Hyundai Exter ನ ಸನ್‌ರೂಫ್ ಗೆ ಜೈ ಎಂದ ಖರೀದಿದಾರರು ; ಈವರೆಗೆ 50,000 ಕ್ಕೂ ಹೆಚ್ಚು ಕಾರುಗಳಿಗೆ ಬುಕಿಂಗ್

modified on ಆಗಸ್ಟ್‌ 11, 2023 08:30 pm by tarun for ಹುಂಡೈ ಎಕ್ಸ್‌ಟರ್

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಕ್ಸ್‌ಟರ್‌ನ ಮಿಡ್-ಸ್ಪೆಕ್ SX ವೇರಿಯಂಟ್ ನಲ್ಲಿ ಸನ್‌ರೂಫ್ ಲಭ್ಯವಿದೆ, ಇದು ಈ ವೈಶಿಷ್ಟ್ಯದೊಂದಿಗೆ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ  ಒಂದಾಗಿದೆ 

Hyundai Exter

  • ಮೇ ಮೊದಲ ವಾರದಲ್ಲಿ ಬುಕಿಂಗ್‌ಗಳು  ಪ್ರಾರಂಭವಾದ ನಂತರದಿಂದ ಈವರೆಗೆ ಎಕ್ಸ್‌ಟರ್ ಸುಮಾರು 50,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.   
  •  ಬುಕಿಂಗ್ ನ 75% ನಷ್ಟು ಖರೀದಿದಾರರು ಸನ್‌ರೂಫ್ ವೇರಿಯಂಟ್ ಗಳಿಗಾಗಿ ಈ ಕಾರನ್ನು ಇಷ್ಟಪಟ್ಟಿದ್ದಾರೆ. 

  • ಸನ್‌ರೂಫ್ ಆಯ್ಕೆ ಮೂರು ಟಾಪ್-ಎಂಡ್ ಟ್ರಿಮ್‌ಗಳಲ್ಲಿ ಲಭ್ಯವಿದೆ, ಇದರ ಬೆಲೆಗಳು ರೂ 8 ಲಕ್ಷದಿಂದ ಪ್ರಾರಂಭವಾಗುತ್ತವೆ. 

  •  ಮೂರನೇ-ಒಂದು ಭಾಗದಷ್ಟು ಖರೀದಿದಾರರು AMT ವೇರಿಯಂಟ್ ಅನ್ನು ಆರಿಸಿಕೊಂಡಿದ್ದಾರೆ. ಇದರ ಬೆಲೆ ರೂ. 7.97 ಲಕ್ಷ ದಿಂದ ಪ್ರಾರಂಭವಾಗುತ್ತದೆ.

  •  ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು ಮತ್ತು ಡ್ಯೂಯಲ್ ಡ್ಯಾಶ್ ಕ್ಯಾಮ್‌ಗಳನ್ನು ಒಳಗೊಂಡಿದೆ. 

  •  ಇದರ ಎಕ್ಸ್ ಶೋರೂಮ್ ಬೆಲೆ ರೂ. 6 ಲಕ್ಷದಿಂದ ರೂ. 10 ಲಕ್ಷದವರೆಗೆ ಇದೆ

 ಮಾರುಕಟ್ಟೆಯಲ್ಲಿ ಇತ್ತೀಚಿನ ಮೈಕ್ರೋ ಎಸ್‌ಯುವಿ, ಹ್ಯುಂಡೈ ಎಕ್ಸ್‌ಟರ್ ಈಗ 50,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಇದರ ಬುಕಿಂಗ್‌ಗಳು ಮೇ ಮೊದಲ ವಾರದಲ್ಲಿ ಪ್ರಾರಂಭವಾಯಿತು ಮತ್ತು ಅದರ ಮಾರಾಟವು ಜೂಲೈ 10 ರಂದು ಪ್ರಾರಂಭವಾಯಿತು. ಬೇಬಿ ಹ್ಯುಂಡೈ ಎಸ್‌ಯುವಿ ರೂ. 6 ಲಕ್ಷದಿಂದ ರೂ. 10 ಲಕ್ಷದವರೆಗೆ (ಎಕ್ಸ್-ಶೋರೂಂ ದೆಹಲಿ) ಇರುತ್ತದೆ. 

 ಬೇಡಿಕೆಯಲ್ಲಿರುವ ಸನ್‌ರೂಫ್ ವೇರಿಯೆಂಟ್ ಗಳು

 75 ಪ್ರತಿಶತಕ್ಕೂ ಹೆಚ್ಚು ಖರೀದಿದಾರರು ಸನ್‌ರೂಫ್ ಅನ್ನು ಆರಿಸಿಕೊಂಡಿದ್ದಾರೆ ಎಂದು ಹ್ಯುಂಡೈ ಹೇಳಿದೆ, ಇದು ವೈಶಿಷ್ಟ್ಯದ ಜನಪ್ರಿಯತೆಯನ್ನು ತೋರಿಸುತ್ತದೆ. ಸಿಂಗಲ್-ಪೇನ್ ಎಲೆಕ್ಟ್ರಿಕ್ ಸನ್‌ರೂಫ್ ಅಗ್ರ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ, ಇದರ ಬೆಲೆ 8 ಲಕ್ಷ ರೂ. ಇದು ಸನ್‌ರೂಫ್ ಅನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಉಲ್ಲೇಖಕ್ಕಾಗಿ, ಎಕ್ಸ್‌ಟರ್ ಕೆಳಗಿನ ವೇರಿಯಂಟ್ ಗಳಲ್ಲಿ ಲಭ್ಯವಿದೆ: EX, S, SX, SX (O) ಮತ್ತು SX (O) ಕನೆಕ್ಟ್.

 ಈ ವೈಶಿಷ್ಟ್ಯವನ್ನು ಎಕ್ಸ್‌ಟರ್‌ನ ಸಿಎನ್‌ಜಿ ವೇರಿಯಂಟ್ ಗಳಲ್ಲಿ ಸಹ ನೀಡಲಾಗುತ್ತದೆ, ಇದರ ಬೆಲೆ 8.97 ಲಕ್ಷ ರೂ. ಇದು ಸಿಎನ್‌ಜಿ ಖರೀದಿದಾರರಿಗೆ ವೈಶಿಷ್ಟ್ಯ-ಭರಿತ ಅನುಭವವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. 

 ಇದನ್ನೂ ಓದಿರಿ: ಟಾಟಾ ಪಂಚ್ CNG Vs ಹುಂಡೈ ಎಕ್ಸ್ಟರ್ CNG - ನಿರ್ದಿಷ್ಟತೆ ಮತ್ತು ಬೆಲೆ ಹೋಲಿಕೆ

 

ಆಟೋಮ್ಯಾಟಿಕ್ ಆವೃತ್ತಿಗೂ ಹೆಚ್ಚಿನ ಡಿಮ್ಯಾಂಡ್

Hyundai Exter AMT

ಮೂರನೇ-ಒಂದು ಭಾಗದಷ್ಟು ಬುಕಿಂಗ್‌ಗಳು ಆಟೋಮ್ಯಾಟಿಕ್ ವೇರಿಯಂಟ್‌ಗಾಗಿ ನಡೆದಿವೆ. ಹ್ಯುಂಡೈ ಹ್ಯಾಚ್‌ಬ್ಯಾಕ್‌ನ ಸೆಕೆಂಡ್-ಫ್ರಾಮ್-ಬೇಸ್ ಎಸ್ ವೇರಿಯಂಟ್ ನಿಂದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಲಭ್ಯವಿರಲಿದೆ. ರೂ. 7.97 ಲಕ್ಷದ ಎಕ್ಸ್-ಶೋರೂಂ ಆರಂಭಿಕ ಬೆಲೆಯೊಂದಿಗೆ, ನೀವು ವಾಸ್ತವವಾಗಿ AMT-ಸಜ್ಜಿತ ವೇರಿಯಂಟ್ ಅನ್ನು ಸುಮಾರು ರೂ. 10 ಲಕ್ಷಕ್ಕೆ (ಆನ್ರೋಡ್-ರೋಡ್) ಪಡೆಯಬಹುದು. 

 ಎಕ್ಸ್‌ಟರ್ 1.2- ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಅದು 83PS ಮತ್ತು 114Nm ಅನ್ನು ಅಭಿವೃದ್ಧಿಪಡಿಸುತ್ತದೆ, ಆದರೆ ಇದು 5-ಸ್ಪೀಡ್ ಮ್ಯಾನುವಲ್ ಮತ್ತು AMT ಯುನಿಟ್‌ಗಳೊಂದಿಗೆ ಹೊಂದಿಯಾಗುತ್ತದೆ, ಎರಡನೆಯದು ಸುಲಭವಾಗಿ ಬದಲಾಯಿಸಲು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಬರುತ್ತದೆ. ಮ್ಯಾನುವಲ್ ವೇರಿಯಂಟ್ ಗಳು 19.2kmpl ಇಂಧನ ದಕ್ಷತೆಯನ್ನು ಕ್ಲೇಮ್ ಮಾಡುತ್ತವೆ ಆದರೆ AMT 19.4kmpl ಅನ್ನು ನೀಡುತ್ತದೆ. 

 ಇದರ CNG ಕೌಂಟರ್ಪಾರ್ಟ್ 27.1km/kg ನಷ್ಟು ಕ್ಲೇಮ್ದ್ ಮೈಲೇಜ್   ಹೊಂದಿರುವುದರೊಂದಿಗೆ 69PS ಮತ್ತು 95.2Nm ಅನ್ನು ಅಭಿವೃದ್ಧಿಪಡಿಸುತ್ತದೆ, 

ಹೆಚ್ಚಿನ ವೈಶಿಷ್ಟ್ಯಗಳು

Hyundai Exter Infotainment System

 ಹ್ಯುಂಡೈ ಎಕ್ಸ್‌ಟರ್ ಎಲೆಕ್ಟ್ರಿಕ್ ಸನ್‌ರೂಫ್, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಡಿಜಿಟೈಸ್ಡ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಕ್ರೂಸ್ ಅನ್ನು ಒಳಗೊಂಡಿದೆ. ಆರು ಏರ್‌ಬ್ಯಾಗ್‌ಗಳು, ಇಎಸ್‌ಸಿ, ಹಿಲ್ ಹೋಲ್ಡ್ ಅಸಿಸ್ಟ್, ಡ್ಯುಯಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರದಿಂದ ಸುರಕ್ಷತೆಯನ್ನು ಖಾತರಿಪಡಿಸಲಾಗಿದೆ. 

 ಇದನ್ನೂ ಓದಿರಿ: ಟಾಟಾ ಪಂಚ್‌ನ ವಿರುದ್ಧವಾಗಿ ಹ್ಯುಂಡೈ ಎಕ್ಸ್‌ಟರ್ ಈ 7 ವೈಶಿಷ್ಟ್ಯಗಳನ್ನು ಪಡೆಯುತ್ತದೆ

ಸ್ಪರ್ಧೆಯ ವಿಷಯದಲ್ಲಿ ಎಕ್ಸ್‌ಟರ್  ಟಾಟಾ ಪಂಚ್, ಮಾರುತಿ ಇಗ್ನಿಸ್ , ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಸಿಟ್ರೊಯೆನ್ C3 ಮತ್ತು ಮಾರುತಿ ಫ್ರಾಂಕ್ಸ್‌ಗಳೊಂದಿಗೆ  ಪ್ರತಿಸ್ಪರ್ಧಿಯಾಗಿದೆ.

 (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದೆಹಲಿ)

 ಇನ್ನಷ್ಟು ಓದಿರಿ: ಎಕ್ಸ್‌ಟರ್ ಆಟೋಮ್ಯಾಟಿಕ್ 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಎಕ್ಸ್‌ಟರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience