8 ಲಕ್ಷಕ್ಕಿಂತ ಕಡಿಮೆ ಬೆಲೆಯ CNG ಮೈಕ್ರೋ-ಎಸ್‌ಯುವಿಯನ್ನು ಹುಡುಕುತ್ತಿದ್ದಿರಾ? Hyundai Exter ಬೆಸ್ಟ್ ಆಯ್ಕೆ
EX ವೇರಿಯೆಂಟ್‌ನಲ್ಲಿ CNG ಸೇರ್ಪಡೆಯಿಂದಾಗಿ ಹ್ಯುಂಡೈ ಎಕ್ಸ್‌ಟರ್‌ನಲ್ಲಿ ಸಿಎನ್‌ಜಿ ಆಯ್ಕೆಯು 1.13 ಲಕ್ಷ ರೂ.ಗಳಷ್ಟು ಕೈಗೆಟುಕುವಂತಾಗಿದೆ
ಹ್ಯುಂಡೈ ಕಂಪನಿಯು ಎಕ್ಸ್‌ಟರ್‌ನ ಬೇಸ್ ಸ್ಪೆಕ್ ಟ್ರಿಮ್‌ಗೆ ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಪರಿಚಯಿಸಿದೆ. ಈ ಸೇರ್ಪಡೆಯಿಂದಾಗಿ ಮೈಕ್ರೋ ಎಸ್‌ಯುವಿಗಳ ಸಾಲಿನಲ್ಲಿ ಸಿಎನ್‌ಜಿ ಇಂಧನ ಆಯ್ಕೆಯನ್ನು ಈ ಹಿಂದೆಗಿಂತ 1.13 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿದೆ. ಇದು ಈಗ ಒಟ್ಟು ಐದು ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ವೇರಿಯೆಂಟ್‌ಗಳನ್ನು ಹೊಂದಿದೆ, ಅವುಗಳೆಂದರೆ S, S ಪ್ಲಸ್, SX, SX ನೈಟ್ ಮತ್ತು ಹೊಸದಾಗಿ ಸೇರಿಸಲಾದ EX. ಹೊಸದಾಗಿ ಸೇರಿಸಲಾದ EX ವೇರಿಯೆಂಟ್‌ನ ಜೊತೆಗೆ ಮೊದಲೇ ಅಸ್ತಿತ್ವದಲ್ಲಿರುವ CNG ವೇರಿಯೆಂಟ್‌ಗಳ ಬೆಲೆಗಳನ್ನು ಇಲ್ಲಿ ನೋಡೋಣ.
ವೇರಿಯೆಂಟ್ |
ಬೆಲೆ |
ಹೊಸ ಇಎಕ್ಸ್ ಡ್ಯೂಯಲ್ ಸಿಲಿಂಡರ್ |
7.50 ಲಕ್ಷ ರೂ. |
ಎಸ್ ಎಕ್ಸ್‌ಕ್ಯೂಟಿವ್ ಸಿಂಗಲ್ ಸಿಲಿಂಡರ್ |
8.55 ಲಕ್ಷ ರೂ. |
ಎಸ್ ಸಿಎನ್‌ಜಿ ಡ್ಯೂಯಲ್ ಸಿಲಿಂಡರ್ |
8.64 ಲಕ್ಷ ರೂ. |
ಎಸ್ ಪ್ಲಸ್ ಎಕ್ಸ್‌ಕ್ಯೂಟಿವ್ ಡ್ಯೂಯಲ್ ಸಿಲಿಂಡರ್ |
8.85 ಲಕ್ಷ ರೂ. |
ಎಸ್‌ಎಕ್ಸ್ ಸಿಂಗಲ್ ಸಿಲಿಂಡರ್ |
9.25 ಲಕ್ಷ ರೂ. |
ಎಸ್‌ಎಕ್ಸ್ ಡ್ಯೂಯಲ್ ಸಿಲಿಂಡರ್ |
9.33 ಲಕ್ಷ ರೂ. |
ಎಸ್‌ಎಕ್ಸ್ ನೈಟ್ ಡ್ಯೂಯಲ್ ಸಿಲಿಂಡರ್ |
9.48 ಲಕ್ಷ ರೂ. |
ಎಸ್‌ಎಕ್ಸ್ ಟೆಕ್ |
9.53 ಲಕ್ಷ ರೂ. |
ಹುಂಡೈ ಎಕ್ಸ್‌ಟರ್ ಅನ್ನು ಎರಡು ಸಿಎನ್‌ಜಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: ಸಿಂಗಲ್ ಸಿಲಿಂಡರ್ ಮತ್ತು ಡ್ಯುಯಲ್ ಸಿಲಿಂಡರ್. ಹೊಸ EX ವೇರಿಯೆಂಟ್‌ಅನ್ನು ಎರಡು ಸಿಲಿಂಡರ್ ತಂತ್ರಜ್ಞಾನದೊಂದಿಗೆ ನೀಡಲಾಗುತ್ತಿದ್ದು, ಈ ಮೂಲಕ ಸಿಎನ್‌ಜಿ ಆಯ್ಕೆಯ ಬೆಲೆಯಲ್ಲಿ 1.13 ಲಕ್ಷ ರೂ.ಗಳಷ್ಟು ಕಡಿತ ಆದಂತಾಗಿದೆ.
ಬೇಸ್ ಸ್ಪೆಕ್ ಇಎಕ್ಸ್ ವೇರಿಯಂಟ್‌ನ ಆಫರ್‌ನಲ್ಲಿರುವ ಎಲ್ಲವನ್ನೂ ನಾವು ನೋಡೋಣ:
ಫೀಚರ್‌ಗಳು ಮತ್ತು ಸುರಕ್ಷತೆ
ಹುಂಡೈ ಎಕ್ಸ್‌ಟರ್‌ನ ಬೇಸ್ ಟ್ರಿಮ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಬಾಡಿ-ಬಣ್ಣದ ಬಂಪರ್‌ಗಳು ಮತ್ತು ಕವರ್‌ಗಳಿಲ್ಲದ 14-ಇಂಚಿನ ಸ್ಟೀಲ್ ಚಕ್ರಗಳೊಂದಿಗೆ ಬರುತ್ತದೆ.
ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ಆಗಿರುವುದರಿಂದ, ಎಕ್ಸ್‌ಟರ್‌ನ EX ವೇರಿಯೆಂಟ್ ಸಿಂಗಲ್-ಸಿಲಿಂಡರ್ CNG ಆಯ್ಕೆಗಿಂತ ಹೆಚ್ಚಿನ ಸ್ಥಳವನ್ನು ನೀಡುತ್ತದೆ.
ಬೇಸ್ ವೇರಿಯೆಂಟ್ ಆಗಿರುವುದರಿಂದ, EX 4.2-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮ್ಯಾನುವಲ್ ಎಸಿ, ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ, CNG ಸ್ವಿಚ್, ಮುಂಭಾಗದ ಪವರ್ ವಿಂಡೋಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಕೀಲೆಸ್ ಎಂಟ್ರಿಯನ್ನು ಒಳಗೊಂಡಿರುವ ಬೇಸಿಕ್ ಆದ ಕ್ಯಾಬಿನ್ ಅನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ, ಎಕ್ಸ್‌ಟರ್‌ನ EX ವೇರಿಯೆಂಟ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಹೊಂದಿರುವ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.
ಇದನ್ನೂ ಸಹ ಓದಿ: ಡೀಲರ್‌ಶಿಪ್‌ಗಳ ಸ್ಟಾಕ್‌ಯಾರ್ಡ್‌ಗೆ ಬಂದಿಳಿದ Tata Curvv ಡಾರ್ಕ್ ಎಡಿಷನ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಪವರ್‌ಟ್ರೇನ್
ಈಗ ಇಎಕ್ಸ್ ವೇರಿಯೆಂಟ್‌ನಲ್ಲಿ ಲಭ್ಯವಿರುವ ಡ್ಯುಯಲ್-ಸಿಲಿಂಡರ್ ಪವರ್‌ಟ್ರೇನ್‌ನ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ ಡ್ಯುಯಲ್ ಸಿಲಿಂಡರ್ ಸಿಎನ್‌ಜಿ |
ಪವರ್ |
69 ಪಿಎಸ್ |
ಟಾರ್ಕ್ |
95 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುವಲ್ |
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಎಕ್ಸ್‌ಟರ್‌ನೊಂದಿಗೆ ಇಎಕ್ಸ್ ವೇರಿಯೆಂಟ್ ಈಗ ಅತ್ಯಂತ ಕೈಗೆಟುಕುವ ಸಿಎನ್‌ಜಿ ಆಯ್ಕೆಯಾಗಿದ್ದರೂ, ಮೈಕ್ರೋ ಎಸ್‌ಯುವಿಯ ಬೆಲೆ ರೇಂಜ್ 6 ಲಕ್ಷದಿಂದ 10.50 ಲಕ್ಷ ರೂ.ಗಳಲ್ಲಿ ಬದಲಾಗದೆ ಉಳಿದಿದೆ. ಎಕ್ಸ್‌ಟರ್, ಟಾಟಾ ಪಂಚ್, ಮಾರುತಿ ಫ್ರಾಂಕ್ಸ್, ಟೊಯೋಟಾ ಟೈಸರ್, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
(ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ)
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ
ಗಮನಿಸಿ- ಈ ಸುದ್ದಿಯಲ್ಲಿರುವ ಚಿತ್ರಗಳು ಹುಂಡೈ ಎಕ್ಸ್‌ಟರ್‌ನ ಟಾಪ್ ವೇರಿಯೆಂಟ್‌ನದ್ದಾಗಿದೆ.