: ರೂ. 11.62 ಲಕ್ಷದಿಂದ ರೂ. 19.46 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ಪುಣೆ, ಚೆನ್ನೈ, ಜೈಪುರ, ಅಹ್ಮದಾಬಾದ್‌, ಕೋಲ್ಕತಾ, ಥಾಣೆ, ಸೂರತ್‌, ಚಂಡೀಗಢ, ಪಾಟ್ನಾ, ಇಂದೋರ್ ಮತ್ತು ನೋಯ್ಡಾ.

  • ಫೋಕ್ಸ್‌ ವ್ಯಾಗನ್‌ ಟೈಗುನ್ ಜರ್ಮನಿಯ ಕಾರು ತಯಾರಕ ಸಂಸ್ಥೆಯ ಭಾರತೀಯ ವಾಹನಗಳ ಪಟ್ಟಿಯಲ್ಲಿ ಆರಂಭಿಕ ಹಂತದ SUV ಯಾಗಿದೆ.

  • ಫೋಕ್ಸ್‌ ವ್ಯಾಗನ್‌ ಸಂಸ್ಥೆಯು ಟೈಗುನ್‌ ನಲ್ಲಿ ಎರಡು ಟರ್ಬೊ ಪೆಟ್ರೋಲ್‌ ಎಂಜಿನ್‌ ಗಳನ್ನು ಒದಗಿಸುತ್ತದೆ: 1 ಲೀಟರ್‌ ಎಂಜಿನ್ (115 PS/178 Nm)‌ - ಇದನ್ನು 6 ಸ್ಪೀಡ್‌ ಮ್ಯಾನುವಲ್‌ ಅಥವಾ 6 ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗಿದೆ, ಮತ್ತು 1.5 ಲೀಟರ್‌ ಎಂಜಿನ್ (150 PS/250 Nm)‌ - ಇದನ್ನು 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅಥವಾ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್‌ ಜೊತೆಗೆ (DCT) ಹೊಂದಿಸಲಾಗಿದೆ.

  • ಇದರಲ್ಲಿ ಮುಖ್ಯವಾಗಿ 10 ಇಂಚಿನ ಟಚ್‌ ಸ್ಕ್ರೀನ್‌, ಸನ್‌ ರೂಫ್‌, ವೆಂಟಿಲೇಟೆಡ್‌ ಮತ್ತು ಪವರ್ಡ್‌ ಫ್ರಂಟ್‌ ಸೀಟುಗಳು, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ ಮತ್ತು ಆಂಬಿಲೆಂಟ್‌ ಲೈಟಿಂಗ್‌ ಅನ್ನು ಕಾಣಬಹುದು. ಫೋಕ್ಸ್‌ ವ್ಯಾಗನ್‌ ಸಂಸ್ಥೆಯು ಇದರಲ್ಲಿ ಆರರಷ್ಟು ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), TPMS ಮತ್ತು ರಿವರ್ಸಿಂಗ್‌ ಕ್ಯಾಮರಾ ಇತ್ಯಾದಿಗಳನ್ನು ನೀಡಿದೆ.

MG ZS EV

ಬೆಲೆ ಶ್ರೇಣಿ: ರೂ. 22.88 ಲಕ್ಷದಿಂದ ರೂ. 26 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ಬೆಂಗಳೂರು, ಮುಂಬೈ, ಹೈದರಾಬಾದ್‌, ಪುಣೆ, ಕೋಲ್ಕತಾ, ಗಾಜಿಯಾಬಾದ್‌, ಕೊಯಮತ್ತೂರು ಮತ್ತು ನೋಯ್ಡಾ

  • MG ZS Evಯು ಈ ಪಟ್ಟಿಯಲ್ಲಿರುವ ಈ ಕಾರು ತಯಾರಕ ಸಂಸ್ಥೆಯ ಎರಡನೇ SUV ಏಕೈಕ EV ಎನಿಸಿದೆ.

  • ಇದು ಎಲೆಕ್ಟ್ರಿಕ್‌ ಮೋಟರ್ (177 PS/280 Nm)‌ ಜೊತೆಗೆ 50.3 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಈ MG EV ಯು 461 km ನಷ್ಟು ವ್ಯಾಪ್ತಿಯನ್ನು ಹೊಂದಿದೆ.

  • MG ಸಂಸ್ಥೆಯು ಇದರಲ್ಲಿ 10 ಇಂಚಿನ ಟಚ್‌ ಸ್ಕ್ರೀನ್,‌ 7 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, 360 ಡಿಗ್ರಿ ಕ್ಯಾಮರಾ, ಆರು ಏರ್‌ ಬ್ಯಾಗ್‌ ಗಳು ಮತ್ತು ADAS ಇತ್ಯಾದಿ ಸೌಲಭ್ಯಗಳನ್ನು ನೀಡಿದೆ.

ಇದನ್ನು ಸಹ ನೋಡಿರಿ: ಹಳೆಯ ಕಾರುಗಳ ಮೌಲ್ಯಮಾಪನ

ಫಾಕ್ಸ್‌ ವ್ಯಾಗನ್‌ ಟೈಗುನ್

ಬೆಲೆ: ರೂ 35.17 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ಪುಣೆ, ಚೆನ್ನೈ, ಜೈಪುರ, ಅಹ್ಮದಾಬಾದ್‌, ಕೋಲ್ಕತಾ, ಥಾಣೆ, ಸೂರತ್‌, ಚಂಡೀಗಢ, ಪಾಟ್ನಾ, ಇಂದೋರ್ ಮತ್ತು ನೊಯ್ಡಾ.

  • ಫೋಕ್ಸ್‌ ವ್ಯಾಗನ್‌ ಟೈಗುನ್‌ ವಾಹನವು ಭಾರತದಲ್ಲಿ ಜರ್ಮನ್‌ ಕಾರು ತಯಾರಕ ಸಂಸ್ಥೆಯ ಅಗ್ರಗಣ್ಯ SUV ಎನಿಸಿದ್ದು ಪುಣೆ, ಕೋಲ್ಕತಾ, ಥಾಣೆ, ಸೂರತ್‌, ಮತ್ತು ನೋಯ್ಡಾದಲ್ಲಿ ತಕ್ಷಣವೇ ಮನೆಗೆ ಕೊಂಡೊಯ್ಯಬಹುದಾಗಿದೆ.

  • ಇದನ್ನು 2 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ (190 PS/320 Nm)‌ ಮೂಲಕ ಚಲಾಯಿಸಲಾಗುತ್ತಿದ್ದು, 7 ಸ್ಪೀಡ್ DCT‌ ಮೂಲಕ ಎಲ್ಲಾ ನಾಲ್ಕು ಚಕ್ರಗಳನ್ನು ಡ್ರೈವ್‌ ಮಾಡಬಹುದಾಗಿದೆ.

  • ಟೈಗುನ್‌ ವಾಹನವು 8 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ, ಚಾಲಕನ ಡಿಜಿಟಲ್‌ ಡಿಸ್ಪ್ಲೇ, 3 ಜೋನ್‌ ಕ್ಲೈಮೇಟ್‌ ಕಂಟ್ರೋಲ್, 6‌ ಏರ್‌ ಬ್ಯಾಗ್‌ ಗಳು, ESC, TPMS, ಮತ್ತು ರಿಯರ್‌ ಪಾರ್ಕಿಂಗ್‌ ಕ್ಯಾಮರಾವನ್ನು ಹೊಂದಿದೆ.

ಸ್ಕೋಡಾ ಕೊಡಿಯಾಕ್

ಬೆಲೆ ಶ್ರೇಣಿ: ರೂ. 38.50 ಲಕ್ಷದಿಂದ ರೂ. 39.99 ಲಕ್ಷ

2 ವಾರಗಳು ಅಥವಾ ಕಡಿಮೆ ಅವಧಿಯಲ್ಲಿ ಒದಗಿಸಲಿರುವ ನಗರಗಳು: ನವದೆಹಲಿ, ಬೆಂಗಳೂರು, ಅಹ್ಮದಾಬಾದ್‌, ಗುರುಗ್ರಾಮ, ಕೋಲ್ಕತಾ, ಥಾಣೆ, ಸೂರತ್‌, ಗಾಜಿಯಾಬಾದ್‌, ಪಾಟ್ನಾ, ಮತ್ತು ಫರೀದಾಬಾದ್

  • ಸ್ಕೋಡಾ ಕೊಡಿಯಾಕ್ ವಾಹನವು ಈ ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ಮತ್ತು ಏಕೈಕ 7 ಸೀಟರ್‌ SUV ಯಾಗಿದ್ದು ನವದೆಹಲಿ, ಬೆಂಗಳೂರು ಮತ್ತು ಪಾಟ್ನಾದಲ್ಲಿ 2 ವಾರಗಳ ಕಾಯುವಿಕೆಯ ಅವಧಿಯನ್ನು ಹೊಂದಿದೆ.

  • VW ಟೈಗುನ್‌ ಕಾರು ಹೊಂದಿರುವ ಪವರ್‌ ಟ್ರೇನ್‌ ಮೂಲಕವೇ ಇದರ ಪ್ರೊಪಲ್ಷನ್‌ ಕಾರ್ಯವು ನಡೆಯುತ್ತಿದ್ದು, ಇದು ಆಲ್‌ ವೀಲ್‌ ಡ್ರೈವ್‌ ಟ್ರೇನ್‌ (AWD) ಅನ್ನು ಸಹ ಹೊಂದಿದೆ.

  • ಇದರಲ್ಲಿ 8 ಇಂಚಿನ ಟಚ್‌ ಸ್ಕ್ರೀನ್‌, ಪ್ಯಾನೊರಾಮಿಕ್‌ ಸನ್‌ ರೂಫ್‌, 3 ಜೋನ್‌ ಕ್ಲೈಮೇಟ್‌ ಕಂಟ್ರೋಲ್‌, 360 ಡಿಗ್ರಿ ಕ್ಯಾಮರಾ, ಮತ್ತು ಒಂಬತ್ತು ಏರ್‌ ಬ್ಯಾಗ್‌ ಗಳನ್ನು ಕಾಣಬಹುದು.

ಗಮನಿಸಿ: ಆಯ್ದುಕೊಂಡ ವೇರಿಯಂಟ್‌ ಮತ್ತು ಬಣ್ಣವನ್ನು ಆಧರಿಸಿ ಹೊಸ ಕಾರಿನ ಡೆಲಿವರಿ ಸಮಯದಲ್ಲಿ ಬದಲಾವಣೆ ಉಂಟಾಗಬಹುದು. ಹೀಗಾಗಿ ನಿಖರವಾದ ಕಾಯುವಿಕೆ ಅವಧಿಯನ್ನು ತಿಳಿದುಕೊಳ್ಳುವುದಕ್ಕಾಗಿ ದಯವಿಟ್ಟು ನಿಮ್ಮ ಪಕ್ಕದ ಡೀಲರ್‌ ಅನ್ನು ಸಂಪರ್ಕಿಸಿರಿ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕೈಗರ್ AMT

r
ಅವರಿಂದ ಪ್ರಕಟಿಸಲಾಗಿದೆ

rohit

  • 44 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ರೆನಾಲ್ಟ್ ಕೈಗರ್

Read Full News

explore similar ಕಾರುಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ