ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್‌ಡೇಟ್‌ಗಳು ಮತ್ತು ಇನ್ನಷ್ಟು
ಕಳೆದ ವಾರ ಮುಂಬರುವ ಕಾರುಗಳ ಹಲವು ಪತ್ತೇದಾರಿ ಫೋಟೊಗಳೊಂದಿಗೆ ಸದ್ದು ಮಾಡುತ್ತಿತ್ತು, ಹಾಗೆಯೇ ಮಿನಿ ತನ್ನ ಹೊಸ ಕಾರುಗಳಿಗೆ ಬುಕಿಂಗ್‌ಗಳನ್ನು ಘೋಷಿಸಿತು
ಕಳೆದ ವಾರ ಆಟೋಮೋಟಿವ್ ಉದ್ಯಮದಲ್ಲಿ ಆಪ್‌ಡೇಟ್‌ಗಳ ಹಲವು ಸಂಚಲನಗಳನ್ನು ಗಮನಿಸಿದ್ದೇವೆ. ಕಂಡಿತು. ಸ್ಕೋಡಾ ತನ್ನ ಕುಶಾಕ್ ಓನಿಕ್ಸ್ ಸ್ಪೇಷಲ್ ಎಡಿಷನ್‌ನ ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸಿತು, ಹಾಗೆಯೇ ಟಾಟಾ ತನ್ನ ಸುರಕ್ಷತಾ ಸಾಧನೆಗಳಿಗಾಗಿ ಸುದ್ದಿಯಲ್ಲಿತ್ತು. ಟಾಟಾ ತನ್ನ ಮುಂಬರುವ ಇವಿಗಳ ಬಿಡುಗಡೆಯ ಟೈಮ್‌ಲೈನ್‌ಗಳನ್ನು ಸಹ ಬಹಿರಂಗಪಡಿಸಿದೆ, ಇದರೊಂದಿಗೆ ಮುಂಬರುವ 5-ಡೋರ್‌ನ ಮಹೀಂದ್ರಾ ಥಾರ್‌ನ ಮಿಡ್-ಸ್ಪೆಕ್ ಆವೃತ್ತಿಯನ್ನು ನಾವು ಪರೀಕ್ಷೆಯ ವೇಳೆಯಲ್ಲಿ ಗುರುತಿಸಿದ್ದೇವೆ. ಕಳೆದ ವಾರದ ಪ್ರಮುಖ ಸುದ್ದಿಗಳ ತ್ವರಿತ ರೀಕ್ಯಾಪ್ ಇಲ್ಲಿದೆ:
ಟಾಟಾ ನೆಕ್ಸಾನ್ ಇವಿ ಮತ್ತು ಪಂಚ್ ಇವಿಗಳಿಗೆ ಫೈವ್ ಸ್ಟಾರ್ ರೇಟಿಂಗ್
ಟಾಟಾ ನೆಕ್ಸಾನ್ ಇವಿ ಮತ್ತು ಪಂಚ್ ಇವಿಗಳು ಭಾರತ್ NCAPಯನ್ನು ಪಾಸ್ ಮಾಡುವ ಮೂಲಕ ಈ ಸಾಧನೆಯನ್ನು ಮಾಡಿದ ಮೊದಲ ಇವಿಗಳಾಗಿ ಹೊರಹೊಮ್ಮಿದೆ. ಎರಡೂ ಎಲೆಕ್ಟ್ರಿಕ್ ಎಸ್‌ಯುವಿಗಳು ತಮ್ಮ ಮೌಲ್ಯಮಾಪನಗಳಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸುವುದರೊಂದಿಗೆ ಫುಲ್ ಮಾರ್ಕ್ಸ್ ಪಡೆದಿದೆ. ಆಯಾ ಮೊಡೆಲ್‌ಗಳ ಟಾಪ್ ಆವೃತ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಹೊಸ ಟಾಟಾ ಇವಿಗಳ ಬಿಡುಗಡೆಯ ಮಾಹಿತಿ
ಇತ್ತೀಚಿನ ಹೂಡಿಕೆದಾರರ ಸಭೆಯಲ್ಲಿ ಟಾಟಾ ಮೋಟಾರ್ಸ್ ತನ್ನ ಮುಂಬರುವ ನಾಲ್ಕು ಇವಿಗಳಾದ ಕರ್ವ್ ಇವಿ, ಹ್ಯಾರಿಯರ್ ಇವಿ, ಸಿಯೆರಾ ಇವಿ, ಮತ್ತು ಅವಿನ್ಯಾ ಬಿಡುಗಡೆಯ ಟೈಮ್‌ಲೈನ್‌ಗಳನ್ನು ಘೋಷಿಸಿತು. ಈ ಪ್ರಕಟಣೆಯು 2026 ರ ವೇಳೆಗೆ ತನ್ನ ಕಾರುಗಳ ಪಟ್ಟಿಯಲ್ಲಿ ಒಟ್ಟು 10 ಇವಿಗಳನ್ನು ಹೊಂದುವ ಟಾಟಾದ ಭರವಸೆಗೆ ಅನುಗುಣವಾಗಿದೆ.
ಸ್ಕೋಡಾ ಕುಶಾಕ್ ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ
ಕಳೆದ ವರ್ಷ, ಸ್ಕೋಡಾ ಕುಶಾಕ್ ವಿಶೇಷ ಓನಿಕ್ಸ್ ಆವೃತ್ತಿಯನ್ನು ಪಡೆದುಕೊಂಡಿತ್ತು, ಇದನ್ನು ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಪರಿಚಯಿಸಲಾಯಿತು. ಕಾರು ತಯಾರಕರು ಇದೀಗ ಕುಶಾಕ್ ಓನಿಕ್ಸ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆ ಮಾಡಿದ್ದಾರೆ, ಇದು ಅನುಗುಣವಾದ ಮ್ಯಾನುವಲ್ ಆವೃತ್ತಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ.
ಮಿನಿಯಿಂದ ಭಾರತದಲ್ಲಿ 2 ಹೊಸ ಕಾರುಗಳ ಬಿಡುಗಡೆ
ಪೆಟ್ರೋಲ್ ಚಾಲಿತ ಮಿನಿ ಕೂಪರ್ ಮತ್ತು ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಶೀಘ್ರದಲ್ಲೇ ಭಾರತದಲ್ಲಿ ಪಾದಾರ್ಪಣೆ ಮಾಡಲಿವೆ. ಬಿಡುಗಡೆಗಿಂತ ಮೊದಲೇ, ಮಿನಿ ಈ ಹೊಸ ಕಾರುಗಳ ಪೂರ್ವ-ಬುಕಿಂಗ್ ಅನ್ನು ತೆರೆದಿದೆ. ಇವೆರಡೂ ಹೊಸ ವಿನ್ಯಾಸಗಳು ಮತ್ತು ವೈಶಿಷ್ಟ್ಯದ ಸೇರ್ಪಡೆಗಳನ್ನು ಪಡೆಯುತ್ತವೆ ಮತ್ತು ಮುಂದಿನ ತಿಂಗಳು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಜೀಪ್ ಕಂಪಾಸ್ ಎಸ್‌ಯುವಿ ಬೆಲೆಗಳಲ್ಲಿ ಪರಿಷ್ಕರಣೆ
ಜೀಪ್ ತನ್ನ ಕಂಪಾಸ್ ಎಸ್‌ಯುವಿ ಬೆಲೆಗಳನ್ನು ಮರುಹೊಂದಿಸಿದೆ. ಒಂದು ಆವೃತ್ತಿಯು ಭಾರಿ ಬೆಲೆ ಕಡಿತವನ್ನು ಕಂಡಿದ್ದರೆ, ಇತರವು ಗಣನೀಯವಾಗಿ ಏರಿದೆ. ಆದಾಗಿಯೂ, ಆವೃತ್ತಿಗಳ ವೈಶಿಷ್ಟ್ಯಗಳ ಸೆಟ್ ಬದಲಾಗದೆ ಉಳಿದಿದೆ.
ಹೆಚ್ಚು ದುಬಾರಿಯಾದ MG ಕಾರುಗಳು
ಎಮ್‌ಜಿ ತನ್ನ ಕಾಮೆಟ್ ಇವಿ ಮತ್ತು ಜೆಡ್‌ಎಸ್ ಇವಿಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ಬೆಲೆ ಪರಿಷ್ಕರಣೆಯ ಟ್ರೆಂಡ್ ಅನ್ನು ಅನುಸರಿಸಿದೆ. ಬೆಲೆ ಹೆಚ್ಚಳವು ಎಮ್‌ಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮೊಡೆಲ್‌ಗಳಿಗೂ ವಿಸ್ತರಿಸಿದೆ. ಆದಾಗ್ಯೂ, ಬೆಲೆ ಬದಲಾವಣೆಗಳಿಗೆ ಪೂರಕವಾಗಿ ಯಾವುದೇ ಫೀಚರ್‌ನ ಆಪ್‌ಡೇಟ್‌ಗಳನ್ನು ಮಾಡಲಾಗಿಲ್ಲ.
ಮಹೀಂದ್ರಾ ಥಾರ್ 5-ಡೋರ್‌ನ ಹೊಸ ಸ್ಪೈ ಶಾಟ್‌ಗಳು ಔಟ್
ಮುಂಬರುವ ನ ಮಹೀಂದ್ರಾ ಥಾರ್‌ನ 5-ಡೋರ್ ಆವೃತ್ತಿಯ ಸ್ಪೈ ಶಾಟ್‌ಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಕೆಲವು ಗಮನಾರ್ಹವಾದ ವಿನ್ಯಾಸ ವ್ಯತ್ಯಾಸಗಳನ್ನು ಹೊಂದಿರುವ ಅದರ ಮಿಡ್-ಸ್ಪೆಕ್ ಆವೃತ್ತಿಯನ್ನು ನಾವು ಇತ್ತೀಚೆಗೆ ಗುರುತಿಸಿದ್ದೇವೆ.
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್‌ನ ರಹಸ್ಯ ಫೋಟೊಗಳು
ಭಾರತದಲ್ಲಿ ಕ್ರೆಟಾದ ನಂತರ ಹ್ಯುಂಡೈನ ಮುಂದಿನ ದೊಡ್ಡ ಬಿಡುಗಡೆಯಾದ ಫೇಸ್‌ಲಿಫ್ಟೆಡ್ ಅಲ್ಕಾಜರ್ ಅನ್ನು ನಮ್ಮ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಫೇಸ್‌ಲಿಫ್ಟೆಡ್ ಕ್ರೆಟಾದಲ್ಲಿ ನೋಡಿದಂತೆ ಈ 3-ಸಾಲಿನ ಎಸ್‌ಯುವಿಗಾಗಿ ಒಳ ಮತ್ತು ಹೊರಗೆ ಇದೇ ವಿನ್ಯಾಸದ ಆಪ್‌ಡೇಟ್‌ಗಳ ಕುರಿತು ಸ್ಪೈಡ್ ಮ್ಯೂಲ್ ಸುಳಿವು ನೀಡುತ್ತದೆ.
ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಸ್ಪೈಶಾಟ್‌ಗಳು
ನಾವು 360-ಡಿಗ್ರಿ ಕ್ಯಾಮೆರಾದೊಂದಿಗೆ ಫೇಸ್‌ಲಿಫ್ಟೆಡ್ ಕಿಯಾ ಕ್ಯಾರೆನ್ಸ್ಅನ್ನು ಸಹ ಗುರುತಿಸಿದ್ದೇವೆ ಮತ್ತು ಇದುವರೆಗೆ ನಾವು ನೋಡಿದ ನವೀಕರಿಸಿದ ಎಮ್‌ಪಿವಿಯ ಸ್ಪಷ್ಟವಾದ ಸ್ಪೈ ಶಾಟ್‌ಗಳಾಗಿವೆ, ಆದರೂ ಭಾರೀ ಕವರ್‌ನಿಂದ ಕೂಡಿದೆ. ಇದಲ್ಲದೆ, ನಾವು ಗುಡ್ಡಗಾಡು ಪ್ರದೇಶದಲ್ಲಿ ಕಿಯಾ ಕಾರ್ನಿವಲ್ಅನ್ನು ಪರೀಕ್ಷಿಸುವುದನ್ನು ನಾವು ಗಮನಿಸಿದ್ದೇವೆ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಇವಿ ಆಟೋಮ್ಯಾಟಿಕ್